"ಭಾರತದ ಫಿನ್ ಟೆಕ್ ಕ್ರಾಂತಿಯು ಆರ್ಥಿಕ ಸೇರ್ಪಡೆಯನ್ನು ಸುಧಾರಿಸುತ್ತಿದೆ ಮತ್ತು ನಾವೀನ್ಯತೆಯನ್ನು ಪ್ರೇರೇಪಿಸುತ್ತಿದೆ"
"ಭಾರತದ ಫಿನ್ ಟೆಕ್ ವೈವಿಧ್ಯತೆಯು ಎಲ್ಲರನ್ನೂ ಬೆರಗುಗೊಳಿಸುತ್ತದೆ"
"ಆರ್ಥಿಕ ಸೇರ್ಪಡೆಯನ್ನು ಹೆಚ್ಚಿಸುವಲ್ಲಿ ಜನ್ ಧನ್ ಯೋಜನೆ ಪ್ರಮುಖವಾಗಿದೆ"
"ಯುಪಿಐ ಭಾರತದ ಫಿನ್ ಟೆಕ್ ಯಶಸ್ಸಿಗೆ ಉತ್ತಮ ಉದಾಹರಣೆಯಾಗಿದೆ"
"ಜನ್ ಧನ್ ಕಾರ್ಯಕ್ರಮವು ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಬಲವಾದ ಅಡಿಪಾಯವನ್ನು ಹಾಕಿದೆ"
"ಭಾರತದಲ್ಲಿ ಫಿನ್ ಟೆಕ್ ತಂದ ಪರಿವರ್ತನೆ ಕೇವಲ ತಂತ್ರಜ್ಞಾನಕ್ಕೆ ಸೀಮಿತವಾಗಿಲ್ಲ. ಅದರ ಸಾಮಾಜಿಕ ಪರಿಣಾಮವು ದೂರಗಾಮಿಯಾಗಿದೆ"
"ಹಣಕಾಸು ಸೇವೆಗಳನ್ನು ಪ್ರಜಾಪ್ರಭುತ್ವಗೊಳಿಸುವಲ್ಲಿ ಫಿನ್ ಟೆಕ್ ಮಹತ್ವದ ಪಾತ್ರ ವಹಿಸಿದೆ"
"ಭಾರತದ ಫಿನ್ ಟೆಕ್ ಪರಿಸರ ವ್ಯವಸ್ಥೆಯು ಇಡೀ ವಿಶ್ವದ ಜೀವನವನ್ನು ಸುಲಭಗೊಳಿಸುತ್ತದೆ. ನಮ್ಮ ಅತ್ಯುತ್ತಮವಾದವು ಇನ್ನೂ ಬರಬೇಕಿದೆ"

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಹಾರಾಷ್ಟ್ರದ ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ ಗ್ಲೋಬಲ್ ಫಿನ್ ಟೆಕ್ ಫೆಸ್ಟ್ (ಜಿಎಫ್ ಎಫ್) 2024 ಉದ್ದೇಶಿಸಿ ಭಾಷಣ ಮಾಡಿದರು. ಪ್ರಧಾನಮಂತ್ರಿ ಅವರು ಈ ಸಂದರ್ಭದಲ್ಲಿ ಪ್ರದರ್ಶಿಸಲಾದ ವಸ್ತುಪ್ರದರ್ಶನದ ವಾಕ್ ಥ್ರೋ ನಡೆಸಿದರು. ಜಿಎಫ್ಎಫ್ ಉತ್ಸವವನ್ನು ಪೇಮೆಂಟ್ಸ್ ಕೌನ್ಸಿಲ್ ಆಫ್ ಇಂಡಿಯಾ, ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಮತ್ತು ಫಿನ್ ಟೆಕ್ ಕನ್ವರ್ಜೆನ್ಸ್ ಕೌನ್ಸಿಲ್ ಜಂಟಿಯಾಗಿ ಆಯೋಜಿಸಿವೆ. ಇದು ಫಿನ್ ಟೆಕ್ ನಲ್ಲಿ ಭಾರತದ ದಾಪುಗಾಲುಗಳನ್ನು ಪ್ರದರ್ಶಿಸುವ ಮತ್ತು ಕ್ಷೇತ್ರದ ಪ್ರಮುಖ ಮಧ್ಯಸ್ಥಗಾರರನ್ನು ಒಟ್ಟುಗೂಡಿಸುವ ಗುರಿಯನ್ನು ಹೊಂದಿದೆ.

