ಹ್ಯಾಂಗ್‌ಝೌ ಏಷ್ಯನ್ ಪ್ಯಾರಾ ಗೇಮ್ಸ್ ಜಾವೆಲಿನ್ ಥ್ರೋ F46 ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಕ್ಕಾಗಿ ರಿಂಕು ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ಸಾಮಾಜಿಕ ಜಾಲತಾಣ X ನಲ್ಲಿ ಪ್ರಧಾನ ಮಂತ್ರಿ ಸಂದೇಶ ನೀಡಿದ್ದಾರೆ.
"ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಜಾವೆಲಿನ್ ಥ್ರೋ F46 ಈವೆಂಟ್‌ನಲ್ಲಿ ರಿಂಕು ಅವರಿಂದ ಅದ್ಭುತವಾದ ಪ್ರದರ್ಶನದಿಂದ ಬೆಳ್ಳಿ ಪದಕ ಬಂದಿದೆ. ಅವರಿಗೆ ಅಭಿನಂದನೆಗಳು. ಅವರ ಭವಿಷ್ಯದ ಪ್ರಯತ್ನಗಳಿಗೆ ಅವರಿಗೆ ಶುಭ ಹಾರೈಸುತ್ತೇನೆ" ಎಂದು ಪ್ರಧಾನಮಂತ್ರಿ ಸಂದೇಶ ನೀಡಿದ್ದಾರೆ.
A fantastic Silver Medal by Rinku in the Javelin Throw F46 event at the Asian Para Games. Congratulations to him. Wishing him the very best for the endeavours ahead. pic.twitter.com/zSInBpPAn0
— Narendra Modi (@narendramodi) October 25, 2023


