ತಮ್ಮ ಬಹುಕಾಲದ ಬೇಡಿಕೆಯಾಗಿದ್ದ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ತಂದಿದ್ದಕ್ಕಾಗಿ ನಿಯೋಗವು ಪ್ರಧಾನಮಂತ್ರಿಯವರಿಗೆ ಧನ್ಯವಾದ ಅರ್ಪಿಸಿತು
ವಕ್ಫ್ ಹಕ್ಕುಗಳಿಂದಾಗಿ ಸಮುದಾಯವು ಹಿಂದೆ ಎದುರಿಸಿದ ಸವಾಲುಗಳ ಕಥೆಗಳನ್ನು ನಿಯೋಗ ಹಂಚಿಕೊಂಡಿತು; ಪ್ರಧಾನಮಂತ್ರಿಯವರು ಈ ಕಾನೂನನ್ನು ಕೇವಲ ಅಲ್ಪಸಂಖ್ಯಾತರಿಗಷ್ಟೇ ಅಲ್ಲದೆ, ಅಲ್ಪಸಂಖ್ಯಾತರ ಗುಂಪುಗಳಲ್ಲೇ ಅತಿ ಕಡಿಮೆ ಸಂಖ್ಯೆಯಲ್ಲಿರುವವರಿಗೂ ತಂದಿದ್ದಾರೆ ಎಂದು ಅವರು ಹೇಳಿದರು
ಪ್ರಧಾನಮಂತ್ರಿಯವರ ನಾಯಕತ್ವವನ್ನು ಹೊಗಳಿದ ಸಮುದಾಯದ ಸದಸ್ಯರು, ಅವರ ಆಡಳಿತದಲ್ಲಿ ತಾವು ಒಳಗೊಳ್ಳುವಿಕೆಯ ಭಾವನೆಯನ್ನು ಅನುಭವಿಸುತ್ತಿರುವುದಾಗಿ ತಿಳಿಸಿದರು. ಅಲ್ಲದೆ, ಪ್ರಧಾನಮಂತ್ರಿಯವರ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' (ಎಲ್ಲರ ಸಹಕಾರ, ಎಲ್ಲರ ಅಭಿವೃದ್ಧಿ) ಎಂಬ ದೂರದೃಷ್ಟಿಯ ಮೇಲೆ ತಮ್ಮ ನಂಬಿಕೆಯನ್ನು ವ್ಯಕ್ತಪಡಿಸಿದರು
ಈ ಕಾನೂನನ್ನು ತರುವ ಹಿಂದಿನ ಪ್ರಮುಖ ಕಾರಣವೆಂದರೆ ಚಾಲ್ತಿಯಲ್ಲಿರುವ ವ್ಯವಸ್ಥೆಯ ಬಲಿಪಶುಗಳಲ್ಲಿ ಹೆಚ್ಚಿನವರು ಮಹಿಳೆಯರು, ವಿಶೇಷವಾಗಿ ವಿಧವೆಯರು: ಪ್ರಧಾನಮಂತ್ರಿ
ಪ್ರಧಾನಮಂತ್ರಿ ದಾವೂದಿ ಬೊಹ್ರಾ ಸಮುದಾಯದೊಂದಿಗಿನ ತಮ್ಮ ಆತ್ಮೀಯ ಬಾಂಧವ್ಯವನ್ನು ಕುರಿತು ಮಾತನಾಡಿದರು ಮತ್ತು ವಕ್ಫ್ ಕಾಯ್ದೆಯನ್ನು ಸಾಕಾರಗೊಳಿಸುವಲ್ಲಿ ಸೈಯದ್ನಾ ಮುಫದ್ದಲ್ ಸೈಫುದ್ದೀನ್ ಅವರ ಕೊಡುಗೆಯನ್ನು ಶ್ಲಾಘಿಸಿದರು

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಲೋಕ ಕಲ್ಯಾಣ ಮಾರ್ಗ್ ನಲ್ಲಿರುವ ತಮ್ಮ ನಿವಾಸದಲ್ಲಿ ದಾವೂದಿ ಬೊಹ್ರಾ ಸಮುದಾಯದ ನಿಯೋಗದೊಂದಿಗೆ ಸಂವಾದ ನಡೆಸಿದರು.

