ಹರಿಯಾಣದ ಕುರುಕ್ಷೇತ್ರದಲ್ಲಿ ಇಂದು ನಡೆದ ಶ್ರೀ ಗುರು ತೇಜ್ ಬಹದ್ದೂರ್ ಅವರ 350ನೇ ಹುತಾತ್ಮ ದಿನಾಚರಣೆಯನ್ನುದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮಾತನಾಡಿದರು. ಇಂದು ಭಾರತದ ಪರಂಪರೆಯ ಮಹತ್ವದ ಸಂಗಮವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ತಾವು ಬೆಳಿಗ್ಗೆ ರಾಮಾಯಣ ನಗರವಾದ ಅಯೋಧ್ಯೆಯಲ್ಲಿ ಮತ್ತು ಈಗ ಗೀತಾ ನಗರವಾದ ಕುರುಕ್ಷೇತ್ರದಲ್ಲಿರುವುದಾಗಿ ಅವರು ಉಲ್ಲೇಖಿಸಿದರು. ಶ್ರೀ ಗುರು ತೇಜ್ ಬಹದ್ದೂರ್ ಅವರ 350 ನೇ ಹುತಾತ್ಮ ದಿನಾಚರಣೆಯ ಸಂದರ್ಭದಲ್ಲಿ ಎಲ್ಲರೂ ಅವರಿಗೆ ಗೌರವ ಸಲ್ಲಿಸುತ್ತಿದ್ದಾರೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಸಂತರು ಮತ್ತು ಗಣ್ಯರ ಉಪಸ್ಥಿತಿಯನ್ನು ಪ್ರಧಾನಮಂತ್ರಿ ಶ್ಲಾಘಿಸಿದರು ಮತ್ತು ಎಲ್ಲರಿಗೂ ಗೌರವದಿಂದ ನಮಸ್ಕರಿಸಿದರು.
5-6 ವರ್ಷಗಳ ಹಿಂದೆ ನಡೆದ ಮತ್ತೊಂದು ವಿಶಿಷ್ಟ ಕಾಕತಾಳೀಯ ಘಟನೆಯನ್ನು ನೆನಪಿಸಿಕೊಂಡ ಶ್ರೀ ಮೋದಿ, ನವೆಂಬರ್ 9, 2019 ರಂದು ಸುಪ್ರೀಂ ಕೋರ್ಟ್ ರಾಮ ಮಂದಿರದ ಬಗ್ಗೆ ತೀರ್ಪು ನೀಡಿದಾಗ, ತಾವು ಕರ್ತಾರ್‌ಪುರ ಕಾರಿಡಾರ್ ಉದ್ಘಾಟನೆಗಾಗಿ ಡೇರಾ ಬಾಬಾ ನಾನಕ್ ನಲ್ಲಿ ಇದ್ದುದಾಗಿ ಹೇಳಿದರು. ಆ ದಿನ ರಾಮ ಮಂದಿರ ನಿರ್ಮಾಣದ ಹಾದಿ ಸುಗಮವಾಗಲಿ ಮತ್ತು ಲಕ್ಷಾಂತರ ರಾಮ ಭಕ್ತರ ಆಶಯಗಳು ಈಡೇರಲಿ ಎಂದು ಪ್ರಾರ್ಥಿಸುತ್ತಿದ್ದೆ ಎಂದು ಪ್ರಧಾನಮಂತ್ರಿ ಹೇಳಿದರು. ಆ ದಿನ ರಾಮ ಮಂದಿರದ ಪರವಾಗಿ ನಿರ್ಧಾರ ಬಂದಿದ್ದರಿಂದ ಎಲ್ಲರ ಪ್ರಾರ್ಥನೆಗಳಿಗೆ ಉತ್ತರ ಸಿಕ್ಕಿತು. ಈಗ, ಅಯೋಧ್ಯೆಯಲ್ಲಿ ಧರ್ಮ ಧ್ವಜ ಹಾರಿಸಲ್ಪಟ್ಟಾಗ, ಸಿಖ್ ಸಮುದಾಯದಿಂದ ಆಶೀರ್ವಾದ ಪಡೆಯುವ ಅವಕಾಶ ತಮಗೆ ಮತ್ತೊಮ್ಮೆ ಸಿಕ್ಕಿದೆ ಎಂದು ಪ್ರಧಾನಮಂತ್ರಿ ಹೇಳಿದರು.
ಸ್ವಲ್ಪ ಹೊತ್ತಿನ ಹಿಂದೆ ಕುರುಕ್ಷೇತ್ರದ ಭೂಮಿಯಲ್ಲಿ 'ಪಾಂಚಜನ್ಯ ಸ್ಮಾರಕ'ವನ್ನು ಉದ್ಘಾಟಿಸಲಾಯಿತು ಎಂದು ಶ್ರೀ ಮೋದಿ ಹೇಳಿದರು. ಇದೇ ಭೂಮಿಯಲ್ಲಿಯೇ ಶ್ರೀ ಕೃಷ್ಣನು ಸತ್ಯ ಮತ್ತು ನ್ಯಾಯದ ರಕ್ಷಣೆಯನ್ನು ಅತ್ಯಂತ ಶ್ರೇಷ್ಠ ಕರ್ತವ್ಯವೆಂದು ಘೋಷಿಸಿದನು ಎಂದು ಅವರು ವಿವರಿಸಿದರು. ಕೃಷ್ಣನ ಮಾತುಗಳನ್ನು ಪ್ರತಿಧ್ವನಿಸುತ್ತಾ, ಸತ್ಯದ ಮಾರ್ಗಕ್ಕಾಗಿ ಮತ್ತು ತನ್ನ ಕರ್ತವ್ಯಕ್ಕಾಗಿ ತನ್ನ ಪ್ರಾಣವನ್ನು ತ್ಯಾಗ ಮಾಡುವುದು ಅತ್ಯಂತ ಶ್ರೇಷ್ಠ ಕರ್ತವ್ಯ ಎಂದು ಶ್ರೀ ಮೋದಿ ಹೇಳಿದರು. ಶ್ರೀ ಗುರು ತೇಜ್ ಬಹದ್ದೂರ್ ಅವರು ಸತ್ಯ, ನ್ಯಾಯ ಮತ್ತು ನಂಬಿಕೆಯ ರಕ್ಷಣೆಯನ್ನು ತಮ್ಮ ಧರ್ಮವೆಂದು ಪರಿಗಣಿಸಿದ್ದರು ಮತ್ತು ತಮ್ಮ ಪ್ರಾಣವನ್ನು ತ್ಯಾಗ ಮಾಡುವ ಮೂಲಕ ಈ ಧರ್ಮವನ್ನು ಎತ್ತಿಹಿಡಿದರು ಎಂದು ಅವರು ಹೇಳಿದರು. ಈ ಐತಿಹಾಸಿಕ ಸಂದರ್ಭದಲ್ಲಿ, ಭಾರತ ಸರ್ಕಾರವು ಶ್ರೀ ಗುರು ತೇಜ್ ಬಹದ್ದೂರ್ ಅವರ ಪಾದಗಳಿಗೆ ಸ್ಮರಣಾರ್ಥ ಅಂಚೆ ಚೀಟಿ ಮತ್ತು ವಿಶೇಷ ನಾಣ್ಯವನ್ನು ಸಮರ್ಪಿಸುವ ಸೌಭಾಗ್ಯವನ್ನು ಪಡೆದುಕೊಂಡಿದೆ, ಸರ್ಕಾರವು ಈ ರೀತಿ ಗುರು ಪರಂಪರೆಗೆ ಸೇವೆ ಸಲ್ಲಿಸುವುದನ್ನು ಮುಂದುವರಿಸುತ್ತದೆ ಪ್ರಧಾನಮಂತ್ರಿ ಹೇಳಿದರು.

