ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಧುರೈಯ ತಿರುಪ್ಪರನ್ ಕುಂಡ್ರಂನಲ್ಲಿರುವ ಅರುಳ್ಮಿಗು ಸುಬ್ರಮಣ್ಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ಪವಿತ್ರ ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ಎಲ್ಲನಾಗರಿಕರ ಶಾಂತಿ, ಸಮೃದ್ಧಿ ಮತ್ತು ಯೋಗಕ್ಷೇಮಕ್ಕಾಗಿ ಆಶೀರ್ವಾದ ಕೋರಿದರು. ಭಗವಾನ್ ಮುರುಗನ್ ನಮಗೆ ಶಕ್ತಿ, ಧೈರ್ಯ ಮತ್ತು ಬುದ್ಧಿವಂತಿಕೆಯಿಂದ ಮಾರ್ಗದರ್ಶನ ನೀಡುವುದನ್ನು ಮುಂದುವರಿಸುತ್ತಾರೆ ಎಂಬ ಭರವಸೆಯನ್ನು ಪ್ರಧಾನಮಂತ್ರಿ ವ್ಯಕ್ತಪಡಿಸಿದರು.

ವೆಟ್ರಿವೇಲ್ ಮುರುಗನುಕ್ಕು ಅರೋಗರಾ! ಎಂಬ ಆಹ್ವಾನದೊಂದಿಗೆ ಪ್ರಧಾನಮಂತ್ರಿ ಅವರು ತಮ್ಮ ಭಾವನೆಗಳನ್ನು ಹಂಚಿಕೊಂಡರು.
ಪ್ರಧಾನಮಂತ್ರಿ ಅವರು ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ:
ವೆಟ್ರಿವೇಲ್ ಮುರುಗನ್ಗೆ ಅರೋಹರ!
ಮಧುರೈನ ತಿರುಪ್ಪರನ್ ಕುಂದ್ರಂನ ಅರುಲ್ಮಿಗು ಸುಬ್ರಮಣ್ಯಸ್ವಾಮಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದೆ.

ಶಾಂತಿ, ಸಮೃದ್ಧಿ ಮತ್ತು ಎಲ್ಲರ ಯೋಗಕ್ಷೇಮಕ್ಕಾಗಿ ಆಶೀರ್ವಾದ ಕೋರಿದೆ. ಭಗವಾನ್ ಮುರುಗನ್ ಯಾವಾಗಲೂ ಶಕ್ತಿ, ಧೈರ್ಯ ಮತ್ತು ಬುದ್ಧಿವಂತಿಕೆಯಿಂದ ನಮಗೆ ಮಾರ್ಗದರ್ಶನ ನೀಡಲಿ.’’
Vetrivel Muruganukku Arogara!
— Narendra Modi (@narendramodi) March 1, 2026
Prayed at the Arulmigu Subramaniyaswamy Temple, Thirupparankundram, Madurai.
Sought blessings for peace, prosperity and the well-being of all. May Lord Murugan always guide us with strength, courage and wisdom. pic.twitter.com/RjNVZSXgKB


