ಬ್ಯಾಂಕಾಕ್ ನಲ್ಲಿ ನಡೆದ ಬಿ.ಐ.ಎಂ.ಎಸ್.ಟಿ.ಇ.ಸಿ. ( ಬಿಮ್ ಸ್ಟೆಕ್) ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಪ್ರೊಫೆಸರ್ ಮುಹಮ್ಮದ್ ಯೂನಸ್ ಅವರನ್ನು ಭೇಟಿ ಮಾಡಿದರು.
ಪ್ರಜಾಪ್ರಭುತ್ವ, ಸ್ಥಿರ, ಶಾಂತಿಯುತ, ಪ್ರಗತಿಪರ ಮತ್ತು ಎಲ್ಲರನ್ನೂ ಒಳಗೊಂಡ ಬಾಂಗ್ಲಾದೇಶಕ್ಕೆ ಭಾರತದ ಬೆಂಬಲವನ್ನು ಪ್ರಧಾನಮಂತ್ರಿ ಪುನರುಚ್ಚರಿಸಿದರು. ಸಂಬಂಧಕ್ಕೆ ಭಾರತದ ಜನ-ಕೇಂದ್ರಿತ ವಿಧಾನವನ್ನು ವಿವರಿಸಿದ ಪ್ರಧಾನಮಂತ್ರಿಯವರು, ಎರಡೂ ದೇಶಗಳ ನಡುವಿನ ಸಹಕಾರವು ಈ ಎರಡೂ ದೇಶಗಳ ಜನರಿಗೆ ಸ್ಪಷ್ಟವಾದ ಪ್ರಯೋಜನಗಳನ್ನು ತಂದಿದೆ ಎಂದು ಹೇಳಿದರು. ವಾಸ್ತವಿಕತೆಯ ಆಧಾರದ ಮೇಲೆ ಬಾಂಗ್ಲಾದೇಶದೊಂದಿಗೆ ಸಕಾರಾತ್ಮಕ ಮತ್ತು ರಚನಾತ್ಮಕ ಸಂಬಂಧವನ್ನು ರೂಪಿಸುವ ಭಾರತದ ಬಯಕೆಯನ್ನು ಪ್ರಧಾನಮಂತ್ರಿಯವರು ಈ ಸಂದರ್ಭದಲ್ಲಿ ಒತ್ತಿ ಹೇಳಿದರು.

ಗಡಿಯಲ್ಲಿ, ಕಾನೂನಿನ ಕಟ್ಟುನಿಟ್ಟಿನ ಜಾರಿ ಮತ್ತು ಅಕ್ರಮ ಗಡಿ ದಾಟುವಿಕೆಯನ್ನು ತಡೆಗಟ್ಟುವುದು, ವಿಶೇಷವಾಗಿ ರಾತ್ರಿಯಲ್ಲಿ, ಗಡಿ ಭದ್ರತೆ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಲು ಅವಶ್ಯಕ ವ್ಯವಸ್ಥೆ ರೂಪಿಸುವುದು ಸೇರಿದಂತೆ ಪರಿಸರವನ್ನು ಕಲುಷಿತಗೊಳಿಸುವ ನಿಟ್ಟಿನಲ್ಲಿ ವಾಕ್ಚಾತುರ್ಯತೆಯಿಂದಾಗುವ ಸಮಸ್ಯೆಗಳನ್ನು ತಪ್ಪಿಸುವುದು ಉತ್ತಮ, ಹಾಗೂ ನಮ್ಮ ಸಂಬಂಧಗಳನ್ನು ಪರಿಶೀಲಿಸಲು ಮತ್ತು ಮುಂದಕ್ಕೆ ಕೊಂಡೊಯ್ಯಲು ದ್ವಿಪಕ್ಷೀಯ ಕಾರ್ಯವಿಧಾನವು ಸೂಕ್ತವಾಗಿದೆ, ಇದಕ್ಕಾಗಿ ಮುಂಬರುವ ದಿನಗಳಲ್ಲಿ ಭೇಟಿಯಾಗಬಹುದು ಎಂದು ಪ್ರಧಾನಮಂತ್ರಿಯವರು ಒತ್ತಾಯಿಸಿದರು.
