ದುರಂತದ ಸ್ಥಳಕ್ಕೆ ಪ್ರಧಾನಮಂತ್ರಿ ಭೇಟಿ, ಘಟನೆ ನಂತರ ಅವಿರತವಾಗಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ತಂಡಗಳ ಭೇಟಿ

ಅಹಮದಾಬಾದ್‌ನಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಅನೇಕರು ಮೃತಪಟ್ಟಿದ್ದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಗಳ ನೋವು ಮತ್ತು ನಷ್ಟದ ಅರಿವಿದೆ ಎಂದು ಅವರು ಸಂತಾಪ ಸೂಚಿಸಿದ್ದಾರೆ.

 

ಇದಕ್ಕೂ ಮುನ್ನ ಶ್ರೀ ಮೋದಿ ಅವರು ಅಹಮದಾಬಾದ್‌ನಲ್ಲಿ ಅವಘಡದ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ನೇರವಾಗಿ ಪರಾಮರ್ಶಿಸಿದರು. ದುರಂತದ ನಂತರ ಅವಿಶ್ರಾಂತವಾಗಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ತುರ್ತು ಪ್ರತಿಕ್ರಿಯಾ ತಂಡಗಳನ್ನು ಅವರು ಭೇಟಿ ಮಾಡಿದರು.

 

ಎಕ್ಸ್ ನಲ್ಲಿ ಪ್ರತ್ಯೇಕ ಪೋಸ್ಟ್ ಗಳಲ್ಲಿ ಶ್ರೀ ಮೋದಿ ಅವರು ಹೀಗೆ ಹೇಳಿದ್ದಾರೆ:

"ಅಹಮದಾಬಾದ್‌ನಲ್ಲಿ ಸಂಭವಿಸಿದ ವೈಮಾನಿಕ ದುರಂತವು, ನಮ್ಮೆಲ್ಲರಿಗೂ ತೀವ್ರ ಆಘಾತಕಾರಿಯಾಗಿದೆ. ಈ ಹಠಾತ್ ಮತ್ತು ಹೃದಯವಿದ್ರಾವಕ ಘಟನೆಯಲ್ಲಿ ಅನೇಕರು ಪ್ರಾಣ ಕಳೆದುಕೊಂಡಿದ್ದು, ಪದಗಳಿಗೆ ನಿಲುಕದ್ದಾಗಿದೆ. ಎಲ್ಲಾ ದುಃಖಿತ ಕುಟುಂಬಗಳಿಗೆ ಸಂತಾಪಗಳು. ಅವರ ನೋವು ಮತ್ತು ಮುಂದಿನ ಅನೇಕ ವರ್ಷಗಳವರೆಗೆ ಅವರ ಸಾವಿನ ಶೂನ್ಯ ನಮಗೆ ತಿಳಿದಿದೆ. ಓಂ ಶಾಂತಿ."

"ಅಹಮದಾಬಾದ್‌ನಲ್ಲಿ ಅಪಘಾತ ಸ್ಥಳಕ್ಕೆ ಇಂದು ಭೇಟಿ ನೀಡಿದ್ದೆ. ವಿನಾಶದ ದೃಶ್ಯ ಅತೀವ ದುಃಖಕರ. ಘಟನೆ ನಂತರ ಅವಿಶ್ರಾಂತವಾಗಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ತಂಡಗಳನ್ನು ಭೇಟಿ ಮಾಡಿದೆ. ಈ ಊಹಿಸಲಾಗದ ಘೋರ ದುರಂತದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪಗಳು."

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Why Amazon, Microsoft, Google are pouring $57 billion to build AI infrastructure in India

Media Coverage

Why Amazon, Microsoft, Google are pouring $57 billion to build AI infrastructure in India
NM on the go

Nm on the go

Always be the first to hear from the PM. Get the App Now!
...
Prime Minister shares Sanskrit Subhashitam emphasising on unity and mutual harmony
June 26, 2026

The Prime Minister, Shri Narendra Modi today shared Sanskrit Subhashitam emphasising that one should always work together with unity and mutual harmony.

The Prime Minister shared a Sanskrit verse-

“सङ्गच्छध्वं संवदध्वं
सं वो मनांसि जानताम्।

देवा भागं यथा पूर्वे
सञ्जानाना उपासते॥

Shri Modi posted on X:

सङ्गच्छध्वं संवदध्वं
सं वो मनांसि जानताम्।

देवा भागं यथा पूर्वे
सञ्जानाना उपासते॥