ಪ್ರಧಾನಮಂತ್ರಿ ಅವರು ಖ್ಯಾತ ಛಾಯಾಗ್ರಾಹಕ ರಘು ರೈ ಅವರ ನಿಧನಕ್ಕೆ ತೀವ್ರ ಶೋಕ ವ್ಯಕ್ತಪಡಿಸಿದ್ದು, ಅವರನ್ನು ತಮ್ಮ ಲೆನ್ಸ್( ಮಸೂರ)ದ ಮೂಲಕ ಭಾರತದ ಚೈತನ್ಯವನ್ನು ಅಮರಗೊಳಿಸಿದ ಸೃಜನಶೀಲ ದಿಗ್ಗಜ ಎಂದು ಬಣ್ಣಿಸಿದ್ದಾರೆ. ಶ್ರೀ ರಘು ರೈ ಅವರ ಕೆಲಸವು ಅಸಾಧಾರಣ ಸಂವೇದನೆ, ಆಳ ಮತ್ತು ವೈವಿಧ್ಯತೆಯಿಂದ ಗುರುತಿಸಲ್ಪಟ್ಟಿದೆ. ಭಾರತದಾದ್ಯಂತ ಜೀವನದ ಹಲವು ಅಂಶಗಳನ್ನು ಸೆರೆಹಿಡಿದು ಜನರಿಗೆ ಹತ್ತಿರವಾಗಿದ್ದರು ಎಂದು ಶ್ರೀ ನರೇಂದ್ರ ಮೋದಿ ಉಲ್ಲೇಖಿಸಿದರು. ಛಾಯಾಗ್ರಹಣ ಮತ್ತು ಸಾಂಸ್ಕೃತಿಕ ಜಗತ್ತಿಗೆ ಅವರ ಕೊಡುಗೆ ಅಪ್ರತಿಮ ಮತ್ತು ಅವರ ನಿಧನದಿಂದ ಕಲಾ ಸಮುದಾಯಕ್ಕೆ ತುಂಬಲಾಗದ ನಷ್ಟವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಪ್ರಧಾನಮಂತ್ರಿ ಅವರು ತಮ್ಮ X ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ:

"ಶ್ರೀ ರಘು ರೈ ಅವರನ್ನು ಒಬ್ಬ ಸೃಜನಶೀಲ ದಿಗ್ಗಜ ಎಂದು ಸ್ಮರಿಸಲಾಗುತ್ತದೆ, ಅವರು ಭಾರತದ ಚೈತನ್ಯವನ್ನು ತಮ್ಮ ಲೆನ್ಸ್ ಮೂಲಕ ಸೆರೆಹಿಡಿದರು. ಅವರ ಛಾಯಾಗ್ರಹಣ ಅಸಾಧಾರಣ ಸಂವೇದನೆ, ಆಳ ಮತ್ತು ವೈವಿಧ್ಯತೆಯನ್ನು ಹೊಂದಿತ್ತು. ಇದು ಜನರನ್ನು ಭಾರತದ ಜೀವನದ ವಿವಿಧ ಆಯಾಮಗಳಿಗೆ ಹತ್ತಿರವಾಗಿಸಿತು. ಅವರ ನಿಧನದಿಂದ ಛಾಯಾಗ್ರಹಣ ಮತ್ತು ಸಾಂಸ್ಕೃತಿಕ ಜಗತ್ತಿಗೆ ತುಂಬಲಾಗದ ನಷ್ಟವಾಗಿದೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬ, ಅಭಿಮಾನಿಗಳು ಮತ್ತು ಛಾಯಾಗ್ರಹಣ ವಲಯದ ಬಂಧುಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ."

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
UPI-ng the ante: PM Modi wants desi connect with global pay

Media Coverage

UPI-ng the ante: PM Modi wants desi connect with global pay
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 8 ಸೆಪ್ಟೆಂಬರ್ 2026
September 08, 2026

Viksit Bharat, Many Engines: Defence, Diplomacy, Growth & Green Power Under PM Modi