ಬರ್ಮಿಂಗ್ಹ್ಯಾಮ್ ಸಿಡಬ್ಲ್ಯೂಜಿ 2022 ರಲ್ಲಿ ಮಹಿಳೆಯರ 60 ಕೆಜಿ ಬಾಕ್ಸಿಂಗ್ ನಲ್ಲಿ ಕಂಚಿನ ಪದಕ ಗೆದ್ದ ಜೈಸ್ಮಿನ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅಭಿನಂದಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಅವರು:
"ಸಿಡಬ್ಲ್ಯುಜಿಯಲ್ಲಿ ವಿವಿಧ ಕ್ರೀಡೆಗಳಲ್ಲಿ ಭಾರತೀಯ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡುತ್ತಿದ್ದಾರೆ. ಬಾಕ್ಸಿಂಗ್ ನಲ್ಲಿ ಜೈಸ್ಮಿನ್ ಲಂಬೋರಿಯಾ ಕಂಚಿನ ಪದಕ ಗೆದ್ದಿರುವುದು ಸಂತಸ ತಂದಿದೆ. ಅವರ ಕ್ರೀಡಾ ಯಶಸ್ಸು ಭಾರತೀಯ ಬಾಕ್ಸಿಂಗ್ ನ ಭವಿಷ್ಯಕ್ಕೆ ಶುಭಸೂಚಕವಾಗಿದೆ. ಮುಂಬರುವ ವರ್ಷಗಳಲ್ಲಿ ಅವರು ವೈಭವದ ಪಥದಲ್ಲಿ ಸಾಗುತ್ತಲೇ ಇರಲಿ. #Cheer4India" ಎಂದು ಹಾರೈಸಿದ್ದಾರೆ.
Indian athletes at the CWG are excelling in different sports. Glad that Jaismine Lamboria has won a Bronze medal in Boxing. Her sporting success augurs well for the future of Indian boxing. May she keep attaining glory in the coming years. #Cheer4India pic.twitter.com/FLVCuUe0Xg
— Narendra Modi (@narendramodi) August 6, 2022


