ಶೇರ್
 
Comments

ಜಗತ್ತಿನ ಎರಡು ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರಗಳ ನಡುವಿನ ಪಾಲುದಾರಿಕೆ ಮುಂದುವರಿಕೆಗೆ ಹೊಸ ಆಯಾಮ ನೀಡುವುದು ಮತ್ತು ಅವುಗಳ ನಿಕಟ ಸಂಬಂಧಗಳನ್ನು ನವೀಕರಿಸುವುದಕ್ಕೆ ಸಂಬಂಧಿಸಿದಂತೆ ಶ್ವೇತಭವನದಲ್ಲಿಂದು ನಡೆದ ನಾಯಕರ ಮೊದಲ ಮುಖಾಮುಖಿ ಸಭೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಅಧ್ಯಕ್ಷ ಜೋಸೆಫ್ ಆರ್. ಬೈಡನ್ ಸ್ವಾಗತಿಸಿದರು.   

ಭಾರತ-ಅಮೆರಿಕ ನಡುವಿನ ಸಂಬಂಧವನ್ನು ಮುನ್ನಡೆಸುವ ಸ್ಪಷ್ಟ ಮುನ್ನೋಟವನ್ನು ನಾಯಕರು ದೃಢೀಕರಿಸಿದರು; ಆಸಿಯಾನ್ ಮತ್ತು ಕ್ವಾಡ್ ಸದಸ್ಯರೂ ಸೇರಿದಂತೆ ಪ್ರಾದೇಶಿಕ ಗುಂಪುಗಳಲ್ಲಿ ಒಟ್ಟಾಗಿ ಕಾರ್ಯನಿರ್ವಹಿಸುವುದು ಮತ್ತು ಕಾರ್ಯತಂತ್ರ ಪಾಲುದಾರಿಕೆ ಅಭಿವೃದ್ಧಿ; ಇಂಡೋ-ಪೆಸಿಫಿಕ್ ಪ್ರದೇಶ ಮತ್ತು ಅದನ್ನು ಹೊರತುಪಡಿಸಿದಂತೆ ಪರಸ್ಪರ ಸಮಾನ ಹಿತಾಸಕ್ತಿಯನ್ನು ಉತ್ತೇಜಿಸುವುದು; ಎರಡೂ ದೇಶಗಳಲ್ಲಿನ ದುಡಿಯುತ್ತಿರುವ ಕುಟುಂಬಗಳ ಸಂಮೃದ್ಧಿ ಹೆಚ್ಚಳಕ್ಕೆ ವ್ಯಾಪಾರ ಮತ್ತು ಬಂಡವಾಳ ಹೂಡಿಕೆಗೆ ಪಾಲುದಾರಿಕೆ ಅಭಿವೃದ್ಧಿ; ಕೋವಿಡ್-19 ಸಾಂಕ್ರಾಮಿಕ ಮತ್ತು ಇತರೆ ಆರೋಗ್ಯ ಸವಾಲುಗಳ ವಿರುದ್ಧ ನಡೆಸುತ್ತಿರುವ ಹೋರಾಟವನ್ನು ಮುಕ್ತಾಯಗೊಳಿಸುವುದು; ಹವಾಮಾನ ವೈಪರೀತ್ಯದ ವಿರುದ್ಧ ಜಾಗತಿಕ ಪ್ರಯತ್ನಗಳನ್ನು ತೀವ್ರಗೊಳಿಸುವುದು; ನಮ್ಮ ಜನರಿಗೆ ಸಂಬಂಧಿಸಿದಂತೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮತ್ತು ಸಂಸ್ಥೆಗಳನ್ನು ಬಲವರ್ಧನೆಗೊಳಿಸುವುದು ಮತ್ತು ಎರಡೂ ದೇಶಗಳು ಬಲಿಷ್ಠವಾಗುವಂತೆ ಜನರ ಜನರು ನಡುವಿನ ಸಂಬಂಧಗಳನ್ನು ವೃದ್ಧಿಸುವುದು.  

ಕಳೆದ ಒಂದು ವರ್ಷದಿಂದೀಚೆಗೆ ಕೋವಿಡ್ -19 ಸಾಂಕ್ರಾಮಿಕ ವಿರುದ್ಧದ ಹೋರಾಟದಲ್ಲಿ ಎರಡೂ ರಾಷ್ಟ್ರಗಳ ನಡುವೆ ನಿಕಟ ಸಹಕಾರಕ್ಕೆ ಅಧ್ಯಕ್ಷ ಬೈಡೆನ್ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಹೆಮ್ಮೆ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಎರಡೂ ದೇಶಗಳಿಗೆ ಅಗತ್ಯಕ್ಕೆ ತಕ್ಕಂತೆ ತುರ್ತು ಪರಿಹಾರ ಸಾಮಗ್ರಿಗಳನ್ನು ಹಂಚಿಕೊಳ್ಳಲು ಸರ್ಕಾರಗಳು, ನಾಗರಿಕ ಸಮಾಜ, ವ್ಯಾಪಾರಿ ಸಮಯದಾಯ ಮತ್ತು ಅನಿವಾಸಿಯರು ಹಿಂದೆಂದೂ ನಿರೀಕ್ಷಿಸದ ರೀತಿಯಲ್ಲಿ ಒಗ್ಗೂಡಿದ್ದಾರೆ.
ತಮ್ಮ ದೇಶಗಳಲ್ಲಿನ ಹಾಗೂ ವಿದೇಶಗಳಲ್ಲಿನ ಜನರನ್ನು ರಕ್ಷಿಸಲು ನೂರಾರು ಮಿಲಿಯನ್ ಗಟ್ಟಲೆ ಲಸಿಕೆ ಡೋಸ್ ಹಾಕಲಾಗಿದೆ ಮತ್ತು ಈ ಸಾಂಕ್ರಾಮಿಕವನ್ನು ಕೊನೆಗಾಣಿಸಲು ಜಾಗತಿಕ ಪ್ರಯತ್ನಗಳನ್ನು ಮುನ್ನಡೆಸುವ ಬದ್ಧತೆಯನ್ನು ನಾಯಕರು ಪುನರುಚ್ಚರಿಸಿದರು. ಕೊವ್ಯಾಕ್ಸ್ ಸೇರಿದಂತೆ ಸುರಕ್ಷಿತ ಹಾಗೂ ಪರಿಣಾಮಕಾರಿ ಕೋವಿಡ್-19 ಲಸಿಕೆಗಳ ರಫ್ತು ಪುನಾರಂಭಿಸುವ ಭಾರತದ ಘೋಷಣೆಯನ್ನು ಅಧ್ಯಕ್ಷ ಬೈಡನ್ ಸ್ವಾಗತಿಸಿದರು. ಭವಿಷ್ಯದ ಸಾಂಕ್ರಾಮಿಕ ರೋಗಗಳ ಅಪಾಯವನ್ನು ತಗ್ಗಿಸಲು ಸಾಂಕ್ರಾಮಿಕ ಎದುರಿಸಲು ಸಿದ್ಧತೆ ಮತ್ತು ಬಯೋಮೆಡಿಕಲ್ ಸಂಶೋಧನೆ ಸೇರಿದಂತೆ ಜಾಗತಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸಲು ಆರೋಗ್ಯ ಮತ್ತು ಜೈವಿಕ ವೈದ್ಯಕೀಯ ವಿಜ್ಞಾನಗಳ ಕುರಿತಾದ ಅಗಾಧವಾದ ತಿಳುವಳಿಕೆಯ ಒಪ್ಪಂದ ಅಂತಿಮಗೊಳಿಸುವುದನ್ನು ಉಭಯ ನಾಯಕರು ಶ್ಲಾಘಿಸಿದರು.  

