"ಎನ್‌ಸಿಸಿಯಲ್ಲಿ ತಾವು ಪಡೆದ ತರಬೇತಿ ಮತ್ತು ಕಲಿಕೆಯು ದೇಶದ ಕಡೆಗೆ ನನ್ನ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ತಮಗೆ ಅಪಾರ ಶಕ್ತಿಯನ್ನು ನೀಡಿದೆ"
"ದೇಶದ ಗಡಿ ಪ್ರದೇಶಗಳಲ್ಲಿ 1 ಲಕ್ಷ ಹೊಸ ಕೆಡೆಟ್‌ಗಳನ್ನು ಸಿದ್ಧಪಡಿಸಲಾಗಿದೆ"
"ಹೆಚ್ಚು ಹೆಚ್ಚು ಹುಡುಗಿಯರನ್ನು ಎನ್‌ಸಿಸಿಗೆ ಸೇರಿಸುವುದು ನಮ್ಮ ಪ್ರಯತ್ನವಾಗಬೇಕು"
“ರಾಷ್ಟ್ರ ಮೊದಲು ಎಂಬ ಪ್ರೀತಿಯೊಂದಿಗೆ ಯುವಕರು ಮುನ್ನಡೆಯುತ್ತಿರುವ ದೇಶವನ್ನು ವಿಶ್ವದ ಯಾವುದೇ ಶಕ್ತಿ ತಡೆಯಲು ಸಾಧ್ಯವಿಲ್ಲ”
"ಎನ್‌ಸಿಸಿ ಕೆಡೆಟ್‌ಗಳು ಉತ್ತಮ ಡಿಜಿಟಲ್ ಅಭ್ಯಾಸಗಳಲ್ಲಿ ಪ್ರಮುಖ ಪಾತ್ರ ವಹಿಸಬಹುದು ಮತ್ತು ತಪ್ಪು ಮಾಹಿತಿ ಮತ್ತು ವದಂತಿಗಳ ವಿರುದ್ಧ ಜನರನ್ನು ಜಾಗೃತಗೊಳಿಸಬಹುದು"
"ಎನ್‌ಸಿಸಿ/ ಎನ್‌ಎಸ್‌ಎಸ್ ಕ್ಯಾಂಪಸ್‌ಗಳನ್ನು ಮಾದಕ ದ್ರವ್ಯ ಮುಕ್ತವಾಗಿಡಲು ಸಹಾಯ ಮಾಡಬೇಕು"

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಾರಿಯಪ್ಪ ಮೈದಾನದಲ್ಲಿ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು. ಪ್ರಧಾನಮಂತ್ರಿಯವರು ಗಾರ್ಡ್ ಆಫ್ ಆನರ್ ಅನ್ನು ಪರಿಶೀಲಿಸಿದರು, ಹಾಗೆಯೇ ಎನ್‌ಸಿಸಿ ತುಕಡಿಗಳಿಂದ ಪಥ ಸಂಚಲನವನ್ನು  ಪರಾಮರ್ಶಿಸಿದರು ಮತ್ತು ಎನ್‌ಸಿಸಿ ಕೆಡೆಟ್‌ಗಳು ಸೇನಾ ಚಟುವಟಿಕೆ, ಸ್ಲಿಥರಿಂಗ್, ಮೈಕ್ರೋಲೈಟ್ ಫ್ಲೈಯಿಂಗ್, ಪ್ಯಾರಾಸೈಲಿಂಗ್ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸುವುದನ್ನು ವೀಕ್ಷಿಸಿದರು. ಅತ್ಯುತ್ತಮ ಕೆಡೆಟ್‌ಗಳು ಪ್ರಧಾನಿಯವರಿಂದ ಪದಕ ಮತ್ತು ಲಾಠಿ(ಅಧಿಕಾರಿಯ ದಂಡ)ಯನ್ನೂ ಪಡೆದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ದೇಶವು ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸುತ್ತಿರುವಾಗ ಆಚರಣೆಯಲ್ಲಿ ವಿಭಿನ್ನ ಮಟ್ಟದ ಉತ್ಸಾಹವನ್ನು ಗಮನಿಸಿದರು. ಪ್ರಧಾನಮಂತ್ರಿಯವರು ತಮ್ಮ ಎನ್‌ಸಿಸಿ ಸಂಪರ್ಕವನ್ನು ಹೆಮ್ಮೆಯಿಂದ ಸ್ಮರಿಸಿಕೊಂಡರು ಮತ್ತು ರಾಷ್ಟ್ರದ ಕಡೆಗೆ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಲು ಶಕ್ತಿಯನ್ನು ನೀಡಿದ್ದಕ್ಕಾಗಿ ಎನ್‌ಸಿಸಿ ಕೆಡೆಟ್ ಆಗಿ ಅವರ ತರಬೇತಿಯನ್ನು ತುಂಬಾ ಗೌರವಿಸಿದರು.