 

ಈ ನಿಯೋಗದಲ್ಲಿ ಉದ್ಯಮ ನಾಯಕರು, ವೃತ್ತಿಪರರು, ವೈದ್ಯರು, ಶಿಕ್ಷಣ ತಜ್ಞರು ಮತ್ತು ದಾವೂದಿ ಬೊಹ್ರಾ ಸಮುದಾಯದ ಪ್ರಮುಖ ಪ್ರತಿನಿಧಿಗಳು ಭಾಗವಹಿಸಿದ್ದರು. ಅವರು ತಮ್ಮ ಕಷ್ಟಗಳನ್ನು ವಿವರಿಸಿದರು ಮತ್ತು ತಮ್ಮ ಸಮುದಾಯದ ಸದಸ್ಯರ ಆಸ್ತಿಗಳನ್ನು ವಕ್ಫ್ ಮಂಡಳಿಯು ಅಕ್ರಮವಾಗಿ ವಶಪಡಿಸಿಕೊಂಡ ಕಥೆಗಳನ್ನು ಹಂಚಿಕೊಂಡರು. ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದಿದ್ದಕ್ಕಾಗಿ ಪ್ರಧಾನ ಮಂತ್ರಿಯವರಿಗೆ ಕೃತಜ್ಞತೆ ಸಲ್ಲಿಸಿದರು ಮತ್ತು ಇದು ಬಹಳ ಕಾಲದಿಂದ ನೆನೆಗುದಿಗೆ ಬಿದ್ದಿದ್ದ ಬೇಡಿಕೆಯಾಗಿತ್ತು ಎಂದು ತಿಳಿಸಿದರು.

 

ದಾವೂದಿ ಬೊಹ್ರಾ ಸಮುದಾಯದೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗಿರುವ ಬಹುಕಾಲದ ವಿಶೇಷ ಸಂಬಂಧ ಮತ್ತು ಅವರು ಮಾಡಿರುವಂತಹ ಸಕಾರಾತ್ಮಕ ಕಾರ್ಯಗಳ ಬಗ್ಗೆ ಅವರು ಮಾತನಾಡಿದರು. ಈ ಕಾಯಿದೆಯಿಂದ ತಮ್ಮ ಸಮುದಾಯಕ್ಕೆ ಆಗುವ ಪ್ರಯೋಜನಗಳ ಕುರಿತು ಹೇಳುತ್ತಾ, ಪ್ರಧಾನಮಂತ್ರಿಯವರು ಈ ಕಾನೂನನ್ನು ಕೇವಲ ಅಲ್ಪಸಂಖ್ಯಾತರಿಗಷ್ಟೇ ಅಲ್ಲದೆ, ಅಲ್ಪಸಂಖ್ಯಾತರೊಳಗಿನ ಅತಿ ಸಣ್ಣ ಸಮುದಾಯಗಳಿಗೂ ತಂದಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು. ಭಾರತವು ಯಾವಾಗಲೂ ತನ್ನ ಗುರುತನ್ನು ವಿಕಸನಗೊಳಿಸಲು ಅವಕಾಶ ಮಾಡಿಕೊಟ್ಟಿದೆ ಎಂದು ಹೇಳಿದ ಅವರು, ಪ್ರಧಾನಮಂತ್ರಿಯವರ ನಾಯಕತ್ವದಲ್ಲಿ ತಾವು ಒಳಗೊಳ್ಳುವಿಕೆಯ ಭಾವನೆಯನ್ನು ಅನುಭವಿಸುತ್ತಿರುವುದಾಗಿ ಅವರು  ಹೇಳಿದರು.