ಕೋವಿಡ್-19 ಸಾಂಕ್ರಾಮಿಕ ಎದುರಿಸುವ ನಮ್ಮ ಹಂಚಿಕೆಯ ಬದ್ಧತೆಯನ್ನು ಗಮನಿಸಿದರೆ ಮತ್ತು ಸಾಂಕ್ರಾಮಿಕವನ್ನು ಕೊನೆಗಾಣಿಸುವ ಹಾಗೂ ಮುಂದಿನದಕ್ಕೆ ತಯಾರಿ ಮಾಡಲು ಜಾಗತಿಕ ಕೋವಿಡ್-19 ಶೃಂಗಸಭೆ ಕರೆಯುವ ಅಧ್ಯಕ್ಷ ಬೈಡೆನ್ ಅವರ ಉಪಕ್ರಮವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ವಾಗತಿಸಿದರು. 
ಪ್ಯಾರೀಸ್ ಒಪ್ಪಂದಕ್ಕೆ ಅಮೆರಿಕಾ ವಾಪಸ್ಸಾಗುವುದು ಸೇರಿದಂತೆ ಹವಾಮಾನ ವೈಪರೀತ್ಯಕ್ಕೆ ಅಮೆರಿಕಾದ ನಾಯಕತ್ವವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ವಾಗತಿಸಿದರು. 2030ರ ವೇಳೆಗೆ 450 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಉತ್ಪಾದಿಸುವ ಸಾಮರ್ಥ್ಯದ ದೇಶೀಯ ಗುರಿ ಸಾಧಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಉದ್ದೇಶಕ್ಕೆ ಅಧ್ಯಕ್ಷ ಬೈಡೆನ್ ಬೆಂಬಲ ವ್ಯಕ್ತಪಡಿಸಿದರು ಮತ್ತು ಲಕ್ಷಾಂತರ ಭಾರತೀಯ ಮನೆಗಳಿಗೆ ಶುದ್ಧ, ವಿಶ್ವಾಸಾರ್ಹ ಶಕ್ತಿಯನ್ನು ಖಾತ್ರಿಪಡಿಸುವ ನವೀಕರಿಸಬಹುದಾದ, ಸಂಗ್ರಹಣೆ ಮತ್ತು ಗ್ರಿಡ್ ಮೂಲಸೌಕರ್ಯಗಳಲ್ಲಿ ಹೂಡಿಕೆಗಳನ್ನು ಹೆಚ್ಚಿಸುವ ಪ್ರಾಮುಖ್ಯತೆಯನ್ನು ಅನುಮೋದಿಸಿದರು. 
ಅಮೆರಿಕಾ-ಭಾರತ ಹವಾಮಾನ ಮತ್ತು ಶುದ್ಧ ಇಂಧನ ಕಾರ್ಯಸೂಚಿ 2030 ಪಾಲುದಾರಿಕೆ ಅಡಿ ಎರಡು ಪ್ರಮುಖ ಮಾರ್ಗಗಳಲ್ಲಿ ಅಂದರೆ ಕಾರ್ಯತಂತ್ರ ಶುದ್ಧ ಇಂಧನ ಪಾಲುದಾರಿಕೆ (ಎಸ್ ಸಿಇಪಿ) ಮತ್ತು ಹವಾಮಾನ ಕ್ರಿಯೆ ಮತ್ತು ಹಣಕಾಸು ಕ್ರೂಢೀಕರಣ ಸಮಾಲೋಚನೆ (ಸಿಎಎಫ್ ಎಂಡಿ) ಮುನ್ನಡೆಯಲಾಗುತ್ತಿದೆ, ಶುದ್ಧ ಇಂಧನ ಪರಿವರ್ತನೆಯತ್ತ ಮುನ್ನಡೆಯಲು ಭಾರತ ಮತ್ತು ಅಮೆರಿಕಾ ಶುದ್ಧ ಇಂಧನ ಅಭಿವೃದ್ಧಿ ಮತ್ತು ನಿರ್ಣಾಯಕ ತಂತ್ರಜ್ಞಾನಗಳ ನಿಯೋಜನೆಯನ್ನು ತೀವ್ರಗೊಳಿಸಿದೆ. ಕೈಗಾರಿಕಾ ಪರಿವರ್ತನೆಯ ನಾಯಕತ್ವ ಗುಂಪು(ಲೀಡ್ ಐಟಿ) ಸೇರ್ಪಡೆಯಾಗುವ ಅಮೆರಿಕಾದ ನಿರ್ಧಾರವನ್ನು ಭಾರತ ಸ್ವಾಗತಿಸಿತು.