ಪವಿತ್ರ ಭೂಮಿ ಕುರುಕ್ಷೇತ್ರ ಸಿಖ್ ಸಂಪ್ರದಾಯದ ಪ್ರಮುಖ ಕೇಂದ್ರವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಸಿಖ್ ಸಂಪ್ರದಾಯದ ಬಹುತೇಕ ಎಲ್ಲಾ ಗುರುಗಳು ತಮ್ಮ ಪವಿತ್ರ ಪ್ರಯಾಣದ ಸಮಯದಲ್ಲಿ ಈ ಭೂಮಿಗೆ ಭೇಟಿ ನೀಡಿದ್ದರು ಎಂದು ಅವರು ಹೇಳಿದರು. ಒಂಬತ್ತನೇ ಗುರು ಶ್ರೀ ಗುರು ತೇಜ್ ಬಹದ್ದೂರ್ ಅವರು ಈ ಪವಿತ್ರ ಭೂಮಿಗೆ ಭೇಟಿ ನೀಡಿದಾಗ, ಅವರು ಆಳವಾದ ತಪಸ್ಸು ಮತ್ತು ನಿರ್ಭೀತ ಧೈರ್ಯದ ಆಳವಾದ ಗುರುತುಗಳನ್ನು ಬಿಟ್ಟರು ಎಂದು ಅವರು ನೆನಪಿಸಿಕೊಂಡರು.
"ಶ್ರೀ ಗುರು ತೇಜ್ ಬಹದ್ದೂರ್ ಅವರಂತಹ ವ್ಯಕ್ತಿಗಳು ಇತಿಹಾಸದಲ್ಲಿ ಅಪರೂಪ ಮತ್ತು ಅವರ ಜೀವನ, ತ್ಯಾಗ ಮತ್ತು ವ್ಯಕ್ತಿತ್ವವು ಸ್ಫೂರ್ತಿಯ ದೊಡ್ಡ ಮೂಲವಾಗಿದೆ" ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಮೊಘಲ್ ಆಕ್ರಮಣಗಳ ಸಮಯದಲ್ಲಿ, ಗುರು ಸಾಹಿಬ್ ಶೌರ್ಯದ ಆದರ್ಶವನ್ನು ಪ್ರಸ್ತುತಪಡಿಸಿದರು ಎಂದು ಅವರು ಒತ್ತಿ ಹೇಳಿದರು. ಶ್ರೀ ಗುರು ತೇಜ್ ಬಹದ್ದೂರ್ ಅವರ ಹುತಾತ್ಮತೆಗೆ ಮೊದಲು, ಮೊಘಲ್ ಆಕ್ರಮಣಕಾರರು ಕಾಶ್ಮೀರಿ ಹಿಂದೂಗಳನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸುತ್ತಿದ್ದರು. ಈ ಕಷ್ಟದ ಸಮಯದಲ್ಲಿ, ದಮನಿತ ಜನರ ಗುಂಪೊಂದು ಗುರು ಸಾಹಿಬ್ ಅವರ ಸಹಾಯವನ್ನು ಕೋರಿತು. ಶ್ರೀ ಗುರು ತೇಜ್ ಬಹದ್ದೂರ್ ಅವರು ಸ್ವತಃ ಇಸ್ಲಾಂ ಧರ್ಮವನ್ನು ಸ್ವೀಕರಿಸಿದರೆ, ತಾವೂ ಸಹ ಇಸ್ಲಾಂ ಧರ್ಮವನ್ನು ಸ್ವೀಕರಿಸುವುದಾಗಿ ಔರಂಗಜೇಬ್ ಗೆ ಸ್ಪಷ್ಟವಾಗಿ ಹೇಳಲು ಗುರು ಸಾಹಿಬ್ ಹೇಳಿದ್ದರು ಎಂದು ಪ್ರಧಾನಮಂತ್ರಿ ನೆನಪಿಸಿಕೊಂಡರು.