ರಾಷ್ಟ್ರ ನಿರ್ಮಾಣದಲ್ಲಿ ಲಾಲಾ ಲಜಪತ್ ರಾಯ್ ಮತ್ತು ಫೀಲ್ಡ್ ಮಾರ್ಷಲ್ ಕಾರಿಯಪ್ಪ ಅವರ ಕೊಡುಗೆಗಾಗಿ ಪ್ರಧಾನಮಂತ್ರಿ ಅವರಿಗೆ ಗೌರವ ನಮನ ಸಲ್ಲಿಸಿದರು. ಇಂದು ಭಾರತದ ವೀರ ಪುತ್ರರಿಬ್ಬರದೂ ಜಯಂತಿ ಇದೆ.

ದೇಶವು ಹೊಸ ನಿರ್ಣಯಗಳೊಂದಿಗೆ ಮುನ್ನಡೆಯುತ್ತಿರುವ ಅವಧಿಯಲ್ಲಿ ದೇಶದಲ್ಲಿ ಎನ್‌ಸಿಸಿಯನ್ನು ಬಲಪಡಿಸಲು ತೆಗೆದುಕೊಳ್ಳುತ್ತಿರುವ ಕ್ರಮಗಳ ಕುರಿತು ಪ್ರಧಾನಿ ಮಾತನಾಡಿದರು. ಇದಕ್ಕಾಗಿ ದೇಶದಲ್ಲಿ ಉನ್ನತ ಮಟ್ಟದ ಪರಿಶೀಲನಾ ಸಮಿತಿಯನ್ನು ರಚಿಸಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ದೇಶದ ಗಡಿ ಭಾಗದಲ್ಲಿ 1 ಲಕ್ಷ ಹೊಸ ಕೆಡೆಟ್‌ಗಳನ್ನು ಸೃಷ್ಟಿಸಲಾಗಿದೆ ಎಂದರು.

ಹುಡುಗಿಯರು ಮತ್ತು ಮಹಿಳೆಯರಿಗಾಗಿ ರಕ್ಷಣಾ ಸಂಸ್ಥೆಗಳ ಬಾಗಿಲು ತೆರೆಯಲು ತೆಗೆದುಕೊಳ್ಳುತ್ತಿರುವ ಕ್ರಮಗಳ ಕುರಿತು ಪ್ರಧಾನಮಂತ್ರಿ ಅವರು ವಿವರಿಸಿದರು. ಅವರು ಹೆಚ್ಚಿನ ಸಂಖ್ಯೆಯ ಬಾಲಕಿಯರ ಉಪಸ್ಥಿತಿಯನ್ನು ಗಮನಿಸಿದರು ಮತ್ತು ಇದು ರಾಷ್ಟ್ರದ ಮನೋಭಾವವನ್ನು ಬದಲಾಯಿಸುವ ಸಂಕೇತವಾಗಿದೆ ಎಂದು ಬಣ್ಣಿಸಿದರು.

"ದೇಶಕ್ಕೆ ನಿಮ್ಮ ಕೊಡುಗೆ ಬೇಕು ಮತ್ತು ಅದಕ್ಕೆ ಸಾಕಷ್ಟು ಅವಕಾಶಗಳಿವೆ" ಎಂದು ಅವರು ಬಾಲಕಿಯ ಕೆಡೆಟ್‌ಗಳಿಗೆ ಹೇಳಿದರು. ಇದೀಗ ದೇಶದ ಹೆಣ್ಣು ಮಕ್ಕಳು, ಸೈನಿಕ ಶಾಲೆಗಳಿಗೆ ಪ್ರವೇಶ ಪಡೆಯುತ್ತಿದ್ದು, ಮಹಿಳೆಯರು ಸೇನೆಯಲ್ಲಿ ಪ್ರಮುಖ ಜವಾಬ್ದಾರಿಗಳನ್ನು ಪಡೆಯುತ್ತಿದ್ದಾರೆ ಎಂದರು. ದೇಶದ ಹೆಣ್ಣು ಮಕ್ಕಳು ವಾಯುಸೇನೆಯಲ್ಲಿ ಯುದ್ಧ ವಿಮಾನಗಳನ್ನು ಹಾರಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹೆಚ್ಚು ಹೆಚ್ಚು ಹೆಣ್ಣು ಮಕ್ಕಳನ್ನು ಎನ್‌ಸಿಸಿಗೆ ಸೇರಿಸುವುದು ನಮ್ಮ ಪ್ರಯತ್ನವಾಗಬೇಕು ಎಂದು ಅವರು ಹೇಳಿದರು.