    ಭಾರತ ಮತ್ತು ಅಮೆರಿಕ ನಡುವೆ ರಕ್ಷಣಾ ಸಂಬಂಧಗಳ ಬಲವರ್ಧನೆಗೆ ಅಧ್ಯಕ್ಷ ಬೈಡನ್ ಪುನರುಚ್ಛರಿಸಿದರು ಮತ್ತು ಭಾರತ ಅತ್ಯಂತ ಪ್ರಮುಖ ರಕ್ಷಣಾ ಪಾಲುದಾರರಾಗಿದ್ದು, ಪ್ರಾದೇಶಿಕ ಪಾಲುದಾರಿಕೆ ಸೇರಿದಂತೆ ಬಹು ಹಂತದ ಕಾರ್ಯನಿರ್ವಹಣಾ ಚೌಕಟ್ಟು ವಿಸ್ತರಣೆ ಅತ್ಯಾಧುನಿಕ ಮಿಲಿಟರಿ ತಂತ್ರಜ್ಞಾನಗಳಲ್ಲಿ ಸಹಕಾರ ಬಲವರ್ಧನೆ, ಮಿಲಿಟರಿ ಮಿಲಿಟರಿ ನಡುವಿನ ಸಾಗಾಣೆ, ವಿನಿಮಯ, ರಕ್ಷಣಾ ಕಾರ್ಯಾಚರಣೆಗಳ ಮಾಹಿತಿ ಹಂಚಿಕೆಗೆ ದೃಢ ಬದ್ಧತೆಯನ್ನು ವ್ಯಕ್ತಪಡಿಸಿದರು. ಉಭಯ ನಾಯಕರು ಕೈಗಾರಿಕಾ ಸಹಕಾರವನ್ನು ಇನ್ನಷ್ಟು ಆಳವಾಗಿ ಮುಂದುವರಿಸುವುದನ್ನು ಸ್ವಾಗತಿಸಿದರು. ಆ ನಿಟ್ಟಿನಲ್ಲಿ ಇತ್ತೀಚಿನ ರಕ್ಷಣಾ ತಂತ್ರಜ್ಞಾನ ಮತ್ತು ವ್ಯಾಪಾರ ಉಪಕ್ರಮದಡಿ ಇತ್ತೀಚೆಗೆ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಮಾನವರಹಿತ ವೈಮಾನಿಕ ವಿಮಾನ(ಯುಎವಿಎಸ್) ಅನ್ನು ಉಲ್ಲೇಖಿಸಿದರು ಮತ್ತು ಅಂತಹ ಜಂಟಿ ಪ್ರಯತ್ನಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದು ಉತ್ತೇಜಿಸಿದರು. ರಕ್ಷಣಾ ವಲಯದಲ್ಲಿ ಸಹ ಅಭಿವೃದ್ಧಿ, ಸಹ ಉತ್ಪಾದನೆ ಮತ್ತು ಪರಸ್ಪರ ರಕ್ಷಣಾ ವ್ಯಾಪಾರ ವಿಸ್ತರಣೆಗಳಲ್ಲಿ ಹಾಲಿ ಇರುವ ಆವಿಷ್ಕಾರ ಮತ್ತು ಉದ್ಯಮಶೀಲತೆ ಪೂರಕ ವ್ಯವಸ್ಥೆಯನ್ನು ಸರ್ಕಾರ ಮತ್ತು ಖಾಸಗಿ ಪಾಲುದಾರರು ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು. ಅಲ್ಲದೆ ಅವರು, ಉನ್ನತ ಮಟ್ಟದ ರಕ್ಷಣಾ ಕೈಗಾರಿಕಾ ಸಹಭಾಗಿತ್ವಕ್ಕೆ ಪೂರಕವಾಗಿ ಕೈಗಾರಿಕಾ ಭದ್ರತಾ ಒಪ್ಪಂದ ಶೃಂಗಸಭೆಯ ಉದ್ಘಾಟನಾ ಸಭೆಯನ್ನು ಎದುರು ನೋಡುತ್ತಿರುವುದಾಗಿ ನಾಯಕರು ಹೇಳಿದರು. 

