ಶೇರ್
 
Comments

ಘನತೆವೆತ್ತ ಪ್ರಧಾನಮಂತ್ರಿ ಆಲ್ಬನೀಸ್ ಅವರೇ,

ಎರಡೂ ದೇಶಗಳ ನಿಯೋಗದ ಪ್ರತಿನಿಧಿಗಳು.

ನನ್ನ ಮಾಧ್ಯಮ ಸ್ನೇಹಿತರೇ,

ನಮಸ್ಕಾರ..!


ಮೊದಲಿಗೆ ಇದೇ ಮೊದಲ ಬಾರಿಗೆ  ಭಾರತಕ್ಕೆ ಭೇಟಿ ನೀಡಿರುವ  ಪ್ರಧಾನಮಂತ್ರಿ ಆಲ್ಬನೀಸ್ ಅವರನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಕಳೆದ ವರ್ಷ ಉಭಯ ದೇಶಗಳು ಪ್ರಧಾನಮಂತ್ರಿಗಳ  ಮಟ್ಟದ ವಾರ್ಷಿಕ ಶೃಂಗಸಭೆಯನ್ನು ನಡೆಸಲು ನಿರ್ಧರಿಸಿದ್ದವು. ಇದೀಗ ಪ್ರಧಾನಮಂತ್ರಿ ಆಲ್ಬನೀಸ್ ಅವರ ಈ ಭೇಟಿಯಿಂದಾಗಿ ಆ ಸರಣಿ ಇದೀಗ ಆರಂಭವಾಗುತ್ತಿದೆ. ಅವರು ಹೋಲಿ  ಹಬ್ಬದ ದಿನ ಭಾರತಕ್ಕೆ ಆಗಮಿಸಿದ್ದಾರೆ ಮತ್ತು ಆನಂತರ ನಾವು ಕೆಲ ಹೊತ್ತು ಕ್ರಿಕೆಟ್ ಮೈದಾನಕ್ಕೆ ಜತೆಯಾಗಿ ತೆರಳಿದ್ದೆವು. ಈ ಬಣ್ಣಗಳು, ಸಂಸ್ಕೃತಿ ಮತ್ತು ಕ್ರಿಕೆಟ್ ನ ಅಚರಣೆಯು ಒಂದು ರೀತಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸ್ನೇಹದ ಉತ್ಸಾಹ ಮತ್ತು ಉಲ್ಲಾಸದ ಪರಿಪೂರ್ಣ ಸಂಕೇತವಾಗಿದೆ.

ಮಿತ್ರರೇ,

ಇಂದು ನಾವು ಪರಸ್ಪರ ಸಹಕಾರದ ನಾನಾ ಆಯಾಮಗಳ ಬಗ್ಗೆ ವಿಸ್ತೃರವಾಗಿ ಚರ್ಚೆ ನಡೆಸಿದೆವು. ಭದ್ರತಾ ಸಹಕಾರ ನಮ್ಮ ಸಮಗ್ರ ಕಾರ್ಯತಂತ್ರ ಪಾಲುದಾರಿಕೆಯ ಪ್ರಮುಖ ಸ್ತಂಭವಾಗಿದೆ. ಇಂದು ನಾವು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಸಾಗರ ಭದ್ರತೆ ಕುರಿತು ವಿವರವಾಗಿ ಚರ್ಚೆ ನಡೆಸಿದೆವು ಮತ್ತು ಪರಸ್ಪರ ರಕ್ಷಣಾ ಮತ್ತು ಭದ್ರತಾ ಸಹಕಾರವನ್ನು ಹೆಚ್ಚಿಸುವ ಬಗ್ಗೆ ಚರ್ಚೆ ನಡೆಸಿದೆವು. ರಕ್ಷಣಾ ವಲಯದಲ್ಲಿ ನಾವು ಪರಸ್ಪರರ ರಕ್ಷಣಾ ಪಡೆಗಳಿಗೆ ಸಾಗಾಣೆ ನೆರವು ಸೇರಿದಂತೆ ಕಳೆದ ಕೆಲವು ವರ್ಷಗಳಿಂದ ಗಣನೀಯ ಒಪ್ಪಂದಗಳನ್ನು ಮಾಡಿಕೊಂಡಿದ್ದೆವೆ. ನಮ್ಮ ಭದ್ರತಾ ಸಂಸ್ಥೆಗಳ ನಡುವೆ ನಿರಂತರವಾಗಿ ಮತ್ತು ಉಪಯುಕ್ತ ಮಾಹಿತಿ ವಿನಿಮಯ ನಡೆಯುತ್ತಿದೆ ಮತ್ತು ಅದನ್ನು ಮತ್ತಷ್ಟು ಬಲರ್ವಧನೆಗೊಳಿಸಲು ನಾವು ಚರ್ಚೆ ನಡೆಸಿದೆವು.  ನಾವು ನಮ್ಮ ಯುವ ಯೋಧರ ನಡುವೆ ಸಂಪರ್ಕ ಮತ್ತು ಸ್ನೇಹವನ್ನು ವೃದ್ಧಿಸಲು ನಾವು ಜನರಲ್ ರಾವತ್ ಅಧಿಕಾರಿಗಳ ವಿನಿಯಮ ಕಾರ್ಯಕ್ರಮವನ್ನು ಸ್ಥಾಪಿಸಿದ್ದು, ಅದು ಕಳೆದ ತಿಂಗಳಷ್ಟೇ ಆರಂಭವಾಗಿದೆ.