 

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ರಾಷ್ಟ್ರವು ಹಬ್ಬದ ಅವಧಿಯಲ್ಲಿ ಸಾಗುತ್ತಿರವ ಈ ಸಮಯದಲ್ಲಿ ರಾಷ್ಟ್ರದ ಆರ್ಥಿಕತೆ ಮತ್ತು ಮಾರುಕಟ್ಟೆಗಳು ಸಂಭ್ರಮದ ಮನಸ್ಥಿತಿಯಲ್ಲಿವೆ ಮತ್ತು ಕನಸುಗಳ ನಗರವಾದ ಮುಂಬೈನಲ್ಲಿ ಗ್ಲೋಬಲ್ ಫಿನ್ ಟೆಕ್ ಫೆಸ್ಟ್ ಆಯೋಜಿಸಲಾಗುತ್ತಿದೆ ಎಂದರು. ಪ್ರಧಾನಮಂತ್ರಿಯ ಅವರು ಎಲ್ಲ ಗಣ್ಯರು ಮತ್ತು ಅತಿಥಿಗಳಿಗೆ ಆತ್ಮೀಯ ಸ್ವಾಗತ ಕೋರಿದರು. ಕಾರ್ಯಕ್ರಮ ಆರಂಭಕ್ಕೂ ಮುನ್ನ ವಸ್ತುಪ್ರದರ್ಶನದಲ್ಲಿ ತಮ್ಮ ಅನುಭವಗಳು ಮತ್ತು ಸಂವಾದಗಳ ಬಗ್ಗೆ ಮಾತನಾಡಿದ ಶ್ರೀ ನರೇಂದ್ರ ಮೋದಿ ಅವರು, ಯುವಜನರ ಆವಿಷ್ಕಾರಗಳು ಮತ್ತು ಭವಿಷ್ಯದ ಸಾಧ್ಯತೆಗಳ ಸಂಪೂರ್ಣ ಹೊಸ ಜಗತ್ತಿಗೆ ಸಾಕ್ಷಿಯಾಗಬಹುದು ಎಂದರು. ಗ್ಲೋಬಲ್ ಫಿನ್ ಟೆಕ್ ಫೆಸ್ಟ್ (ಜಿಎಫ್ಎಫ್) 2024 ರ ಯಶಸ್ವಿ ಸಂಘಟನೆಯಲ್ಲಿ ಭಾಗಿಯಾಗಿರುವ ಎಲ್ಲರಿಗೂ ಅವರು ಅಭಿನಂದನೆ ಸಲ್ಲಿಸಿದರು.

ಭಾರತದ ಫಿನ್ ಟೆಕ್ ಆವಿಷ್ಕಾರವನ್ನು ಶ್ಲಾಘಿಸಿದ ಪ್ರಧಾನಿ, "ಈ ಹಿಂದೆ ಭಾರತಕ್ಕೆ ಭೇಟಿ ನೀಡುವ ವಿದೇಶಿ ಅತಿಥಿಗಳು ಅದರ ಸಾಂಸ್ಕೃತಿಕ ವೈವಿಧ್ಯತೆಯಿಂದ ಆಶ್ಚರ್ಯಚಕಿತರಾಗುತ್ತಿದ್ದರು, ಈಗ ಅವರು ಅದರ ಫಿನ್ ಟೆಕ್ ವೈವಿಧ್ಯತೆಯಿಂದ ಆಶ್ಚರ್ಯಚಕಿತರಾಗಿದ್ದಾರೆ" ಎಂದು ಹೇಳಿದರು. ಭಾರತದ ಫಿನ್ ಟೆಕ್ ಕ್ರಾಂತಿಯು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕ್ಷಣದಿಂದ ಹಿಡಿದು ಬೀದಿ ಆಹಾರ ಮತ್ತು ಶಾಪಿಂಗ್ ಅನುಭವದವರೆಗೆ ವ್ಯಾಪಕವಾಗಿದೆ ಎಂದು ಶ್ರೀ ನರೇಂದ್ರ ಮೋದಿ ಅಭಿಪ್ರಾಯಪಟ್ಟರು. "ಕಳೆದ 10 ವರ್ಷಗಳಲ್ಲಿ, ಉದ್ಯಮವು 31 ಶತಕೋಟಿ ಅಮೆರಿಕ ಡಾಲರ್ ಗಿಂತ ಹೆಚ್ಚಿನ ದಾಖಲೆಯ ಹೂಡಿಕೆಯನ್ನು ಸ್ವೀಕರಿಸಿದೆ ಮತ್ತು ಶೇ.500 ರಷ್ಟು ಸ್ಟಾರ್ಟ್ಅಪ್ ಬೆಳವಣಿಗೆಗೆ ಸಾಕ್ಷಿಯಾಗಿದೆ," ಎಂದು ಅವರು ಒತ್ತಿಹೇಳಿದರು, ಕೈಗೆಟುಕುವ ಮೊಬೈಲ್ ಫೋನ್ ಗಳು, ಅಗ್ಗದ ಡೇಟಾ ಮತ್ತು ಶೂನ್ಯ ಬ್ಯಾಲೆನ್ಸ್ ನಿಂದ ಪ್ರಾರಂಭವಾಗುವ ಜನ್ ಧನ್ ಬ್ಯಾಂಕ್ ಖಾತೆಗಳನ್ನು ಕ್ರಾಂತಿಯನ್ನು ತರಲು ಬಿಂಬಿಸಿದರು. "ಇಂದು, ದೇಶದಲ್ಲಿ ಒಟ್ಟು ಬ್ರಾಡ್ ಬ್ಯಾಂಡ್ ಬಳಕೆದಾರರ ಸಂಖ್ಯೆ 60 ದಶಲಕ್ಷದಿಂದ 940 ದಶಲಕ್ಷಕ್ಕೆ ಏರಿದೆ" ಎಂದು ಶ್ರೀ ನರೇಂದ್ರ ಮೋದಿ ಹೇಳಿದರು, ಆಧಾರ್ ಇಲ್ಲದೆ, ಡಿಜಿಟಲ್ ಗುರುತಿಲ್ಲದೆ ದೇಶದಲ್ಲಿ 18 ವರ್ಷ ವಯಸ್ಸಿನವರು ಯಾರೂ ಇಲ್ಲ ಎಂದು ಒತ್ತಿ ಹೇಳಿದರು. ಇಂದು ದೇಶದಲ್ಲಿ 530 ದಶಲಕ್ಷಕ್ಕೂ ಹೆಚ್ಚು ಜನರು ಜನ್ ಧನ್ ಖಾತೆಗಳನ್ನು ಹೊಂದಿದ್ದಾರೆ. ಒಂದು ರೀತಿಯಲ್ಲಿ ನಾವು ಕೇವಲ 10 ವರ್ಷಗಳಲ್ಲಿ ಇಡೀ ಯುರೋಪಿಯನ್ ಒಕ್ಕೂಟದ ಜನಸಂಖ್ಯೆಗೆ ಸಮನಾದ ಜನಸಂಖ್ಯೆಯನ್ನು ಬ್ಯಾಂಕುಗಳೊಂದಿಗೆ ಸಂಪರ್ಕಿಸಿದ್ದೇವೆ" ಎಂದು ಅವರು ಹೇಳಿದರು.

