ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ಇಂದು ನಡೆದ ಎನ್ ಡಿ ಎ ಮುಖ್ಯಮಂತ್ರಿಗಳ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ನಮ್ಮ ಅಭಿವೃದ್ಧಿ ಪಥಗಳಿಗೆ ವೇಗ ನೀಡಬೇಕಾದ ಅಗತ್ಯದ ಬಗ್ಗೆ ಒತ್ತಿ ಹೇಳಿದ ಅವರು, ಡಬಲ್ ಎಂಜಿನ್ ಸರ್ಕಾರದ ಪ್ರಯೋಜನಗಳು ಜನರಿಗೆ ಪರಿಣಾಮಕಾರಿ ರೀತಿಯಲ್ಲಿ ತಲುಪುವುದನ್ನು ಖಾತರಿಸಿಕೊಳ್ಳಬೇಕು ಎಂದರು.
ಎಕ್ಸ್ ನ ಥ್ರೆಡ್ ಪೋಸ್ಟ್ ನಲ್ಲಿ ಅವರು ಹೀಗೆ ಬರೆದಿದ್ದಾರೆ:
"ದೆಹಲಿಯಲ್ಲಿ ನಡೆದ ಎನ್ ಡಿ ಎ ಮುಖ್ಯಮಂತ್ರಿಗಳ ಸಮಾವೇಶದಲ್ಲಿ ಭಾಗಿಯಾಗಿದ್ದೆ. ವಿವಿಧ ವಿಷಯಗಳ ಕುರಿತು ನಾವು ವ್ಯಾಪಕ ಚರ್ಚೆ ನಡೆಸಿದೆವು. ಜಲ ಸಂರಕ್ಷಣೆ, ಕುಂದುಕೊರತೆ ಪರಿಹಾರ, ಆಡಳಿತಾತ್ಮಕ ಚೌಕಟ್ಟುಗಳ ಬಲವರ್ಧನೆ, ಶಿಕ್ಷಣ, ಮಹಿಳಾ ಸಬಲೀಕರಣ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳ ಅತ್ಯುತ್ತಮ ಅಭ್ಯಾಸಗಳನ್ನು ವಿವಿಧ ರಾಜ್ಯಗಳು ಪ್ರದರ್ಶಿಸಿವೆ. ಈ ಅನುಭವಗಳು ಅಮೋಘವಾಗಿವೆ."
"ನಮ್ಮ ಅಭಿವೃದ್ಧಿ ಪಥಗಳಿಗೆ ವೇಗ ನೀಡುವ ಮತ್ತು ಡಬಲ್-ಎಂಜಿನ್ ಸರ್ಕಾರದ ಪ್ರಯೋಜನಗಳು ಜನರಿಗೆ ಪರಿಣಾಮಕಾರಿ ರೀತಿಯಲ್ಲಿ ತಲುಪುವುದನ್ನು ಖಾತರಿಪಡಿಸಿಕೊಳ್ಳುವ ಅಗತ್ಯದ ಬಗ್ಗೆ ನಾನು ಒತ್ತಿ ಹೇಳಿದೆ. ಸ್ವಚ್ಛತೆ, ನೈರ್ಮಲ್ಯ, ಆರೋಗ್ಯ ರಕ್ಷಣೆ, ಯುವ ಸಬಲೀಕರಣ, ಕೃಷಿ, ತಂತ್ರಜ್ಞಾನ ಮತ್ತಿತರ ಪ್ರಮುಖ ಕ್ಷೇತ್ರಗಳಲ್ಲಿ ಸಂಘಟಿತ ಶಕ್ತಿ ಕಂಡುಕೊಳ್ಳುವ ಬಗ್ಗೆ ಮಾತನಾಡಿದೆ."
Participated in the NDA Chief Ministers' Conclave in Delhi. We had extensive deliberations about various issues. Various states showcased their best practices in diverse areas including water conservation, grievance redressal, strengthening administrative frameworks, education,… pic.twitter.com/k7NuMgXebU
— Narendra Modi (@narendramodi) May 25, 2025
I emphasised the need to add momentum to our development trajectories and ensure the benefits of a double-engine government reach the people in an effective manner. Spoke about building stronger synergies in key areas be it cleanliness, sanitation, healthcare, youth empowerment,…
— Narendra Modi (@narendramodi) May 25, 2025


