ನಾನು ಮಾರಿಷಸ್‌ ಗೆ ಬಂದಾಗಲೆಲ್ಲಾ, ನಾನು ನನ್ನ ಸ್ವಂತ ಜನರ ನಡುವೆ ಇದ್ದೇನೆ ಎಂದು ಭಾಸವಾಗುತ್ತದೆ: ಪ್ರಧಾನಮಂತ್ರಿ
ಮಾರಿಷಸ್‌ ಜನರು ಮತ್ತು ಸರ್ಕಾರವು ನನಗೆ ತಮ್ಮ ಅತ್ಯುನ್ನತ ನಾಗರಿಕ ಗೌರವವನ್ನು ನೀಡಲು ನಿರ್ಧರಿಸಿದೆ ಮತ್ತು ನಾನು ಈ ನಿರ್ಧಾರವನ್ನು ಅತ್ಯಂತ ಗೌರವದಿಂದ ಸ್ವೀಕರಿಸುತ್ತೇನೆ: ಪ್ರಧಾನಮಂತ್ರಿ
ಇದು ನನಗೆ ಮಾತ್ರ ಗೌರವವಲ್ಲ, ಭಾರತ ಮತ್ತು ಮಾರಿಷಸ್ ನಡುವಿನ ಐತಿಹಾಸಿಕ ಬಾಂಧವ್ಯಕ್ಕೆ ಸಂದ ಗೌರವ: ಪ್ರಧಾನಮಂತ್ರಿ
ಮಾರಿಷಸ್ 'ಮಿನಿ ಇಂಡಿಯಾ' ಇದ್ದಂತೆ: ಪ್ರಧಾನಮಂತ್ರಿ
ನಮ್ಮ ಸರ್ಕಾರ ನಳಂದಾ ವಿಶ್ವವಿದ್ಯಾಲಯ ಮತ್ತು ಅದರ ಚೈತನ್ಯವನ್ನು ಪುನರುಜ್ಜೀವನಗೊಳಿಸಿದೆ: ಪ್ರಧಾನಮಂತ್ರಿ
ಬಿಹಾರದ ಮಖಾನಾ ಶೀಘ್ರದಲ್ಲೇ ವಿಶ್ವದಾದ್ಯಂತ ಉಪಹಾರ ಮೆನುಗಳ ಭಾಗವಾಗಲಿದೆ: ಪ್ರಧಾನಮಂತ್ರಿ
ಮಾರಿಷಸ್‌ ನಲ್ಲಿರುವ ಏಳನೇ ತಲೆಮಾರಿನ ಭಾರತೀಯ ವಲಸಿಗರಿಗೆ ಒಸಿಐ ಕಾರ್ಡ್ ನೀಡಲು ನಿರ್ಧರಿಸಲಾಗಿದೆ: ಪ್ರಧಾನಮಂತ್ರಿ
ಮಾರಿಷಸ್ ಕೇವಲ ಪಾಲುದಾರ ರಾಷ್ಟ್ರವಲ್ಲ; ಮಾರಿಷಸ್ ನಮಗೆ ಕುಟುಂಬವಿದ್ದಂತೆ: ಪ್ರಧಾನಮಂತ್ರಿ
ಮಾರಿಷಸ್ ಭಾರತದ ‌ʼಸಾಗರ್ʼ ದೃಷ್ಟಿಕೋನದ ಕೇಂದ್ರವಾಗಿದೆ: ಪ್ರಧಾನಮಂತ್ರಿ
ಮಾರಿಷಸ್ ಅಭಿವೃದ್ಧಿ ಹೊಂದಿದಾಗ, ಭಾರತವು ಮೊದಲು ಸಂಭ್ರಮಿಸುತ್ತದೆ: ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಾರಿಷಸ್‌ ಪ್ರಧಾನಮಂತ್ರಿ ಘನತೆವೆತ್ತ ನವೀನಚಂದ್ರ ರಾಮಗೂಲಮ್ ಅವರೊಂದಿಗೆ ಟ್ರಿಯಾನಾನ್ ಕನ್ವೆನ್ಷನ್ ಸೆಂಟರ್‌ ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಮಾರಿಷಸ್‌ ನಲ್ಲಿರುವ ಭಾರತೀಯ ಸಮುದಾಯ ಮತ್ತು ಭಾರತದ ಸ್ನೇಹಿತರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮವು ವಿದ್ಯಾರ್ಥಿಗಳು, ವೃತ್ತಿಪರರು, ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆಗಳು ಮತ್ತು ವ್ಯಾಪಾರ ಮುಖಂಡರು ಸೇರಿದಂತೆ ಭಾರತೀಯ ಸಮುದಾಯದ ಉತ್ಸಾಹಪೂರ್ಣ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು. ಇದರಲ್ಲಿ ಮಾರಿಷಸ್‌ ನ ಹಲವಾರು ಸಚಿವರು, ಸಂಸದರು ಮತ್ತು ಇತರ ಗಣ್ಯರು ಭಾಗವಹಿಸಿದ್ದರು.

