ಒಂದು ಲಕ್ಷಕ್ಕೂ ಹೆಚ್ಚು ʻಸ್ವಸಹಾಯ ಸಂಘʼಗಳ (ಎಸ್‌ಎಚ್‌ಜಿ) ಸದಸ್ಯರಿಗೆ ಬೀಜ ಬಂಡವಾಳ ನೆರವು ವಿತರಿಸಲಿರುವ ಪ್ರಧಾನಮಂತ್ರಿಗಳು
ʻವಿಶ್ವ ಆಹಾರ ಭಾರತ-2023ʼರಲ್ಲಿ ಭಾರತೀಯ ಆಹಾರ ಸಂಸ್ಕರಣಾ ಉದ್ಯಮದ ನಾವೀನ್ಯತೆ ಮತ್ತು ಶಕ್ತಿಯನ್ನು ಪ್ರದರ್ಶಿಸಲಾಗುವುದು
ಪ್ರಮುಖ ಆಹಾರ ಸಂಸ್ಕರಣಾ ಕಂಪನಿಗಳ ʻಸಿಇಒʼಗಳು ಸೇರಿದಂತೆ 80ಕ್ಕೂ ಹೆಚ್ಚು ದೇಶಗಳ ಸ್ಪರ್ಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ
ಪ್ರಮುಖ ಆಕರ್ಷಣೆ: ಸಾಂಪ್ರದಾಯಿಕ ಭಾರತೀಯ ಪಾಕಪದ್ಧತಿಯನ್ನು ಒಳಗೊಂಡ ಆಹಾರ ಮೇಳದ ಮೂಲಕ ವಿಶಿಷ್ಟ ಪಾಕಶಾಲೆಯ ಅನುಭವ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವೆಂಬರ್ 3ರಂದು ಬೆಳಿಗ್ಗೆ 10 ಗಂಟೆಗೆ ನವದೆಹಲಿಯ ಪ್ರಗತಿ ಮೈದಾನದ ಭಾರತ್ ಮಂಟಪದಲ್ಲಿ 'ವಿಶ್ವ ಆಹಾರ ಭಾರತ 2023' ಮೆಗಾ ಆಹಾರ ಕಾರ್ಯಕ್ರಮದ ಎರಡನೇ ಆವೃತ್ತಿಯನ್ನು ಉದ್ಘಾಟಿಸಲಿದ್ದಾರೆ.

ಸ್ವಸಹಾಯ ಗುಂಪುಗಳನ್ನು ಬಲಪಡಿಸುವ ಉದ್ದೇಶದಿಂದ ಪ್ರಧಾನಮಂತ್ರಿಯವರು ಒಂದು ಲಕ್ಷಕ್ಕೂ ಹೆಚ್ಚು ಸ್ವಸಹಾಯ ಗುಂಪುಗಳ(ಎಸ್‌ಎಚ್‌ಜಿ) ಸದಸ್ಯರಿಗೆ ಬೀಜ ಬಂಡವಾಳ ನೆರವನ್ನು ವಿತರಿಸಲಿದ್ದಾರೆ. ಈ ಬೆಂಬಲವು ಸುಧಾರಿತ ಪ್ಯಾಕೇಜಿಂಗ್ ಮತ್ತು ಗುಣಮಟ್ಟದ ಉತ್ಪಾದನೆಯ ಮೂಲಕ ಸ್ವಸಹಾಯ ಸಂಘಗಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಪಡೆಯಲು ಸಹಾಯ ಮಾಡುತ್ತದೆ. ʻವಿಶ್ವ ಆಹಾರ ಭಾರತ-2023ʼರ ಅಂಗವಾಗಿ ಪ್ರಧಾನಮಂತ್ರಿಯವರು ಆಹಾರ ಮೇಳವನ್ನೂ ಅನ್ನು ಉದ್ಘಾಟಿಸಲಿದ್ದಾರೆ. ಇದು ಪ್ರಾದೇಶಿಕ ಪಾಕಪದ್ಧತಿಗಳು ಮತ್ತು ವೈಭವಯು ಪಾಕಶಾಲೆಯ ಪರಂಪರೆಯನ್ನು ಒಳಗೊಂಡಿರುತ್ತದೆ, ಇದರಲ್ಲಿ 200ಕ್ಕೂ ಹೆಚ್ಚು ಬಾಣಸಿಗರು ಭಾಗವಹಿಸುತ್ತಾರೆ ಮತ್ತು ಸಾಂಪ್ರದಾಯಿಕ ಭಾರತೀಯ ಪಾಕಪದ್ಧತಿಯನ್ನು ಪ್ರಸ್ತುತಪಡಿಸುತ್ತಾರೆ. ಇದೊಂದು ವಿಶಿಷ್ಟ ಪಾಕಶಾಲೆಯ ಅನುಭವವಾಗಿರುತ್ತದೆ.