 

ಜನ್ ಧನ್, ಆಧಾರ್ ಮತ್ತು ಮೊಬೈಲ್ ತ್ರಿಮೂರ್ತಿಗಳು 'ನಗದು ರಾಜ' ಎಂಬ ಮನಸ್ಥಿತಿಯನ್ನು ಮುರಿದಿವೆ ಮತ್ತು ವಿಶ್ವದ ಸುಮಾರು ಅರ್ಧದಷ್ಟು ಡಿಜಿಟಲ್ ವಹಿವಾಟುಗಳು ಭಾರತದಲ್ಲಿ ನಡೆಯಲು ದಾರಿ ಮಾಡಿಕೊಟ್ಟಿವೆ ಎಂದು ಪ್ರಧಾನಿ ಒತ್ತಿ ಹೇಳಿದರು. "ಭಾರತದ ಯುಪಿಐ ವಿಶ್ವದ ಫಿನ್ ಟೆಕ್ ಗೆ ಪ್ರಮುಖ ಉದಾಹರಣೆಯಾಗಿದೆ" ಎಂದು ಹೇಳಿದ ಪ್ರಧಾನಿ, ಇದು ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿ ಪ್ರತಿ ಹಳ್ಳಿ ಮತ್ತು ನಗರದಲ್ಲಿ 27×7 ಬ್ಯಾಂಕಿಂಗ್ ಸೇವೆಗಳನ್ನು ಸಕ್ರಿಯಗೊಳಿಸಿದೆ ಎಂದರು. ಕೋವಿಡ್ ಸಾಂಕ್ರಾಮಿಕ ರೋಗವನ್ನು ಸ್ಮರಿಸಿದ ಪ್ರಧಾನಮಂತ್ರಿ ಅವರು, ಬ್ಯಾಂಕಿಂಗ್ ವ್ಯವಸ್ಥೆಯು ಅಡೆತಡೆಯಿಲ್ಲದೆ ಉಳಿದಿರುವ ವಿಶ್ವದ ಬೆರಳೆಣಿಕೆಯ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ ಎಂದರು.

ಕೆಲವು ದಿನಗಳ ಹಿಂದೆ ಜನ್ ಧನ್ ಯೋಜನೆಯ 10 ನೇ ವಾರ್ಷಿಕೋತ್ಸವವನ್ನು ಪ್ರಸ್ತಾಪಿಸಿದ ಪ್ರಧಾನಿ, ಇದು ಮಹಿಳಾ ಸಬಲೀಕರಣಕ್ಕೆ ದೊಡ್ಡ ಮಾಧ್ಯಮವಾಗಿ ಮಾರ್ಪಟ್ಟಿದೆ ಎಂದು ಹೇಳಿದರು. ಈವರೆಗೆ ಮಹಿಳೆಯರಿಗಾಗಿ 29 ಕೋಟಿಗೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಸ್ಥಾಪಿಸಲಾಗಿದ್ದು, ಉಳಿತಾಯ ಮತ್ತು ಹೂಡಿಕೆಗೆ ಹೊಸ ಅವಕಾಶಗಳನ್ನು ತೆರೆಯಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಅತಿದೊಡ್ಡ ಮೈಕ್ರೋಫೈನಾನ್ಸ್ ಯೋಜನೆಯಾದ ಮುದ್ರಾ ಯೋಜನೆಯನ್ನು ಜನ್ ಧನ್ ಖಾತೆಗಳ ತತ್ವದ ಮೇಲೆ ಪ್ರಾರಂಭಿಸಲಾಗಿದೆ ಮತ್ತು ಇಲ್ಲಿಯವರೆಗೆ 27 ಟ್ರಿಲಿಯನ್ ರೂ.ಗಳ ಸಾಲವನ್ನು ವಿತರಿಸಲಾಗಿದೆ ಎಂದು ಅವರು ಹೇಳಿದರು. "ಈ ಯೋಜನೆಯ ಫಲಾನುಭವಿಗಳಲ್ಲಿ ಶೇ. 70 ರಷ್ಟು ಮಹಿಳೆಯರು" ಎಂದು ಶ್ರೀ ನರೇಂದ್ರ ಮೋದಿ ಮಾಹಿತಿ ನೀಡಿದರು. ಸ್ವಸಹಾಯ ಗುಂಪುಗಳನ್ನು ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಸಂಪರ್ಕಿಸಲು ಜನ್ ಧನ್ ಖಾತೆಗಳನ್ನು ಸಹ ಬಳಸಲಾಗುತ್ತದೆ ಮತ್ತು 10 ಕೋಟಿ ಗ್ರಾಮೀಣ ಮಹಿಳೆಯರಿಗೆ ಪ್ರಯೋಜನವಾಗಿದೆ ಎಂದು ಅವರು ವಿವರಿಸಿದರು. "ಜನ್ ಧನ್ ಕಾರ್ಯಕ್ರಮವು ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಬಲವಾದ ಅಡಿಪಾಯವನ್ನು ಹಾಕಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

