ನವೀನ ಆಲೋಚನೆಗಳು, ಶಕ್ತಿ ಮತ್ತು ಉದ್ದೇಶದೊಂದಿಗೆ ಯುವಶಕ್ತಿಯು ರಾಷ್ಟ್ರ ನಿರ್ಮಾಣದಲ್ಲಿ ಮುಂಚೂಣಿಯಲ್ಲಿದೆ: ಪ್ರಧಾನಮಂತ್ರಿ
ಸ್ವಾಮಿ ವಿವೇಕಾನಂದರ ಚಿಂತನೆಗಳು ಯುವಜನತೆಗೆ ಸ್ಫೂರ್ತಿ ನೀಡುತ್ತಲೇ ಇವೆ: ಪ್ರಧಾನಮಂತ್ರಿ
ಯುವಜನತೆಯ ಮೇಲೆ ಸ್ಪಷ್ಟ ಗಮನಹರಿಸಿ ನಾವು ಸತತ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಇಲ್ಲಿಂದಲೇ ಭಾರತದಲ್ಲಿ ನವೋದ್ಯಮ ಕ್ರಾಂತಿಯು ನಿಜವಾದ ವೇಗವನ್ನು ಪಡೆದುಕೊಂಡಿತು: ಪ್ರಧಾನಮಂತ್ರಿ
ಸಂಸ್ಕೃತಿ, ವಿಷಯ (ಕಂಟೆಂಟ್) ಮತ್ತು ಸೃಜನಶೀಲತೆಯಲ್ಲಿ ಬೇರೂರಿರುವ 'ಕಿತ್ತಳೆ ಆರ್ಥಿಕತೆ'ಯಲ್ಲಿ ಭಾರತವು ಗಮನಾರ್ಹ ಬೆಳವಣಿಗೆಯನ್ನು ಅನುಭವಿಸುತ್ತಿದೆ: ಪ್ರಧಾನಮಂತ್ರಿ
ಕಳೆದ ದಶಕದಲ್ಲಿ ನಾವು ಆರಂಭಿಸಿದ ಸುಧಾರಣೆಗಳ ಸರಣಿಯು ಈಗ 'ಸುಧಾರಣಾ ಎ‌ಕ್ಸ್‌ಪ್ರೆಸ್‌' ಆಗಿ ಬದಲಾಗಿದೆ. ನಮ್ಮ ಯುವಶಕ್ತಿ ಈ ಸುಧಾರಣೆಗಳ ಕೇಂದ್ರಬಿಂದುವಾಗಿದೆ: ಪ್ರಧಾನಮಂತ್ರಿ
ಭಾರತದ ಯುವಜನತೆಯು ರಾಷ್ಟ್ರವನ್ನು ಗುಲಾಮಗಿರಿ ಮನೋಭಾವದಿಂದ ಮುಕ್ತಗೊಳಿಸಲು ಸಂಕಲ್ಪ ಮಾಡಬೇಕು: ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯಲ್ಲಿ 'ವಿಕಸಿತ ಭಾರತ ಯುವ ನಾಯಕರ ಸಂವಾದ 2026'ರ ಸಮಾರೋಪ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಮೋದಿಯವರು, ತಾವು ಮೊದಲು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗ ಇಂದಿನ ಅನೇಕ ಯುವ ನಾಗರಿಕರು ಇನ್ನೂ ಜನಿಸಿರಲಿಲ್ಲ ಮತ್ತು 2014ರಲ್ಲಿ ತಾವು ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ ಅವರಲ್ಲಿ ಹೆಚ್ಚಿನವರು ಇನ್ನೂ ಮಕ್ಕಳಾಗಿದ್ದರು ಎಂದು ಹೇಳಿದರು. ಇಷ್ಟು ಕಾಲ ಉರುಳಿದರೂ ಸಹ, ಯುವ ಪೀಳಿಗೆಯ ಮೇಲೆ ತಮಗಿರುವ ಭರವಸೆ ಎಂದಿಗೂ ಕುಗ್ಗಿಲ್ಲ ಮತ್ತು ಅದು ಅಚಲವಾಗಿದೆ ಎಂದು ಅವರು ಒತ್ತಿಹೇಳಿದರು. "ನಿಮ್ಮ ಸಾಮರ್ಥ್ಯ, ನಿಮ್ಮ ಪ್ರತಿಭೆ - ನಾನು ಯಾವಾಗಲೂ ನಿಮ್ಮಿಂದ ಶಕ್ತಿಯನ್ನು ಪಡೆದಿದ್ದೇನೆ. ಮತ್ತು ಇಂದು ನೋಡಿ, ನೀವೆಲ್ಲರೂ ವಿಕಸಿತ ಭಾರತದ ಗುರಿಯ ಲಗಾಮನ್ನು ಹಿಡಿದಿದ್ದೀರಿ" ಎಂದು ಶ್ರೀ ಮೋದಿ ಹೇಳಿದರು.

