ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ವೀಡನ್‌ನ ಗೋಥೆನ್‌ಬರ್ಗ್‌ನಲ್ಲಿ ಅಲ್ಲಿನ ಪ್ರಧಾನಮಂತ್ರಿ ಶ್ರೀ ಉಲ್ಫ್ ಕ್ರಿಸ್ಟರ್ಸನ್ ಅವರೊಂದಿಗೆ ದ್ವಿಪಕ್ಷೀಯ ಸಮಾಲೋಚನೆ ನಡೆಸಿದರು. ಸ್ವೀಡನ್‌ನ ರಾಜಕುಮಾರಿ(ಯುವರಾಣಿ) ವಿಕ್ಟೋರಿಯಾ ಕೂಡ ಸಭೆಯಲ್ಲಿ ಭಾಗವಹಿಸಿ, ದೊರೆ ಕಾರ್ಲ್ XVI ಗುಸ್ತಾಫ್ ಮತ್ತು ರಾಜಪತ್ನಿ (ರಾಣಿ) ಸಿಲ್ವಿಯಾ ಅವರ ಆತ್ಮೀಯ ಶುಭಾಶಯಗಳನ್ನು ತಿಳಿಸಿದರು. ಪ್ರಧಾನಮಂತ್ರಿ ಶ್ರೀ ಮೋದಿ ಅವರು ದೊರೆಯ 80ನೇ ಹುಟ್ಟುಹಬ್ಬದ ಆತ್ಮೀಯ ಶುಭಾಶಯಗಳನ್ನು ಕೋರಿದರು.

ಭಾರತ-ಸ್ವೀಡನ್ ಸಂಬಂಧಗಳ ವಿಶಾಲ ವ್ಯಾಪ್ತಿಯನ್ನು (ಸಂಪೂರ್ಣ ವರ್ಣಪಟಲ) ನಾಯಕರು ಪರಿಶೀಲಿಸಿದರು. ವ್ಯಾಪಾರ ಮತ್ತು ಹೂಡಿಕೆ, ನಾವೀನ್ಯತೆ, ಹಸಿರು ಪರಿವರ್ತನೆ, ಉದಯೋನ್ಮುಖ ತಂತ್ರಜ್ಞಾನಗಳು, ರಕ್ಷಣೆ ಮತ್ತು ಭದ್ರತೆ, ಡಿಜಿಟಲೀಕರಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು, ಬಾಹ್ಯಾಕಾಶ, ಸಂಶೋಧನೆ, ಶಿಕ್ಷಣ, ಸಂಸ್ಕೃತಿ ಮತ್ತು ಜನರಿಂದ ಜನರಿಗೆ ವಿನಿಮಯ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧ ಹೆಚ್ಚುತ್ತಿರುವುದನ್ನು ಒಪ್ಪಿಕೊಂಡರು. ಹಂಚಿಕೆಯ ಪ್ರಜಾಪ್ರಭುತ್ವ ಮೌಲ್ಯಗಳನ್ನು ಆಧರಿಸಿದ ಮತ್ತು ನಾವೀನ್ಯತೆ, ಸುಸ್ಥಿರತೆ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಸಂಪರ್ಕಗಳಿಂದ ಬೆಂಬಲಿತವಾದ ಸಂಬಂಧಗಳನ್ನು ಬಲಪಡಿಸುವ ಹಂಚಿಕೆಯ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. ವಿಸ್ತರಿಸುತ್ತಿರುವ ಪಾಲುದಾರಿಕೆಗೆ ಮಾರ್ಗದರ್ಶನ ನೀಡಲು ನಿಯಮಿತ ಉನ್ನತ ಮಟ್ಟದ ರಾಜಕೀಯ ತೊಡಗಿಸಿಕೊಳ್ಳುವಿಕೆ ಮತ್ತು ಸಾಂಸ್ಥಿಕ ಸಂವಾದಗಳನ್ನು ನಿರ್ವಹಿಸುವ ಮಹತ್ವವನ್ನು ಅವರು ಒತ್ತಿ ಹೇಳಿದರು.

ಭಾರತ-ಸ್ವೀಡನ್ ಸಂಬಂಧವನ್ನು ಕಾರ್ಯತಂತ್ರ ಪಾಲುದಾರಿಕೆಯ ಮಟ್ಟಕ್ಕೆ ಏರಿಸಲು ಇಬ್ಬರೂ ನಾಯಕರು ಒಪ್ಪಿಕೊಂಡರು. ಕಾರ್ಯತಂತ್ರ ಪಾಲುದಾರಿಕೆಯನ್ನು ನಾಲ್ಕು ಆಧಾರಸ್ತಂಭಗಳಿಂದ ನಿರ್ದೇಶಿಸಲಾಗುತ್ತದೆ. ಸ್ಥಿರತೆ ಮತ್ತು ಭದ್ರತೆಗಾಗಿ ಕಾರ್ಯತಂತ್ರ ಸಂವಾದ, ಮುಂದಿನ ಪೀಳಿಗೆಯ ಆರ್ಥಿಕ ಪಾಲುದಾರಿಕೆ,  ಉದಯೋನ್ಮುಖ ತಂತ್ರಜ್ಞಾನಗಳು ಮತ್ತು ವಿಶ್ವಾಸಾರ್ಹ ಸಂಪರ್ಕ ಮತ್ತು ಒಟ್ಟಿಗೆ ಸೇರಿ ಭವಿಷ್ಯ ರೂಪಿಸುವುದು - ಜನರು, ಗ್ರಹ (ಸುಂದರ ಪೃಥ್ವಿ), ಆರೋಗ್ಯ ಮತ್ತು ಚೇತರಿಕೆ. ಕಾರ್ಯತಂತ್ರ ಪಾಲುದಾರಿಕೆ ಕಾರ್ಯಗತಗೊಳಿಸಲು ಇಬ್ಬರು ನಾಯಕರು ಭಾರತ-ಸ್ವೀಡನ್ ಜಂಟಿ ಕ್ರಿಯಾಯೋಜನೆ 2026-2030 ಅಳವಡಿಸಿಕೊಂಡರು. ಇದು ರಾಜಕೀಯ, ಆರ್ಥಿಕ, ತಾಂತ್ರಿಕ, ಭದ್ರತೆ, ಹವಾಮಾನ ಮತ್ತು ಜನರಿಂದ ಜನರಿಗೆ ನಡುವಿನ ಸಂಪರ್ಕಕ್ಕಾಗಿ ಸಮಗ್ರ ಮಾರ್ಗಸೂಚಿಯನ್ನು ಒದಗಿಸುತ್ತದೆ.