ಮಿತ್ರರೇ,

ಇಂದು ನಾವು ವಿಶ್ವಾಸಾರ್ಹ ಮತ್ತು ಉತ್ಕೃಷ್ಟ ಜಾಗತಿಕ ಪೂರೈಕೆ ಸರಪಳಿ ಅಭಿವೃದ್ಧಿಗಾಗಿ ಪರಸ್ಪರ ಸಹಕಾರದ ಬಗ್ಗೆ ಚರ್ಚೆ ನಡೆಸಿದೆವು. ನವೀಕರಿಸಬಹುದಾದ ಇಂಧನ ಎರಡೂ ದೇಶಗಳಿಗೂ ಆದ್ಯತೆ ಮತ್ತು ಹೆಚ್ಚಿನ ಗಮನ ಹರಿಸಬಹುದಾದ ವಲಯವಾಗಿದೆ ಮತ್ತು ನಾವು ಶುದ್ಧ ಹೈಡ್ರೋಜನ್  ಮತ್ತು ಸೌರಶಕ್ತಿಯತ್ತ ನಾವು ಒಗ್ಗೂಡಿ ಕಾರ್ಯನಿರ್ವಹಿಸುತ್ತಿದ್ದೇವೆ. ಕಳೆದ ವರ್ಷ ಅನುಷ್ಠಾನಗೊಳಿಸಲಾದ ವ್ಯಾಪಾರ ಒಪ್ಪಂದ- ಇಸಿಟಿಎ ಎರಡೂ ದೇಶಗಳಿಗೆ ವ್ಯಾಪಾರ ಮತ್ತು ಹೂಡಿಕೆಗೆ ಅವಕಾಶಗಳನ್ನು ತೆರೆದಿದೆ. ಅಲ್ಲದೆ, ನಮ್ಮ ತಂಡಗಳು ಸಮಗ್ರ ಆರ್ಥಿಕ ಸಹಕಾರ ಒಪ್ಪಂದದ ಬಗ್ಗೆ ಕಾರ್ಯೋನ್ಮುಖವಾಗಿವೆ.