ಭಾರತವು ಸ್ವಾತಂತ್ರ್ಯದ 100 ವರ್ಷಗಳನ್ನು ಪೂರೈಸುವ 2047ರವರೆಗಿನ ಅವಧಿಯು ರಾಷ್ಟ್ರ ಮತ್ತು ಅದರ ಯುವಜನತೆಗೆ ನಿರ್ಣಾಯಕ ಹಂತವಾಗಿದೆ ಎಂದು ಪ್ರಧಾನಮಂತ್ರಿ ಒತ್ತಿಹೇಳಿದರು. ಭಾರತದ ಯುವಜನತೆಯ ಶಕ್ತಿ ಮತ್ತು ಸಾಮರ್ಥ್ಯಗಳು ಭಾರತದ ಬಲವನ್ನು ರೂಪಿಸುತ್ತವೆ ಮತ್ತು ಅವರ ಯಶಸ್ಸು ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ಅವರು ಹೇಳಿದರು. ವಿಕಸಿತ ಭಾರತ ಯುವ ನಾಯಕರ ಸಂವಾದದಲ್ಲಿ ಭಾಗವಹಿಸಿದವರನ್ನು ಅಭಿನಂದಿಸಿದ ಪ್ರಧಾನಮಂತ್ರಿಯವರು, ಅಭಿವೃದ್ಧಿ ಹೊಂದಿದ ಭಾರತದ ದೃಷ್ಟಿಕೋನವನ್ನು ಸಾಧಿಸುವಲ್ಲಿ ಯುವ ನಾಯಕತ್ವದ ನಿರ್ಣಾಯಕ ಪಾತ್ರವನ್ನು ಎತ್ತಿ ತೋರಿಸಿದರು.

 

ಈ ಕಾರ್ಯಕ್ರಮವು ಸ್ವಾಮಿ ವಿವೇಕಾನಂದರ ಜನ್ಮದಿನದಂದೇ ನಡೆಯುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. "ಸ್ವಾಮಿ ವಿವೇಕಾನಂದರನ್ನು ಸ್ಮರಿಸುತ್ತಾ, ನಾವು ಪ್ರತಿ ವರ್ಷ ಜನವರಿ 12 ರಂದು ರಾಷ್ಟ್ರೀಯ ಯುವ ದಿನವನ್ನು ಆಚರಿಸುತ್ತೇವೆ. ಅವರ ಆದರ್ಶಗಳಿಂದ ಸ್ಫೂರ್ತಿ ಪಡೆದು, ವಿಕಸಿತ ಭಾರತ ಯುವ ನಾಯಕರ ಸಂವಾದಕ್ಕಾಗಿ ಜನವರಿ 12 ಅನ್ನು ಆಯ್ಕೆ ಮಾಡಲಾಗಿದೆ. ಸ್ವಾಮಿ ವಿವೇಕಾನಂದರ ಜೀವನವು ನಮಗೆಲ್ಲರಿಗೂ ದೊಡ್ಡ ಮಾರ್ಗದರ್ಶಕ ಬೆಳಕಾಗಿದೆ," ಎಂದು ಶ್ರೀ ಮೋದಿ ಹೇಳಿದರು.

ವಿಕಸಿತ ಭಾರತ ಯುವ ನಾಯಕರ ಸಂವಾದದ ಕ್ಷಿಪ್ರ ಬೆಳವಣಿಗೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಶ್ರೀ ಮೋದಿ, ಭಾರತದ ಅಭಿವೃದ್ಧಿ ಕಾರ್ಯಸೂಚಿಯನ್ನು ರೂಪಿಸುವಲ್ಲಿ ಯುವಜನರ ನೇರ ಭಾಗವಹಿಸುವಿಕೆಗೆ ಇದು ಪ್ರಬಲ ವೇದಿಕೆಯಾಗಿದೆ ಎಂದು ಬಣ್ಣಿಸಿದರು. "ಕೋಟ್ಯಂತರ ಯುವಜನರು ಈ ಉಪಕ್ರಮದೊಂದಿಗೆ ಸಂಬಂಧ ಹೊಂದಿರುವುದು, 5 ಮಿಲಿಯನ್‌ ಗಿಂತಲೂ ಹೆಚ್ಚು ನೋಂದಣಿಗಳು, 3 ಮಿಲಿಯನ್‌ ಗಿಂತಲೂ ಹೆಚ್ಚು ಯುವಜನರು ವಿಕಸಿತ ಭಾರತ ಚಾಲೆಂಜ್‌ ನಲ್ಲಿ ಭಾಗವಹಿಸಿ ರಾಷ್ಟ್ರದ ಅಭಿವೃದ್ಧಿಗಾಗಿ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳುತ್ತಿರುವುದು - ಇಂತಹ ಬೃಹತ್ ಪ್ರಮಾಣದ ಯುವಶಕ್ತಿಯ ತೊಡಗಿಸಿಕೊಳ್ಳುವಿಕೆ ಅಭೂತಪೂರ್ವವಾಗಿದೆ" ಎಂದು ಶ್ರೀ ಮೋದಿ ಹೇಳಿದರು.