ಈ ಮಾತುಗಳು ಗುರು ತೇಜ್ ಬಹದ್ದೂರ್ ಅವರ ನಿರ್ಭಯತೆಯ ಉತ್ತುಂಗವನ್ನು ಪ್ರದರ್ಶಿಸುತ್ತವೆ ಎಂದು ಶ್ರೀ ಮೋದಿ ಹೇಳಿದರು. ಕ್ರೂರಿ ಔರಂಗಜೇಬ್ ಗುರು ಸಾಹಿಬ್ ಅವರನ್ನು ಸೆರೆಮನೆಗೆ ಹಾಕಲು ಆದೇಶಿಸಿದ, ಆದರೆ ಗುರು ಸಾಹಿಬ್ ಸ್ವತಃ ದೆಹಲಿಗೆ ಹೋಗುವ ನಿರ್ಧಾರವನ್ನು ಘೋಷಿಸಿದರು ಎಂದು ಅವರು ಹೇಳಿದರು. ಮೊಘಲ್ ಆಡಳಿತಗಾರರು ಅವರನ್ನು ಪ್ರಲೋಭನೆಗಳಿಂದ ಸೆಳೆಯಲು ಪ್ರಯತ್ನಿಸಿದರೂ, ಗುರು ತೇಜ್ ಬಹದ್ದೂರ್ ದೃಢವಾಗಿ ಉಳಿದರು ಮತ್ತು ತಮ್ಮ ನಂಬಿಕೆ ಮತ್ತು ತತ್ವಗಳಲ್ಲಿ ರಾಜಿ ಮಾಡಿಕೊಳ್ಳಲು ನಿರಾಕರಿಸಿದರು ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಅವರ ಸಂಕಲ್ಪವನ್ನು ಮುರಿಯಲು ಮತ್ತು ಅವರನ್ನು ದಾರಿ ತಪ್ಪಿಸಲು, ಮೊಘಲರು ಅವರ ಮೂವರು ಸಹಚರರಾದ ಭಾಯಿ ದಯಾಲಾ ಜಿ, ಭಾಯಿ ಸತಿ ದಾಸ್ ಜಿ ಮತ್ತು ಭಾಯಿ ಮತಿ ದಾಸ್ ಜಿ ಅವರನ್ನು ಅವರ ಕಣ್ಣೆದುರೇ ಕ್ರೂರವಾಗಿ ಕೊಂದರು. ಆಗಲೂ ಗುರು ಸಾಹಿಬ್ ಅಚಲವಾಗಿದ್ದರು, ತಮ್ಮ ದೃಢಸಂಕಲ್ಪ ಮುರಿಯಲಿಲ್ಲ ಎಂದು ಪ್ರಧಾನಮಂತ್ರಿ ಹೇಳಿದರು. ಗುರು ಸಾಹಿಬ್ ಧರ್ಮದ ಮಾರ್ಗವನ್ನು ತ್ಯಜಿಸಲಿಲ್ಲ ಮತ್ತು ಆಳವಾದ ಧ್ಯಾನದ ಸ್ಥಿತಿಯಲ್ಲಿ, ತಮ್ಮ ನಂಬಿಕೆಯ ರಕ್ಷಣೆಗಾಗಿ ತಮ್ಮ ಶಿರವನ್ನು ತ್ಯಾಗ ಮಾಡಿದರು ಎಂದು ಅವರು ಒತ್ತಿ ಹೇಳಿದರು.
ಮೊಘಲರು ಅಲ್ಲಿಗೆ ನಿಲ್ಲಿಸಲಿಲ್ಲ; ಅವರು ಗುರು ಮಹಾರಾಜರ ಪವಿತ್ರ ಶಿರವನ್ನು ಅಪವಿತ್ರಗೊಳಿಸಲು ಸಹ ಪ್ರಯತ್ನಿಸಿದರು ಎಂದು ಪ್ರಧಾನಮಂತ್ರಿ ಹೇಳಿದರು. ಭಾಯಿ ಜೈತಾ ಜಿ ತಮ್ಮ ಧೈರ್ಯದ ಮೂಲಕ ಗುರುಗಳ ಶಿರವನ್ನು ಆನಂದಪುರ ಸಾಹಿಬ್ ಗೆ ಕೊಂಡೊಯ್ದರು ಎಂದು ಅವರು ವಿವರಿಸಿದರು. ನಂಬಿಕೆಯ ಪವಿತ್ರ ತಿಲಕವನ್ನು ಸಂರಕ್ಷಿಸಲಾಗಿದೆ, ಜನರ ನಂಬಿಕೆಗಳನ್ನು ದಬ್ಬಾಳಿಕೆಯಿಂದ ರಕ್ಷಿಸಲಾಗಿದೆ ಮತ್ತು ಇದಕ್ಕಾಗಿ ಗುರು ಸಾಹಿಬ್ ಎಲ್ಲವನ್ನೂ ತ್ಯಾಗ ಮಾಡಿದರು ಎಂಬ ಶ್ರೀ ಗುರು ಗೋವಿಂದ ಸಿಂಗ್ ಜಿ ಅವರ ಮಾತುಗಳನ್ನು ಪ್ರಧಾನಮಂತ್ರಿ ಸ್ಮರಿಸಿದರು.

ಗುರು ಸಾಹಿಬ್ ಅವರ ತ್ಯಾಗ ಬಲಿದಾನದ ಸ್ಥಳ ಇಂದು ದೆಹಲಿಯ ಶೀಶ್ ಗಂಜ್ ಗುರುದ್ವಾರದ ರೂಪದಲ್ಲಿ ಸ್ಫೂರ್ತಿಯ ಜೀವಂತ ತಾಣವಾಗಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಆನಂದಪುರ್ ಸಾಹಿಬ್ ದೇವಾಲಯವು ನಮ್ಮ ರಾಷ್ಟ್ರೀಯ ಪ್ರಜ್ಞೆಯ ಶಕ್ತಿ ಕೇಂದ್ರವಾಗಿದೆ ಎಂದರು. ಭಾರತದ ಇಂದಿನ ಸ್ವರೂಪ ಗುರು ಸಾಹಿಬ್ ರಂತಹ ಕ್ರಾಂತಿಕಾರಿ ವ್ಯಕ್ತಿಗಳ ತ್ಯಾಗ ಮತ್ತು ಸಮರ್ಪಣೆಯನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಮಹಾನ್ ತ್ಯಾಗದಿಂದಾಗಿ ಶ್ರೀ ಗುರು ತೇಜ್ ಬಹದ್ದೂರ್ ಸಾಹಿಬ್ ಅವರನ್ನು "ಹಿಂದ್ ದಿ ಚಾದರ್" ಎಂದು ಪೂಜಿಸಲಾಗುತ್ತದೆ ಎಂದು ಅವರು ಒತ್ತಿ ಹೇಳಿದರು.