ಈ ಶತಮಾನದಲ್ಲಿ ಹೆಚ್ಚಾಗಿ ಜನಿಸಿದ ಕೆಡೆಟ್‌ಗಳ ಯುವ ವಿವರವನ್ನು  ಗಮನಿಸಿದ ಪ್ರಧಾನಮಂತ್ರಿ ಅವರು ದೇಶವನ್ನು 2047 ರ ಕಡೆಗೆ ಕೊಂಡೊಯ್ಯುವಲ್ಲಿ ಅವರ ಪಾತ್ರವನ್ನು ಒತ್ತಿಹೇಳಿದರು. "ನಿಮ್ಮ ಪ್ರಯತ್ನಗಳು ಮತ್ತು ಸಂಕಲ್ಪಗಳು ಮತ್ತು ಆ ನಿರ್ಣಯಗಳ ನೆರವೇರಿಕೆಯು ಭಾರತದ ಸಾಧನೆ ಮತ್ತು ಯಶಸ್ಸು", ಎಂದು ಅವರು ಹೇಳಿದರು. ಯಾವ ಯುವ ಸಮೂಹ  ರಾಷ್ಟ್ರಮೊದಲು ಎಂಬ ಚಿಂತನೆಯೊಂದಿಗೆ ಮುನ್ನಡೆಯುತ್ತದೆಯೋ ಆ ದೇಶವನ್ನು ಜಗತ್ತಿನ ಯಾವುದೇ ಶಕ್ತಿ ತಡೆಯಲು ಸಾಧ್ಯವಿಲ್ಲ ಎಂದು ಪ್ರಧಾನಿ ಹೇಳಿದರು. ಪ್ಲೇಫೀಲ್ಡ್ ಮತ್ತು ಸ್ಟಾರ್ಟಪ್ ಪರಿಸರದಲ್ಲಿ ಭಾರತದ ಯಶಸ್ಸು ಇದನ್ನು ಸ್ಪಷ್ಟವಾಗಿ ಉದಾಹರಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಅಮೃತ ಕಾಲ್‌ನಲ್ಲಿ ಅಂದರೆ ಇಂದಿನಿಂದ ಮುಂದಿನ 25 ವರ್ಷಗಳವರೆಗೆ, ಕೆಡೆಟ್‌ಗಳು ತಮ್ಮ ಆಕಾಂಕ್ಷೆಗಳು ಮತ್ತು ಕಾರ್ಯಗಳನ್ನು ದೇಶದ ಅಭಿವೃದ್ಧಿ ಮತ್ತು ನಿರೀಕ್ಷೆಗಳೊಂದಿಗೆ ಸಂಯೋಜಿಸುವಂತೆ ಪ್ರಧಾನಮಂತ್ರಿ ಅವರು ಒತ್ತಾಯಿಸಿದರು. ‘ಸ್ಥಳೀಯರಿಗೆ ಧ್ವನಿ’ ಅಭಿಯಾನದಲ್ಲಿ ಇಂದಿನ ಯುವಕರು ವಹಿಸಬಹುದಾದ ಪ್ರಮುಖ ಪಾತ್ರವನ್ನು ಪ್ರಧಾನಿ ಒತ್ತಿ ಹೇಳಿದರು. ಇಂದಿನ ಯುವಕರು ಭಾರತೀಯರ ಶ್ರಮ ಮತ್ತು ಬೆವರಿನಿಂದ ಸೃಷ್ಟಿಯಾದ ವಸ್ತುಗಳನ್ನು ಮಾತ್ರ ಬಳಸಲು ನಿರ್ಧರಿಸಿದರೆ, ಭಾರತದ ಭವಿಷ್ಯವನ್ನು ಬದಲಾಯಿಸಬಹುದು," ಎಂದು ಅವರು ಪ್ರತಿಪಾದಿಸಿದರು.

ಇಂದು ಒಂದೆಡೆ ಡಿಜಿಟಲ್ ತಂತ್ರಜ್ಞಾನ ಮತ್ತು ಮಾಹಿತಿಗೆ ಸಂಬಂಧಿಸಿದ ಉತ್ತಮ ಸಾಧ್ಯತೆಗಳಿದ್ದರೆ, ಮತ್ತೊಂದೆಡೆ ತಪ್ಪು ಮಾಹಿತಿಯ ಅಪಾಯಗಳಿವೆ ಎಂದು ಪ್ರಧಾನಿ ಅವರು ಎಚ್ಚರಿಸಿದರು. ನಮ್ಮ ದೇಶದ ಜನಸಾಮಾನ್ಯರು ಯಾವುದೇ ವದಂತಿಗಳಿಗೆ ಬಲಿಯಾಗದಿರುವುದು ಸಹ ಅಗತ್ಯ ಎಂದು ಅವರು ಒತ್ತಿ ಹೇಳಿದರು. ಇದಕ್ಕಾಗಿ ಎನ್ ಸಿಸಿ ಕೆಡೆಟ್ ಗಳು ಜಾಗೃತಿ ಅಭಿಯಾನ ನಡೆಸುವಂತೆ ಪ್ರಸ್ತಾಪಿಸಿದರು.