ಬಂದಿರುವ ಸಲಹೆಗಳ ಗುಣಮಟ್ಟವನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು, ವಿಶೇಷವಾಗಿ 'ಮಹಿಳಾ ನೇತೃತ್ವದ ಅಭಿವೃದ್ಧಿ' ಮತ್ತು 'ಪ್ರಜಾಪ್ರಭುತ್ವದಲ್ಲಿ ಯುವಜನರ ಭಾಗವಹಿಸುವಿಕೆ'ಯಂತಹ ಪ್ರಮುಖ ವಿಷಯಗಳ ಕುರಿತು ಮಂಡಿಸಲಾದ ಚಿಂತನಶೀಲ ಆಲೋಚನೆಗಳನ್ನು ಮೆಚ್ಚಿದರು. ಕಾರ್ಯಕ್ರಮದ ಸಮಯದಲ್ಲಿ ನೀಡಲಾದ ಪ್ರಸ್ತುತಿಗಳನ್ನು ಉಲ್ಲೇಖಿಸಿದ ಅವರು, ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನು ನಿರ್ಮಿಸಲು ಭಾರತದ 'ಅಮೃತ ಪೀಳಿಗೆ'ಯ ಬಲವಾದ ಸಂಕಲ್ಪವನ್ನು ಇವು ಪ್ರತಿಬಿಂಬಿಸುತ್ತವೆ ಎಂದು ಹೇಳಿದರು. ಭಾರತದ 'ಜೆನ್ ಝಿ' ಯ ಸೃಜನಶೀಲತೆ ಮತ್ತು ನವೀನ ಮನೋಭಾವವನ್ನು ಪ್ರಧಾನಮಂತ್ರಿ ಒತ್ತಿಹೇಳಿದರು ಮತ್ತು ಸಂವಾದವನ್ನು ಯಶಸ್ವಿಯಾಗಿ ನಡೆಸಿದ್ದಕ್ಕಾಗಿ ಎಲ್ಲಾ ಯುವ ಭಾಗವಹಿಸುವವರನ್ನು ಮತ್ತು 'ಮೇರಾ ಯುವ ಭಾರತ್' ಸಂಘಟನೆಯ ಸದಸ್ಯರನ್ನು ಅಭಿನಂದಿಸಿದರು.

 

2014ಕ್ಕಿಂತ ಮೊದಲಿನ ಅವಧಿಯನ್ನು ನೆನಪಿಸಿಕೊಂಡ ಪ್ರಧಾನಮಂತ್ರಿ, ಅದನ್ನು ನೀತಿ ಪಾರ್ಶ್ವವಾಯು, ಅತಿಯಾದ ಕೆಂಪು ಪಟ್ಟಿ ಮತ್ತು ಯುವಕರಿಗೆ ಸೀಮಿತ ಅವಕಾಶಗಳ ಯುಗ ಎಂದು ಬಣ್ಣಿಸಿದರು. ಅಂದಿನ ಯುವಕರು ಉದ್ಯೋಗಗಳು, ಪರೀಕ್ಷೆಗಳು ಮತ್ತು ವ್ಯವಹಾರಗಳನ್ನು ಪ್ರಾರಂಭಿಸಲು ಕಠಿಣ ಪ್ರಕ್ರಿಯೆಗಳನ್ನು ಎದುರಿಸುತ್ತಿದ್ದರು, ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಳಂಬ ಮತ್ತು ನೀತಿಗಳ ಕಳಪೆ ಅನುಷ್ಠಾನವಿತ್ತು ಎಂದು ಅವರು ಹೇಳಿದರು. ಇಂದು ಅಸಹಜವೆಂದು ತೋರುವುದು ಒಂದು ದಶಕದ ಹಿಂದೆ ಸಾಮಾನ್ಯ ದಿನಚರಿಯಾಗಿತ್ತು ಎಂದು ಅವರು ಒತ್ತಿಹೇಳಿದರು, ಆಡಳಿತಾತ್ಮಕ ಸುಧಾರಣೆಗಳು ಅಂದಿನಿಂದ ಭಾರತದ ಯುವಜನತೆಯ ಅನುಭವವನ್ನು ಹೇಗೆ ಬದಲಾಯಿಸಿವೆ ಎಂಬುದನ್ನು ಎತ್ತಿ ತೋರಿಸಿದರು.