ಭಾರತ ಮತ್ತು ಅಮೆರಿಕ ಒಟ್ಟಾಗಿ ಜಾಗತಿಕ ಭಯೋತ್ಪಾದನೆ ವಿರುದ್ಧ ಹಂಚಿಕೆಯ ಹೋರಾಟವನ್ನು ನಡೆಸಲಿದೆ, ಯುಎನ್ಎಸ್ ಸಿಆರ್ 1267 ನಿರ್ಬಂಧ ಸಮಿತಿಯಿಂದ ನಿಷೇಧಿಸಲ್ಪಟ್ಟ ಗುಂಪುಗಳು ಸೇರಿದಂತೆ ಎಲ್ಲ ಬಗೆಯ ಭಯೋತ್ಪಾದನಾ ಸಂಸ್ಥೆಗಳ ವಿರುದ್ಧ ಸಮಗ್ರ ಕ್ರಮ ಕೈಗೊಳ್ಳುವುದು, ಗಡಿಯಾಚೆಗಿನ ಭಯೋತ್ಪಾದನಾ ಕೃತ್ಯಗಳನ್ನು ಖಂಡಿಸುವುದು ಮತ್ತು 26/11 ಮುಂಬೈ ದಾಳಿಕೋರರನ್ನು ನ್ಯಾಯಕ್ಕೆ ಒಳಪಡಿಸುವ ಬದ್ಧತೆಯನ್ನು ನಾಯಕರು ಪುನರುಚ್ಛರಿಸಿದರು. 
    ಭಯೋತ್ಪಾದನಾ ಸಂಸ್ಥೆಗಳ ಅಣಕುಗಳನ್ನು ಹತ್ತಿಕ್ಕಲು ಮತ್ತು ತಮ್ಮ ಕಾರ್ಯಾಚರಣೆ ಅಥವಾ ಉಗ್ರರ ದಾಳಿಯ ಯೋಜನೆಗಳನ್ನು ಬಳಸಿಕೊಂಡು ಎಲ್ಲ ರೀತಿಯ ಸಾರಿಗೆ, ಹಣಕಾಸು ಮತ್ತು ಮಿಲಿಟರಿ ಬೆಂಬಲವನ್ನು ಭಯೋತ್ಪಾದನಾ ಸಂಸ್ಥೆಗಳಿಗೆ ನಿರಾಕರಿಸುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. ಮುಂಬರುವ ಅಮೆರಿಕ – ಭಾರತ ಭಯೋತ್ಪಾದನಾ ನಿಗ್ರಹ ಜಂಟಿ ಕಾರ್ಯಕಾರಿ ಗುಂಪಿನ ಸಭೆ, ನಿಯೋಜನೆ ಸಮಾಲೋಚನೆ ಮತ್ತು ಭಾರತ – ಅಮೆರಿಕ ಒಳನಾಡು ಸುರಕ್ಷತೆ ಸಂವಾದ ನವೀಕರಣ ಇವು ಭಾರತ ಮತ್ತು ಅಮೆರಿಕ ನಡುವಿನ ಭಯೋತ್ಪಾದನೆ ವಿರುದ್ಧದ ಹೋರಾಟದ ಸಹಕಾರವನ್ನು ಮತ್ತಷ್ಟು ಬಲವರ್ಧನೆಗೊಳಿಸಲಿವೆ. ಇದರಲ್ಲಿ ಗುಪ್ತಚರ ಮಾಹಿತಿ ಹಂಚಿಕೆ ಮತ್ತು ಕಾನೂನು ಜಾರಿ ಸಹಕಾರ ವಲಯವೂ ಸಹ ಸೇರಿದೆ. ಭಯೋತ್ಪಾದನಾ ನಿಗ್ರಹ ತಂತ್ರಜ್ಞಾನಗಳನ್ನು ಅಭಿವೃದ್ಧಿಗೊಳಿಸುವ ಅವಕಾಶಗಳನ್ನು ಉಭಯ ನಾಯಕರು ಸ್ವಾಗತಿಸಿದರು. ಅವರು ಭಾರತ ಅಮೆರಿಕ ಮಾದಕದ್ರವ್ಯ ನಿಗ್ರಹ ಕಾರ್ಯಕಾರಿ ಸಮಿತಿಯ ಕಾರ್ಯವನ್ನು ಶ್ಲಾಘಿಸಿದರು ಮತ್ತು ಮಾದಕ ದ್ರವ್ಯ ಕಳ್ಳಸಾಗಾಣೆ, ಮಾದಕದ್ರವ್ಯಗಳ ಅನಧಿಕೃತ ಉತ್ಪಾದನೆ ಮತ್ತು ರಾಸಾಯನಿಕ ಪೂರೈಕೆ ಸರಣಿ ನಿಗ್ರಹಕ್ಕೆ ಜಂಟಿ ಪ್ರಯತ್ನಗಳನ್ನು ಉತ್ತೇಜಿಸುವ ಹೊಸ ದ್ವಿಪಕ್ಷೀಯ ನೀತಿಯನ್ನು ಅಂತಿಮಗೊಳಿಸುವ ಕುರಿತು ಬದ್ಧತೆಯನ್ನು ವ್ಯಕ್ತಪಡಿಸಿದರು. 

ಉಭಯ ನಾಯಕರು ತಾಲಿಬಾನ್ ಸಂಘಟನೆ, ಯುಎನ್ಎಸ್ ಸಿ ನಿರ್ಣಯ 2593(2021)ಅನ್ನು ಕಡ್ಡಾಯವಾಗಿ ಪಾಲಿಸಬೇಕು. ಅದರಂತೆ ಆಫ್ಘನ್ ಭೂಪ್ರದೇಶವನ್ನು ಮತ್ತೆ ಯಾವುದೇ ರಾಷ್ಟ್ರ ಅಥವಾ ಭೂಪ್ರದೇಶದ ವಿರುದ್ಧ ಭಯೋತ್ಪಾದನಾ ಕೃತ್ಯಗಳಿಗೆ ಅಥವಾ ಉಗ್ರರ ದಾಳಿಗೆ ಸಂಚು ರೂಪಿಸುವುದು ಅಥವಾ ಆರ್ಥಿಕ ನೆರವು ನೀಡುವುದನ್ನು ಮಾಡುವಂತಿಲ್ಲ ಹಾಗೂ ಆಫ್ಘಾನಿಸ್ತಾನದಲ್ಲಿ ಭಯೋತ್ಪಾದನಾ ನಿಗ್ರಹದ ಪ್ರಾಮುಖ್ಯತೆಯನ್ನು ಪ್ರಮುಖವಾಗಿ ಚರ್ಚಿಸಲಾಯಿತು. ತಾಲಿಬಾನ್ ಸಂಘಟನೆ ಈ ಎಲ್ಲಾ ಮತ್ತು ಇತರ ಬದ್ಧತೆಗಳನ್ನು ಅಂದರೆ ಆಫ್ಘಾನಿಸ್ತಾನದಲ್ಲಿರುವ ಆಫ್ಘನ್ನರು ಮತ್ತು ಎಲ್ಲ ವಿದೇಶಿ ಪ್ರಜೆಗಳ ಭದ್ರತೆ, ಸುರಕ್ಷತೆ ಹಾಗೂ ಮಹಿಳೆಯರು ಮಕ್ಕಳು ಹಾಗೂ ಅಲ್ಪಸಂಖ್ಯಾತ ಸಮುದಾಯಗಳು ಸೇರಿದಂತೆ ಎಲ್ಲ ಆಫ್ಘನ್ನರ ಮಾನವ ಹಕ್ಕುಗಳನ್ನು ಗೌರವಿಸಬೇಕು ಎಂದು ಸೂಚಿಸಲಾಯಿತು. ಆಫ್ಘಾನಿಸ್ತಾನಕ್ಕೆ ಮಾನವೀಯ ನೆಲೆಯಲ್ಲಿ ನೆರವು ಒದಗಿಸುವ ಪ್ರಯತ್ನಗಳ ಪ್ರಾಮುಖ್ಯತೆಯನ್ನು ಪ್ರತಿಪಾದಿಸಲಾಯಿತು ಮತ್ತು ವಿಶ್ವಸಂಸ್ಥೆ ಹಾಗೂ ಅದರ ವಿಶೇಷ ಸಂಸ್ಥೆಗಳು ಹಾಗೂ ಅನುಷ್ಠಾನಗೊಳಿಸುತ್ತಿರುವ ಪಾಲುದಾರರು ಮತ್ತು ಎಲ್ಲಾ ಮಾನವೀಯ ನೆಲೆಯಲ್ಲಿ ಪರಿಹಾರ ನೀಡುತ್ತಿರುವವರಿಗೆ ಯಾವುದೇ ಅಡೆತಡೆ ಇಲ್ಲದೆ ಸಂಪೂರ್ಣ ಸುರಕ್ಷಿತ ಹಾಗೂ ನೇರ ಸಂಪರ್ಕಕ್ಕೆ ತಾಲಿಬಾನ್ ಅವಕಾಶ ನೀಡಬೇಕೆಂದು ಸೂಚಿಸಲಾಯಿತು. ಆಫ್ಘನ್ ಜನರಿಗೆ ಅಭಿವೃದ್ಧಿ ಮತ್ತು ಆರ್ಥಿಕ ಅವಕಾಶಗಳನ್ನು ಉತ್ತೇಜಿಸುವ ದೀರ್ಘಾವಧಿಯ ಬದ್ಧತೆಗೆ ಅನುಸಾರವಾಗಿ ಎಲ್ಲ ಆಫ್ಘನ್ ರಿಗೆ ಶಾಂತಿಯುತ ಮತ್ತು ಸಮಗ್ರ ಭವಿಷ್ಯವನ್ನು ಕಟ್ಟಿಕೊಡಲು ಜಂಟಿಯಾಗಿ ಪಾಲುದಾರರೊಂದಿಗೆ ನಿಕಟ ಸಮನ್ವಯದಿಂದ ಕಾರ್ಯನಿರ್ವಹಿಸುವುದನ್ನು ಮುಂದುವರಿಸಲು ಉಭಯ ನಾಯಕರು ದೃಢ ಸಂಕಲ್ಪ ಕೈಗೊಂಡರು. 

