ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕಜಾನ್ ನಲ್ಲಿ ರಷ್ಯಾದ ಅಧ್ಯಕ್ಷತೆಯಲ್ಲಿ ನಡೆದ 16ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿದರು.

ಬ್ರಿಕ್ಸ್ ನಾಯಕರು ಬಹುರಾಷ್ಟ್ರೀಯತೆಯನ್ನು ಬಲಪಡಿಸುವುದು, ಭಯೋತ್ಪಾದನೆಯನ್ನು ಎದುರಿಸುವುದು, ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವುದು, ಸುಸ್ಥಿರ ಅಭಿವೃದ್ಧಿಯನ್ನು ಮುಂದುವರಿಸುವುದು ಮತ್ತು ಗ್ಲೋಬಲ್ ಸೌತ್ (ಜಾಗತಿಕ ದಕ್ಷಿಣದ)ನ ಕಾಳಜಿಗಳ ಬಗ್ಗೆ ಗಮನ ಸೆಳೆಯುವುದು ಸೇರಿದಂತೆ  ಫಲಪ್ರದ ಚರ್ಚೆಗಳನ್ನು ನಡೆಸಿದರು. 13 ಹೊಸ ಬ್ರಿಕ್ಸ್ ಪಾಲುದಾರ ರಾಷ್ಟ್ರಗಳನ್ನು ನಾಯಕರು ಸ್ವಾಗತಿಸಿದರು.

 

ಬ್ರಿಕ್ಸ್ ಶೃಂಗಸಭೆಯ ಎರಡು ಅಧಿವೇಶನಗಳನ್ನು ಉದ್ದೇಶಿಸಿ ಪ್ರಧಾನಮಂತ್ರಿಯವರು ಮಾತನಾಡಿದರು. ಬ್ರಿಕ್ಸ್ ಮೇಲೆ ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಂಡು, ಸಂಘರ್ಷಗಳು, ಪ್ರತಿಕೂಲ ಹವಾಮಾನ ಪರಿಣಾಮಗಳು ಮತ್ತು ಸೈಬರ್ ಬೆದರಿಕೆಗಳು ಸೇರಿದಂತೆ ಜಗತ್ತು ಹಲವಾರು ಅನಿಶ್ಚಿತತೆಗಳು ಮತ್ತು ಸವಾಲುಗಳಿಗೆ ಒಳಗಾಗುತ್ತಿರುವ ಸಮಯದಲ್ಲಿ ಶೃಂಗಸಭೆ ನಡೆಯುತ್ತಿದೆ ಎಂದು ಪ್ರಧಾನಮಂತ್ರಿಯವರು ತಮ್ಮ ಭಾಷಣದಲ್ಲಿ ಹೇಳಿದರು. ಈ ಸವಾಲುಗಳನ್ನು ಎದುರಿಸಲು ಬ್ರಿಕ್ಸ್ ಜನಕೇಂದ್ರಿತ ವಿಧಾನವನ್ನು ತೆಗೆದುಕೊಳ್ಳುವಂತೆ ಪ್ರಧಾನಮಂತ್ರಿಯವರು ಸಲಹೆ ನೀಡಿದರು. ಭಯೋತ್ಪಾದನೆಯ ಬೆದರಿಕೆಯನ್ನು ಎದುರಿಸಲು ವಿಶ್ವಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಭಯೋತ್ಪಾದನೆಯ ಸಮಗ್ರ ಸಮಾವೇಶವನ್ನು ಶೀಘ್ರವಾಗಿ ಅಳವಡಿಸಿಕೊಳ್ಳುವ ಅಗತ್ಯವನ್ನು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು.

 