ಮಿತ್ರರೇ,

ಜನರ ಜನರ ನಡುವಿನ ಸಂಬಂಧಗಳು ಭಾರತ- ಆಸ್ಟ್ರೇಲಿಯಾ ನಡುವಿನ ಪ್ರಮುಖ ಆಧಾರ ಸ್ತಂಭವಾಗಿದೆ. ನಾವು ನಮ್ಮ ವಿದ್ಯಾರ್ಥಿ ಸಮುದಾಯಕ್ಕೆ ಅನುಕೂಲವಾಗುವಂತೆ ಶೈಕ್ಷಣಿಕ ಸಂಸ್ಥೆಗಳ ನಡುವೆ ಪರಸ್ಪರ ಮಾನ್ಯತೆ ನೀಡಲು ಕಾರ್ಯತಂತ್ರಕ್ಕೆ ಸಹಿ ಹಾಕಿದ್ದೇವೆ. ಸಾಗಾಣೆ ಒಪ್ಪಂದದಡಿ ನಾವು ಮುನ್ನಡೆಯುತ್ತಿದ್ದೇವೆ. ಇದು ವಿದ್ಯಾರ್ಥಿಗಳು, ಕೆಲಸಗಾರರು ಮತ್ತು ವೃತ್ತಿಪರರಿಗೆ ಅನುಕೂಲವಾಗಲಿದೆ. ಅನಿವಾಸಿ ಭಾರತೀಯರು ಆಸ್ಟ್ರೇಲಿಯಾದ ಎರಡನೇ ಅತಿದೊಡ್ಡ ವಲಸೆ ಸಮುದಾಯವಾಗಿದೆ. ಈ ಭಾರತೀಯ ಸಮುದಾಯ ಆಸ್ಟ್ರೇಲಿಯಾದ ಸಮಾಜ ಮತ್ತು ಆರ್ಥಿಕತೆಗೆ ಗಣನೀಯ ಕೊಡುಗೆಯನ್ನು ನೀಡುತ್ತಿದೆ. ಕಳೆದ ಕೆಲವು ವಾರಗಳಿಂದೀಚೆಗೆ ಆಸ್ಟ್ರೇಲಿಯಾದಲ್ಲಿ ದೇವಾಲಯಗಳ ಮೇಲೆ ನಿರಂತರ ದಾಳಿಗಳು ನಡೆಯುತ್ತಿರುವ ವರದಿಗಳಾಗುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ. ಇಂತಹ ಸುದ್ದಿಗಳು ಭಾರತದಲ್ಲಿನ ಜನರಲ್ಲಿ ಸಹಜವಾಗಿಯೇ ಕಳವಳದ ಸಂಗತಿಯಾಗಿವೆ ಮತ್ತು ಅದು ಮನಸನ್ನು ವಿಚಲಿತಗೊಳಿಸುತ್ತವೆ. ಆ ಬಗ್ಗೆ ನಮ್ಮ ಭಾವನೆಗಳು ಮತ್ತು ಆತಂಕಗಳನ್ನು ಪ್ರಧಾನಮಂತ್ರಿ ಅಲ್ಬನೀಸ್ ಅವರೊಂದಿಗೆ ಹಂಚಿಕೊಂಡಿದ್ದೇನೆ. ಮತ್ತು ಅವರು ಭಾರತೀಯ ಸಮುದಾಯದ ಸುರಕ್ಷತೆಗೆ ತಮ್ಮ ವಿಶೇಷ ಆದ್ಯತೆಯಾಗಿದೆ ಎಂದು ಭರವಸೆ ನೀಡಿದ್ದಾರೆ. ಈ ವಿಷಯದ ಕುರಿತಂತೆ ನಮ್ಮ ತಂಡಗಳು ನಿರಂತರ ಸಂಪರ್ಕದಲ್ಲಿವೆ ಮತ್ತು ಎಷ್ಟು ಸಾಧ್ಯವೋ ಅಷ್ಟು ಸಹಕಾರವನ್ನು ನೀಡುತ್ತಿವೆ.


