ದೇಶದಲ್ಲಿ ಪ್ರಮುಖ ಜಾಗತಿಕ ಸಾಂಸ್ಕೃತಿಕ ಉಪಕ್ರಮವನ್ನು ಅಭಿವೃದ್ಧಿಪಡಿಸಲು ಮತ್ತು ಸಾಂಸ್ಥಿಕಗೊಳಿಸಲು ಪ್ರಧಾನಮಂತ್ರಿಯವರು ಹೊಂದಿರುವ ದೃಷ್ಟಿಕೋನಕ್ಕೆ ಅನುಗುಣವಾಗಿ ಐಎಎಡಿಬಿ ಪ್ರದರ್ಶನವನ್ನು ಆಯೋಜಿಸಲಾಗಿದೆ
ಐಎಎಡಿಬಿ ಪ್ರದರ್ಶನದಲ್ಲಿ ವಾರದ ಪ್ರತಿ ದಿನವೂ ವಿಭಿನ್ನ ಪರಿಕಲ್ಪನೆ ಆಧಾರಿತ ಪ್ರದರ್ಶನಗಳನ್ನು ಪ್ರದರ್ಶಿಸಲಾಗುತ್ತದೆ
ಕೆಂಪುಕೋಟೆಯಲ್ಲಿ ಆತ್ಮನಿರ್ಭರ ಭಾರತ ವಿನ್ಯಾಸ ಕೇಂದ್ರವನ್ನು (ಎಬಿಸಿಡಿ) ಉದ್ಘಾಟಿಸಲಿರುವ ಪ್ರಧಾನಮಂತ್ರಿ
ಹೊಸ ವಿನ್ಯಾಸಗಳು ಮತ್ತು ಆವಿಷ್ಕಾರಗಳೊಂದಿಗೆ ಕುಶಲಕರ್ಮಿ ಸಮುದಾಯಗಳನ್ನು ಸಶಕ್ತಗೊಳಿಸಲು ಎಬಿಸಿಡಿ, 'ಸ್ಥಳೀಯತೆಗಾಗಿ ಧ್ವನಿ' ದೃಷ್ಟಿಕೋನವನ್ನು ಬಲಪಡಿಸುವುದು
ಸಮುನ್ನತಿ - ಸ್ಟೂಡೆಂಟ್ ಪ್ರದರ್ಶನವನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ

ಕೆಂಪು ಕೋಟೆಯಲ್ಲಿ ನಡೆಯುತ್ತಿರುವ ಮೊದಲ ಭಾರತೀಯ ಕಲೆ, ವಾಸ್ತುಶಿಲ್ಪ ಮತ್ತು ವಿನ್ಯಾಸ  ಪ್ರದರ್ಶನ (ಐಎಎಡಿಬಿ) 2023 ಅನ್ನು 2023 ರ ಡಿಸೆಂಬರ್ 8 ರಂದು ಸಂಜೆ 4 ಗಂಟೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಸಂದರ್ಭದಲ್ಲಿ, ಪ್ರಧಾನಮಂತ್ರಿಯವರು ಕೆಂಪು ಕೋಟೆಯಲ್ಲಿ ಆತ್ಮನಿರ್ಭರ ಭಾರತ ವಿನ್ಯಾಸ ಕೇಂದ್ರವನ್ನು ಮತ್ತು ವಿದ್ಯಾರ್ಥಿಗಳಿಗಾಗಿ “ಸಮುನ್ನತಿ” ಎಂಬ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ.