"ನಮ್ಮ ಗುರುಗಳ ಸಂಪ್ರದಾಯಗಳು ದೇಶದ ಚಾರಿತ್ರ್ಯ, ಸಂಸ್ಕೃತಿ ಮತ್ತು ಮೌಲ್ಯಗಳ ಅಡಿಪಾಯ" ಎಂದು ಶ್ರೀ ಮೋದಿ ಹೇಳಿದರು. ಕಳೆದ 11 ವರ್ಷಗಳಲ್ಲಿ, ಸರ್ಕಾರವು ಈ ಪವಿತ್ರ ಸಂಪ್ರದಾಯಗಳನ್ನು ಮತ್ತು ಪ್ರತಿಯೊಂದು ಸಿಖ್ ಹಬ್ಬವನ್ನು ರಾಷ್ಟ್ರೀಯ ಹಬ್ಬಗಳಾಗಿ ಸ್ಥಾಪಿಸಿದೆ ಎಂದು ಅವರು ಸಂತೋಷ ವ್ಯಕ್ತಪಡಿಸಿದರು. ಶ್ರೀ ಗುರುನಾನಕ್ ದೇವ್ ಅವರ 550 ನೇ ಪ್ರಕಾಶ್ ಪರ್ವ್, ಶ್ರೀ ಗುರು ತೇಜ್ ಬಹದ್ದೂರ್ ಸಾಹಿಬ್ ಅವರ 400ನೇ ಪ್ರಕಾಶ್ ಪರ್ವ್ ಮತ್ತು ಶ್ರೀ ಗುರು ಗೋವಿಂದ ಸಿಂಗ್ ಅವರ 350 ನೇ ಪ್ರಕಾಶ್ ಪರ್ವ್ ಅನ್ನು ಭಾರತದ ಏಕತೆ ಮತ್ತು ಸಮಗ್ರತೆಯ ಹಬ್ಬಗಳಾಗಿ ಆಚರಿಸುವ ಸೌಭಾಗ್ಯ ತಮ್ಮ ಸರ್ಕಾರಕ್ಕೆ ಸಿಕ್ಕಿದೆ ಎಂದು ಪ್ರಧಾನಮಂತ್ರಿ ಹೇಳಿದರು. ದೇಶಾದ್ಯಂತ ಜನರು ತಮ್ಮ ಶ್ರದ್ಧೆ, ಸಂಪ್ರದಾಯಗಳು ಮತ್ತು ನಂಬಿಕೆಗಳನ್ನು ಮೀರಿ ಈ ಆಚರಣೆಗಳಲ್ಲಿ ಭಾಗವಹಿಸಿದ್ದಾರೆ ಎಂದು ಅವರು ಹೇಳಿದರು.
ಗುರುಗಳೊಂದಿಗೆ ಸಂಬಂಧಿಸಿದ ಪವಿತ್ರ ಸ್ಥಳಗಳಿಗೆ ಅತ್ಯಂತ ಭವ್ಯ ಮತ್ತು ದೈವಿಕ ರೂಪವನ್ನು ನೀಡುವ ಅದೃಷ್ಟ ತಮ್ಮ ಸರ್ಕಾರಕ್ಕೆ ದೊರೆತಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಕಳೆದ ದಶಕದಲ್ಲಿ, ತಾವು ಸ್ವತಃ ಗುರು ಸಂಪ್ರದಾಯಕ್ಕೆ ಸಂಬಂಧಿಸಿದ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾಗಿ ಹೇಳಿದರು. ಕೆಲವು ಸಮಯದ ಹಿಂದೆ, ಗುರು ಗ್ರಂಥ ಸಾಹೀಬ್ ನ ಮೂರು ಮೂಲ ರೂಪಗಳು ಅಫ್ಘಾನಿಸ್ತಾನದಿಂದ ಭಾರತಕ್ಕೆ ಬಂದಾಗ, ಅದು ಪ್ರತಿಯೊಬ್ಬ ನಾಗರಿಕನಿಗೂ ಹೆಮ್ಮೆಯ ಕ್ಷಣವಾಗಿತ್ತು ಎಂದು ಪ್ರಧಾನಮಂತ್ರಿ ನೆನಪಿಸಿಕೊಂಡರು.