2047ರ ವೇಳೆಗೆ ವಿಕಸಿತ ಭಾರತವನ್ನು ನಿರ್ಮಿಸುವ ಪ್ರಧಾನಮಂತ್ರಿಯವರ ಕನಸಿನ ಕುರಿತು ಮಾತನಾಡಿದ ಅವರು, ಭಾರತವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಈ ಪಯಣದಲ್ಲಿ ತಮ್ಮ ಸಂಪೂರ್ಣ ಸಹಕಾರ ಮತ್ತು ಸಾಧ್ಯವಿರುವ ಎಲ್ಲ ನೆರವನ್ನು ನೀಡುವುದಾಗಿ ತಿಳಿಸಿದರು. ನಿಜವಾದ ಅಭಿವೃದ್ಧಿ ಎಂದರೆ ಅದು ಜನರನ್ನು ಕೇಂದ್ರವಾಗಿರಿಸಿಕೊಂಡಿರಬೇಕು ಎಂಬ ಅವರ ನಾಯಕತ್ವದ ಗುಣವನ್ನು ಅವರು ಬಹುವಾಗಿ ಪ್ರಶಂಸಿಸಿದರು. ಆತ್ಮನಿರ್ಭರ ಭಾರತ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (MSME) ಬೆಂಬಲ ಮುಂತಾದ ಅನೇಕ ಮಹತ್ವದ ಯೋಜನೆಗಳು ಸಣ್ಣ ಉದ್ಯಮಗಳಿಗೆ ಬಹಳಷ್ಟು ನೆರವಾಗುತ್ತಿವೆ ಎಂದು ಅವರು ಕೊಂಡಾಡಿದರು. ಬೇಟಿ ಬಚಾವೋ ಬೇಟಿ ಪಡಾವೋ ಮತ್ತು ಮಹಿಳಾ ಸಬಲೀಕರಣಕ್ಕಾಗಿ ಕೈಗೊಂಡಿರುವ ಇತರ ಕ್ರಮಗಳನ್ನೂ ಅವರು ಮುಕ್ತ ಕಂಠದಿಂದ ಹೊಗಳಿದರು.

 

ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಅನುಷ್ಠಾನಕ್ಕೆ ತರಲು ನಡೆದ ವರ್ಷಗಳ ಶ್ರಮದ ಕುರಿತು ಪ್ರಧಾನಮಂತ್ರಿಗಳು ಮಾತನಾಡಿದರು. ವಕ್ಫ್ನಿಂದಾಗಿ ಸಾರ್ವಜನಿಕರು ಎದುರಿಸುತ್ತಿದ್ದ ಕಷ್ಟಗಳನ್ನು ಅವರು ವಿವರಿಸಿದರು ಮತ್ತು ಈ ಕಾಯ್ದೆಯನ್ನು ಜಾರಿಗೆ ತರಲು ಪ್ರಮುಖ ಪ್ರೇರಣೆಯಾಗಿದ್ದು, ಅಸ್ತಿತ್ವದಲ್ಲಿದ್ದ ವ್ಯವಸ್ಥೆಯಿಂದ ಅತಿ ಹೆಚ್ಚು ನರಳುತ್ತಿದ್ದ ಮಹಿಳೆಯರು, ಅದರಲ್ಲೂ ನಿರ್ದಿಷ್ಟವಾಗಿ ವಿಧವೆಯರು ಎಂದು ಅವರು ತಿಳಿಸಿದರು.

 