ಬದಲಾವಣೆಗೆ ಉದಾಹರಣೆಯಾಗಿ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಪ್ರಧಾನಮಂತ್ರಿ ಉಲ್ಲೇಖಿಸಿದರು. ದಶಕಗಳಿಂದ ಜಾಗತಿಕವಾಗಿ ನವೋದ್ಯಮ ಸಂಸ್ಕೃತಿಯು ಬೆಳೆದಿದ್ದರೂ ಸಹ, 2014ರ ಮೊದಲು ಭಾರತವು ನವೋದ್ಯಮಗಳ ಮೇಲೆ ಬಹಳ ಸೀಮಿತ ಗಮನವನ್ನು ಹೊಂದಿತ್ತು ಎಂದು ಅವರು ಗಮನಿಸಿದರು. "2014 ರವರೆಗೆ ದೇಶದಲ್ಲಿ 500ಕ್ಕೂ ಕಡಿಮೆ ನೋಂದಾಯಿತ ನವೋದ್ಯಮಗಳಿದ್ದವು. ನವೋದ್ಯಮ ಸಂಸ್ಕೃತಿಯ ಅನುಪಸ್ಥಿತಿಯಲ್ಲಿ, ಪ್ರತಿಯೊಂದು ವಲಯದಲ್ಲೂ ಸರ್ಕಾರದ ಹಸ್ತಕ್ಷೇಪವೇ ಮೇಲುಗೈ ಸಾಧಿಸಿತ್ತು. ನಮ್ಮ ಯುವ ಪ್ರತಿಭೆಗಳಿಗೆ, ಅವರ ಸಾಮರ್ಥ್ಯಗಳಿಗೆ ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ಅವಕಾಶ ಸಿಗಲಿಲ್ಲ," ಎಂದು ಶ್ರೀ ಮೋದಿ ಹೇಳಿದರು.

ಭಾರತದ ಯುವಜನತೆಯ ಸಾಮರ್ಥ್ಯದ ಮೇಲೆ ತಮಗಿರುವ ನಂಬಿಕೆಯನ್ನು ಪ್ರಧಾನಮಂತ್ರಿ ಒತ್ತಿಹೇಳಿದರು, ಈ ವಿಶ್ವಾಸವೇ ಯುವ ಸಂಶೋಧಕರನ್ನು ಸಬಲೀಕರಣಗೊಳಿಸುವತ್ತ ಗಮನ ಹರಿಸುವ ಹೊಸ ಅಭಿವೃದ್ಧಿ ವಿಧಾನಕ್ಕೆ ಕಾರಣವಾಯಿತು ಎಂದು ಹೇಳಿದರು. ಸ್ಟಾರ್ಟ್‌ಅಪ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸುಲಭ ವ್ಯವಹಾರ ಮತ್ತು ತೆರಿಗೆ ಹಾಗೂ ಅನುಸರಣೆಗಳ ಸರಳೀಕರಣದಂತಹ ಪ್ರಮುಖ ಸುಧಾರಣೆಗಳು ಮತ್ತು ಉಪಕ್ರಮಗಳನ್ನು ಅವರು ಒತ್ತಿ ಹೇಳಿದರು, ಇದು ಈ ಹಿಂದೆ ಸರ್ಕಾರಿ ಸ್ವಾಮ್ಯದಲ್ಲಿದ್ದ ವಲಯಗಳನ್ನು ಉದ್ಯಮಶೀಲತೆಗೆ ಮುಕ್ತಗೊಳಿಸುವ ಮೂಲಕ ಭಾರತದ ನವೋದ್ಯಮ ಕ್ರಾಂತಿಯನ್ನು ವೇಗಗೊಳಿಸಿತು ಎಂದು ಅವರು ಹೇಳಿದರು.

 

ಬಾಹ್ಯಾಕಾಶ ವಲಯವನ್ನು ಪ್ರಮುಖ ಉದಾಹರಣೆಯಾಗಿ ಉಲ್ಲೇಖಿಸಿದ ಶ್ರೀ ಮೋದಿ, "5-6 ವರ್ಷಗಳ ಹಿಂದೆ ಬಾಹ್ಯಾಕಾಶ ವಲಯವನ್ನು ಮುನ್ನಡೆಸುವ ಜವಾಬ್ದಾರಿಯು ಕೇವಲ ಇಸ್ರೋ ಮೇಲಿತ್ತು. ನಾವು ಬಾಹ್ಯಾಕಾಶ ವಲಯವನ್ನು ಖಾಸಗಿ ಉದ್ಯಮಗಳಿಗೆ ಮುಕ್ತಗೊಳಿಸಿದ್ದೇವೆ, ಪೂರಕ ಚೌಕಟ್ಟುಗಳು ಮತ್ತು ಸಂಸ್ಥೆಗಳನ್ನು ನಿರ್ಮಿಸಿದ್ದೇವೆ" ಎಂದರು. ಖಾಸಗಿ ಭಾಗವಹಿಸುವಿಕೆಗೆ ಮುಕ್ತಗೊಳಿಸಿರುವುದು 300 ಕ್ಕೂ ಹೆಚ್ಚು ನವೋದ್ಯಮಗಳ ಉದಯಕ್ಕೆ ಕಾರಣವಾಗಿದೆ ಎಂದು ಶ್ರೀ ಮೋದಿ ಹೇಳಿದರು. 'ಸ್ಕೈರೂಟ್ ಏರೋಸ್ಪೇಸ್' ಮತ್ತು 'ಅಗ್ನಿಕುಲ್ ಕಾಸ್ಮಾಸ್' ಮಾಡಿದ ಸಾಧನೆಗಳು ಯುವ ನೇತೃತ್ವದ ನಾವೀನ್ಯತೆಯು ಭಾರತವನ್ನು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಜಾಗತಿಕ ನಾಯಕನನ್ನಾಗಿ ಹೇಗೆ ಪರಿವರ್ತಿಸುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.