ವೆನಿಸ್, ಸಾವೊ ಪಾಲೊ, ಸಿಂಗಾಪುರ, ಸಿಡ್ನಿ ಮತ್ತು ಶಾರ್ಜಾ ಮುಂತಾದ ಕಡೆಗಳಲ್ಲಿ ನಡೆಯುವ  ಅಂತರರಾಷ್ಟ್ರೀಯ ಪ್ರದರ್ಶನಗಳಂತಹ ಪ್ರಮುಖ ಜಾಗತಿಕ ಸಾಂಸ್ಕೃತಿಕ ಪ್ರದರ್ಶನ ಉಪಕ್ರಮವನ್ನು ದೇಶದಲ್ಲಿ ಅಭಿವೃದ್ಧಿಪಡಿಸುವುದು ಮತ್ತು ಸಾಂಸ್ಥಿಕಗೊಳಿಸುವುದು ಪ್ರಧಾನಮಂತ್ರಿಯವರ ದೃಷ್ಟಿಕೋನವಾಗಿದೆ. ಈ ದೃಷ್ಟಿಕೋನಕ್ಕೆ ಅನುಗುಣವಾಗಿ, ವಸ್ತುಸಂಗ್ರಹಾಲಯಗಳನ್ನು ಮರುಶೋಧಿಸಲು, ಮರುಬ್ರಾಂಡ್ ಮಾಡಲು, ನವೀಕರಿಸಲು ಮತ್ತು ಮರು-ವಿನ್ಯಾಸ ಮಾಡಲು ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸಲಾಯಿತು. ಇದಲ್ಲದೆ, ಭಾರತದ ಐದು ನಗರಗಳಾದ ಕೋಲ್ಕತ್ತಾ, ದೆಹಲಿ, ಮುಂಬೈ, ಅಹಮದಾಬಾದ್ ಮತ್ತು ವಾರಣಾಸಿಗಳಲ್ಲಿ ಸಾಂಸ್ಕೃತಿಕ ಸ್ಥಳಗಳ ಅಭಿವೃದ್ಧಿಯನ್ನು ಸಹ ಘೋಷಿಸಲಾಯಿತು. ಭಾರತೀಯ ಕಲೆ, ವಾಸ್ತುಶಿಲ್ಪ ಮತ್ತು ವಿನ್ಯಾಸ ಪ್ರದರ್ಶನ (ಐಎಎಡಿಬಿ) ದೆಹಲಿಯ ಸಾಂಸ್ಕೃತಿಕ ಜಾಗಕ್ಕೆ ಪರಿಚಯವಾಗಿ ಕಾರ್ಯನಿರ್ವಹಿಸುತ್ತದೆ.

ಐಎಎಡಿಬಿ ಪ್ರದರ್ಶನವನ್ನು 2023 ರ ಡಿಸೆಂಬರ್ 9 ರಿಂದ 15 ರವರೆಗೆ ನವದೆಹಲಿಯ ಕೆಂಪು ಕೋಟೆಯಲ್ಲಿ ಆಯೋಜಿಸಲಾಗಿದೆ. ಇದು ಇತ್ತೀಚೆಗೆ ಆಯೋಜಿಸಲಾದ ಇಂಟರ್ನ್ಯಾಷನಲ್ ಮ್ಯೂಸಿಯಂ ಎಕ್ಸ್ಪೋ (ಮೇ 2023) ಮತ್ತು ಲೈಬ್ರರೀಸ್ ಉತ್ಸವ (ಆಗಸ್ಟ್ 2023) ನಂತಹ ಪ್ರಮುಖ ಉಪಕ್ರಮಗಳನ್ನು ಅನುಸರಿಸುತ್ತದೆ. ಸಾಂಸ್ಕೃತಿಕ ಸಂವಾದವನ್ನು ಬಲಪಡಿಸಲು ಕಲಾವಿದರು, ವಾಸ್ತುಶಿಲ್ಪಿಗಳು, ವಿನ್ಯಾಸಕರು, ಛಾಯಾಗ್ರಾಹಕರು, ಸಂಗ್ರಾಹಕರು, ಕಲಾ ವೃತ್ತಿಪರರು ಮತ್ತು ಸಾರ್ವಜನಿಕರ ನಡುವೆ ಸಮಗ್ರ ಸಂಭಾಷಣೆಯನ್ನು ಪ್ರಾರಂಭಿಸಲು ಐಎಎಡಿಬಿ ಪ್ರದರ್ಶನವನ್ನು ವಿನ್ಯಾಸಗೊಳಿಸಲಾಗಿದೆ. ವಿಕಸನಗೊಳ್ಳುತ್ತಿರುವ ಆರ್ಥಿಕತೆಯ ಭಾಗವಾಗಿ ಕಲೆ, ವಾಸ್ತುಶಿಲ್ಪ ಮತ್ತು ವಿನ್ಯಾಸದ ಸೃಷ್ಟಿಕರ್ತರೊಂದಿಗೆ ವಿಸ್ತರಿಸಲು ಮತ್ತು ಸಹಯೋಗಿಸಲು ಇದು ಮಾರ್ಗಗಳು ಮತ್ತು ಅವಕಾಶಗಳನ್ನು ಒದಗಿಸುತ್ತದೆ.