ಬಾಂಗ್ಲಾದೇಶದಲ್ಲಿ ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತರ ಸುರಕ್ಷತೆ ಮತ್ತು ಭದ್ರತೆಗೆ ಸಂಬಂಧಿಸಿದ ಭಾರತದ ಕಳವಳಗಳನ್ನು ಪ್ರಧಾನಮಂತ್ರಿಯವರು ಈ ಸಂದರ್ಭದಲ್ಲಿ ನಿನಪಿಸುತ್ತಾ ವಿಷಯವನ್ನು ಒತ್ತಿ ಹೇಳಿದರು ಮತ್ತು ಬಾಂಗ್ಲಾದೇಶ ಸರ್ಕಾರವು ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತರ ವಿರುದ್ಧ ನಡೆದ ದೌರ್ಜನ್ಯ ಪ್ರಕರಣಗಳನ್ನು ಕೂಲಂಕಷವಾಗಿ ತನಿಖೆ ಮಾಡುವ ಮೂಲಕ ಅವರ ಭದ್ರತೆಯನ್ನು ಖಚಿತಪಡಿಸುತ್ತದೆ ಎಂಬ ನಿರೀಕ್ಷೆಯನ್ನು ಪ್ರಧಾನಮಂತ್ರಿಯವರು ವ್ಯಕ್ತಪಡಿಸಿದರು.

ಬಿಮ್ ಸ್ಟೆಕ್ ನ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದಕ್ಕಾಗಿ ಬಾಂಗ್ಲಾದೇಶವನ್ನು ಪ್ರಧಾನಮಂತ್ರಿಯವರು ಅಭಿನಂದಿಸಿದರು ಮತ್ತು ಅದರ ನಾಯಕತ್ವದಲ್ಲಿ ಪ್ರಾದೇಶಿಕ ಸಹಕಾರವನ್ನು ಮತ್ತಷ್ಟು ಮುಂದುವರಿಸಲು ವೇದಿಕೆಯನ್ನು ಎದುರು ನೋಡುತ್ತಿದ್ದೇವೆ ಎಂದು ಹೇಳಿದರು. ಬಿಮ್ ಸ್ಟೆಕ್ ಚೌಕಟ್ಟಿನಡಿಯಲ್ಲಿ , ಈ ಎರಡೂ ದೇಶಗಳು ಸೇರಿದಂತೆ ಪ್ರಾದೇಶಿಕ ಏಕೀಕರಣವನ್ನು ಮುನ್ನಡೆಸಲು ಸಮಾಲೋಚನೆ ಮತ್ತು ಸಹಕಾರವನ್ನು ಹೆಚ್ಚಿಸಲು ಉಭಯ ನಾಯಕರು ಒಪ್ಪಿಕೊಂಡರು.
ಎರಡೂ ದೇಶಗಳ ನಡುವಿನ ಪರಸ್ಪರ ಆಸಕ್ತಿಯ ಎಲ್ಲಾ ಸಮಸ್ಯೆಗಳನ್ನು ಅವರ ದೀರ್ಘಕಾಲೀನ ಮತ್ತು ಪರಸ್ಪರ ಪ್ರಯೋಜನಕಾರಿ ದ್ವಿಪಕ್ಷೀಯ ಸಂಬಂಧದ ಹಿತದೃಷ್ಟಿಯಿಂದ ರಚನಾತ್ಮಕ ಚರ್ಚೆಗಳ ಮೂಲಕ ದ್ವಿಪಕ್ಷೀಯವಾಗಿ ಪರಿಶೀಲಿಸಿ ಪರಿಹರಿಸಲಾಗುವುದು ಮತ್ತು ಇತ್ಯರ್ಥಗೊಳಿಸಲಾಗುವುದು ಎಂದು ಪ್ರಧಾನಮಂತ್ರಿಯವರು ತಮ್ಮ ವಿಶ್ವಾಸವನ್ನು ವ್ಯಕ್ತಪಡಿಸಿದರು.
Met Mr. Muhammad Yunus, Chief Adviser of the interim government of Bangladesh. India remains committed to a constructive and people-centric relationship with Bangladesh.
— Narendra Modi (@narendramodi) April 4, 2025
I reiterated India’s support for peace, stability, inclusivity and democracy in Bangladesh. Discussed… pic.twitter.com/4UQgj8aohf
বাংলাদেশের অন্তর্বর্তীকালীন সরকারের প্রধান উপদেষ্টা জনাব মুহাম্মদ ইউনূসের সাথে সাক্ষাৎ করেছি। ভারত বাংলাদেশের সাথে একটি গঠনমূলক ও জনকেন্দ্রিক সম্পর্কের প্রতি প্রতিশ্রুতিবদ্ধ।
— Narendra Modi (@narendramodi) April 4, 2025
আমি বাংলাদেশে শান্তি, স্থিতিশীলতা, অন্তর্ভুক্তি ও গণতন্ত্রের প্রতি ভারতের সমর্থন পুনর্ব্যক্ত করেছি।… pic.twitter.com/RVbR5WQ9nu


