ಪ್ಯಾರಿಸ್ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳ ಅತ್ಯುತ್ತಮ ಸಾಧನೆಯನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಪ್ಯಾರಿಸ್‌ನಲ್ಲಿ ನಡೆದ ಪ್ಯಾರಾಲಿಂಪಿಕ್ ಗೇಮ್ಸ್ 2024 ರಲ್ಲಿ 29 ಪದಕಗಳನ್ನು ಗಳಿಸಿದ ರಾಷ್ಟ್ರದ ಪ್ಯಾರಾ-ಅಥ್ಲೀಟ್‌ಗಳ ಅಚಲವಾದ ಸಮರ್ಪಣೆ ಮತ್ತು ಅದಮ್ಯ ಮನೋಭಾವವನ್ನು ಅವರು ಕೊಂಡಾಡಿದ್ದಾರೆ. 

ಈ ಕುರಿತು ಎಕ್ಸ್ ಪೋಸ್ಟ್ ನಲ್ಲಿ ಹಂಚಿಕೊಂಡಿರುವ ಪ್ರಧಾನ ಮಂತ್ರಿಗಳು:

“ಪ್ಯಾರಾಲಿಂಪಿಕ್ಸ್ 2024 ವಿಶೇಷ ಮತ್ತು ಐತಿಹಾಸಿಕವಾಗಿದೆ.

ನಮ್ಮ ಅದ್ವಿತೀಯ ಪ್ಯಾರಾ-ಅಥ್ಲೀಟ್‌ಗಳು 29 ಪದಕಗಳನ್ನು ಮನೆಗೆ ತಂದಿರುವುದು ಪ್ರತಿಯೊಬ್ಬ ಭಾರತೀಯರೂ ಹೆಮ್ಮೆಪಡುವಂತೆ ಮಾಡಿದೆ. ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಚೊಚ್ಚಲ ಬಾರಿಗೆ ಪ್ರದರ್ಶನ ನೀಡಿದ ನಂತರ ಇದುವರೆಗಿನ ಅತ್ಯುತ್ತಮ ಸಾಧನೆಯಾಗಿದೆ ಎಂದಿದ್ದಾರೆ. 

ಈ ಸಾಧನೆಗೆ ನಮ್ಮ ಕ್ರೀಡಾಪಟುಗಳ ಅಚಲವಾದ ಸಮರ್ಪಣೆ ಮತ್ತು ಅದಮ್ಯ ಮನೋಭಾವವೇ ಕಾರಣವಾಗಿದೆ. ಅವರ ಕ್ರೀಡಾ ಪ್ರದರ್ಶನಗಳು ನಮಗೆ ನೆನಪಿಟ್ಟುಕೊಳ್ಳಲು ಹಲವು ಕ್ಷಣಗಳನ್ನು ನೀಡಿವೆ ಮುಂದಿನ ದಿನಗಳಲ್ಲಿ ಹಲವು ಕ್ರೀಡಾಪಟುಗಳಿಗೆ ಸ್ಪೂರ್ತಿಯಾಗಿದ್ದಾರೆ"ಎಂದು ಬರೆದುಕೊಂಡಿದ್ದಾರೆ.

#Cheer4Bharat"

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
A Milestone in Financial Inclusion: The Success Story of PMSBY

Media Coverage

A Milestone in Financial Inclusion: The Success Story of PMSBY
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 9 ಮೇ 2026
May 09, 2026

Citizens Celebrate India’s Civilisational & Economic Awakening Under PM Narendra Modi