ಮ್ಯಾನ್ಮಾರ್ ನಲ್ಲಿ ಕ್ಷಿಪ್ರವಾಗಿ ಪ್ರಜಾಪ್ರಭುತ್ವ ಮರುಸ್ಥಾಪನೆಯಾಗಬೇಕು. ಎಲ್ಲ ಬಂಧಿತ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಬೇಕು. ಹಿಂಸಾಚಾರವನ್ನು ಕೊನೆಗಾಣಿಸಬೇಕು ಎಂದು ಕರೆ ನೀಡಿದರು. ಅಲ್ಲದೆ ಆಸಿಯಾನ್ ಐದಂಶಗಳ ಸಹಮತ ಕಾರ್ಯಕ್ರಮವನ್ನು ತುರ್ತಾಗಿ ಅನುಷ್ಠಾನಗೊಳಿಸಲು ಕರೆ ನೀಡಲಾಯಿತು. 
    ಮುಕ್ತ, ಸ್ವತಂತ್ರ ಮತ್ತು ಸಮಗ್ರ ಇಂಡೋ-ಪೆಸಿಫಿಕ್ ಪ್ರದೇಶಕ್ಕೆ ಸಂಬಂಧಿಸಿದಂತೆ ಭೌಗೋಳಿಕ ಸಮಗ್ರತೆ, ಸಾರ್ವಭೌಮತೆ ಮತ್ತು ಅಂತಾರಾಷ್ಟ್ರೀಯ ಕಾನೂನುಗಳು ಒಳಗೊಂಡಂತೆ ಪ್ರದೇಶ ನಿರ್ಮಾಣಕ್ಕೆ ಹಂಚಿಕೆಯ ದೂರದೃಷ್ಟಿ ಹಾಗೂ ಬಹು ಹಂತದ ಕಾರ್ಯಾಚರಣೆಗಳನ್ನು ಒಳಗೊಂಡಂತೆ ಕ್ವಾಡ್ ರಾಷ್ಟ್ರಗಳ ನಡುವೆ ಇನ್ನೂ ಹೆಚ್ಚಿನ ಸಹಕಾರ ಹೊಂದುವುದನ್ನು ಎಲ್ಲಾ ನಾಯಕರು ಸ್ವಾಗತಿಸಿದರು. ಅಧ್ಯಕ್ಷ ಬೈಡನ್ ಅವರು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ಆಗಸ್ಟ್ 2021ರಲ್ಲಿ ವಹಿಸಿಕೊಂಡಿರುವ ಭಾರತದ ಬಲಿಷ್ಠ ನಾಯಕತ್ವವನ್ನು ಶ್ಲಾಘಿಸಿದರು. ಈ ನಿಟ್ಟಿನಲ್ಲಿ ಅಧ್ಯಕ್ಷ ಬೈಡನ್ ಅವರು, ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸುಧಾರಣೆಯಲ್ಲಿ ಭಾರತಕ್ಕೆ ಕಾಯಂ ಸದಸ್ಯತ್ವ ನೀಡಬೇಕೆಂಬುದಕ್ಕೆ ಅಮೆರಿಕದ ಬೆಂಬಲವನ್ನು ಪುನರುಚ್ಛರಿಸಿದರು ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಸ್ಥಾನಕ್ಕಾಗಿ ಆಕಾಂಕ್ಷೆ ಹೊಂದಿರುವ ಬಹು ಹಂತದ ಸಹಕಾರ ಬಯಸುವ ಇತರೆ ರಾಷ್ಟ್ರಗಳನ್ನೂ ಸಹ ಪರಿಗಣಿಸಬೇಕು ಎಂದರು. ಅಣ್ವಸ್ತ್ರ ಪೂರೈಕೆದಾರರ ಗುಂಪು ಪ್ರವೇಶಿಸಲು ಭಾರತಕ್ಕೆ, ಅಮೆರಿಕ ಬೆಂಬಲ ನೀಡಲಿದೆ ಎಂದು ಅವರು ಪುನರುಚ್ಛರಿಸಿದರು. ಪ್ರಪಂಚದಾದ್ಯಂತ ಎದುರಾಗಿರುವ ಜಾಗತಿಕ ಅಭಿವೃದ್ಧಿ ಸವಾಲುಗಳನ್ನು ಎದುರಿಸಲು ವಿಶೇಷವಾಗಿ ಇಂಡೋ-ಪೆಸಿಫಿಕ್ ಮತ್ತು ಆಫ್ರಿಕಾದ ಸಮಸ್ಯೆಗಳನ್ನು ಎದುರಿಸಲು ಭಾರತ ಮತ್ತು ಅಮೆರಿಕ ಜಂಟಿಯಾಗಿ ಜಾಗತಿಕ ಅಭಿವೃದ್ಧಿಗೆ ತ್ರಿಕೋನ ಸಹಕಾರ ಮಾರ್ಗದರ್ಶಿ ತತ್ವಗಳನ್ನು ವಿಸ್ತರಿಸುವ ಹೇಳಿಕೆಯನ್ನು ಸ್ವಾಗತಿಸಲಾಯಿತು. ಅಲ್ಲದೆ ಆರೋಗ್ಯ, ಶಿಕ್ಷಣ ಮತ್ತು ಪರಿಸರ ವಿಷಯಗಳಲ್ಲಿ ಸಹಕಾರವನ್ನು ಮುಂದುವರಿಸಲು ಭಾರತ – ಅಮೆರಿಕ ಗಾಂಧಿ – ಕಿಂಗ್ ಅಭಿವೃದ್ಧಿ ಫೌಂಡೇಶನ್ ಆರಂಭಿಸಲು ಎದುರು ನೋಡುತ್ತಿರುವುದಾಗಿ ಅವರು ಹೇಳಿದರು. 
