ಭಾರತ-ದಕ್ಷಿಣ ಆಫ್ರಿಕಾ ನಡುವಣ ರಾಜತಾಂತ್ರಿಕ ಸಂಬಂಧಗಳ 30 ನೇ ವರ್ಷಾಚರಣೆ ಸಂಭ್ರಮ : ಉಭಯ ನಾಯಕರಿಂದ ದ್ವಿಪಕ್ಷೀಯ ಸಹಕಾರ ಪ್ರಗತಿಯ ಉಲ್ಲೇಖ
ಬ್ರಿಕ್ಸ್ ಶೃಂಗಸಭೆ ಸಿದ್ಧತೆ ಬಗ್ಗೆ ಪ್ರಧಾನಮಂತ್ರಿಗಳಿಗೆ ಅಧ್ಯಕ್ಷ ರಾಮಫೋಸಾ ಅವರಿಂದ ಸಂಕ್ಷಿಪ್ತ ವಿವರಣೆ
ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜೋಹಾನ್ಸ್ ಬರ್ಗ್ ಗೆ ಭೇಟಿ ನೀಡಲು ಉತ್ಸುಕ : ಪ್ರಧಾನಿ
ಭಾರತದ ಜಿ20 ಅಧ್ಯಕ್ಷತೆಗೆ ಸಂಪೂರ್ಣ ಬೆಂಬಲ : ಅಧ್ಯಕ್ಷ ರಾಮಫೋಸಾ

ದಕ್ಷಿಣ ಆಫ್ರಿಕಾ ಅಧ್ಯಕ್ಷ ಮಟೆಮೆಲಾ ಸಿರಿಲ್ ರಾಮಫೋಸಾ ಅವರೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ದೂರವಾಣಿ ಮೂಲಕ ಮಾತುಕತೆ ನಡೆಸಿದರು.

2023 ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ರಾಜತಾಂತ್ರಿಕ ಬಾಂಧವ್ಯದ 30ನೇ ವರ್ಷವಾಗಿದ್ದು, ಉಭಯ ನಾಯಕರು ದ್ವಿಪಕ್ಷೀಯ ಸಹಕಾರದ ಪ್ರಗತಿ ಪರಾಮರ್ಶೆ ನಡೆಸಿದರು.

2023ರ ಆಗಸ್ಟ್ 22 ರಿಂದ 24ರವರೆಗೆ ದಕ್ಷಿಣ ಆಫ್ರಿಕಾ ಆತಿಥ್ಯ ವಹಿಸಿರುವ ಬ್ರಿಕ್ ಶೃಂಗಸಭೆಗೆ ಅಧ್ಯಕ್ಷ ರಾಮಫೋಸಾ ಪ್ರಧಾನಮಂತ್ರಿಗಳಿಗೆ ಇದೇ ವೇಳೆ ಆಮಂತ್ರಣ ನೀಡಿದರು.
ಶೃಂಸಭೆಯ ಸಿದ್ಧತೆಗಳ ಬಗ್ಗೆಯೂ ಸಂಕ್ಷಿಪ್ತವಾಗಿ ವಿವರಿಸಿದರು. ಆಹ್ವಾನಕ್ಕೆ ಪ್ರಧಾನಮಂತ್ರಿ ಸಮ್ಮತಿಸಿದ್ದು, ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜೋಹಾನ್ಸ್ ಬರ್ಗ್
ಭೇಟಿಗೆ ಎದುರುನೋಡುತ್ತಿರುವುದಾಗಿ ಪ್ರಧಾನಿ ಹೇಳಿದರು.

ಉಭಯ ಹಿತಾಸಕ್ತಿಯ ಅನೇಕ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆಯೂ ಇಬ್ಬರು ನಾಯಕರು ಪರಸ್ಪರ ಚರ್ಚೆ ನಡೆಸಿದರು.

ಭಾರತದ ಜಿ-20 ಅಧ್ಯಕ್ಷತೆಯ ಈ ಸಂದರ್ಭದಲ್ಲಿ ಭಾರತದ ಉಪಕ್ರಮಗಳಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಅಧ್ಯಕ್ಷ ರಾಮಫೋಸಾ ಇದೇ ವೇಳೆ ಭರವಸೆ ನೀಡಿದರು. ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಭಾರತ ಭೇಟಿ ಎದುರು ನೋಡುತ್ತಿರುವುದಾಗಿಯೂ ಅವರು ತಿಳಿಸಿದರು.

ಉಭಯ ನಾಯಕರು ಪರಸ್ಪರದ ಸಂಪರ್ಕದಲ್ಲಿರಲು ಸಮ್ಮತಿಸಿದರು.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Festive push: Auto retail sales up 32%

Media Coverage

Festive push: Auto retail sales up 32%
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 7 ನವೆಂಬರ್ 2024
November 07, 2024

#OneRankOnePension: PM Modi Ensuring Dignity of Soldiers

India’s Socio - Economic Resilience Soars under the leadership of PM Modi