ನಿರ್ಬಂಧಿತ ನಿಯಮಗಳನ್ನು ಸಡಿಲಗೊಳಿಸುವುದು ಡ್ರೋನ್ ವಲಯವನ್ನು ಹೇಗೆ ಬದಲಾಯಿಸಿತು ಎಂಬುದನ್ನು ಪ್ರಧಾನಮಂತ್ರಿ ಉಲ್ಲೇಖಿಸಿದರು. ಈ ವಲಯವು ಈ ಹಿಂದೆ ಸಂಕೀರ್ಣ ಕಾನೂನುಗಳು ಮತ್ತು ಪರವಾನಗಿಗಳ ಹೊರೆಯಿಂದ ಕೂಡಿತ್ತು. "ಸರಳೀಕೃತ ನಿಯಮಗಳು ಡ್ರೋನ್ ತಂತ್ರಜ್ಞಾನದಲ್ಲಿ ಯುವ ನೇತೃತ್ವದ ಬೆಳವಣಿಗೆಯನ್ನು ಸಕ್ರಿಯಗೊಳಿಸಿದವು, 'ಮೇಡ್-ಇನ್-ಇಂಡಿಯಾ' ಡ್ರೋನ್‌ ಗಳು ಮತ್ತು 'ನಮೋ ಡ್ರೋನ್ ದೀದಿ'ಯಂತಹ ಉಪಕ್ರಮಗಳ ಮೂಲಕ ರಾಷ್ಟ್ರೀಯ ಭದ್ರತೆ ಮತ್ತು ಕೃಷಿಗೆ ಪ್ರಯೋಜನವನ್ನು ನೀಡಿದವು," ಎಂದು ಅವರು ಹೇಳಿದರು.

ಒಂದು ಕಾಲದಲ್ಲಿ ಸಾರ್ವಜನಿಕ ಉದ್ಯಮಗಳೇ ಪ್ರಾಬಲ್ಯ ಹೊಂದಿದ್ದ ರಕ್ಷಣಾ ವಲಯದ ಪ್ರಮುಖ ಸುಧಾರಣೆಗಳ ಬಗ್ಗೆ ಅವರು ಗಮನಸೆಳೆದರು. "ಇಂದು ಭಾರತದಲ್ಲಿ 1,000 ಕ್ಕೂ ಹೆಚ್ಚು ರಕ್ಷಣಾ ನವೋದ್ಯಮಗಳು ಕಾರ್ಯನಿರ್ವಹಿಸುತ್ತಿವೆ. ಒಬ್ಬ ಯುವಕ ಡ್ರೋನ್‌ ಗಳನ್ನು ತಯಾರಿಸುತ್ತಿದ್ದರೆ, ಮತ್ತೊಬ್ಬರು ಡ್ರೋನ್ ನಿಗ್ರಹ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ, ಯಾರೋ ಒಬ್ಬರು ಎಐ-ಚಾಲಿತ ಕ್ಯಾಮೆರಾಗಳನ್ನು ರಚಿಸುತ್ತಿದ್ದರೆ, ಇತರರು ರೊಬೊಟಿಕ್ಸ್‌ ನಲ್ಲಿ ಕೆಲಸ ಮಾಡುತ್ತಿದ್ದಾರೆ," ಎಂದು ಶ್ರೀ ಮೋದಿ ಹೇಳಿದರು.

 