2021ರ ಅಂತ್ಯಕ್ಕೂ ಮುನ್ನ ಭಾರತ-ಅಮೆರಿಕ ವ್ಯಾಪಾರ ನೀತಿ ವೇದಿಕೆ ಸಮಯವನ್ನು ಮರು ನಿಯೋಜಿಸಲು ಎದುರು ನೋಡುತ್ತಿರುವುದಾಗಿ ಹೇಳಿದರು. ಇದರಿಂದ ವ್ಯಾಪಾರದ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ಭವಿಷ್ಯದ ವ್ಯಾಪಾರ ಸಂಬಂಧಗಳಲ್ಲಿ ಹಂಚಿಕೆಯ ದೂರದೃಷ್ಟಿ ಮಹತ್ವಾಕಾಂಕ್ಷೆಗಳನ್ನು ಗುರುತಿಸಲು ಹಾಗೂ ನಿರ್ದಿಷ್ಟ ವಲಯಗಳಲ್ಲಿ ಇನ್ನೂ ಹೆಚ್ಚಿನ ಪಾಲುದಾರಿಕೆಯನ್ನು ಹೊಂದಲು ಇದು ದ್ವಿಪಕ್ಷೀಯ ವ್ಯಾಪಾರ ಸಂಬಂಧಗಳ ಬಲವರ್ಧನೆಗೆ ಸಹಕಾರಿಯಾಗಲಿದೆ. 
2022ರ ಆರಂಭದಲ್ಲಿ ಭಾರತ-ಅಮೆರಿಕ ಸಿಇಒ ವೇದಿಕೆ ಮತ್ತು ವಾಣಿಜ್ಯ ಸಮಾಲೋಚನೆಗಳನ್ನು ನಡೆಸಲು, ಆ ಮೂಲಕ ಖಾಸಗಿ ವಲಯದ ಪ್ರತಿಭೆಗಳನ್ನು ಗುರುತಿಸಲು ಎದುರು ನೋಡುತ್ತಿರುವುದಾಗಿ ನಾಯಕರು ಹೇಳಿದರು. ನಾನಾ ಅಭಿವೃದ್ಧಿ ಯೋಜನೆಗಳಲ್ಲಿ ಹೂಡಿಕೆ ಒಪ್ಪಂದಗಳು ಕುರಿತು ನಡೆಯುತ್ತಿರುವ ಮಾತುಕತೆಗಳನ್ನು ಆದಷ್ಟು ಬೇಗ ಮುಕ್ತಾಯಗೊಳಿಸಲು ಉಭಯ ನಾಯಕರು ಒಪ್ಪಿದರು. ಹೇಗೆ ಅಮೆರಿಕ ಮತ್ತು ಭಾರತ, ಇಂಡೋ-ಪೆಸಿಫಿಕ್ ಮೂಲಕ ಆರ್ಥಿಕತೆಯನ್ನು ಉತ್ತೇಜಿಸಲು ಪಾರದರ್ಶಕ ಹಾಗೂ ಸುಸ್ಥಿರ ನಿಯಮಗಳ ಮಾರ್ಗವನ್ನು ಅನುಸರಿಸಲಿದೆ ಎಂಬ ಕುರಿತು ಚರ್ಚಿಸಲಾಯಿತು. ಮುಂಬರುವ ಇಂಡೋ-ಪೆಸಿಫಿಕ್ ವಾಣಿಜ್ಯ ವೇದಿಕೆ ಹಾಗೂ ನೈಸರ್ಗಿಕ ವಿಪತ್ತು ಸ್ಥಿತಿ ಸ್ಥಾಪಕತ್ವ ಮೂಲಸೌಕರ್ಯ ಮೈತ್ರಿ ಮೂಲಕ ಸಹಭಾಗಿತ್ವ ಹೆಚ್ಚಳವನ್ನು ಅವರು ಸ್ವಾಗತಿಸಿದರು. 
ರಾಷ್ಟ್ರಗಳು ತಮ್ಮ ಆರ್ಥಿಕ ಹಾಗೂ ತಾಂತ್ರಿಕ ಪಾಲುದಾರಿಕೆಯನ್ನು ವೃದ್ಧಿಸಿಕೊಳ್ಳಲು ಹೆಚ್ಚಿನ ಕೌಶಲ್ಯ ಹೊಂದಿದ ವೃತ್ತಿಪರರು, ವಿದ್ಯಾರ್ಥಿಗಳು, ಹೂಡಿಕೆದಾರರು ಮತ್ತು ವಾಣಿಜ್ಯ ಪ್ರಯಾಣಿಕರ ಸಂಚಾರಕ್ಕೆ ಅನುವು ಮಾಡಿಕೊಡುವ ಕುರಿತು ನಾಯಕರು ಚರ್ಚಿಸಿದರು. ಎರಡೂ ರಾಷ್ಟ್ರಗಳ ನಡುವೆ ಸ್ಥಿತಿ ಸ್ಥಾಪಕತ್ವ ಮತ್ತು ಸುರಕ್ಷಿತ ಪೂರೈಕೆ ಸರಣಿ ಹೊಂದುವ ಪ್ರಾಮುಖ್ಯತೆಯನ್ನು ನಾಯಕರು ಪ್ರಮುಖವಾಗಿ ಪ್ರಸ್ತಾಪಿಸಿದರು. ಫಾರ್ಮಸಿಟಿಕಲ್ಸ್, ಜೈವಿಕ ತಂತ್ರಜ್ಞಾನ, ಸೆಮಿ ಕಂಡಕ್ಟರ್ ಮತ್ತು ಮಾಹಿತಿ ತಂತ್ರಜ್ಞಾನ ಸೇರಿದಂತೆ ನಿರ್ಣಾಯಕ ವಲಯಗಳಲ್ಲಿ ಉಭಯ ದೇಶಗಳು ಬಲಿಷ್ಠ ಸಂಬಂಧ ನಿರ್ಮಾಣಕ್ಕೆ ಖಾಸಗಿ ವಲಯವನ್ನು ಸೇರ್ಪಡೆ ಮಾಡಿಕೊಳ್ಳವುದುನ್ನು ಸ್ವಾಗತಿಸಿದರು. ಆರ್ಥಿಕ ಪ್ರಗತಿ ಸಾಧನೆ ಮತ್ತು ಕಾರ್ಯತಂತ್ರ ಆದ್ಯತೆಗಳನ್ನು ಸಾಧಿಸಲು ಉದಯೋನ್ಮುಖ ಹಾಗೂ ನಿರ್ಣಾಯಕ ತಂತ್ರಜ್ಞಾನಗಳಿಗೆ ಪ್ರಾಮುಖ್ಯತೆ ನೀಡುವ ಅಗತ್ಯತೆಯನ್ನು ನಾಯಕರು ಗುರುತಿಸಿದರು. ಅವರು ಉನ್ನತ ತಂತ್ರಜ್ಞಾನ ಸಹಕಾರ ಗುಂಪು(ಎಚ್ ಟಿಸಿಜಿ)ಗೆ 2022ರ ಆರಂಭದಲ್ಲಿ ಪುನಶ್ಚೇತನ ನೀಡುವುದನ್ನು ಎದುರು ನೋಡಲಾಗುತ್ತಿದೆ. ಇದರ ಉದ್ದೇಶ ಪ್ರಮುಖ ವಲಯಗಳಲ್ಲಿ ಉನ್ನತ ತಂತ್ರಜ್ಞಾನಗಳ ಬಳಕೆಯನ್ನು ವೃದ್ಧಿಸುವುದಾಗಿದೆ. 