ಗುರುಗಳ ಪ್ರತಿಯೊಂದು ಪವಿತ್ರ ಸ್ಥಳವನ್ನು ಆಧುನಿಕ ಭಾರತದ ದೃಷ್ಟಿಕೋನದೊಂದಿಗೆ ಸಂಪರ್ಕಿಸಲು ಸರ್ಕಾರ ಶ್ರಮಿಸುತ್ತಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಅದು ಕರ್ತಾರ್‌ಪುರ ಕಾರಿಡಾರ್ ಪೂರ್ಣಗೊಳಿಸುವಿಕೆಯಾಗಿರಲಿ, ಹೇಮಕುಂಡ್ ಸಾಹಿಬ್ ನಲ್ಲಿ ರೋಪ್‌ವೇ ಯೋಜನೆಯಾಗಿರಲಿ ಅಥವಾ ಆನಂದಪುರ ಸಾಹಿಬ್ ನಲ್ಲಿರುವ ವಿರಾಸತ್-ಎ-ಖಲ್ಸಾ ವಸ್ತುಸಂಗ್ರಹಾಲಯದ ವಿಸ್ತರಣೆಯಾಗಿರಲಿ, ಈ ಎಲ್ಲಾ ಕಾರ್ಯಗಳನ್ನು ಗುರುಗಳ ಅದ್ಭುತ ಸಂಪ್ರದಾಯದ ಮಾರ್ಗದರ್ಶನದಲ್ಲಿ ಅತ್ಯಂತ ಸಮರ್ಪಣಾಭಾವದಿಂದ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಧೈರ್ಯಶಾಲಿ ಸಾಹಿಬ್‌ಜಾದರೊಂದಿಗೂ ಸಹ ಮೊಘಲರು ಕ್ರೌರ್ಯದ ಎಲ್ಲಾ ಮಿತಿಗಳನ್ನು ಮೀರಿದ್ದರುರು ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಹೇಳಿದ ಪ್ರಧಾನಮಂತ್ರಿ, ಸಾಹಿಬ್‌ಜಾದರು ಜೀವಂತವಾಗಿ ಸಮಾಧಿಯಾಗಲು ಒಪ್ಪಿಕೊಂಡರು ಆದರೆ ತಮ್ಮ ಕರ್ತವ್ಯ ಅಥವಾ ನಂಬಿಕೆಯನ್ನು ಬಿಡಲಿಲ್ಲ ಎಂದು ಒತ್ತಿ ಹೇಳಿದರು. ಈ ಆದರ್ಶಗಳ ಗೌರವಾರ್ಥವಾಗಿ ಪ್ರತಿ ವರ್ಷ ಡಿಸೆಂಬರ್ 26 ರಂದು ವೀರ ಬಾಲ ದಿವಸ್ ಆಚರಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಸರ್ಕಾರವು ಸಿಖ್ ಸಂಪ್ರದಾಯದ ಇತಿಹಾಸ ಮತ್ತು ಗುರುಗಳ ಬೋಧನೆಗಳನ್ನು ರಾಷ್ಟ್ರೀಯ ಪಠ್ಯಕ್ರಮದಲ್ಲಿ ಸೇರಿಸಿದೆ, ಇದರಿಂದಾಗಿ ಸೇವೆ, ಧೈರ್ಯ ಮತ್ತು ಸತ್ಯದ ಆದರ್ಶಗಳು ಹೊಸ ಪೀಳಿಗೆಯ ಚಿಂತನೆಯ ಅಡಿಪಾಯವಾಗುತ್ತವೆ ಎಂದು ಅವರು ಒತ್ತಿ ಹೇಳಿದರು.
'ಜೋಡಾ ಸಾಹಿಬ್' ನ ಪವಿತ್ರ ದರ್ಶನ ಎಲ್ಲರಿಗೂ ಸಿಕ್ಕಿರುತ್ತದೆ ಎಂದು ಪ್ರಧಾನಮಂತ್ರಿ ವಿಶ್ವಾಸ ವ್ಯಕ್ತಪಡಿಸಿದರು. ತಮ್ಮ ಸಂಪುಟ ಸಹೋದ್ಯೋಗಿ ಮತ್ತು ಕೇಂದ್ರ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ ಅವರು ಈ ಪ್ರಮುಖ ಅವಶೇಷಗಳ ಬಗ್ಗೆ ಮೊದಲು ತಮ್ಮೊಂದಿಗೆ ಮಾತನಾಡಿದಾಗ, ತಮ್ಮ ಕುಟುಂಬವು ಗುರು ಗೋವಿಂದ ಸಿಂಗ್ ಮತ್ತು ಮಾತಾ ಸಾಹಿಬ್ ಕೌರ್ ಅವರ ಪವಿತ್ರ 'ಜೋಡಾ ಸಾಹಿಬ್' ಅನ್ನು ಸುಮಾರು ಮುನ್ನೂರು ವರ್ಷಗಳಿಂದ ಸಂರಕ್ಷಿಸಿದೆ ಎಂದು ಅವರು ಉಲ್ಲೇಖಿಸಿದ್ದರು ಎಂದು ಅವರು ನೆನಪಿಸಿಕೊಂಡರು. ಈ ಪವಿತ್ರ ಪರಂಪರೆಯನ್ನು ಈಗ ದೇಶದಲ್ಲಿ ಮತ್ತು ಪ್ರಪಂಚದಾದ್ಯಂತ ಸಿಖ್ ಸಮುದಾಯಕ್ಕೆ ಸಮರ್ಪಿಸಲಾಗುತ್ತಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಆ ನಂತರ, ಪವಿತ್ರ 'ಜೋಡಾ ಸಾಹಿಬ್' ಅನ್ನು ಪೂರ್ಣ ಗೌರವ ಮತ್ತು ಘನತೆಯೊಂದಿಗೆ ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಲಾಯಿತು, ಇದರಿಂದಾಗಿ ಅದನ್ನು ಭವಿಷ್ಯದ ಪೀಳಿಗೆಗೆ ಸಂರಕ್ಷಿಸಬಹುದು ಎಂದು ಅವರು ಹೇಳಿದರು. ಎಲ್ಲಾ ಸಂಗತಿಗಳನ್ನು ಗಣನೆಗೆ ತೆಗೆದುಕೊಂಡು, ಪವಿತ್ರ 'ಜೋಡಾ ಸಾಹಿಬ್' ಅನ್ನು ತಖ್ತ್ ಶ್ರೀ ಪಾಟ್ನಾ ಸಾಹಿಬ್ ಗೆ ಅರ್ಪಿಸಲು ಸಾಮೂಹಿಕ ನಿರ್ಧಾರ ತೆಗೆದುಕೊಳ್ಳಲಾಯಿತು, ಅಲ್ಲಿ ಗುರು ಮಹಾರಾಜರು ತಮ್ಮ ಬಾಲ್ಯದ ಮಹತ್ವದ ಭಾಗವನ್ನು ಕಳೆದರು. ಕಳೆದ ತಿಂಗಳು, ಪವಿತ್ರ ಪ್ರಯಾಣದ ಭಾಗವಾಗಿ, ಪೂಜ್ಯ 'ಜೋಡಾ ಸಾಹಿಬ್' ಅನ್ನು ದೆಹಲಿಯಿಂದ ಪಾಟ್ನಾ ಸಾಹಿಬ್ ಗೆ ತರಲಾಯಿತು ಮತ್ತು ಅಲ್ಲಿ ಅವರ ಮುಂದೆ ತಲೆ ಬಾಗಿ ನಮಿಸುವ ಅವಕಾಶವೂ ಸಿಕ್ಕಿತು ಎಂದು ಪ್ರಧಾನಮಂತ್ರಿ ಹೇಳಿದರು. ಈ ಪವಿತ್ರ ಪರಂಪರೆಯೊಂದಿಗೆ ಸೇವೆ, ಸಮರ್ಪಣೆ ಮತ್ತು ಸಂಪರ್ಕದ ಅವಕಾಶವನ್ನು ಪಡೆದಿರುವುದು ಗುರುಗಳ ವಿಶೇಷ ಅನುಗ್ರಹವೆಂದು ಪರಿಗಣಿಸಿರುವುದಾಗಿ ಅವರು ಹೇಳಿದರು.