ಐಎಎಡಿಬಿ ಪ್ರದರ್ಶನ 2023ರಲ್ಲಿ ವಾರದಲ್ಲಿ ಪ್ರತಿ ದಿನವೂ ವಿಭಿನ್ನ ಪರಿಕಲ್ಪನೆ ಆಧಾರಿತ ವಿಶೇಷ ಪ್ರದರ್ಶನಗಳು ಪ್ರದರ್ಶಿಸಲ್ಪಡುತ್ತದೆ:

• ದಿನ 1: “ಪ್ರವೇಶ್”- ಅಂಗೀಕಾರದ ವಿಧಿ: ಭಾರತದ ಬಾಗಿಲುಗಳು
• ದಿನ 2: “ಬಾಗ್ ಇ ಬಹಾರ್”: ಗಾರ್ಡನ್ಸ್ ಆಸ್ ಯುನಿವರ್ಸ್: ಗಾರ್ಡನ್ಸ್ ಆಫ್ ಇಂಡಿಯಾ
• ದಿನ 3: “ಸಂಪ್ರವಾ”: ಸಮುದಾಯಗಳ ಸಂಗಮ: ಬಾವೊಲಿಸ್ ಆಫ್ ಇಂಡಿಯಾ
• ದಿನ 4: “ಸ್ಥಾಪತ್ಯ”: ವಿರೋಧಿ ದುರ್ಬಲ ಅಲ್ಗಾರಿದಮ್: ಭಾರತದ ದೇವಾಲಯಗಳು
• ದಿನ 5: “ವಿಸ್ಮಯ್”: ಕ್ರಿಯೇಟಿವ್ ಕ್ರಾಸ್ಒವರ್: ಸ್ವತಂತ್ರ ಭಾರತದ ವಾಸ್ತುಶಿಲ್ಪದ ಅದ್ಭುತಗಳು
• ದಿನ 6: “ದೇಶಜ್ ಭಾರತ್ ವಿನ್ಯಾಸ”: ಸ್ಥಳೀಯ ವಿನ್ಯಾಸಗಳು
• ದಿನ 7: “ಸಮತ್ವ: ಸೇಪಿಂಗ್ ದಿ ಬಿಲ್ಟ್”: ವಾಸ್ತುಶಿಲ್ಪದಲ್ಲಿ ಮಹಿಳೆಯರನ್ನು ಆಚರಿಸುವುದು

ಐಎಎಡಿಬಿ ಪ್ರದರ್ಶನದಲ್ಲಿ ಈ ಮೇಲಿನ ವಿಷಯಗಳ ಆಧಾರದಲ್ಲಿ, ಪ್ಯಾನೆಲ್ ಚರ್ಚೆಗಳು, ಕಲಾ ಕಾರ್ಯಾಗಾರಗಳು, ಕಲಾ ಬಜಾರ್, ಹೆರಿಟೇಜ್ ವಾಕ್ ಗಳು ಮತ್ತು ಸಮಾನಾಂತರ ವಿದ್ಯಾರ್ಥಿಗಳಿಗಾಗಿ ವಿಶೇಷ ಪ್ರದರ್ಶನಗಳ ಆಧಾರದ ಮೇಲೆ ಮಂಟಪಗಳನ್ನು ಒಳಗೊಂಡಿರುತ್ತದೆ. ಲಲಿತ ಕಲಾ ಅಕಾಡೆಮಿಯ ವಿದ್ಯಾರ್ಥಿಗಳಿಗಾಗಿ ವಿಶೇಷ ಪ್ರದರ್ಶನ (ಸಮುನ್ನತಿ), ಇತರ ವಿದ್ಯಾರ್ಥಿಗಳಿಗೆ ತಮ್ಮ ಕೆಲಸವನ್ನು ಪ್ರದರ್ಶಿಸಲು, ಗೆಳೆಯರು ಮತ್ತು ವೃತ್ತಿಪರರೊಂದಿಗೆ ಸಂವಹನ ನಡೆಸಲು ಮತ್ತು ವಿನ್ಯಾಸ ಸ್ಪರ್ಧೆ, ಪರಂಪರೆಯ ಪ್ರದರ್ಶನ, ಅನುಸ್ಥಾಪನ ವಿನ್ಯಾಸಗಳು, ಕಾರ್ಯಾಗಾರಗಳು ಇತ್ಯಾದಿಗಳ ಮೂಲಕ ವಾಸ್ತುಶಿಲ್ಪ ಸಮುದಾಯದೊಳಗೆ ಅಮೂಲ್ಯವಾದ ಮಾನ್ಯತೆ ಪಡೆಯಲು ಅವಕಾಶವನ್ನು ಒದಗಿಸುತ್ತದೆ. ಪ್ರದರ್ಶನಗಳ ಭೂಸದೃಶ್ಯ ಚೌಕಟ್ಟುಗಳಿಗೆ ಭಾರತದ ಪಾಲಿಗೆ ಹೊಸ ಆಯಾಮ ನೀಡುವ ಐಎಎಡಿಬಿ ಪ್ರದರ್ಶನ 2023,  ಜಾಗತಿಇಕಮಟ್ಟದಲ್ಲಿ ದೇಶಕ್ಕೆ ಒಂದು ಅತುಲ್ಯ ಅವಕಾಶವಾಗಿದೆ.