ಅಮೆರಿಕ ಮತ್ತು ಭಾರತ ಹಲವು ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನ ವಲಯಗಳಲ್ಲಿ ಅಂದರೆ ಬಾಹ್ಯಾಕಾಶ, ಸೈಬರ್, ಆರೋಗ್ಯ ಭದ್ರತೆ, ಸೆಮಿ ಕಂಡಕ್ಟರ್, ಕೃತಕ ಬುದ್ಧಿಮತ್ತೆ, 5ಜಿ, 6ಜಿ ಮತ್ತು ಭವಿಷ್ಯ ಪೀಳಿಗೆಯ ದೂರಸಂಪರ್ಕ ತಂತ್ರಜ್ಞಾನಗಳು ಹಾಗೂ ಬ್ಲಾಕ್ ಚೈನ್ ಇವುಗಳಲ್ಲಿ ಪಾಲುದಾರಿಕೆ ವಿಸ್ತರಣೆಗೆ ನಾಯಕರು ನಿರ್ಧರಿಸಿದರು. ಇದರಿಂದ ಮುಂದಿನ ಶತಮಾನದಲ್ಲಿ ಆರ್ಥಿಕ ಹಾಗೂ ಭದ್ರತಾ ಆಯಾಮ ಹಾಗೂ ಆವಿಷ್ಕಾರ ಪ್ರಕ್ರಿಯೆಗಳು ಮರುವ್ಯಾಖ್ಯಾನ ಗೊಳ್ಳಲಿವೆ. ನಿರ್ಣಾಯಕ ಸ್ಥಿತಿ ಸ್ಥಾಪಕತ್ವ ಮೂಲಸೌಕರ್ಯ ಉತ್ತೇಜನ ಸೇರಿದಂತೆ ಸೈಬರ್ ಸ್ಪೇಸ್ ನ ಅಪಾಯಗಳು ಮತ್ತು ಸೂಕ್ಷ್ಮತೆಗಳನ್ನು ಎದುರಿಸಲು ಮೂಲ ಅಗತ್ಯತೆಗಳನ್ನು ಉಭಯ ನಾಯಕರು ಗುರುತಿಸಿದರು ಮತ್ತು ಸೈಬರ್ ಆಧಾರಿತ ಅಪರಾಧಗಳು, ಗಡಿಗಳಲ್ಲಿ ಸೈಬರ್ ಅಪರಾಧಿಗಳ ನಿಗ್ರಹ ಪ್ರಯತ್ನಗಳ ಕಾರ್ಯಾಚರಣೆ ಸೇರಿದಂತೆ ಒಟ್ಟಾರೆ ನಿಗ್ರಹ ಚಟುವಟಿಕೆಗಳಿಗೆ ಸರ್ಕಾರಗಳೊಂದಿಗೆ ಪಾಲುದಾರಿಕೆ ಹೆಚ್ಚಳವನ್ನು ಸ್ವಾಗತಿಸಿದರು. ಸಂವಾದಗಳು, ಜಂಟಿ ಸಭೆಗಳು, ತರಬೇತಿ ಮತ್ತು ಉತ್ತಮ ಪದ್ಧತಿಗಳ ಕುರಿತ ಮಾಹಿತಿ ವಿನಿಮಯ ಸೇರಿದಂತೆ ಸೈಬರ್ ಭದ್ರತೆಗಳಿಗೆ ಆದ್ಯತೆ ನೀಡುವುದು ಹಾಗೂ ಸ್ಪಂದಿಸುವುದಕ್ಕೆ ಪರಸ್ಪರ ತಾಂತ್ರಿಕ ನೆರವು ನೀಡುವುದು ಹಾಗೂ ಸುಸ್ಥಿರ ಸಾಮರ್ಥ್ಯವೃದ್ಧಿ ಪ್ರಾಮುಖ್ಯತೆಯ ಅಗತ್ಯತೆಗಳನ್ನು ನಾಯಕರು ಪುನರುಚ್ಛರಿಸಿದರು. ಈ ವರ್ಷಾಂತ್ಯದ ವೇಳೆಗೆ ಹೊರ ಬಾಹ್ಯಾಕಾಶ ಚಟುವಟಿಕೆಗಳಲ್ಲಿ ದೀರ್ಘಕಾಲದ ಸುಸ್ಥಿರತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ದತ್ತಾಂಶ ಹಾಗೂ ಸೇವೆಗಳ ವಿನಿಮಯಕ್ಕೆ  ಬಾಹ್ಯಾಕಾಶ ಸಾಂದರ್ಭಿಕ ಜಾಗೃತಿ ಒಡಂಬಡಿಕೆಯನ್ನು ಅಂತಿಮಗೊಳಿಸುವುದನ್ನು ಎದುರು ನೋಡುತ್ತಿದ್ದೇವೆ ಎಂದು ಹೇಳಿದರು.  
ಜಾಗತಿಕ ಪಾಲುದಾರರಾಗಿ ಭಾರತ ಮತ್ತು ಅಮೆರಿಕ ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗು ಜನರ – ಜನರ ನಡುವಿನ ಸಂಪರ್ಕ ಸಹಭಾಗಿತ್ವ ಬಲವರ್ಧನೆಗೆ ನಿಶ್ಚಯಿಸಿದವು. ಈ ವರ್ಷಾಂತ್ಯದಲ್ಲಿ ಭಾರತ ಮತ್ತು ಅಮೆರಿಕ ನಡುವೆ ವಿದೇಶಾಂಗ ಹಾಗೂ ರಕ್ಷಣಾ ಸಚಿವರನ್ನು ಒಳಗೊಂಡ 2+2 ಸಚಿವರ ಸಂವಾದದ ಮೂಲಕ ನಿಕಟ ಸಮಾಲೋಚನೆ ನಡೆಸುವುದನ್ನು ನಾಯಕರು ಸ್ವಾಗತಿಸಿದರು. 