ಶ್ರೀ ಗುರು ತೇಜ್ ಬಹದ್ದೂರ್ ಸಾಹಿಬ್ ಅವರ ಸ್ಮರಣೆಯು ಭಾರತದ ಸಂಸ್ಕೃತಿ ಎಷ್ಟು ವಿಶಾಲ, ಉದಾರ ಮತ್ತು ಮಾನವೀಯ ಕೇಂದ್ರಿತವಾಗಿದೆ ಎಂಬುದನ್ನು ನಮಗೆ ಕಲಿಸುತ್ತದೆ ಎಂದು ಹೇಳಿದ ಶ್ರೀ ಮೋದಿ, ಗುರು ಸಾಹಿಬ್ ತಮ್ಮ ಜೀವನದ ಮೂಲಕ ಸರ್ಬತ್ ದ ಭಾಲಾದ ಮಂತ್ರವನ್ನು ನಿಜವೆಂದು ಸಾಬೀತುಪಡಿಸಿದ್ದಾರೆ ಎಂದು ಒತ್ತಿ ಹೇಳಿದರು. ಇಂದಿನ ಕಾರ್ಯಕ್ರಮವು ಈ ನೆನಪುಗಳು ಮತ್ತು ಬೋಧನೆಗಳನ್ನು ಗೌರವಿಸುವ ಕ್ಷಣ ಮಾತ್ರವಲ್ಲ, ನಮ್ಮ ವರ್ತಮಾನ ಮತ್ತು ಭವಿಷ್ಯಕ್ಕೆ ಒಂದು ಪ್ರಮುಖ ಸ್ಫೂರ್ತಿಯಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಕಠಿಣ ಸಂದರ್ಭಗಳಲ್ಲಿಯೂ ಅಚಲವಾಗಿ ಉಳಿಯುವವರು ಮಾತ್ರ ನಿಜವಾದ ಬುದ್ಧಿವಂತರು ಮತ್ತು ಅನ್ವೇಷಕರು ಎಂಬ ಗುರು ಸಾಹಿಬ್ ಅವರ ಬೋಧನೆಗಳನ್ನು ಅವರು ನೆನಪಿಸಿಕೊಂಡರು. ಈ ಸ್ಫೂರ್ತಿಯೊಂದಿಗೆ, ನಾವು ಪ್ರತಿಯೊಂದು ಸವಾಲನ್ನು ಜಯಿಸಿ ನಮ್ಮ ದೇಶವನ್ನು ಮುಂದೆ ಕೊಂಡೊಯ್ಯಬೇಕು, ಇದು ಭಾರತದ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಗುರು ಸಾಹಿಬ್ ನಮಗೆ ಯಾರನ್ನೂ ಹೆದರಿಸಬಾರದು ಅಥವಾ ಯಾರಿಗೂ ಹೆದರಿ ಬದುಕಬಾರದು ಎಂದು ಕಲಿಸಿದ್ದಾರೆ ಎಂದು ಅವರು ಹೇಳಿದರು. ಈ ನಿರ್ಭಯತೆಯು ಸಮಾಜ ಮತ್ತು ರಾಷ್ಟ್ರವನ್ನು ಬಲಪಡಿಸುತ್ತದೆ ಮತ್ತು ಇಂದು ಭಾರತವೂ ಈ ತತ್ವದ ಮೇಲೆ ನಡೆಯುತ್ತಿದೆ ಎಂದು ಅವರು ಹೇಳಿದರು. ಭಾರತವು ತನ್ನ ಗಡಿಗಳನ್ನು ರಕ್ಷಿಸಿಕೊಳ್ಳುವುದರ ಜೊತೆಗೆ ಜಗತ್ತಿಗೆ ಭ್ರಾತೃತ್ವದ ಬಗ್ಗೆ ಮಾತನಾಡುತ್ತದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಭಾರತ ಶಾಂತಿಯನ್ನು ಬಯಸುತ್ತದೆಯಾದರೂ, ಅದು ತನ್ನ ಭದ್ರತೆಯ ವಿಷಯದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ, ಆಪರೇಷನ್ ಸಿಂಧೂರ ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಅವರು ಹೇಳಿದರು. ನವ ಭಾರತವು ಭಯೋತ್ಪಾದನೆಗೆ ಹೆದರುವುದಿಲ್ಲ, ನಿಲ್ಲುವುದಿಲ್ಲ ಅಥವಾ ತಲೆಬಾಗುವುದಿಲ್ಲ ಎಂಬುದನ್ನು ಇಡೀ ಜಗತ್ತು ಕಂಡಿದೆ ಎಂದು ಶ್ರೀ ಮೋದಿ ಹೇಳಿದರು. ಇಂದಿನ ಭಾರತವು ಪೂರ್ಣ ಶಕ್ತಿ, ಧೈರ್ಯ ಮತ್ತು ಸ್ಪಷ್ಟತೆಯೊಂದಿಗೆ ಮುಂದುವರಿಯುತ್ತಿದೆ ಎಂದು ಅವರು ಹೇಳಿದರು.