‘ಲೋಕಲ್ ಫಾರ್ ವೋಕಲ್’ ಎಂಬ ಪ್ರಧಾನಮಂತ್ರಿಯವರ ದೃಷ್ಟಿಕೋನಕ್ಕೆ ಅನುಗುಣವಾಗಿ, ಕೆಂಪು ಕೋಟೆಯಲ್ಲಿ ‘ಆತ್ಮನಿರ್ಭರ ಭಾರತ ವಿನ್ಯಾಸ ಕೇಂದ್ರ( ಆತ್ಮನಿರ್ಭರ್ ಭಾರತ್ ಸೆಂಟರ್ ಫಾರ್ ಡಿಸೈನ್)’ ವನ್ನು ಸ್ಥಾಪಿಸಲಾಗುತ್ತಿದೆ. ಇದು ಭಾರತದ ಅನನ್ಯ ಮತ್ತು ಸ್ಥಳೀಯ ಕರಕುಶಲಗಳನ್ನು ಪ್ರದರ್ಶಿಸುತ್ತದೆ ಮತ್ತು ಕುಶಲಕರ್ಮಿ ಕೆಲಸಗಾರರು ಮತ್ತು ವಿನ್ಯಾಸಕರ ನಡುವೆ ಸಹಯೋಗವ ಒದಗಿಸುತ್ತದೆ. ಸುಸ್ಥಿರ ಸಾಂಸ್ಕೃತಿಕ ಆರ್ಥಿಕತೆಯ ಹಾದಿಯನ್ನು ಸುಗಮಗೊಳಿಸುತ್ತದೆ, ಇದು ಕುಶಲಕರ್ಮಿ ಸಮುದಾಯಗಳನ್ನು ಹೊಸ ವಿನ್ಯಾಸಗಳು ಮತ್ತು ಆವಿಷ್ಕಾರಗಳೊಂದಿಗೆ ಸಬಲಗೊಳಿಸುತ್ತದೆ.

 

Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
'Should I speak in Hindi or Marathi?': Rajya Sabha nominee Ujjwal Nikam says PM Modi asked him this; recalls both 'laughed'

Media Coverage

'Should I speak in Hindi or Marathi?': Rajya Sabha nominee Ujjwal Nikam says PM Modi asked him this; recalls both 'laughed'
NM on the go

Nm on the go

Always be the first to hear from the PM. Get the App Now!
...
Chief Minister of Uttarakhand meets Prime Minister
July 14, 2025

Chief Minister of Uttarakhand, Shri Pushkar Singh Dhami met Prime Minister, Shri Narendra Modi in New Delhi today.

The Prime Minister’s Office posted on X;

“CM of Uttarakhand, Shri @pushkardhami, met Prime Minister @narendramodi.

@ukcmo”