ಉಭಯ ದೇಶಗಳ ಜನರ ನಡುವಿನ ಆಳವಾದ ಹಾಗೂ ಸಕ್ರಿಯ ಸಂಬಂಧಗಳಿದ್ದು, ಇದರಿಂದಾಗಿ ಭಾರತ ಮತ್ತು ಅಮೆರಿಕ ನಡುವೆ ವಿಶೇಷ ಬಾಂಧವ್ಯ ವೃದ್ಧಿಯಾಗಿದೆ ಹಾಗೂ ಆ ಸುಸ್ಥಿರ ಪಾಲುದಾರಿಕೆ ಸುಮಾರು 75 ವರ್ಷಗಳಿಂದ ಸಾಗುತ್ತಿದೆ ಎಂದು ನಾಯಕರು ಹೇಳಿದರು. ಎಲ್ಲಾ ಪ್ರಜೆಗಳಿಗೆ ಸಮಾನ ಅವಕಾಶಗಳನ್ನು ನೀಡುವುದು ಬಹುತ್ವ ಮತ್ತು ಸಾರ್ವತ್ರಿಕ ಮಾನವ ಹಕ್ಕುಗಳು, ಸಹಿಷ್ಣುತೆ, ಪ್ರಜಾಪ್ರಭುತ್ವ, ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ತಮ್ಮ ಹಂಚಿಕೆಯ ಮೌಲ್ಯಗಳನ್ನು ಪೋಷಿಸಲು ಹಾಗೂ ಉತ್ತೇಜಿಸಲು ಎರಡೂ ದೇಶಗಳು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದವು ಮತ್ತು ಜಾಗತಿಕ ಶಾಂತಿ ಮತ್ತು ಭದ್ರತೆ ಹಾಗೂ ಅಭಿವೃದ್ಧಿ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮುಂದುವರಿಸುವ ಪ್ರಯತ್ನ ತೋರಿದವು.  
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಅಮೆರಿಕ ಭಾರತಕ್ಕೆ ತನ್ನ ಪುರಾತನ ವಸ್ತುಗಳನ್ನು ಮರಳಿಸಿರುವುದಕ್ಕೆ ತೀವ್ರ ಮೆಚ್ಚುಗೆ ವ್ಯಕ್ತಪಡಿಸಿದರು. ಸಾಂಸ್ಕೃತಿಕ ಹಿನ್ನೆಲೆಯಿರುವ ವಸ್ತುಗಳ ಅಕ್ರಮ ಮಾರಾಟ, ಕಳವು ಮತ್ತು ವ್ಯಾಪಾರ ನಿಯಂತ್ರಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಬಲವರ್ಧನೆಗೊಳಿಸಲು ನಾಯಕರು ಬದ್ಧತೆ ತೋರಿದರು.  
ಹಂಚಿಕೆಯ ಮೌಲ್ಯಗಳು ಮತ್ತು ತತ್ವಗಳನ್ನು ಪ್ರತಿಬಿಂಬಿಸಲು ಹಾಗೂ ಹೆಚ್ಚುತ್ತಿರುವ ಕಾರ್ಯತಂತ್ರ ಸಮನ್ವಯತೆಯನ್ನು ಸಾಧಿಸಲು ಅಧ್ಯಕ್ಷ ಬೈಡನ್ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತ – ಅಮೆರಿಕ ಸಮಗ್ರ ಜಾಗತಿಕ ಕಾರ್ಯತಂತ್ರ ಪಾಲುದಾರಿಕೆಯನ್ನು ಮುಂದುವರಿಸಲು ನಿಶ್ಚಯಿಸಿದರು ಮತ್ತು ಒಟ್ಟಾಗಿ ಭಾರತ ಮತ್ತು ಅಮೆರಿಕ ಸಾಧಿಸಲಿರುವ ಪ್ರಗತಿಯನ್ನು ಎದುರು ನೋಡುತ್ತಿರುವುದಾಗಿ ಹೇಳಿದರು. 

 

 

 

ನಿಮ್ಮ ಸಲಹೆ ಸೂಚನೆಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೊಂದಿಗೆ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಹಂಚಿಕೊಳ್ಳಿ.
20 ವರ್ಷಗಳ ಸೇವಾ ಮತ್ತು ಸಮರ್ಪಣದ 20 ಚಿತ್ರಗಳು
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
Powering the energy sector

Media Coverage

Powering the energy sector
...

Nm on the go

Always be the first to hear from the PM. Get the App Now!
...
Social Media Corner 18th October 2021
October 18, 2021
ಶೇರ್
 
Comments

India congratulates and celebrates as Uttarakhand vaccinates 100% eligible population with 1st dose.

Citizens appreciate various initiatives of the Modi Govt..