 

ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿಯವರನ್ನು ಸ್ವಾಗತಿಸಿದ ಪ್ರಧಾನಿ ರಾಮಗೂಲಮ್, ರಾಷ್ಟ್ರೀಯ ದಿನಾಚರಣೆಯ ಸಂದರ್ಭದಲ್ಲಿ ಮಾರಿಷಸ್ ತನ್ನ ಅತ್ಯುನ್ನತ ನಾಗರಿಕ ಗೌರವವಾದ 'ಗ್ರ್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಅಂಡ್ ಕೀ ಆಫ್ ದಿ ಹಿಂದೂ ಓಷಿಯನ್ (ಜಿ ಸಿ ಎಸ್‌ ಕೆ)ʼ ಅನ್ನು ಭಾರತದ ಪ್ರಧಾನ ಮಂತ್ರಿಯವರಿಗೆ ನೀಡಲಿದೆ ಎಂದು ಘೋಷಿಸಿದರು. ಈ ಅಸಾಧಾರಣ ಗೌರವಕ್ಕೆ ಪ್ರಧಾನಿಯವರು ಕೃತಜ್ಞತೆ ಸಲ್ಲಿಸಿದರು.

 

ತಮ್ಮ ಭಾಷಣದಲ್ಲಿ, ಪ್ರಧಾನಮಂತ್ರಿಯವರು ಮಾರಿಷಸ್ ಪ್ರಧಾನ ಮಂತ್ರಿಯವರ ಆತ್ಮೀಯತೆ ಮತ್ತು ಸ್ನೇಹಕ್ಕಾಗಿ ಮತ್ತು ಉಭಯ ದೇಶಗಳ ನಡುವಿನ ರೋಮಾಂಚಕ ಮತ್ತು ವಿಶೇಷ ಸಂಬಂಧವನ್ನು ಬಲಪಡಿಸುವಲ್ಲಿ ಅವರು ನೀಡಿದ ಕೊಡುಗೆಗಾಗಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು. ವಿಶೇಷ ಸಂದರ್ಭವಾಗಿ, ಅವರು ಒಸಿಐ ಕಾರ್ಡ್‌ ಗಳನ್ನು ಪ್ರಧಾನಿ ರಾಮಗೂಲಮ್ ಮತ್ತು ಅವರ ಪತ್ನಿ ಶ್ರೀಮತಿ ವೀಣಾ ರಾಮಗೂಲಮ್ ಅವರಿಗೆ ಹಸ್ತಾಂತರಿಸಿದರು. ಮಾರಿಷಸ್ ಜನತೆಗೆ ಅವರ ರಾಷ್ಟ್ರೀಯ ದಿನದ ಶುಭಾಶಯ ಕೋರಿದ ಪ್ರಧಾನಮಂತ್ರಿಯವರು ಉಭಯ ದೇಶಗಳ ಐತಿಹಾಸಿಕ ಪಯಣವನ್ನು ಸ್ಮರಿಸಿದರು. ಮಾರಿಷಸ್‌ ನ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸರ್ ಸೀವೂಸಾಗುರ್ ರಾಮಗೂಲಮ್, ಸರ್ ಅನೆರೂದ್ ಜುಗ್ನಾಥ್, ಮಣಿಲಾಲ್ ಡಾಕ್ಟರ್ ಮತ್ತು ಇತರರಿಗೆ ಪ್ರಧಾನಿಯವರು ಗೌರವ ಸಲ್ಲಿಸಿದರು ಮತ್ತು ಮಾರಿಷಸ್‌ ನ ರಾಷ್ಟ್ರೀಯ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು ತಮಗೆ ಸಂದ ಗೌರವ ಎಂದು ಹೇಳಿದರು. ಎರಡೂ ದೇಶಗಳ ನಡುವಿನ ಜನರ ನಡುವಿನ ನಿಕಟ ಸಂಬಂಧಗಳ ಅಡಿಪಾಯವನ್ನು ರೂಪಿಸುವ ಹಂಚಿಕೆಯ ಪರಂಪರೆ ಮತ್ತು ಕೌಟುಂಬಿಕ ಸಂಪರ್ಕಗಳನ್ನು ಎತ್ತಿ ತೋರಿಸಿದ ಪ್ರಧಾನಿ, ಮಾರಿಷಸ್‌ ನಲ್ಲಿರುವ ಭಾರತೀಯ ಮೂಲದ ಸಮುದಾಯವು ತಮ್ಮ ಸಾಂಸ್ಕೃತಿಕ ಬೇರುಗಳನ್ನು ಹೇಗೆ ಉಳಿಸಿಕೊಂಡಿದೆ ಮತ್ತು ಪೋಷಿಸಿದೆ ಎಂಬುದನ್ನು ಶ್ಲಾಘಿಸಿದರು. ಈ ಬಾಂಧವ್ಯಗಳನ್ನು ಮತ್ತಷ್ಟು ಬಲಪಡಿಸಲು, ಮಾರಿಷಸ್‌ ಗಾಗಿ ವಿಶೇಷವಾದ ಯೋಜನೆಯನ್ನು ರೂಪಿಸಲಾಗಿದೆ, ಅದರ ಮೂಲಕ ಮಾರಿಷಸ್‌ ನಲ್ಲಿರುವ ಭಾರತೀಯ ಮೂಲದ ಏಳನೇ ತಲೆಮಾರಿನ ಜನರಿಗೆ ಒಸಿಐ ಕಾರ್ಡ್‌ ಗಳನ್ನು ಲಭ್ಯವಾಗುವಂತೆ ಮಾಡಲಾಗುವುದು. ಗಿರ್ಮಿಟಿಯಾ ಪರಂಪರೆಯನ್ನು ಪೋಷಿಸಲು ಭಾರತವು ಹಲವಾರು ಉಪಕ್ರಮಗಳನ್ನು ಬೆಂಬಲಿಸುತ್ತದೆ ಎಂದು ಪ್ರಧಾನಿ ಒತ್ತಿ ಹೇಳಿದರು.