ದಾವೂದಿ ಬೊಹ್ರಾ ಸಮುದಾಯದ ಸದಸ್ಯರೊಂದಿಗಿನ ತಮ್ಮ ಗಾಢವಾದ ಸಂಬಂಧವನ್ನು ಪ್ರಧಾನಮಂತ್ರಿಗಳು ನೆನಪಿಸಿಕೊಂಡರು. ಹಲವು ವರ್ಷಗಳಿಂದ ತಾವು ಕಂಡುಕೊಂಡಂತೆ, ಸಮಾಜದ ಒಳಿತಿಗಾಗಿ ದುಡಿಯುವ ಈ ಸಮುದಾಯದ ಸಂಪ್ರದಾಯವನ್ನು ಅವರು ಮುಕ್ತವಾಗಿ ಪ್ರಶಂಸಿಸಿದರು. ಈ ಕಾಯ್ದೆಯನ್ನು ಸಾಕಾರಗೊಳಿಸುವಲ್ಲಿ ಈ ಸಮುದಾಯದ ವಿಶಿಷ್ಟ ಕೊಡುಗೆಯನ್ನೂ ಅವರು ಒತ್ತಿ ಹೇಳಿದರು. ವಕ್ಫ್ ತಿದ್ದುಪಡಿ ಕಾಯ್ದೆಯ ಕುರಿತಾದ ಕಾರ್ಯ ಆರಂಭವಾದಾಗ, ಈ ವಿಷಯದ ಬಗ್ಗೆ ತಾವು ಮೊದಲು ಸಮಾಲೋಚನೆ ನಡೆಸಿದವರಲ್ಲಿ ಸೈಯದ್ನಾ ಮುಫದ್ದಲ್ ಸೈಫುದ್ದೀನ್ ಅವರು ಪ್ರಮುಖರಾಗಿದ್ದರು ಮತ್ತು ಈ ಕಾಯ್ದೆಯ ವಿವಿಧ ಸೂಕ್ಷ್ಮ ವಿಚಾರಗಳ ಬಗ್ಗೆ ಅವರು ಅಮೂಲ್ಯವಾದ ಸಲಹೆಗಳನ್ನು ನೀಡಿದ್ದರು ಎಂದು ಪ್ರಧಾನಮಂತ್ರಿಗಳು ತಿಳಿಸಿದರು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India’s data centre boom: Mumbai cracks global top 15, Hyderabad pipeline set to surge 15x

Media Coverage

India’s data centre boom: Mumbai cracks global top 15, Hyderabad pipeline set to surge 15x
NM on the go

Nm on the go

Always be the first to hear from the PM. Get the App Now!
...
ಆಗಸ್ಟ್ 27ರಂದು 'ಖೇಲೋ ಇಂಡಿಯಾ' ಸಂವಾದದಲ್ಲಿ ಯುವಜನರನ್ನುದ್ದೇಶಿಸಿ ಮಾತನಾಡಲಿರುವ ಪ್ರಧಾನಮಂತ್ರಿ
August 26, 2026
'ಖೇಲೋ ಇಂಡಿಯಾ' ಸಂವಾದವು ಕ್ರೀಡೆ, ಯುವ ನಾಯಕತ್ವ, ನಾಗರಿಕ ಜವಾಬ್ದಾರಿ, ಸ್ವಯಂಸೇವೆ, ಫಿಟ್‌ನೆಸ್‌ ಮತ್ತು ರಾಷ್ಟ್ರ ನಿರ್ಮಾಣವನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸಲಿದೆ
'ಖೇಲೋ ಇಂಡಿಯಾ' ಸಂವಾದದ ಅಡಿಯಲ್ಲಿ ನಡೆಯುವ 'ಯುವ ಸಂವಾದ'ವು ಐದು ಪ್ರಮುಖ ವಿಷಯಗಳ ಮೇಲೆ ಕೇಂದ್ರೀಕರಿಸಲಿದೆ: ಕ್ರೀಡೆ, ಒಲಿಂಪಿಕ್ ಆಕಾಂಕ್ಷೆಗಳು, ಯುವ ನಾಯಕತ್ವ, 'ವಿಕಸಿತ ಭಾರತ' ಮತ್ತು 'ನಶಾ ಮುಕ್ತ ಯುವ' ಅಭಿಯಾನ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಗಸ್ಟ್ 27ರಂದು ಬೆಳಿಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ 'ಖೇಲೋ ಇಂಡಿಯಾ' ಸಂವಾದವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮವು ಯುವಕರಿಗೆ ಭಾರತದ ಕ್ರೀಡಾ ಪ್ರಯಾಣದಲ್ಲಿ ತೊಡಗಿಸಿಕೊಳ್ಳಲು, ಅವರ ಆಕಾಂಕ್ಷೆಗಳನ್ನು ಹಂಚಿಕೊಳ್ಳಲು ಮತ್ತು ಬಲವಾದ ಯುವಕರ ನೇತೃತ್ವದ 'ವಿಕಸಿತ ಭಾರತ'ಕ್ಕಾಗಿ ತಮ್ಮ ವಿಚಾರಗಳನ್ನು ನೀಡಲು ಸಹಾಯ ಮಾಡುವುದು ಕಾರ್ಯಕ್ರಮದ ಉದ್ದೇಶವಾಗಿದೆ.