ಡಿಜಿಟಲ್ ಇಂಡಿಯಾ ಉಪಕ್ರಮವು ಹೊಸ ತಲೆಮಾರಿನ ಸೃಜನಶೀಲರನ್ನು ಬೆಳೆಸುವಲ್ಲಿ ಮತ್ತು ಸಂಸ್ಕೃತಿ, ವಿಷಯ (ಕಂಟೆಂಟ್)‌ ಮತ್ತು ಸೃಜನಶೀಲತೆಯನ್ನು ಕೇಂದ್ರವಾಗಿರಿಸಿಕೊಂಡ ಭಾರತದ 'ಕಿತ್ತಳೆ ಆರ್ಥಿಕತೆ'ಯ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ಬೀರಿದ ಪ್ರಭಾವವನ್ನು ಪ್ರಧಾನಮಂತ್ರಿ ಎತ್ತಿ ತೋರಿಸಿದರು. "ಭಾರತವು 'ಕಿತ್ತಳೆ ಎಕಾನಮಿ'ಯಲ್ಲಿ, ಅಂದರೆ ಸಂಸ್ಕೃತಿ, ವಿಷಯ ಮತ್ತು ಸೃಜನಶೀಲತೆಯಲ್ಲಿ ಅಭೂತಪೂರ್ವ ಬೆಳವಣಿಗೆಯನ್ನು ಕಾಣುತ್ತಿದೆ. ಮಾಧ್ಯಮ, ಚಲನಚಿತ್ರ, ಗೇಮಿಂಗ್, ಸಂಗೀತ, ಡಿಜಿಟಲ್ ಕಂಟೆಂಟ್ ಮತ್ತು ವಿಆರ್- ಎಕ್ಸ್‌ ಆರ್ ನಂತಹ ಕ್ಷೇತ್ರಗಳಲ್ಲಿ ಭಾರತವು ಪ್ರಮುಖ ಜಾಗತಿಕ ಕೇಂದ್ರವಾಗಿ ಹೊರಹೊಮ್ಮುತ್ತಿದೆ" ಎಂದು ಶ್ರೀ ಮೋದಿ ತಿಳಿಸಿದರು. "'ವಿಶ್ವ ಧ್ವನಿ-ದೃಶ್ಯ ಮತ್ತು ಮನರಂಜನಾ ಶೃಂಗಸಭೆʼ (ವೇವ್ಸ್) ಯುವ ಸೃಜನಶೀಲರಿಗೆ ಪ್ರಮುಖ ಚಿಮ್ಮು ಹಲಗೆಯಾಗಿದೆ. ಅಂದರೆ, ಯಾವುದೇ ವಲಯವಿರಲಿ, ಇಂದು ಭಾರತದಲ್ಲಿ ಅಪಾರ ಅವಕಾಶಗಳ ಬಾಗಿಲುಗಳು ತೆರೆದುಕೊಳ್ಳುತ್ತಿವೆ" ಎಂದು ಶ್ರೀ ಮೋದಿ ಹೇಳಿದರು. ಯುವಜನರು ತಮ್ಮ ಆಲೋಚನೆಗಳನ್ನು ಧೈರ್ಯದಿಂದ ಮುಂದುವರಿಸಬೇಕೆಂದು ಅವರು ಕರೆ ನೀಡಿದರು ಮತ್ತು ಸರ್ಕಾರದ ಬೆಂಬಲ ಮುಂದುವರಿಯಲಿದೆ ಎಂಬ ಭರವಸೆ ನೀಡಿದರು.

ಕಳೆದ ದಶಕದಲ್ಲಿ ಪ್ರಾರಂಭಿಸಲಾದ ಸುಧಾರಣಾ ಕಾರ್ಯಸೂಚಿಯು ಯುವಜನತೆಯನ್ನು ಕೇಂದ್ರವಾಗಿಟ್ಟುಕೊಂಡು ವೇಗವನ್ನು ಪಡೆದುಕೊಂಡಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಮುಂದಿನ ಪೀಳಿಗೆಯ ಜಿ ಎಸ್‌ ಟಿ ಸುಧಾರಣೆಗಳು ಮತ್ತು 12 ಲಕ್ಷ ರೂಪಾಯಿಗಳವರೆಗಿನ ತೆರಿಗೆ ವಿನಾಯಿತಿಗಳು ಪ್ರಕ್ರಿಯೆಗಳನ್ನು ಸರಳಗೊಳಿಸುವ ಮತ್ತು ಯುವ ವೃತ್ತಿಪರರು ಹಾಗೂ ಉದ್ಯಮಿಗಳಿಗೆ ಉಳಿತಾಯವನ್ನು ಹೆಚ್ಚಿಸುವ ಕ್ರಮಗಳಾಗಿವೆ ಎಂದು ಅವರು ಹೇಳಿದರು. ಎಐ ಮತ್ತು ಸುಧಾರಿತ ಉತ್ಪಾದನೆಯಿಂದ ಪ್ರೇರಿತವಾದ ಇಂಧನ ಬೇಡಿಕೆಯನ್ನು ಒತ್ತಿಹೇಳುತ್ತಾ, ನಾಗರಿಕ ಪರಮಾಣು ಇಂಧನ ಸುಧಾರಣೆಗಳು ಮತ್ತು 'ಶಾಂತಿ' (SHANTI) ಕಾಯಿದೆಯು ನಿರಂತರ ವಿದ್ಯುತ್ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು, ದೊಡ್ಡ ಪ್ರಮಾಣದ ಉದ್ಯೋಗವನ್ನು ಸೃಷ್ಟಿಸಲು ಮತ್ತು ಆರ್ಥಿಕತೆಯಾದ್ಯಂತ ಧನಾತ್ಮಕ ಪರಿಣಾಮಗಳನ್ನು ಬೀರಲು ಉದ್ದೇಶಿಸಿವೆ ಎಂದರು.