ಈ ಮಹತ್ವದ ಸಂದರ್ಭದಲ್ಲಿ, ಗುರು ಸಾಹಿಬ್ ಅವರ ಕಾಳಜಿಯಾಗಿದ್ದ ಸಮಾಜ ಮತ್ತು ಯುವಕರಿಗೆ ಸಂಬಂಧಿಸಿದ ವಿಷಯವಾದ ವ್ಯಸನ ಮತ್ತು ಮಾದಕ ವಸ್ತುಗಳ ವಿಷಯವನ್ನು ಪ್ರಸ್ತಾಪಿಸಲು ಬಯಸಿದ್ದೇನೆ ಎಂದು ಪ್ರಧಾನಮಂತ್ರಿ ಹೇಳಿದರು. ಮಾದಕ ವಸ್ತುಗಳ ವ್ಯಸನವು ಅನೇಕ ಯುವಜನರ ಕನಸುಗಳಿಗೆ ತೀವ್ರವಾಗಿ ಸವಾಲು ಹಾಕಿದೆ ಎಂದು ಅವರು ಒತ್ತಿ ಹೇಳಿದರು. ಈ ಸಮಸ್ಯೆಯನ್ನು ನಿರ್ಮೂಲನೆ ಮಾಡಲು ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು, ಆದರೆ ಇದು ಸಮಾಜ ಮತ್ತು ಕುಟುಂಬಗಳಿಗೆ ಹೋರಾಟವೂ ಆಗಿದೆ ಎಂದು ಅವರು ಒತ್ತಿ ಹೇಳಿದರು. ಇಂತಹ ಸಮಯದಲ್ಲಿ, ಶ್ರೀ ಗುರು ತೇಜ್ ಬಹದ್ದೂರ್ ಸಾಹಿಬ್ ಅವರ ಬೋಧನೆಗಳು ಸ್ಫೂರ್ತಿ ಮತ್ತು ಪರಿಹಾರವಾಗಿವೆ ಎಂದು ಅವರು ಹೇಳಿದರು. ಗುರು ಸಾಹಿಬ್ ಆನಂದಪುರ ಸಾಹಿಬ್‌ನಿಂದ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದಾಗ, ಅವರು ಅನೇಕ ಗ್ರಾಮಗಳನ್ನು ಸಂಗತ್ ನೊಂದಿಗೆ ಸಂಪರ್ಕಿಸಿದರು, ಅವರ ಭಕ್ತಿ ಮತ್ತು ನಂಬಿಕೆಯನ್ನು ಹೆಚ್ಚಿಸಿದರು ಮತ್ತು ಸಮಾಜದ ನಡವಳಿಕೆಯನ್ನು ಸಹ ಬದಲಾಯಿಸಿದರು ಎಂದು ಪ್ರಧಾನಮಂತ್ರಿ ಹೇಳಿದರು. ಈ ಗ್ರಾಮಗಳ ಜನರು ಎಲ್ಲಾ ರೀತಿಯ ಮಾದಕ ವಸ್ತುಗಳ ಕೃಷಿಯನ್ನು ತ್ಯಜಿಸಿ ತಮ್ಮ ಭವಿಷ್ಯವನ್ನು ಗುರು ಸಾಹಿಬ್ ಅವರ ಪಾದಗಳಿಗೆ ಅರ್ಪಿಸಿದರು ಎಂದು ಅವರು ಹೇಳಿದರು. ಗುರು ಮಹಾರಾಜರು ತೋರಿಸಿದ ಮಾರ್ಗವನ್ನು ಅನುಸರಿಸಿ ಸಮಾಜ, ಕುಟುಂಬಗಳು ಮತ್ತು ಯುವಜನರು ಮಾದಕ ವಸ್ತುಗಳ ವ್ಯಸನದ ವಿರುದ್ಧ ನಿರ್ಣಾಯಕ ಯುದ್ಧದಲ್ಲಿ ಒಟ್ಟಾಗಿ ಸೇರಿದರೆ, ಈ ಸಮಸ್ಯೆಯನ್ನು ನಿರ್ಮೂಲನೆ ಮಾಡಬಹುದು ಎಂದು ಶ್ರೀ ಮೋದಿ ಒತ್ತಿ ಹೇಳಿದರು.
ಶ್ರೀ ಗುರು ತೇಜ್ ಬಹದ್ದೂರ್ ಸಾಹಿಬ್ ಅವರ ಬೋಧನೆಗಳು ನಮ್ಮ ನಡವಳಿಕೆಯಲ್ಲಿ ಶಾಂತಿ, ನಮ್ಮ ನೀತಿಗಳಲ್ಲಿ ಸಮತೋಲನ ಮತ್ತು ನಮ್ಮ ಸಮಾಜದಲ್ಲಿ ನಂಬಿಕೆಯ ಅಡಿಪಾಯವಾಗಬೇಕು ಮತ್ತು ಇದು ಈ ಸಂದರ್ಭದ ಸಾರವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಶ್ರೀ ಗುರು ತೇಜ್ ಬಹದ್ದೂರ್ ಅವರ ಹುತಾತ್ಮ ದಿನವನ್ನು ದೇಶಾದ್ಯಂತ ಆಚರಿಸಲಾಗುತ್ತಿರುವ ವಿಧಾನವು ಗುರುಗಳ ಬೋಧನೆಗಳು ಇಂದಿಗೂ ಸಮಾಜದ ಮನಸ್ಸಿನಲ್ಲಿ ಎಷ್ಟು ಜೀವಂತವಾಗಿವೆ ಎಂಬುದನ್ನು ತೋರಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಈ ಉತ್ಸಾಹದಲ್ಲಿ, ಈ ಆಚರಣೆಗಳು ಭಾರತವನ್ನು ಮುಂದೆ ಕೊಂಡೊಯ್ಯಲು ಯುವಜನರಿಗೆ ಅರ್ಥಪೂರ್ಣ ಸ್ಫೂರ್ತಿಯಾಗಬೇಕು ಎಂದು ಹೇಳುವ ಮೂಲಕ ಪ್ರಧಾನಮಂತ್ರಿ ಅವರು ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರು ಮತ್ತು ಮತ್ತೊಮ್ಮೆ ಎಲ್ಲರಿಗೂ ತಮ್ಮ ಶುಭಾಶಯಗಳನ್ನು ತಿಳಿಸಿದರು.

