ಭೂತಾನಿನ ನಾಲ್ಕನೇ ರಾಜರ 70ನೇ ಜನ್ಮದಿನದ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಭಾರತದೊಂದಿಗೆ ಒಗ್ಗಟ್ಟಿನ ಭಾವನೆಯನ್ನು ವ್ಯಕ್ತಪಡಿಸಿದ ಭೂತಾನ್ ಜನರಿಗೆ ಪ್ರಧಾನಮಂತ್ರ ಶ್ರೀ ನರೇಂದ್ರ ಮೋದಿ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು. ದೆಹಲಿಯಲ್ಲಿ ನಡೆದ ದುರಂತ ಘಟನೆಯ ನಂತರ, ಭೂತಾನ್ ನ ಜನರು ಸಂತ್ರಸ್ತರು ಮತ್ತು ಅವರ ಕುಟುಂಬಗಳಿಗಾಗಿ ವಿಶಿಷ್ಟ ಪ್ರಾರ್ಥನೆ ಸಲ್ಲಿಸಿದರು. "ಜನರ ಪ್ರೀತಿ, ಸಹಾನುಭೂತಿಯನ್ನು ಎಂದಿಗೂ ಮರೆಯುವುದಿಲ್ಲ" ಎಂದು ಹೇಳುವ ಮೂಲಕ ಪ್ರಧಾನಮಂತ್ರಿ ಏಕತೆಯ ಕಾರ್ಯವನ್ನು ಶ್ಲಾಘಿಸಿದರು.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರಧಾನಮಂತ್ರಿ ಅವರು ಹೀಗೆ ಸಂದೇಶ ನೀಡಿದ್ದಾರೆ:
"ಭೂತಾನ್ ನ ನಾಲ್ಕನೇ ರಾಜರ 70ನೇ ಜನ್ಮದಿನ ಸಂದರ್ಭದಲ್ಲಿ ದೆಹಲಿ ಸ್ಫೋಟದ ಕುರಿತು ಭೂತಾನಿನ ಜನರು ವಿಶಿಷ್ಟ ಪ್ರಾರ್ಥನೆಯ ಮೂಲಕ ಭಾರತದ ಜನರೊಂದಿಗೆ ಒಗ್ಗಟ್ಟು ತೋರಿದ್ದಾರೆ. ಇದನ್ನು ನಾನು ಎಂದಿಗೂ ಮರೆಯುವುದಿಲ್ಲ."
At the programme to mark the 70th birthday of His Majesty the Fourth King, the people of Bhutan expressed solidarity with the people of India in the wake of the blast in Delhi through a unique prayer. I will never forget this gesture. pic.twitter.com/r4cPDRKZiF
— Narendra Modi (@narendramodi) November 11, 2025


