ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ವಿಸ್ತರಿಸುವ ಕುರಿತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಗೂಗಲ್ ಸಿ.ಇ.ಒ. ಶ್ರೀ ಸುಂದರ್ ಪಿಚೈ ಅವರು ಚರ್ಚಿಸಿದರು
ಯು.ಪಿ.ಐ. ಮೂಲಕ ಭಾರತದಲ್ಲಿ ಆರ್ಥಿಕ ಸೇರ್ಪಡೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಗೂಗಲ್ ಯೋಜನೆಗಳ ಕುರಿತು ಮತ್ತು ಗೂಗಲ್ ಸಿ.ಇ.ಒ. ಶ್ರೀ ಸುಂದರ್ ಪಿಚೈ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ತಿಳಿಸಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮುಂಜಾನೆ ಗೂಗಲ್ ಮತ್ತು ಆಲ್ಫಾಬೆಟ್ ಸಿ.ಇ.ಒ. ಶ್ರೀ ಸುಂದರ್ ಪಿಚೈ ಅವರೊಂದಿಗೆ ವಿಡಿಯೊ ಮೂಲಕ (ವಾಸ್ತವಿಕವಾಗಿ ) ಸಂವಾದ ನಡೆಸಿದರು.

ಸಂವಾದದ ಸಮಯದಲ್ಲಿ, ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ವಿಸ್ತರಿಸುವಲ್ಲಿ ಭಾಗವಹಿಸುವ ಗೂಗಲ್  ಸಂಸ್ಥೆಯ ಯೋಜನೆಯನ್ನು ಪ್ರಧಾನಮಂತ್ರಿ ಮತ್ತು ಶ್ರೀ ಸುಂದರ್ ಪಿಚೈ ಅವರು ಚರ್ಚಿಸಿದರು.  ಭಾರತದಲ್ಲಿ ಕ್ರೊಮ್ ಬುಕ್ ಗಳನ್ನು ತಯಾರಿಸಲು ಹೆಚ್.ಪಿ.ಯೊಂದಿಗೆ ಗೂಗಲ್  ನ ಪಾಲುದಾರಿಕೆಯನ್ನು ಪ್ರಧಾನಮಂತ್ರಿ ಶ್ಲಾಘಿಸಿದರು.

ಗೂಗಲ್  ನ 100 ಭಾಷೆಗಳ ಉಪಕ್ರಮವನ್ನು ಪ್ರಧಾನಮಂತ್ರಿಯವರು ಗಮನಿಸಿದರು. ಭಾರತೀಯ ಭಾಷೆಗಳಲ್ಲಿ ಎ.ಐ. ಪರಿಕರಗಳನ್ನು ಲಭ್ಯವಾಗುವಂತೆ ಮಾಡುವ ಈ ಪ್ರಯತ್ನಗಳನ್ನು ಹಾಗೂ ಉತ್ತಮ ಆಡಳಿತಕ್ಕಾಗಿ ಎ.ಐ. ಪರಿಕರಗಳಲ್ಲಿ ಕೆಲಸ ಮಾಡಲು ಯೋಜನೆ ಪ್ರಾರಂಭಿಸಿದ್ದಕ್ಕಾಗಿ ಗೂಗಲ್  ಸಂಸ್ಥೆಯನ್ನು ಅವರು ಪ್ರೋತ್ಸಾಹಿಸಿದರು.

ಗಾಂಧಿನಗರದಲ್ಲಿರುವ ಗುಜರಾತ್ ಇಂಟರ್ನ್ಯಾಶನಲ್ ಫೈನಾನ್ಸ್ ಟೆಕ್-ಸಿಟಿ(ಜಿ.ಐ.ಎಫ್.ಟಿ)ಯಲ್ಲಿ ತನ್ನ ಜಾಗತಿಕ ಫಿನ್ಟೆಕ್ ಕಾರ್ಯಾಚರಣೆ ಕೇಂದ್ರವನ್ನು ತೆರೆಯುವ ಗೂಗಲ್ ನ ನೂತನ ಯೋಜನೆಯನ್ನು ಪ್ರಧಾನಮಂತ್ರಿಯವರು ಸ್ವಾಗತಿಸಿದರು.

ಜಿಪೇ ಮತ್ತು ಯು.ಪಿ.ಐ.ಯ ಸಾಮರ್ಥ್ಯ ಮತ್ತು ವ್ಯಾಪ್ತಿಯನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಭಾರತದಲ್ಲಿ ಆರ್ಥಿಕ ಸೇರ್ಪಡೆಯನ್ನು ಸುಧಾರಿಸುವ ಗೂಗಲ್ ನ ಯೋಜನೆಗಳ ಕುರಿತು ಶ್ರೀ ಪಿಚೈ ಅವರು ಪ್ರಧಾನಮಂತ್ರಿಯವರಿಗೆ ಮಾಹಿತಿ ತಿಳಿಸಿದರು.  ಭಾರತದ ಅಭಿವೃದ್ಧಿ ಪಥಕ್ಕೆ ಕೊಡುಗೆ ನೀಡಲು ಗೂಗಲ್ ನ ಬದ್ಧತೆಯನ್ನು ಅವರು ಈ ಸಂದರ್ಭದಲ್ಲಿ ವಿವರಿಸಿ ಹೇಳಿದರು.

2023 ರ ಡಿಸೆಂಬರ್ ನಲ್ಲಿ ನವದೆಹಲಿಯಲ್ಲಿ ಭಾರತವು ಆಯೋಜಿಸುವ ಮುಂಬರುವ ಎ.ಐ. ಶೃಂಗಸಭೆಯಲ್ಲಿ ಜಾಗತಿಕ ಪಾಲುದಾರಿಕೆ ಮೂಲಕ ಕೊಡುಗೆ ನೀಡುವಂತೆ ಪ್ರಧಾನಮಂತ್ರಿ ಅವರು ಗೂಗಲ್  ಸಂಸ್ಥೆಗೆ ಆಹ್ವಾನ ನೀಡಿದರು.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Auto industry contributes nearly 15 per cent to total GST, says SIAM President

Media Coverage

Auto industry contributes nearly 15 per cent to total GST, says SIAM President
NM on the go

Nm on the go

Always be the first to hear from the PM. Get the App Now!
...
Prime Minister, Shri Narendra Modi welcomes Crown Prince of Abu Dhabi
September 09, 2024
Two leaders held productive talks to Strengthen India-UAE Ties

The Prime Minister, Shri Narendra Modi today welcomed His Highness Sheikh Khaled bin Mohamed bin Zayed Al Nahyan, Crown Prince of Abu Dhabi in New Delhi. Both leaders held fruitful talks on wide range of issues.

Shri Modi lauded Sheikh Khaled’s passion to enhance the India-UAE friendship.

The Prime Minister posted on X;

“It was a delight to welcome HH Sheikh Khaled bin Mohamed bin Zayed Al Nahyan, Crown Prince of Abu Dhabi. We had fruitful talks on a wide range of issues. His passion towards strong India-UAE friendship is clearly visible.”