 

ಜಾಗತಿಕ ಮಾನವಶಕ್ತಿಯ ಕೊರತೆಯನ್ನು ಪ್ರಧಾನಮಂತ್ರಿ ಪ್ರಸ್ತಾಪಿಸಿದರು ಮತ್ತು ಅಂತರರಾಷ್ಟ್ರೀಯ ಅವಕಾಶಗಳಿಗಾಗಿ ತನ್ನ ಯುವಜನತೆಯನ್ನು ಸಿದ್ಧಪಡಿಸುವ ಭಾರತದ ಕಾರ್ಯತಂತ್ರವನ್ನು ಒತ್ತಿಹೇಳಿದರು. "ವಿಶ್ವದಾದ್ಯಂತ ಹೊರಹೊಮ್ಮುತ್ತಿರುವ ಅವಕಾಶಗಳಿಗೆ ಭಾರತದ ಯುವಕರು ಸಿದ್ಧರಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಪ್ರಯತ್ನವಾಗಿದೆ. ಆದ್ದರಿಂದ, ಕೌಶಲ್ಯ ಅಭಿವೃದ್ಧಿಗೆ ಸಂಬಂಧಿಸಿದ ವಲಯಗಳಲ್ಲಿ ನಿರಂತರ ಸುಧಾರಣೆಗಳನ್ನು ಮಾಡಲಾಗುತ್ತಿದೆ," ಎಂದು ಶ್ರೀ ಮೋದಿ ಒತ್ತಿಹೇಳಿದರು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ನಂತರ, ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ನಿಯಮಗಳನ್ನು ಈಗ ಸುಧಾರಿಸಲಾಗುತ್ತಿದೆ ಎಂದು ಅವರು ಪುನರುಚ್ಚರಿಸಿದರು. "ವಿದೇಶಿ ವಿಶ್ವವಿದ್ಯಾಲಯಗಳು ಭಾರತದಲ್ಲಿ ತಮ್ಮ ಕ್ಯಾಂಪಸ್‌ ಗಳನ್ನು ತೆರೆಯುತ್ತಿವೆ. ಇತ್ತೀಚೆಗೆ, ಸಾವಿರಾರು ಕೋಟಿ ರೂಪಾಯಿಗಳ ಹೂಡಿಕೆಯೊಂದಿಗೆ 'ಪಿಎಂ ಸೇತು' ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ. ಇದರ ಅಡಿಯಲ್ಲಿ ಸಾವಿರಾರು ಐಟಿಐಗಳನ್ನು ಮೇಲ್ದರ್ಜೆಗೇರಿಸಲಾಗುವುದು ಇದರಿಂದ ಯುವಜನರು ಉದ್ಯಮದ ಪ್ರಸ್ತುತ ಮತ್ತು ಭವಿಷ್ಯದ ಅಗತ್ಯಗಳಿಗೆ ಅನುಗುಣವಾಗಿ ತರಬೇತಿ ಪಡೆಯಬಹುದು" ಎಂದು ಶ್ರೀ ಮೋದಿ ಹೇಳಿದರು.

ದೇಶವು ಸ್ವಾವಲಂಬಿ ಮತ್ತು ಅಭಿವೃದ್ಧಿ ಹೊಂದಲು ಆತ್ಮವಿಶ್ವಾಸ ಅತ್ಯಗತ್ಯ ಎಂದು ಪ್ರಧಾನಮಂತ್ರಿ ಒತ್ತಿಹೇಳಿದರು. ಮೆಕಾಲೆಯ ವಸಾಹತುಶಾಹಿ ಕಾಲದ ಶಿಕ್ಷಣ ನೀತಿಗಳನ್ನು ಉಲ್ಲೇಖಿಸಿದ ಅವರು, ಅವು ಭಾರತೀಯರಲ್ಲಿ ತಮ್ಮದೇ ಆದ ಪರಂಪರೆ, ಉತ್ಪನ್ನಗಳು ಮತ್ತು ಸಾಮರ್ಥ್ಯಗಳ ಬಗ್ಗೆ ಕೀಳರಿಮೆಯನ್ನು ಉಂಟುಮಾಡಿದವು ಎಂದು ಹೇಳಿಸಿದರು. ಈ ಮನೋಭಾವದಿಂದ ಮುಕ್ತರಾಗಲು ಒಟ್ಟಾಗಿ ಸಂಕಲ್ಪ ಮಾಡುವಂತೆ ಭಾರತದ ಯುವಜನತೆಗೆ ಕರೆ ನೀಡಿದ ಶ್ರೀ ಮೋದಿ, "ಇನ್ನು ಹತ್ತು ವರ್ಷಗಳಲ್ಲಿ ಮೆಕಾಲೆಯ ಧಾರ್ಷ್ಟ್ಯದ ನೀತಿಗಳಿಗೆ 200 ವರ್ಷಗಳಾಗುತ್ತವೆ, ಆದ್ದರಿಂದ ದೇಶದ ಪ್ರತಿಯೊಬ್ಬ ಯುವಕನೂ ಭಾರತವನ್ನು ಈ ಮನಸ್ಥಿತಿಯಿಂದ ಮುಕ್ತಗೊಳಿಸಲು ಸಂಕಲ್ಪ ಮಾಡಬೇಕು," ಎಂದರು.

