ನಾಯಕರು ಭಾರತ-ಡೆನ್ಮಾರ್ಕ್ ಹಸಿರು ತಂತ್ರಗಾರಿಕೆಯ ಪಾಲುದಾರಿಕೆಯ ಪ್ರಗತಿಯನ್ನು ಪರಿಶೀಲಿಸಿದರು ಮತ್ತು ಉನ್ನತ ಮಟ್ಟದ ವಿನಿಮಯ ಮತ್ತು ವೃದ್ಧಿಸುತ್ತಿರುವ ಸಹಕಾರದ ಕುರಿತು ತೃಪ್ತಿ ವ್ಯಕ್ತಪಡಿಸಿದರು
ಪ್ರಧಾನಿ ಫ್ರೇಡರೀಕ್ಸನ್ ಭಾರತದ ಜಿ 20 ಉಪಕ್ರಮಗಳನ್ನು ಶ್ಲಾಘಿಸಿದರು ಮತ್ತು ಡೆನ್ಮಾರ್ಕ್ ‌ನ ಸಂಪೂರ್ಣ ಬೆಂಬಲವನ್ನು ತಿಳಿಸಿದರು
ಮುಂದಿನ ವರ್ಷ 2024 ರಲ್ಲಿ ಭಾರತ-ಡೆನ್ಮಾರ್ಕ್ ಮೈತ್ರಿಯ 75 ನೇ ವಾರ್ಷಿಕೋತ್ಸವವನ್ನು ಆಚರಿಸಲು ನಾಯಕರು ಒಪ್ಪಿಗೆ ಸೂಚಿಸಿದರು

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಗೌರವಾನ್ವಿತ ಡೆನ್ಮಾರ್ಕ್ ‌ನ ಪ್ರಧಾನಿ ಶ್ರೀಮತಿ. ಮೆಟ್ಟೆ ಫ್ರೆಡೆರಿಕ್ಸೆನ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು.

ಎರಡನೇ ಅವಧಿಗೆ ಡೆನ್ಮಾರ್ಕ್ ‌ನ ಪ್ರಧಾನಮಂತ್ರಿಯಾಗಿ ನೇಮಕಗೊಂಡಿದ್ದಕ್ಕಾಗಿ ಪ್ರಧಾನಿ ಫ್ರೆಡೆರಿಕ್ಸೆನ್ ಅವರನ್ನು ಪ್ರಧಾನಮಂತ್ರಿಯವರು  ಅಭಿನಂದಿಸಿದರು.

ಉಭಯ ನಾಯಕರು ಭಾರತ-ಡೆನ್ಮಾರ್ಕ್ ಹಸಿರು ತಂತ್ರಗಾರಿಕೆಯ ಪಾಲುದಾರಿಕೆಯ ಪ್ರಗತಿಯನ್ನು ಪರಿಶೀಲಿಸಿದರು. ಇತ್ತೀಚಿನ ಉನ್ನತ ಮಟ್ಟದ ವಿನಿಮಯ ಮತ್ತು ವೃದ್ಧಿಸುತ್ತಿರುವ ಸಹಕಾರದ ಕುರಿತು ತೃಪ್ತಿ ವ್ಯಕ್ತಪಡಿಸಿದರು.

ಪ್ರಧಾನಮಂತ್ರಿ ಫ್ರೆಡೆರಿಕ್ಸೆನ್ ಅವರಿಗೆ ಭಾರತದ ಪ್ರಸ್ತುತ ಜಿ 20 ರ  ಅಧ್ಯಕ್ಷ ಸ್ಥಾನ ಮತ್ತು ಅದರ ಪ್ರಮುಖ ಆದ್ಯತೆಗಳ ಕುರಿತು ಪ್ರಧಾನಮಂತ್ರಿಯವರು ವಿವರಿಸಿದರು. ಪ್ರಧಾನಮಂತ್ರಿ ಫ್ರೆಡೆರಿಕ್ಸೆನ್ ಅವರು ಭಾರತದ ಉಪಕ್ರಮಗಳನ್ನು ಶ್ಲಾಘಿಸಿದರು ಮತ್ತು ಅವರಿಗೆ ಡೆನ್ಮಾರ್ಕ್ ‌ನ ಸಂಪೂರ್ಣ ಬೆಂಬಲವನ್ನು ತಿಳಿಸಿದರು.

ಮುಂದಿನ ವರ್ಷ 2024 ರಲ್ಲಿ ಭಾರತ-ಡೆನ್ಮಾರ್ಕ್ ಮೈತ್ರಿಯ 75 ನೇ ವಾರ್ಷಿಕೋತ್ಸವವನ್ನು ಸೂಕ್ತ ರೀತಿಯಲ್ಲಿ ಆಚರಿಸಲು ಮತ್ತು ತಮ್ಮ ಮೈತ್ರಿಯನ್ನು  ಮತ್ತಷ್ಟು ವೈವಿಧ್ಯಮಯಗೊಳಿಸಲು ಕ್ಷೇತ್ರಗಳನ್ನು ಅನ್ವೇಷಿಸಲು ಉಭಯ ನಾಯಕರು ಒಪ್ಪಿಕೊಂಡರು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
A Milestone in Financial Inclusion: The Success Story of PMSBY

Media Coverage

A Milestone in Financial Inclusion: The Success Story of PMSBY
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 9 ಮೇ 2026
May 09, 2026

Citizens Celebrate India’s Civilisational & Economic Awakening Under PM Narendra Modi