ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪಾಟ್ನಾದ ದಿನಕರ್ ಗೋಲಂಬರ್ ನಲ್ಲಿ ರಾಷ್ಟ್ರಕವಿ ರಾಮಧಾರಿ ಸಿಂಗ್ ದಿನಕರ್ ಅವರಿಗೆ ಗೌರವ ನಮನ ಸಲ್ಲಿಸಿದರು.
ಬಿಹಾರದ ಹೆಮ್ಮೆ ರಾಷ್ಟ್ರಕವಿ ರಾಮಧಾರಿ ಸಿಂಗ್ ದಿನಕರ್ ಅವರ ಶಕ್ತಿಶಾಲಿ ರಚನೆಗಳು ಯಾವಾಗಲೂ ಭಾರತ ಮಾತೆಯ ಸೇವೆ ಮಾಡಲು ನಾಗರಿಕರನ್ನು ಪ್ರೇರೇಪಿಸಿವೆ ಎಂದು ಪ್ರಧಾನಿ ಹೇಳಿದರು. ಇಂದು ಪಾಟ್ನಾದಲ್ಲಿ ಈ ಮಹಾಕವಿಗೆ ಗೌರವ ನಮನ ಸಲ್ಲಿಸುವುದು ಒಂದು ಸೌಭಾಗ್ಯ ಎಂದು ಅವರು ಹೇಳಿದರು.
ಪ್ರಧಾನಮಂತ್ರಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಬರೆದಿದ್ದಾರೆ;
"ಬಿಹಾರ ಭೂಮಿಯ ಹೆಮ್ಮೆ, ರಾಷ್ಟ್ರಕವಿ ರಾಮಧಾರಿ ಸಿಂಗ್ ದಿನಕರ್ ಅವರ ಶಕ್ತಿಯುತ ಕೃತಿಗಳು ಯಾವಾಗಲೂ ಭಾರತ ಮಾತೆಯ ಸೇವೆ ಮಾಡಲು ದೇಶವಾಸಿಗಳಿಗೆ ಸ್ಫೂರ್ತಿ ನೀಡಿವೆ. ಇಂದು ಪಾಟ್ನಾದ ದಿನಕರ್ ಗೋಲಂಬರ್ ನಲ್ಲಿ ಅವರಿಗೆ ಗೌರವ ನಮನ ಸಲ್ಲಿಸುವ ಸೌಭಾಗ್ಯ ನನಗೆ ಸಿಕ್ಕಿತು,” ಎಂದು ಹೇಳಿದರು.
बिहार की धरती के गौरव राष्ट्रकवि रामधारी सिंह दिनकर जी की ओजस्वी रचनाओं ने देशवासियों को मां भारती की सेवा के लिए सदैव प्रेरित किया है। आज पटना में दिनकर गोलंबर पर उन्हें श्रद्धांजलि अर्पित करने का सौभाग्य प्राप्त हुआ। pic.twitter.com/vERCOEU5hi
— Narendra Modi (@narendramodi) November 2, 2025