ಭಾರತದ ಸ್ವಂತ ಪರಂಪರೆಯನ್ನು ಗೌರವಿಸುತ್ತಲೇ ಜಾಗತಿಕ ಜ್ಞಾನಕ್ಕೆ ತೆರೆದುಕೊಳ್ಳುವ ಮಹತ್ವವನ್ನು ಪ್ರಧಾನಮಂತ್ರಿ ಉಲ್ಲೇಖಿಸಿದರು ಮತ್ತು "ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ" ಎಂಬ ವೈದಿಕ ನುಡಿಯನ್ನು ಉಲ್ಲೇಖಿಸಿದರು, ಅಂದರೆ ಎಲ್ಲ ದಿಕ್ಕುಗಳಿಂದಲೂ ಮಂಗಳಕರವಾದ, ಪ್ರಯೋಜನಕಾರಿಯಾದ ಮತ್ತು ಅತ್ಯುತ್ತಮವಾದ ಆಲೋಚನೆಗಳು ನಮಗೆ ಬರಲಿ. "ನೀವು ಪ್ರಪಂಚದಾದ್ಯಂತದ ಉತ್ತಮ ಅಭ್ಯಾಸಗಳಿಂದ ಕಲಿಯಬೇಕು, ಆದರೆ ನಿಮ್ಮ ಸ್ವಂತ ಪರಂಪರೆ ಮತ್ತು ಆಲೋಚನೆಗಳನ್ನು ಕಡಿಮೆ ಅಂದಾಜು ಮಾಡುವ ಪ್ರವೃತ್ತಿಯು ಮೇಲುಗೈ ಸಾಧಿಸಲು ಬಿಡಬೇಡಿ" ಎಂದು ಶ್ರೀ ಮೋದಿ ಹೇಳಿದರು.

ಜಾಗತಿಕ ಆಲೋಚನೆಗಳನ್ನು ಅಳವಡಿಸಿಕೊಂಡಿದ್ದರೂ ಭಾರತದ ಬಗೆಗಿನ ತಪ್ಪು ಕಲ್ಪನೆಗಳನ್ನು ಪ್ರಶ್ನಿಸಿದ ಮತ್ತು ಉತ್ತಮ ರಾಷ್ಟ್ರದ ದೃಷ್ಟಿಕೋನವನ್ನು ಪ್ರೇರೇಪಿಸಿದ ಸ್ವಾಮಿ ವಿವೇಕಾನಂದರನ್ನು ಶ್ರೀ ಮೋದಿ ಸ್ಮರಿಸಿದರು. ಯುವಜನರು ಉತ್ಸಾಹದಿಂದ ಮುನ್ನಡೆಯಲು, ಸದೃಢರಾಗಿರಲು ಮತ್ತು ಸಂತೋಷವನ್ನು ಅಳವಡಿಸಿಕೊಳ್ಳಲು, ತಮ್ಮ ಸಾಮರ್ಥ್ಯದ ಮೇಲೆ ಅಚಲ ನಂಬಿಕೆಯನ್ನು ಇಡುವಂತೆ ಅವರು ಕರೆ ನೀಡಿದರು. "ನಿಮ್ಮೆಲ್ಲರ ಮೇಲೆ, ನಿಮ್ಮ ಸಾಮರ್ಥ್ಯ ಮತ್ತು ಶಕ್ತಿಯ ಮೇಲೆ ನನಗೆ ಸಂಪೂರ್ಣ ನಂಬಿಕೆಯಿದೆ. ಈ ಮಾತುಗಳೊಂದಿಗೆ, ಮತ್ತೊಮ್ಮೆ ನಿಮ್ಮೆಲ್ಲರಿಗೂ ರಾಷ್ಟ್ರೀಯ ಯುವ ದಿನದ ಶುಭಾಶಯಗಳನ್ನು ಕೋರುತ್ತೇನೆ" ಎಂದು ಪ್ರಧಾನಮಂತ್ರಿಯವರು ಮಾತು ಮುಗಿಸಿದರು.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
FIIs pour over $1 billion into Indian stocks, biggest weekly buying since June 2025

Media Coverage

FIIs pour over $1 billion into Indian stocks, biggest weekly buying since June 2025
NM on the go

Nm on the go

Always be the first to hear from the PM. Get the App Now!
...
Prime Minister expresses grief over loss of lives due to boat capsizing in South 24 Parganas district of West Bengal
July 13, 2026
Prime Minister announces ex-gratia

The Prime Minister, Shri Narendra Modi has expressed deep grief over the loss of lives due to the capsizing of a boat in the South 24 Parganas district of West Bengal.

The Prime Minister conveyed his thoughts to the bereaved families in this hour of grief and prayed for the speedy recovery of the injured.

The Prime Minister announced that an ex-gratia of Rs. 2 lakh from the Prime Minister’s National Relief Fund (PMNRF) would be given to the next of kin of each deceased. The injured would be given Rs. 50,000.

The Prime Minister’s Office posted on X;

“The loss of lives due to the capsizing of a boat in the South 24 Parganas district of West Bengal is deeply painful. My thoughts are with the bereaved families in this hour of grief. May the injured recover at the earliest.

An ex-gratia of Rs. 2 lakh from PMNRF would be given to the next of kin of each deceased. The injured would be given Rs. 50,000: PM @narendramodi”