ಈ ಕಾರ್ಯಕ್ರಮವು ಭಾರತವನ್ನು 'ವಿಶ್ವದ ಆಹಾರದ ಬುಟ್ಟಿ' ಎಂದು ಪ್ರದರ್ಶಿಸುವ ಮತ್ತು 2023 ಅನ್ನು ʻಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷʼವಾಗಿ ಆಚರಿಸುವ ಗುರಿಯನ್ನು ಹೊಂದಿದೆ. ಇದು ಸರ್ಕಾರಿ ಸಂಸ್ಥೆಗಳು, ಉದ್ಯಮ ವೃತ್ತಿಪರರು, ರೈತರು, ಉದ್ಯಮಿಗಳು ಮತ್ತು ಇತರ ಮಧ್ಯಸ್ಥಗಾರರಿಗೆ ಚರ್ಚೆಗಳಲ್ಲಿ ತೊಡಗಲು, ಪಾಲುದಾರಿಕೆಯನ್ನು ಸ್ಥಾಪಿಸಲು ಮತ್ತು ಕೃಷಿ-ಆಹಾರ ಕ್ಷೇತ್ರದಲ್ಲಿ ಹೂಡಿಕೆ ಅವಕಾಶಗಳನ್ನು ಅನ್ವೇಷಿಸಲು ನೆಟ್ವರ್ಕಿಂಗ್ ಮತ್ತು ವ್ಯವಹಾರ ವೇದಿಕೆಯನ್ನು ಒದಗಿಸುತ್ತದೆ. ಸಿಇಓಗಳ ದುಂಡುಮೇಜಿನ ಸಭೆಗಳು ಹೂಡಿಕೆ ಮತ್ತು ಸುಗಮ ವ್ಯಾಪಾರದ ಮೇಲೆ ಗಮನ ಕೇಂದ್ರೀಕರಿಸಲಿವೆ.

ಭಾರತೀಯ ಆಹಾರ ಸಂಸ್ಕರಣಾ ಉದ್ಯಮದ ನಾವೀನ್ಯತೆ ಮತ್ತು ಶಕ್ತಿಯನ್ನು ಪ್ರದರ್ಶಿಸಲು ವಿವಿಧ ಪೆವಿಲಿಯನ್‌ಗಳನ್ನು ಸ್ಥಾಪಿಸಲಾಗುವುದು. ಈ ಕಾರ್ಯಕ್ರಮವು ಆಹಾರ ಸಂಸ್ಕರಣಾ ಉದ್ಯಮದ ವಿವಿಧ ಅಂಶಗಳನ್ನು ಕೇಂದ್ರೀಕರಿಸುವ 48 ಅಧಿವೇಶನಗಳನ್ನು ಹೊಂದಿದೆ. ಆರ್ಥಿಕ ಸಬಲೀಕರಣ, ಗುಣಮಟ್ಟದ ಭರವಸೆ ಮತ್ತು ಯಂತ್ರೋಪಕರಣಗಳು ಹಾಗೂ ತಂತ್ರಜ್ಞಾನದಲ್ಲಿನ ಆವಿಷ್ಕಾರಗಳಿಗೆ ಒತ್ತು ನೀಡುತ್ತದೆ.

ಈ ಕಾರ್ಯಕ್ರಮದಲ್ಲಿ ಪ್ರಮುಖ ಆಹಾರ ಸಂಸ್ಕರಣಾ ಕಂಪನಿಗಳ ಸಿಇಒಗಳು ಸೇರಿದಂತೆ 80ಕ್ಕೂ ಹೆಚ್ಚು ದೇಶಗಳ ಗಣ್ಯರು ಭಾಗವಹಿಸಲಿದ್ದಾರೆ. ಇದು ʻರಿವರ್ಸ್ ಬಯರ್ ಸೆಲ್ಲರ್ ಮೀಟ್ʼ ಅನ್ನು ಸಹ ಒಳಗೊಂಡಿರುತ್ತದೆ, 80ಕ್ಕೂ ಹೆಚ್ಚು ದೇಶಗಳಿಂದ 1200ಕ್ಕೂ ಹೆಚ್ಚು ಸಾಗರೋತ್ತರ ಖರೀದಿದಾರರು ಪಾಲ್ಗೊಳ್ಳಲಿದ್ದಾರೆ. ನೆದರ್ಲ್ಯಾಂಡ್ಸ್ ಪಾಲುದಾರ ದೇಶವಾಗಿ ಕಾರ್ಯನಿರ್ವಹಿಸಿದರೆ, ಜಪಾನ್ ಈ ಕಾರ್ಯಕ್ರಮದ ಕೇಂದ್ರೀಕೃತ ದೇಶವಾಗಲಿದೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
How NPS transformed in 2025: 80% withdrawals, 100% equity, and everything else that made it a future ready retirement planning tool

Media Coverage

How NPS transformed in 2025: 80% withdrawals, 100% equity, and everything else that made it a future ready retirement planning tool
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 20 ಡಿಸೆಂಬರ್ 2025
December 20, 2025

Empowering Roots, Elevating Horizons: PM Modi's Leadership in Diplomacy, Economy, and Ecology