ಎನ್ ಸಿಸಿ ಅಥವಾ ಎನ್ ಎಸ್ ಎಸ್ ಇರುವ ಶಾಲಾ/ಕಾಲೇಜಿಗೆ ಡ್ರಗ್ಸ್ ತಲುಪಬಾರದು ಎಂದು ಪ್ರಧಾನಿ ಒತ್ತಿ ಹೇಳಿದರು. ಕೆಡೆಟ್‌ಗಳು ಮಾದಕ ವಸ್ತುಗಳಿಂದ ಮುಕ್ತರಾಗಬೇಕು ಮತ್ತು ಅದೇ ಸಮಯದಲ್ಲಿ ತಮ್ಮ ಕ್ಯಾಂಪಸ್ ಅನ್ನು ಮಾದಕ ವಸ್ತುಗಳಿಂದ ಮುಕ್ತವಾಗಿರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಎನ್‌ಸಿಸಿ-ಎನ್‌ಎಸ್‌ಎಸ್‌ನಲ್ಲಿಲ್ಲದ ಸ್ನೇಹಿತರನ್ನು ಸಹ ಈ ಕೆಟ್ಟ ಅಭ್ಯಾಸವನ್ನು ಬಿಡಲು ಸಹಾಯ ಮಾಡಿ ಎಂದು ಅವರು ಸಲಹೆ ನೀಡಿದರು.

ದೇಶದ ಸಾಮೂಹಿಕ ಪ್ರಯತ್ನಗಳಿಗೆ ಹೊಸ ಶಕ್ತಿ ನೀಡಲು ಕೆಲಸ ಮಾಡುತ್ತಿರುವ ಸೆಲ್ಫ್ 4 ಸೊಸೈಟಿ ಪೋರ್ಟಲ್‌ನೊಂದಿಗೆ ಸಂಬಂಧ ಹೊಂದುವಂತೆ ಪ್ರಧಾನಮಂತ್ರಿ ಕೆಡೆಟ್‌ಗಳನ್ನು ಕೋರಿದರು. 7 ಸಾವಿರಕ್ಕೂ ಹೆಚ್ಚು ಸಂಸ್ಥೆಗಳು ಮತ್ತು 2.25 ಲಕ್ಷ ಜನರು ಪೋರ್ಟಲ್‌ನೊಂದಿಗೆ ಸಂಬಂಧ ಹೊಂದಿದ್ದಾರೆ.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
PM Modi pens heartfelt letter to BJP's new Thiruvananthapuram mayor; says

Media Coverage

PM Modi pens heartfelt letter to BJP's new Thiruvananthapuram mayor; says "UDF-LDF fixed match will end soon"
NM on the go

Nm on the go

Always be the first to hear from the PM. Get the App Now!
...
Prime Minister Lauds Ahmedabad Flower Show as a Celebration of Creativity, Sustainability, and Community Spirit
January 02, 2026

Prime Minister Shri Narendra Modi commended the Ahmedabad Flower Show for its remarkable role in bringing together creativity, sustainability, and community participation. The event beautifully showcases the city’s vibrant spirit and enduring love for nature.

Highlighting the significance of the show, the Prime Minister noted how it has grown in scale and imagination over the years, becoming a symbol of Ahmedabad’s cultural richness and environmental consciousness.

Responding to post by Chief Minister of Gujarat on X, Shri Modi said:

“The Ahmedabad Flower Show brings together creativity, sustainability and community participation, while beautifully showcasing the city’s vibrant spirit and love for nature. It is also commendable how this flower show has grown in scale and imagination over the years.”

“अहमदाबाद का फ्लावर शो हर किसी का मन मोह लेने वाला है! यह क्रिएटिविटी के साथ-साथ जन भागीदारी का अद्भुत उदाहरण है। इससे शहर की जीवंत भावना के साथ ही प्रकृति से उसका लगाव भी खूबसूरती से प्रदर्शित हो रहा है। यहां यह देखना भी उत्साह से भर देता है कि कैसे इस फ्लावर शो की भव्यता और कल्पनाशीलता हर साल निरंतर बढ़ती जा रही है। इस फ्लावर शो की कुछ आकर्षक तस्वीरें…”