ಹರಿಯಾಣ ರಾಜ್ಯಪಾಲ ಪ್ರೊ. ಆಶಿಮ್ ಕುಮಾರ್ ಘೋಷ್, ಹರಿಯಾಣ ಮುಖ್ಯಮಂತ್ರಿ ಶ್ರೀ ನಯಾಬ್ ಸಿಂಗ್ ಸೈನಿ, ಕೇಂದ್ರ ಸಚಿವರಾದ ಶ್ರೀ ಮನೋಹರ್ ಲಾಲ್, ಶ್ರೀ ರಾವ್ ಇಂದ್ರಜಿತ್ ಸಿಂಗ್, ಶ್ರೀ ಕೃಷ್ಣ ಪಾಲ್ ಸೇರಿದಂತೆ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ
ಶ್ರೀಕೃಷ್ಣ ಪರಮಾತ್ಮನ ಪವಿತ್ರ ಶಂಖದ ಗೌರವಾರ್ಥವಾಗಿ ಹೊಸದಾಗಿ ನಿರ್ಮಿಸಲಾದ 'ಪಾಂಚಜನ್ಯ'ವನ್ನು ಪ್ರಧಾನಮಂತ್ರಿ ಅವರು ಉದ್ಘಾಟಿಸಿದರು. ನಂತರ, ಅವರು ಮಹಾಭಾರತದ ಅನುಭವ ಕೇಂದ್ರಕ್ಕೆ ಭೇಟಿ ನೀಡಿದರು. ಇದು ಮಹಾಭಾರತದ ಮಹತ್ವದ ಪ್ರಸಂಗಗಳನ್ನು ಚಿತ್ರಿಸುವ, ಅದರ ಶಾಶ್ವತ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಉಲ್ಲೇಖಿಸುವ ಒಂದು ತಲ್ಲೀನಗೊಳಿಸುವ ಅನುಭವ ಕೇಂದ್ರವಾಗಿದೆ.
ಒಂಬತ್ತನೇ ಸಿಖ್ ಗುರು ಶ್ರೀ ಗುರು ತೇಜ್ ಬಹದ್ದೂರ್ ಜಿ ಅವರ 350 ನೇ ಹುತಾತ್ಮ ದಿನಾಚರಣೆಯ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಭಾಗವಹಿಸಿದರು. ಈ ಸಂದರ್ಭದಲ್ಲಿ, ಗುರುಗಳ 350ನೇ ಹುತಾತ್ಮ ದಿನಾಚರಣೆಯ ಸ್ಮರಣಾರ್ಥ ಪ್ರಧಾನಮಂತ್ರಿ ಅವರು ವಿಶೇಷ ನಾಣ್ಯ ಮತ್ತು ಸ್ಮರಣಾರ್ಥ ಅಂಚೆಚೀಟಿ ಬಿಡುಗಡೆ ಮಾಡಿದರು. ಗುರು ತೇಜ್ ಬಹದ್ದೂರ್ ಅವರ 350ನೇ ಹುತಾತ್ಮ ದಿನಾಚರಣೆಯನ್ನು ಗೌರವಿಸಲು ಭಾರತ ಸರ್ಕಾರ ವರ್ಷಪೂರ್ತಿ ಕಾರ್ಯಕ್ರಮವನ್ನು ಆಚರಿಸುತ್ತಿದೆ.
Click here to read full text speech
श्री गुरु तेग बहादुर जी जैसे व्यक्तित्व...इतिहास में विरले ही होते हैं।
— PMO India (@PMOIndia) November 25, 2025
उनका जीवन, उनका त्याग, उनका चरित्र बहुत बड़ी प्रेरणा है।
मुगल आक्रांताओं के उस काल में, गुरु साहिब ने वीरता का आदर्श स्थापित किया: PM @narendramodi
हमारे गुरुओं की परंपरा… हमारे राष्ट्र के चरित्र, हमारी संस्कृति और हमारी मूल भावना का आधार है: PM @narendramodi
— PMO India (@PMOIndia) November 25, 2025
हम सभी जानते हैं कि कैसे मुगलों ने... वीर साहिबजादों के साथ भी क्रूरता की सारी सीमाएं पार कर दी थीं।
— PMO India (@PMOIndia) November 25, 2025
वीर साहिबजादों ने दीवार में चुना जाना स्वीकार किया... लेकिन अपने कर्तव्य और धर्म का मार्ग नहीं छोड़ा।
इन्हीं आदर्शों के सम्मान के लिए, अब हम हर साल 26 दिसंबर को वीर बाल दिवस…
हमारी सरकार ने गुरुओं के हर तीर्थ को आधुनिक भारत के स्वरूप से जोड़ने का प्रयास किया है।
— PMO India (@PMOIndia) November 25, 2025
करतारपुर कॉरिडोर का काम पूरा कराना हो,
हेमकुंड साहिब में रोप वे प्रोजेक्ट का निर्माण करना हो,
आनंदपुर साहिब में विरासत-ए-खालसा संग्रहालय का विस्तार हो,
हमने गुरुजनों की गौरवशाली परंपरा को…
कुछ समय पहले, जब अफगानिस्तान से... गुरु ग्रंथ साहिब के तीन मूल स्वरूप भारत आए थे... तो ये हर देशवासी के लिए गौरव का क्षण बना था: PM @narendramodi
— PMO India (@PMOIndia) November 25, 2025
पिछले महीने, एक पावन यात्रा के रूप में गुरु महाराज के ये पावन ‘जोड़ा साहिब’ दिल्ली से पटना साहिब ले जाए गए।
— PMO India (@PMOIndia) November 25, 2025
और वहां मुझे भी इन पवित्र ‘जोड़ा साहिब’ के सामने अपना शीश नवाने का अवसर मिला।
मैं इसे गुरुओं की विशेष कृपा मानता हूं कि उन्होंने मुझे इस सेवा का, इस समर्पण का और इस…
नशे की आदत ने हमारे अनेक नौजवानों के सपनों को, गहरी चुनौतियों में धकेल दिया है।
— PMO India (@PMOIndia) November 25, 2025
सरकार इस समस्या को जड़ से समाप्त करने के लिए सारे प्रयास भी कर रही है। लेकिन यह समाज की, परिवार की भी लड़ाई है: PM @narendramodi