 

ವಿಶ್ವಕ್ಕೆ ಸಮಾನಾಂತರ ಆರ್ಥಿಕತೆಯ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಿದ ಪ್ರಧಾನಮಂತ್ರಿ ಅವರು, ಅಂತಹ ವ್ಯವಸ್ಥೆಗೆ ಧಕ್ಕೆ ತರುವಲ್ಲಿ ಫಿನ್ ಟೆಕ್ ಪರಿಣಾಮಕಾರಿ ಪಾತ್ರ ವಹಿಸಿದೆ ಮತ್ತು ಪಾರದರ್ಶಕತೆಯ ಹೊರಹೊಮ್ಮುವಿಕೆಗೆ ಮನ್ನಣೆ ನೀಡಿದೆ ಎಂದರು. ಡಿಜಿಟಲ್ ತಂತ್ರಜ್ಞಾನವು ಭಾರತದಲ್ಲಿ ಪಾರದರ್ಶಕತೆಯನ್ನು ಪರಿಚಯಿಸಿದೆ ಮತ್ತು ವ್ಯವಸ್ಥೆಯಲ್ಲಿ ಸೋರಿಕೆಯನ್ನು ತಡೆಗಟ್ಟಿರುವ ನೂರಾರು ಸರ್ಕಾರಿ ಯೋಜನೆಗಳಲ್ಲಿ ಬಳಸಲಾಗುವ ನೇರ ಲಾಭ ವರ್ಗಾವಣೆಯ ಅನುಷ್ಠಾನದ ಉದಾಹರಣೆಯನ್ನು ಅವರು ನೀಡಿದರು. "ಇಂದು, ಜನರು ಔಪಚಾರಿಕ ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಯೋಜನಗಳನ್ನು ನೋಡಬಹುದು" ಎಂದು ಪ್ರಧಾನಿ ಪುನರುಚ್ಚರಿಸಿದರು.

ದೇಶದಲ್ಲಿ ಫಿನ್ ಟೆಕ್ ಉದ್ಯಮವು ತಂದಿರುವ ಬದಲಾವಣೆಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ಇದು ಭಾರತದ ತಾಂತ್ರಿಕ ರಂಗವನ್ನು ಪರಿವರ್ತಿಸಿದೆ ಮಾತ್ರವಲ್ಲ, ನಗರ ಮತ್ತು ಗ್ರಾಮೀಣ ಭಾರತದ ನಡುವಿನ ಅಂತರವನ್ನು ಒಟ್ಟಿಗೆ ಮುಚ್ಚುವ ಮೂಲಕ ವ್ಯಾಪಕ ಸಾಮಾಜಿಕ ಪರಿಣಾಮ ಬೀರಿದೆ ಎಂದರು. ಈ ಹಿಂದೆ ರೈತರು, ಮೀನುಗಾರರು ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಅಡೆತಡೆಗಳನ್ನು ಸೃಷ್ಟಿಸುತ್ತಿದ್ದ ಅದೇ ಬ್ಯಾಂಕಿಂಗ್ ಸೇವೆಗಳನ್ನು ಈಗ ಫಿನ್ ಟೆಕ್ ಸಹಾಯದಿಂದ ಮೊಬೈಲ್ ಫೋನ್ ಗಳಲ್ಲಿ ಸುಲಭವಾಗಿ ಪ್ರವೇಶಿಸಬಹುದು ಎಂದು ಶ್ರೀ ನರೇಂದ್ರ ಮೋದಿ ಒತ್ತಿ ಹೇಳಿದರು.