ಜಾಗತಿಕ ಆಡಳಿತ ಸುಧಾರಣೆಗಳಿಗೆ ಪೂರ್ವಭಾವಿಯಾಗಿ ಒತ್ತಾಯಿಸಲು ಬ್ರಿಕ್ಸ್ ಗೆ ಪ್ರಧಾನಮಂತ್ರಿಯವರು ಕರೆ ನೀಡಿದರು. ಭಾರತವು ತನ್ನ ಜಿ-20 ಅಧ್ಯಕ್ಷತೆಯ  ಸಮಯದಲ್ಲಿ ಆಯೋಜಿಸಿದ್ದ ವಾಯ್ಸ್ ಆಫ್ ಗ್ಲೋಬಲ್  ಸೌತ್ ಶೃಂಗಸಭೆಯನ್ನು ನೆನಪಿಸಿಕೊಂಡ ಅವರು, ಬ್ರಿಕ್ಸ್ ಜಾಗತಿಕ ದಕ್ಷಿಣದ ಕಾಳಜಿಗೆ ಆದ್ಯತೆ ನೀಡಬೇಕು ಎಂದು ಒತ್ತಿ ಹೇಳಿದರು. ಭಾರತದ ಗಿಫ್ಟ್ ನಗರ ಸೇರಿದಂತೆ ಹೊಸ ಅಭಿವೃದ್ಧಿ ಬ್ಯಾಂಕ್ ನ ಪ್ರಾದೇಶಿಕ ಉಪಸ್ಥಿತಿಯು ಹೊಸ ಮೌಲ್ಯಗಳು ಮತ್ತು ಪರಿಣಾಮಗಳನ್ನು ಸೃಷ್ಟಿಸಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಬ್ರಿಕ್ಸ್ ನ ಚಟುವಟಿಕೆಗಳನ್ನು ಎತ್ತಿ ಹಿಡಿದ ಅವರು, ಕೃಷಿಯಲ್ಲಿ ವ್ಯಾಪಾರ ಸುಗಮಗೊಳಿಸುವ ಪ್ರಯತ್ನಗಳು, ಚೇತರಿಸಿಕೊಳ್ಳುವ ಪೂರೈಕೆ ಸರಪಳಿಗಳು, ಇ-ಕಾಮರ್ಸ್ ಮತ್ತು ವಿಶೇಷ ಆರ್ಥಿಕ ವಲಯಗಳು ಹೊಸ ಅವಕಾಶಗಳನ್ನು ಸೃಷ್ಟಿಸಿವೆ ಎಂದು ಹೇಳಿದರು. ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳಿಗೆ ಆದ್ಯತೆ ನೀಡುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಈ ವರ್ಷ ಪ್ರಾರಂಭವಾಗಲಿರುವ ಭಾರತವು ಪ್ರಾರಂಭಿಸಿದ ಬ್ರಿಕ್ಸ್ ಸ್ಟಾರ್ಟ್ ಅಪ್ ಫೋರಮ್ ಬ್ರಿಕ್ಸ್ ಆರ್ಥಿಕ ಕಾರ್ಯಸೂಚಿಗೆ ಗಮನಾರ್ಹ ಮೌಲ್ಯವನ್ನು ಸೇರಿಸುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

 

ಸಿಒಪಿ28 ಸಮಯದಲ್ಲಿ ಘೋಷಿಸಲಾದ ಇಂಟರ್ನ್ಯಾಷನಲ್ ಸೋಲಾರ್ ಅಲೈಯನ್ಸ್, ವಿಪತ್ತು ಚೇತರಿಕೆ ಮೂಲಸೌಕರ್ಯಗಳ ಒಕ್ಕೂಟ, ಮಿಷನ್ ಲೈಫ್ ಮತ್ತು ಗ್ರೀನ್ ಕ್ರೆಡಿಟ್ ಉಪಕ್ರಮ ಸೇರಿದಂತೆ ಭಾರತವು ಕೈಗೊಂಡ ಇತ್ತೀಚಿನ ಹಸಿರು ಉಪಕ್ರಮಗಳನ್ನು ಪ್ರಧಾನಮಂತ್ರಿಯವರು ವಿವರಿಸಿದರು. ಈ ಉಪಕ್ರಮಗಳಿಗೆ ಜೊತೆಗೂಡಲು ಅವರು ಬ್ರಿಕ್ಸ್ ದೇಶಗಳನ್ನು ಆಹ್ವಾನಿಸಿದರು.

 

16 ನೇ ಬ್ರಿಕ್ಸ್ ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಅಧ್ಯಕ್ಷ ಪುಟಿನ್ ಅವರನ್ನು ಪ್ರಧಾನಮಂತ್ರಿಯವರು ಅಭಿನಂದಿಸಿದರು ಮತ್ತು ಬ್ರೆಜಿಲ್  ಬ್ರಿಕ್ಸ್ ಗುಂಪಿನ ಅಧ್ಯಕ್ಷತೆಯನ್ನು ವಹಿಸಿಕೊಂಡ  ಶುಭಾಶಯಗಳನ್ನು ತಿಳಿಸಿದರು. ಶೃಂಗಸಭೆಯ ಕೊನೆಯಲ್ಲಿ, ನಾಯಕರು 'ಕಜಾನ್ ಘೋಷಣೆ'ಯನ್ನು ಅಂಗೀಕರಿಸಿದರು.

ಪ್ರಧಾನಮಂತ್ರಿಯವರು ಸಭೆಯ ಆರಂಭದಲ್ಲಿ ಮಾಡಿದ ಭಾಷಣವನ್ನು ಇಲ್ಲಿ ನೋಡಬಹುದು.

ಪ್ರಧಾನಮಂತ್ರಿಯವರು ಸಭೆಯ ಕೊನೆಯಲ್ಲಿ ಮಾಡಿದ  ಭಾಷಣವನ್ನು ಇಲ್ಲಿ ನೋಡಬಹುದು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
From 'chalta hai' to 'badal sakta hai': Decoding PM Modi's Punctuality narrative

Media Coverage

From 'chalta hai' to 'badal sakta hai': Decoding PM Modi's Punctuality narrative
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 23 ಆಗಸ್ಟ್ 2026
August 23, 2026

From Free Coaching to 400+ Space Startups — India’s Atmanirbhar Leap Under PM Modi