ಮಿತ್ರರೇ,

ಜಾಗತಿಕ ಸವಾಲುಗಳು ಮತ್ತು ಜಾಗತಿಕ ಕಲ್ಯಾಣಕ್ಕಾಗಿ ನಮ್ಮ ದ್ವಿಪಕ್ಷೀಯ ಸಂಬಂಧಗಳು ಅತ್ಯಂತ ಪ್ರಮುಖವಾಗಿವೆ ಎಂಬುದನ್ನು ಪ್ರಧಾನಮಂತ್ರಿ ಆಲ್ಬನೀಸ್ ಮತ್ತು ನಾನು ಒಪ್ಪಿದ್ದೇನೆ. ಭಾರತದ ಜಿ-20 ಅಧ್ಯಕ್ಷತೆಯ ಆದ್ಯತೆಗಳನ್ನು ನಾನು ಪ್ರಧಾನಮಂತ್ರಿ ಆಲ್ಬನೀಸ್ ಅವರಿಗೆ ವಿವರಿಸಿದ್ದೇನೆ ಮತ್ತು  ಆಸ್ಟ್ರೇಲಿಯಾ ನಿರಂತರ ಬೆಂಬಲ ನೀಡುತ್ತಿರುವುದಕ್ಕಾಗಿ ನಾನು ಕೃತಜ್ಞತೆಗಳನ್ನು ಸಲ್ಲಿಸಿದ್ದೇನೆ. ಭಾರತ ಮತ್ತು ಆಸ್ಟ್ರೇಲಿಯಾ ಎರಡೂ ಕ್ವಾಡ್ ನ ಸದಸ್ಯ ರಾಷ್ಟ್ರಗಳಾಗಿವೆ ಮತ್ತು ಇಂದು ನಾವು ಆ ವೇದಿಕೆಯಲ್ಲಿ ನಮ್ಮ ನಡುವೆ ಸಹಕಾರದ ಬಗ್ಗೆಯೂ ನಾವು ಚರ್ಚೆ ನಡೆಸಿದೆವು. ಈ ವರ್ಷದ ಮೇ ತಿಂಗಳಲ್ಲಿ ನಡೆಯಲಿರುವ ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಭಾಗವಹಿಸಲು ಆಹ್ವಾನ ನೀಡಿದ್ದಕ್ಕಾಗಿ ಪ್ರಧಾನಮಂತ್ರಿ ಅಲ್ಬನೀಸ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದೆ. ಆನಂತರ ಜಿ-20 ಶೃಂಗಸಭೆ ಸೆಪ್ಟಂಬರ್ ನಲ್ಲಿ ನಡೆಯಲಿದ್ದು, ಆಗ ನಾವು ಪ್ರಧಾನಮಂತ್ರಿ ಆಲ್ಬನೀಸ್ ಅವರನ್ನು ಮತ್ತೊಮ್ಮೆ ಸ್ವಾಗತಿಸುವ ಅವಕಾಶವಿದೆ ಮತ್ತು ಆ ಬಗ್ಗೆ ಅತೀವ ಸಂತೋಷವಿದೆ. ಮತ್ತೊಮ್ಮೆ ಪ್ರಧಾನಮಂತ್ರಿ ಆಲ್ಬನೀಸ್ ಅವರಿಗೆ ಭಾರತಕ್ಕೆ ಆತ್ಮೀಯ ಸ್ವಾಗತ ಕೋರುತ್ತೇನೆ. ಅವರ ಈ ಭೇಟಿ ನಮ್ಮ ಸಂಬಂಧಗಳಿಗೆ ಹೊಸ ವೇಗ ಮತ್ತು ಚುರುಕು ನೀಡಲಿವೆ ಎಂಬ ಭರವಸೆ ನನಗಿದೆ.

ಧನ್ಯವಾದಗಳು.

ಘೋಷಣೆ: ಇದು ಪ್ರಧಾನಮಂತ್ರಿಗಳ ಭಾಷಣದ ಯಥಾವತ್‌ ಅನುವಾದವಲ್ಲ, ಅವರು ಮೂಲತಃ ಹಿಂದಿಯಲ್ಲಿ ಭಾಷಣ ಮಾಡಿದರು.

Explore More
77ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯ ಕೊತ್ತಲದಿಂದ ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಪಠ್ಯಾಂತರ

ಜನಪ್ರಿಯ ಭಾಷಣಗಳು

77ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯ ಕೊತ್ತಲದಿಂದ ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಪಠ್ಯಾಂತರ
Swachh Bharat Abhiyan: How India has written a success story in cleanliness

Media Coverage

Swachh Bharat Abhiyan: How India has written a success story in cleanliness
NM on the go

Nm on the go

Always be the first to hear from the PM. Get the App Now!
...
Prime Minister congratulates Kiran Baliyan for winning Bronze Medal
September 30, 2023
ಶೇರ್
 
Comments

The Prime Minister, Shri Narendra Modi has congratulated Kiran Baliyan for winning Bronze Medal in the Shot Put event at Asian Games.

The Prime Minister posted on X;

“Indian athletes continue to shine at the Asian Games 2022!

A big congratulations to the exceptional Kiran Baliyan for her amazing achievement in the Shot Put event and winning the Bronze Medal. Her success has delighted the entire nation.”