ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬೌದ್ಧ ಗುರು ದಲೈಲಾಮಾ ಅವರ 88 ನೇ ಜನ್ಮದಿನವಾದ ಇಂದು ಮುಂಜಾನೆ ದೂರವಾಣಿ ಮೂಲಕ ಶುಭಾಶಯ ಕೋರಿದ್ದಾರೆ.
ಇದನ್ನು ಟ್ವೀಟ್ ಮೂಲಕ ತಿಳಿಸಿರುವ ಪ್ರಧಾನ ಮಂತ್ರಿಗಳು;
"ಬೌದ್ಧ ಧರ್ಮದ ಧಾರ್ಮಿಕ ಗುರು ದಲೈ ಲಾಮಾ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಅವರ 88ನೇ ಹುಟ್ಟುಹಬ್ಬದಂದು ಅವರಿಗೆ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದೆನು. ಅವರ ದೀರ್ಘ ಆರೋಗ್ಯಕರ ಜೀವನಕ್ಕೆ ಹಾರೈಸಿದೆ'' ಎಂದು ಬರೆದುಕೊಂಡಿದ್ದಾರೆ.
Spoke to His Holiness @DalaiLama and conveyed heartfelt greetings to him on his 88th birthday. Wishing him a long and healthy life.
— Narendra Modi (@narendramodi) July 6, 2023