 

ಹಣಕಾಸು ಸೇವೆಗಳನ್ನು ಪ್ರಜಾಸತ್ತಾತ್ಮಕಗೊಳಿಸುವಲ್ಲಿ ಫಿನ್ ಟೆಕ್ ನ ಪಾತ್ರವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ ಅವರು, ಸುಲಭವಾಗಿ ಲಭ್ಯವಿರುವ ಸಾಲಗಳು, ಕ್ರೆಡಿಟ್ ಕಾರ್ಡ್ ಗಳು, ಹೂಡಿಕೆಗಳು ಮತ್ತು ವಿಮೆಯ ಉದಾಹರಣೆಗಳನ್ನು ನೀಡಿದರು. ಫಿನ್ ಟೆಕ್ ಸಾಲದ ಲಭ್ಯತೆಯನ್ನು ಸುಲಭ ಮತ್ತು ಅಂತರ್ಗತಗೊಳಿಸಿದೆ ಎಂದು ಹೇಳಿದ ಅವರು, ಬೀದಿ ಬದಿ ವ್ಯಾಪಾರಿಗಳಿಗೆ ಮೇಲಾಧಾರ ರಹಿತ ಸಾಲಗಳನ್ನು ಪಡೆಯಲು ಮತ್ತು ಡಿಜಿಟಲ್ ವಹಿವಾಟಿನ ಸಹಾಯದಿಂದ ತಮ್ಮ ವ್ಯವಹಾರವನ್ನು ಮತ್ತಷ್ಟು ವಿಸ್ತರಿಸಲು ಅನುವು ಮಾಡಿಕೊಟ್ಟ ಪಿಎಂ ಸ್ವನಿಧಿ ಯೋಜನೆಯ ಉದಾಹರಣೆಯನ್ನು ನೀಡಿದರು. ಷೇರು ಮಾರುಕಟ್ಟೆಗಳು ಮತ್ತು ಮ್ಯೂಚುವಲ್ ಫಂಡ್ ಗಳಿಗೆ ಸುಲಭ ಪ್ರವೇಶ, ಹೂಡಿಕೆ ವರದಿಗಳು ಮತ್ತು ಡಿಮ್ಯಾಟ್ ಖಾತೆಗಳನ್ನು ತೆರೆಯುವುದನ್ನು ಅವರು ಉಲ್ಲೇಖಿಸಿದರು. ಡಿಜಿಟಲ್ ಇಂಡಿಯಾದ ಬೆಳವಣಿಗೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ದೂರಸ್ಥ ಆರೋಗ್ಯ ಸೇವೆಗಳು, ಡಿಜಿಟಲ್ ಶಿಕ್ಷಣ ಮತ್ತು ಕೌಶಲ್ಯ ಕಲಿಕೆಯಂತಹ ಸೇವೆಗಳು ಫಿನ್ ಟೆಕ್ ಇಲ್ಲದೆ ಸಾಧ್ಯವಿಲ್ಲ ಎಂದು ಒತ್ತಿ ಹೇಳಿದರು. "ಭಾರತದ ಫಿನ್ ಟೆಕ್ ಕ್ರಾಂತಿಯು ಜೀವನದ ಘನತೆ ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸುವಲ್ಲಿ ದೊಡ್ಡ ಪಾತ್ರ ವಹಿಸುತ್ತಿದೆ" ಎಂದು ಪ್ರಧಾನಿ ಹೇಳಿದರು.

 

ಭಾರತದ ಫಿನ್ ಟೆಕ್ ಕ್ರಾಂತಿಯು ಸಾಧಿಸಿದ ಸಾಧನೆಗಳು ಕೇವಲ ಆವಿಷ್ಕಾರಗಳ ಬಗ್ಗೆ ಮಾತ್ರವಲ್ಲ, ಅಳವಡಿಕೆಯ ಬಗ್ಗೆಯೂ ಇವೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು. ಈ ಕ್ರಾಂತಿಯ ವೇಗ ಮತ್ತು ಪ್ರಮಾಣವನ್ನು ಅಳವಡಿಸಿಕೊಂಡಿದ್ದಕ್ಕಾಗಿ ಭಾರತದ ಜನರನ್ನು ಶ್ಲಾಘಿಸಿದ ಶ್ರೀ ನರೇಂದ್ರ ಮೋದಿ, ಈ ಪರಿವರ್ತನೆಯನ್ನು ತರುವಲ್ಲಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ) ಪಾತ್ರವನ್ನು ಶ್ಲಾಘಿಸಿದರು, ಈ ತಂತ್ರಜ್ಞಾನದ ಬಗ್ಗೆ ವಿಶ್ವಾಸವನ್ನು ಸೃಷ್ಟಿಸಲು ದೇಶದಲ್ಲಿ ಅದ್ಭುತ ಆವಿಷ್ಕಾರಗಳನ್ನು ಮಾಡಲಾಗಿದೆ ಎಂದು ಹೇಳಿದರು.