 

ಮಾರಿಷಸ್‌ ನ ನಿಕಟ ಅಭಿವೃದ್ಧಿ ಪಾಲುದಾರನಾಗಿರುವುದು ಭಾರತಕ್ಕೆ ಸಿಕ್ಕಿರುವ ಸೌಭಾಗ್ಯ ಎಂದು ಪ್ರಧಾನಿ ಹೇಳಿದರು. ಭಾರತದ ಸಾಗರ್ ವಿಷನ್ ಮತ್ತು ಜಾಗತಿಕ ದಕ್ಷಿಣದೊಂದಿಗಿನ ಅದರ ಸಂಬಂಧದಲ್ಲಿ ಭಾರತ-ಮಾರಿಷಸ್ ವಿಶೇಷ ಸಂಬಂಧಗಳು ಪ್ರಮುಖ ಪಾತ್ರ ವಹಿಸಿವೆ ಎಂದು ಅವರು ಹೇಳಿದರು. ಹವಾಮಾನ ಬದಲಾವಣೆಯ ಹಂಚಿಕೆಯ ಸವಾಲನ್ನು ನಿಭಾಯಿಸುವ ಬಗ್ಗೆ ಮಾತನಾಡಿದ ಅವರು, ಅಂತರರಾಷ್ಟ್ರೀಯ ಸೌರ ಒಕ್ಕೂಟ ಮತ್ತು ಜಾಗತಿಕ ಜೈವಿಕ ಇಂಧನ ಒಕ್ಕೂಟದ ಉಪಕ್ರಮಗಳಲ್ಲಿ ಮಾರಿಷಸ್‌ ನ ಪಾಲುದಾರಿಕೆಯನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ, ಪ್ರಧಾನಮಂತ್ರಿಯವರು ಐತಿಹಾಸಿಕ ಸರ್ ಸೀವೂಸಾಗೂರ್ ರಾಮಗೂಲಮ್ ಸಸ್ಯೋದ್ಯಾನದಲ್ಲಿ ಸಸಿಯನ್ನು ನೆಟ್ಟು ತಾಯಿಯ ಹೆಸರಿನಲ್ಲಿ ಒಂದು ಗಿಡ (ಏಕ್ ಪೇಢ್ ಮಾ ಕೆ ನಾಮ್) ಉಪಕ್ರಮವನ್ನು ಸಹ ಎತ್ತಿ ತೋರಿಸಿದರು. ಪ್ರಧಾನಮಂತ್ರಿಯವರ ಪೂರ್ಣ ಭಾಷಣವನ್ನು here ನೋಡಬಹುದು.

 

ಕಾರ್ಯಕ್ರಮದಲ್ಲಿ ಇಂದಿರಾ ಗಾಂಧಿ ಭಾರತೀಯ ಸಂಸ್ಕೃತಿ ಕೇಂದ್ರ (ಐಜಿಸಿಐಸಿ), ಮಹಾತ್ಮ ಗಾಂಧಿ ಸಂಸ್ಥೆ (ಎಂಜಿಐ) ಮತ್ತು ಅಣ್ಣಾ ವೈದ್ಯಕೀಯ ಕಾಲೇಜಿನ ಕಲಾವಿದರು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Operation Sagar Bandhu: India provides assistance to restore road connectivity in cyclone-hit Sri Lanka

Media Coverage

Operation Sagar Bandhu: India provides assistance to restore road connectivity in cyclone-hit Sri Lanka
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 5 ಡಿಸೆಂಬರ್ 2025
December 05, 2025

Unbreakable Bonds, Unstoppable Growth: PM Modi's Diplomacy Delivers Jobs, Rails, and Russian Billions