2026ರ ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ 'ಮೇರಾ ಯುವ ಭಾರತ್' (ಮೈ ಭಾರತ್‌) ಆಯೋಜಿಸಿರುವ ಈ ಕಾರ್ಯಕ್ರಮವು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಪ್ರತಿಯೊಂದು ಜಿಲ್ಲೆಯ ಎರಡು ಕಾಲೇಜುಗಳಲ್ಲಿ ಯುವಕರ ಭಾಗವಹಿಸುವಿಕೆಯೊಂದಿಗೆ ದೇಶಾದ್ಯಂತ ನಡೆಯಲಿದೆ. ಯುವಕರ ಆಕಾಂಕ್ಷೆಗಳನ್ನು ರಾಷ್ಟ್ರೀಯ ಅಭಿವೃದ್ಧಿ ಕಾರ್ಯಸೂಚಿಯ ಕೇಂದ್ರಭಾಗದಲ್ಲಿ ಇರಿಸಿಕೊಂಡು ಸದೃಢ, ಶಿಸ್ತುಬದ್ಧ ಮತ್ತು ಕ್ರೀಡಾ ರಾಷ್ಟ್ರವನ್ನು ನಿರ್ಮಿಸುವ ಪ್ರಧಾನಮಂತ್ರಿಯವರ ದೃಷ್ಟಿಕೋನಕ್ಕೆ ಅನುಗುಣವಾಗಿ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ.

ರಾಷ್ಟ್ರವ್ಯಾಪಿ ನಡೆಯುವ 'ಖೇಲೋ ಇಂಡಿಯಾ ಸಂವಾದ'ವು ಕ್ರೀಡೆ, ಯುವ ನಾಯಕತ್ವ, ನಾಗರಿಕ ಜವಾಬ್ದಾರಿ, ಸ್ವಯಂ ಸೇವೆ, ಫಿಟ್ನೆಸ್ ಮತ್ತು ರಾಷ್ಟ್ರ ನಿರ್ಮಾಣವನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸಲಿದೆ. ಭಾರತದ ಯುವ ಮತ್ತು ಕ್ರೀಡಾ ಪರಿಸರ ವ್ಯವಸ್ಥೆಯ ಕುರಿತಾದ ನಿರಂತರ ಸಂವಾದದಲ್ಲಿ ಯುವಕರ ಆಲೋಚನೆಗಳು ಮತ್ತು ದೃಷ್ಟಿಕೋನಗಳಿಗೆ ಸ್ಥಾನವನ್ನು ಖಚಿತಪಡಿಸಿಕೊಳ್ಳುವ ಜೊತೆಗೆ, ದೇಶದ ಕ್ರೀಡಾ ಮಹತ್ವಾಕಾಂಕ್ಷೆಗಳೊಂದಿಗೆ ಯುವಕರು ತೊಡಗಿಸಿಕೊಳ್ಳಲು ಇದು ನೇರ ಮಾರ್ಗವನ್ನು ಒದಗಿಸುತ್ತದೆ.

ರಾಷ್ಟ್ರೀಯ ಕಾರ್ಯಕ್ರಮದ ನಂತರ ಯುವ ಭಾಗಿದಾರರು, 'ಮೈ ಭಾರತ್' ಸ್ವಯಂಸೇವಕರು, ಸ್ಥಳೀಯ ಕ್ರೀಡಾಪಟುಗಳು ಮತ್ತು ಜನಪ್ರತಿನಿಧಿಗಳನ್ನು ಒಳಗೊಂಡ ಸ್ಥಳೀಯ ಸಂವಾದಗಳು ನಡೆಯಲಿವೆ. ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವ ಯುವಕರು ಮತ್ತು ಪ್ರಮುಖ ಭಾರತೀಯ ಅಥ್ಲೀಟ್‌ಗಳು ಹಾಗೂ ಪದಕ ವಿಜೇತರ ನಡುವಿನ ನೇರ ಸಂವಾದವು ಈ ಉಪಕ್ರಮದ ಪ್ರಮುಖ ಲಕ್ಷಣವಾಗಿದೆ. 'ಯುವ ಸಂವಾದ'ವು ಈ ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದು, ಇದರಲ್ಲಿ ಯುವ ಭಾಗಿದಾರರನ್ನು ತಮ್ಮ ಸ್ವಂತ ಆಲೋಚನೆಗಳು, ದೃಷ್ಟಿಕೋನಗಳು ಮತ್ತು ಆಕಾಂಕ್ಷೆಗಳನ್ನು ವ್ಯಕ್ತಪಡಿಸಲು ಆಹ್ವಾನಿಸಲಾಗುತ್ತದೆ. ಈ ಸಂವಾದವನ್ನು ಐದು ವಿಷಯಗಳ ಸುತ್ತ ರಚಿಸಲಾಗಿದೆ:

  • ಉತ್ತಮ ಸೌಲಭ್ಯಗಳು, ತರಬೇತಿ, ಕ್ರೀಡಾ ವಿಜ್ಞಾನ ಮತ್ತು ಎಲ್ಲರನ್ನೂ ಒಳಗೊಂ ಭಾಗವಹಿಸುವಿಕೆಯ ಮೂಲಕ ಭಾರತದ ಕ್ರೀಡಾ ಪರಿಸರ ವ್ಯವಸ್ಥೆಯನ್ನು ಸುಧಾರಿಸುವುದು;
  • ವೈಜ್ಞಾನಿಕ ಪ್ರತಿಭಾ ಶೋಧನೆ, ಪಾರದರ್ಶಕ ಆಯ್ಕೆ ಮತ್ತು ದೀರ್ಘಕಾಲೀನ ಕ್ರೀಡಾಪಟು ಅಭಿವೃದ್ಧಿಯ ಮೂಲಕ 2036ರ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಗೆ ಪ್ರತಿಭೆಗಳನ್ನು ಪೋಷಿಸುವುದು;
  • ಆಡಳಿತ ವೇದಿಕೆಗಳು ಮತ್ತು 'ಮೈ ಭಾರತ್' ನೇತೃತ್ವದ ಸ್ವಯಂಸೇವಕ ಸೇವೆಯ ಮೂಲಕ ಯುವ ನಾಯಕರನ್ನು ಸೃಷ್ಟಿಸುವುದು;
  • ನಾಗರಿಕ ಪ್ರಜ್ಞೆ, ಭವಿಷ್ಯಕ್ಕೆ ಸಿದ್ಧವಾದ ಕೌಶಲ್ಯಗಳು ಮತ್ತು ರಚನಾತ್ಮಕ ಸ್ವಯಂಸೇವಕ ಸೇವೆಯನ್ನು ಬೆಳೆಸುವ ಮೂಲಕ ವಿಕಸಿತ ಭಾರತಕ್ಕಾಗಿ ಯುವಕರನ್ನು ಸಬಲೀಕರಣಗೊಳಿಸುವುದು;
  • ಮಾದಕ ವ್ಯಸನದ ವಿರುದ್ಧ ಹೋರಾಡಲು ಕ್ರೀಡೆ ಮತ್ತು ಸಮಾನಮನಸ್ಕ ಜಾಲಗಳನ್ನು ಬಳಸಿಕೊಳ್ಳುವ 'ನಶಾ ಮುಕ್ತ ಯುವ ಆಂದೋಲ'ನವನ್ನು ಉತ್ತೇಜಿಸುವುದು. ಇದು 2026ರ ಆಗಸ್ಟ್ 2ರಂದು ಪ್ರಾರಂಭಿಸಲಾದ ಪ್ರಧಾನಮಂತ್ರಿಯವರ 100 ವಾರಗಳ ರಾಷ್ಟ್ರವ್ಯಾಪಿ ಅಭಿಯಾನದ ಅಡಿಯಲ್ಲಿ ಸಾಪ್ತಾಹಿಕ 'ಜನ ಭಾಗೀದಾರಿ' ಚಟುವಟಿಕೆಗಳಿಂದ ಬೆಂಬಲಿತವಾಗಿದೆ.