ಡಿಜಿಟಲ್ ಓನ್ಲಿ ಬ್ಯಾಂಕ್ ಗಳು ಮತ್ತು ನವ-ಬ್ಯಾಂಕಿಂಗ್ ನ ಆಧುನಿಕ ಪರಿಕಲ್ಪನೆಗಳನ್ನು ಉಲ್ಲೇಖಿಸಿದ ಪ್ರಧಾನಿ, "21 ನೇ ಶತಮಾನದ ಜಗತ್ತು ವೇಗವಾಗಿ ಬದಲಾಗುತ್ತಿದೆ ಮತ್ತು ಕರೆನ್ಸಿಯಿಂದ ಕ್ಯೂಆರ್ (ತ್ವರಿತ ಪ್ರತಿಕ್ರಿಯೆ) ಕೋಡ್ ಗಳಿಗೆ ಪ್ರಯಾಣವು ನಮಗೆ ಸ್ವಲ್ಪ ಸಮಯ ತೆಗೆದುಕೊಂಡರೂ, ನಾವು ಪ್ರತಿದಿನ ಆವಿಷ್ಕಾರಗಳಿಗೆ ಸಾಕ್ಷಿಯಾಗುತ್ತಿದ್ದೇವೆ," ಎಂದು ಹೇಳಿದರು. ಡಿಜಿಟಲ್ ಟ್ವಿನ್ಸ್ ತಂತ್ರಜ್ಞಾನವನ್ನು ಶ್ಲಾಘಿಸಿದ ಶ್ರೀ ನರೇಂದ್ರ ಮೋದಿ, ಇದು ಅಪಾಯ ನಿರ್ವಹಣೆಯನ್ನು ನಿರ್ಣಯಿಸುವ, ವಂಚನೆ ಪತ್ತೆಹಚ್ಚುವಿಕೆಯನ್ನು ಮೌಲ್ಯಮಾಪನ ಮಾಡುವ ಮತ್ತು ಗ್ರಾಹಕರ ಅನುಭವವನ್ನು ಒದಗಿಸುವ ಜಗತ್ತನ್ನು ಬದಲಾಯಿಸಲಿದೆ ಎಂದು ಹೇಳಿದರು. ಓಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ಒಎನ್ ಡಿಸಿ) ನ ಅನುಕೂಲಗಳನ್ನು ಉಲ್ಲೇಖಿಸಿದ ಪ್ರಧಾನಿ, ಇದು ಆನ್ ಲೈನ್ ಶಾಪಿಂಗ್ ಅನ್ನು ಅಂತರ್ಗತಗೊಳಿಸುತ್ತಿದೆ ಮತ್ತು ಸಣ್ಣ ವ್ಯವಹಾರಗಳು ಮತ್ತು ಉದ್ಯಮಗಳನ್ನು ದೊಡ್ಡ ಅವಕಾಶಗಳಿಗೆ ಸಂಪರ್ಕಿಸುತ್ತಿದೆ ಎಂದರು. ಇಂದು, ಖಾತೆ ಅಗ್ರಿಗೇಟರ್ ಗಳು ಕಂಪನಿಗಳ ಸುಗಮ ಕಾರ್ಯನಿರ್ವಹಣೆಗಾಗಿ ಡೇಟಾವನ್ನು ಬಳಸುತ್ತಿದ್ದಾರೆ, ವ್ಯಾಪಾರ ವೇದಿಕೆಗಳಿಂದಾಗಿ ಸಣ್ಣ ಸಂಸ್ಥೆಗಳ ದ್ರವ ಮತ್ತು ನಗದು ಹರಿವು ಸುಧಾರಿಸುತ್ತಿದೆ ಮತ್ತು ಇ-ರುಪಿಯಂತಹ ಡಿಜಿಟಲ್ ವೋಚರ್ ಅನ್ನು ಅನೇಕ ರೂಪಗಳಲ್ಲಿ ಬಳಸಲಾಗುತ್ತಿದೆ, ಈ ಉತ್ಪನ್ನಗಳು ವಿಶ್ವದ ಇತರ ದೇಶಗಳಿಗೆ ಸಮಾನವಾಗಿ ಉಪಯುಕ್ತವಾಗಿವೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.
"ಎಐಗಾಗಿ ಜಾಗತಿಕ ಚೌಕಟ್ಟಿಗೆ ಭಾರತ ಕರೆ ನೀಡಿದೆ" ಎಂದು ಪ್ರಧಾನಿ ಹೇಳಿದರು, ಕ್ಯೂಆರ್ ಕೋಡ್ ಗಳ ಜೊತೆಗೆ ಧ್ವನಿ ಪೆಟ್ಟಿಗೆಗಳ ಬಳಕೆಯು ಅಂತಹ ಒಂದು ಆವಿಷ್ಕಾರವಾಗಿದೆ ಎಂದು ಹೇಳಿದರು. ಸರ್ಕಾರದ ಬ್ಯಾಂಕ್ ಸಖಿ ಕಾರ್ಯಕ್ರಮವನ್ನು ಅಧ್ಯಯನ ಮಾಡುವಂತೆ ಅವರು ಭಾರತದ ಫಿನ್ ಟೆಕ್ ವಲಯವನ್ನು ಒತ್ತಾಯಿಸಿದರು ಮತ್ತು ಪ್ರತಿ ಹಳ್ಳಿಯಲ್ಲಿ ಬ್ಯಾಂಕಿಂಗ್ ಮತ್ತು ಡಿಜಿಟಲ್ ಜಾಗೃತಿಯನ್ನು ಹರಡುವಲ್ಲಿ ಹೆಣ್ಣುಮಕ್ಕಳ ಪ್ರಯತ್ನಗಳನ್ನು ಬಿಂಬಿಸಿದರು, ಆ ಮೂಲಕ ಫಿನ್ ಟೆಕ್ ಗೆ ಹೊಸ ಮಾರುಕಟ್ಟೆಯನ್ನು ನೀಡಿದರು.