ಇತ್ತೀಚೆಗೆ ಮುಕ್ತಾಯವಾದ ಭಾರತ-ಯುರೋಪ್ ಒಕ್ಕೂಟದ ಮುಕ್ತ ವ್ಯಾಪಾರ ಒಪ್ಪಂದವು ಆರ್ಥಿಕ ಮತ್ತು ವಾಣಿಜ್ಯ ಸಂಬಂಧಗಳಲ್ಲಿ ಹೊಸ ಅಧ್ಯಾಯ ತೆರೆದಿದೆ ಎಂದು ಇಬ್ಬರೂ ನಾಯಕರು ಒತ್ತಿ ಹೇಳಿದರು. ವ್ಯಾಪಾರ, ಹೂಡಿಕೆ ಮತ್ತು ತಂತ್ರಜ್ಞಾನ ಸಂಪರ್ಕಗಳನ್ನು ಆಳಗೊಳಿಸಲು ಅನುಕೂಲವಾಗುವಂತೆ ಅದರ ಆರಂಭಿಕ ಅನುಷ್ಠಾನಕ್ಕಾಗಿ ಪ್ರಯತ್ನಗಳನ್ನು ಮುಂದುವರಿಸಲು ಒಪ್ಪಿಕೊಂಡರು.

ನಾವೀನ್ಯತೆ, ಶುದ್ಧ ತಂತ್ರಜ್ಞಾನಗಳು, ಮುಂದುವರಿದ ಉತ್ಪಾದನೆ, ಸುಸ್ಥಿರ ಚಲನಶೀಲತೆ ಮತ್ತು ಡಿಜಿಟಲ್ ಪರಿವರ್ತನೆ ಸೇರಿದಂತೆ ಕಾರ್ಯತಂತ್ರ ಕ್ಷೇತ್ರಗಳಲ್ಲಿ ಭಾರತದೊಂದಿಗೆ ಸ್ವೀಡನ್‌ನ ನಿರಂತರ ಸಂಬಂಧವನ್ನು ಪ್ರಧಾನಮಂತ್ರಿ ಮೋದಿ ಶ್ಲಾಘಿಸಿದರು. ಡಿಜಿಟಲ್ ಪರಿವರ್ತನೆ ಮತ್ತು ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಭಾರತ ಮಾಡುತ್ತಿರುವ ಪ್ರಗತಿಯನ್ನು ಪ್ರಧಾನಮಂತ್ರಿ ಕ್ರಿಸ್ಟರ್ಸನ್ ಶ್ಲಾಘಿಸಿದರು. ಸ್ವೀಡನ್‌ನ ಆರ್ಥಿಕತೆ ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆಗೆ ಭಾರತೀಯ ಸಮುದಾಯದ ಸಕಾರಾತ್ಮಕ ಕೊಡುಗೆಯನ್ನು ಅವರು ಗಮನಿಸಿದರು. ಭಾರತದ ಬೆಳವಣಿಗೆಯ ಯಶೋಗಾಥೆಯಲ್ಲಿ ಸ್ವೀಡನ್ ಜನರು ಭಾಗವಹಿಸುವಂತೆ ಪ್ರಧಾನಿ ಮೋದಿ ಆಹ್ವಾನಿಸಿದರು.

ನಾಯಕರು ಪರಸ್ಪರ ಆಸಕ್ತಿಯ ಪ್ರಮುಖ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆಯೂ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ವಿಶ್ವಸಂಸ್ಥೆ ಮತ್ತು ಇತರೆ ಬಹುಪಕ್ಷೀಯ ಸಂಸ್ಥೆಗಳ ಸುಧಾರಣೆಯ ತುರ್ತು ಸ್ಥಿತಿಯನ್ನು ಅವರು ಪ್ರಸ್ತಾಪಿಸಿದರು. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಸ್ವೀಡನ್‌ನ ಬಲಿಷ್ಠ ಬೆಂಬಲಕ್ಕಾಗಿ ಪ್ರಧಾನಿ ಮೋದಿ ಧನ್ಯವಾದಗಳನ್ನು ಅರ್ಪಿಸಿದರು. ಶಾಂತಿ, ಸ್ಥಿರತೆ, ಚೇತರಿಕೆಯ ಪೂರೈಕೆ ಸರಪಳಿಗಳು ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆ ಉತ್ತೇಜಿಸುವ ತಮ್ಮ ಬದ್ಧತೆಯನ್ನು ಇಬ್ಬರು ನಾಯಕರು ಮತ್ತಷ್ಟು ದೃಢಪಡಿಸಿದರು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Nagaland gets its first natural gas supply via National Gas Grid

Media Coverage

Nagaland gets its first natural gas supply via National Gas Grid
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 19 ಆಗಸ್ಟ್ 2026
August 19, 2026

Defence to Diamonds: How PM Modi’s Vision Turned India into a Global Capability Hub