 

ಫಿನ್ ಟೆಕ್ ವಲಯಕ್ಕೆ ಸಹಾಯ ಮಾಡಲು ಸರ್ಕಾರವು ನೀತಿ ಮಟ್ಟದಲ್ಲಿ ಎಲ್ಲಾ ಅಗತ್ಯ ಬದಲಾವಣೆಗಳನ್ನು ಮಾಡುತ್ತಿದೆ ಎಂದು ಒತ್ತಿಹೇಳಿದ ಪ್ರಧಾನಿ, ಏಂಜೆಲ್ ತೆರಿಗೆಯನ್ನು ತೆಗೆದುಹಾಕುವುದು, ದೇಶದಲ್ಲಿ ಸಂಶೋಧನೆ ಮತ್ತು ನಾವೀನ್ಯತೆಯನ್ನು ಉತ್ತೇಜಿಸಲು 1 ಲಕ್ಷ ಕೋಟಿ ರೂ.ಗಳನ್ನು ನಿಗದಿಪಡಿಸುವುದು ಮತ್ತು ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತರುವುದು ಮುಂತಾದ ಉದಾಹರಣೆಗಳನ್ನು ನೀಡಿದರು. ಜತೆಗೆ ಸೈಬರ್ ವಂಚನೆಯನ್ನು ಕೊನೆಗೊಳಿಸುವ ಅಗತ್ಯವನ್ನು ವ್ಯಕ್ತಪಡಿಸಿದರು. ಡಿಜಿಟಲ್ ಸಾಕ್ಷರತೆಯನ್ನು ಹೆಚ್ಚಿಸಲು ಬೃಹತ್ ಕ್ರಮಗಳನ್ನು ಪ್ರಾರಂಭಿಸುವಂತೆ ನಿಯಂತ್ರಕರನ್ನು ಪ್ರಧಾನಿ ಒತ್ತಾಯಿಸಿದರು. ದೇಶದಲ್ಲಿ ಫಿನ್ ಟೆಕ್ ಮತ್ತು ಸ್ಟಾರ್ಟ್ಅಪ್ ಗಳ ಬೆಳವಣಿಗೆಗೆ ಸೈಬರ್ ವಂಚನೆ ಅಡ್ಡಿಯಾಗದಂತೆ ನೋಡಿಕೊಳ್ಳುವುದು ಅಷ್ಟೇ ಮುಖ್ಯ ಎಂದು ಅವರು ಹೇಳಿದರು.
"ಸುಸ್ಥಿರ ಆರ್ಥಿಕ ಬೆಳವಣಿಗೆ ಇಂದು ಭಾರತದ ಆದ್ಯತೆಯಾಗಿದೆ" ಎಂದು ಹೇಳಿದ ಪ್ರಧಾನಿ, ಸುಧಾರಿತ ತಂತ್ರಜ್ಞಾನಗಳು ಮತ್ತು ನಿಯಂತ್ರಕ ಚೌಕಟ್ಟುಗಳೊಂದಿಗೆ ಹಣಕಾಸು ಮಾರುಕಟ್ಟೆಗಳನ್ನು ಬಲಪಡಿಸಲು ಸರ್ಕಾರ ದೃಢವಾದ, ಪಾರದರ್ಶಕ ಮತ್ತು ಪರಿಣಾಮಕಾರಿ ವ್ಯವಸ್ಥೆಗಳನ್ನು ರಚಿಸುತ್ತಿದೆ ಎಂದು ಒತ್ತಿ ಹೇಳಿದರು. ಹಸಿರು ಹಣಕಾಸು ಮತ್ತು ಆರ್ಥಿಕ ಸೇರ್ಪಡೆಯ ಪರಿಪೂರ್ಣತೆಯೊಂದಿಗೆ ಸುಸ್ಥಿರ ಬೆಳವಣಿಗೆಯನ್ನು ಬೆಂಬಲಿಸುವುದನ್ನು ಅವರು ಉಲ್ಲೇಖಿಸಿದರು.

 

ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದ ಪ್ರಧಾನಮಂತ್ರಿ ಅವರು, ಭಾರತದ ಜನರಿಗೆ ಗುಣಮಟ್ಟದ ಜೀವನಶೈಲಿಯನ್ನು ಒದಗಿಸುವಲ್ಲಿ ಭಾರತದ ಫಿನ್ ಟೆಕ್ ಪರಿಸರ ವ್ಯವಸ್ಥೆಯು ದೊಡ್ಡ ಪಾತ್ರ ವಹಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. "ಭಾರತದ ಫಿನ್ ಟೆಕ್ ಪರಿಸರ ವ್ಯವಸ್ಥೆಯು ಇಡೀ ವಿಶ್ವದ ಜೀವನವನ್ನು ಸುಲಭಗೊಳಿಸುತ್ತದೆ ಎಂದು ನನಗೆ ವಿಶ್ವಾಸವಿದೆ. ನಮ್ಮ ಅತ್ಯುತ್ತಮವಾದವು ಇನ್ನಷ್ಟೇ ಬರಬೇಕಿದೆ", ಎಂದು ಪ್ರಧಾನಿ ಹೇಳಿದ್ದಾರೆ. ಐದು ವರ್ಷಗಳ ನಂತರ ಜಿಎಫ್ ಎಫ್ ನ 10ನೇ ಆವೃತ್ತಿಯಲ್ಲಿ ತಾವು ಉಪಸ್ಥಿತರಿರುವುದಾಗಿ ಪ್ರಧಾನಮಂತ್ರಿ ಅವರು ವಿಶ್ವಾಸ ವ್ಯಕ್ತಪಡಿಸಿದರು. ಕಾರ್ಯಕ್ರಮದ ಮುಕ್ತಾಯಕ್ಕೂ ಮುನ್ನ ಸಭಿಕರೊಂದಿಗೆ ಸೆಲ್ಫಿಗೆ ಪೋಸ್ ನೀಡಿದ ಪ್ರಧಾನಿ, ಕೃತಕ ಬುದ್ಧಿಮತ್ತೆ ಬಳಕೆಯೊಂದಿಗೆ, ಛಾಯಾಚಿತ್ರದಲ್ಲಿ ತಮ್ಮನ್ನು ತಾವು ಕಂಡುಕೊಳ್ಳುವ ಯಾರಾದರೂ ನಮೋ ಆ್ಯಪ್ ನ  ಫೋಟೋ ವಿಭಾಗಕ್ಕೆ ಭೇಟಿ ನೀಡುವ ಮೂಲಕ ಮತ್ತು ತಮ್ಮ ಸೆಲ್ಫಿಯನ್ನು ಅಪ್ಲೋಡ್ ಮಾಡುವ ಮೂಲಕ ಅದನ್ನು ಪ್ರವೇಶಿಸಬಹುದು ಎಂದು ವಿವರಿಸಿದರು.

ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶ್ರೀ ಶಕ್ತಿಕಾಂತ ದಾಸ್ ಮತ್ತು ಜಿಎಫ್ ಎಫ್ ಅಧ್ಯಕ್ಷ ಶ್ರೀ ಕ್ರಿಸ್ ಗೋಪಾಲಕೃಷ್ಣನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

ಹಿನ್ನೆಲೆ

ಪೇಮೆಂಟ್ಸ್ ಕೌನ್ಸಿಲ್ ಆಫ್ ಇಂಡಿಯಾ, ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಮತ್ತು ಫಿನ್ ಟೆಕ್ ಕನ್ವರ್ಜೆನ್ಸ್ ಕೌನ್ಸಿಲ್ ಜಂಟಿಯಾಗಿ ಗ್ಲೋಬಲ್ ಫಿನ್ ಟೆಕ್ ಫೆಸ್ಟ್ ಅನ್ನು ಆಯೋಜಿಸುತ್ತಿವೆ. ಭಾರತ ಮತ್ತು ಇತರ ದೇಶಗಳ ನೀತಿ ನಿರೂಪಕರು, ನಿಯಂತ್ರಕರು, ಹಿರಿಯ ಬ್ಯಾಂಕರ್ ಗಳು, ಉದ್ಯಮದ ನಾಯಕರು ಮತ್ತು ಶಿಕ್ಷಣ ತಜ್ಞರು ಸೇರಿದಂತೆ ಸುಮಾರು 800 ಭಾಷಣಕಾರರು ಸಮ್ಮೇಳನದಲ್ಲಿ 350 ಕ್ಕೂ ಹೆಚ್ಚು ಅಧಿವೇಶನಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದು ಫಿನ್ ಟೆಕ್ ಭೂದೃಶ್ಯದಲ್ಲಿ ಇತ್ತೀಚಿನ ಆವಿಷ್ಕಾರಗಳನ್ನು ಸಹ ಪ್ರದರ್ಶಿಸುತ್ತದೆ. ಜಿಎಫ್ಎಫ್ 2024 ನಲ್ಲಿ 20 ಕ್ಕೂ ಹೆಚ್ಚು ಚಿಂತನಾ ನಾಯಕತ್ವ ವರದಿಗಳು ಮತ್ತು ಶ್ವೇತಪತ್ರಗಳನ್ನು ಪ್ರಾರಂಭಿಸಲಾಗುವುದು, ಇದು ಒಳನೋಟಗಳು ಮತ್ತು ಆಳವಾದ ಉದ್ಯಮ ಮಾಹಿತಿಯನ್ನು ನೀಡುತ್ತದೆ.

 

Click here to read full text speech

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
FDI inflows into India cross $1 trillion, establishes country as key investment destination

Media Coverage

FDI inflows into India cross $1 trillion, establishes country as key investment destination
NM on the go

Nm on the go

Always be the first to hear from the PM. Get the App Now!
...
Government taking many steps to ensure top-quality infrastructure for the people: PM
December 09, 2024

The Prime Minister Shri Narendra Modi today reiterated that the Government has been taking many steps to ensure top-quality infrastructure for the people and leverage the power of connectivity to further prosperity. He added that the upcoming Noida International Airport will boost connectivity and 'Ease of Living' for the NCR and Uttar Pradesh.

Responding to a post ex by Union Minister Shri Ram Mohan Naidu, Shri Modi wrote:

“The upcoming Noida International Airport will boost connectivity and 'Ease of Living' for the NCR and Uttar Pradesh. Our Government has been taking many steps to ensure top-quality infrastructure for the people and leverage the power of connectivity to further prosperity.”