ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಘನತೆವೆತ್ತ ಶ್ರೀ ಇಮ್ಯಾನುಯೆಲ್ ಮ್ಯಾಕ್ರೋನ್ ಅವರು ಇಂದು ಪ್ಯಾರಿಸ್‌ ನಲ್ಲಿ 14ನೇ ಭಾರತ-ಫ್ರಾನ್ಸ್ ಸಿಇಒ ಫೋರಂ ಅನ್ನು ಉದ್ದೇಶಿಸಿ ಜಂಟಿಯಾಗಿ ಮಾತನಾಡಿದರು. ರಕ್ಷಣೆ, ಏರೋಸ್ಪೇಸ್, ​​ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು, ಮೂಲಸೌಕರ್ಯ, ಸುಧಾರಿತ ಉತ್ಪಾದನೆ, ಕೃತಕ ಬುದ್ಧಿಮತ್ತೆ, ಜೀವನ-ವಿಜ್ಞಾನ, ಕ್ಷೇಮ ಮತ್ತು ಜೀವನಶೈಲಿ ಮತ್ತು ಆಹಾರ ಮತ್ತು ಆತಿಥ್ಯ ಮುಂತಾದ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುವ, ಎರಡೂ ಕಡೆಯ ಕಂಪನಿಗಳ ವೈವಿಧ್ಯಮಯ ಗುಂಪಿನ ಸಿಇಒಗಳನ್ನು ಫೋರಂ ಒಟ್ಟುಗೂಡಿಸಿತು.

 

ಪ್ರಧಾನಮಂತ್ರಿಯವರು ತಮ್ಮ ಭಾಷಣದಲ್ಲಿ ಭಾರತ ಮತ್ತು ಫ್ರಾನ್ಸ್ ನಡುವೆ ಬೆಳೆಯುತ್ತಿರುವ ವ್ಯಾಪಾರ ಮತ್ತು ಆರ್ಥಿಕ ಸಹಕಾರ ಮತ್ತು ಉಭಯ ದೇಶಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆಗೆ ನೀಡಿದ ವೇಗವನ್ನು ಪ್ರಸ್ತಾಪಿಸಿದರು. ಸ್ಥಿರ ರಾಜಕೀಯ ಮತ್ತು ಊಹಿಸಬಹುದಾದ ನೀತಿ ಪರಿಸರ ವ್ಯವಸ್ಥೆಯ ಆಧಾರದ ಮೇಲೆ ಆದ್ಯತೆಯ ಜಾಗತಿಕ ಹೂಡಿಕೆ ತಾಣವಾಗಿ ಭಾರತದ ಆಕರ್ಷಣೆಯನ್ನು ಅವರು ಎತ್ತಿ ತೋರಿಸಿದರು. ಇತ್ತೀಚಿನ ಬಜೆಟ್‌ನಲ್ಲಿ ಘೋಷಿಸಲಾದ ಸುಧಾರಣೆಗಳನ್ನು ಚರ್ಚಿಸಿದ ಪ್ರಧಾನಮಂತ್ರಿಯವರು, ವಿಮಾ ಕ್ಷೇತ್ರವು ಈಗ ಶೇ.100 ಎಫ್‌ ಡಿ ಐ ಗೆ ಮುಕ್ತವಾಗಿದೆ ಮತ್ತು ನಾಗರಿಕ ಪರಮಾಣು ಶಕ್ತಿ ವಲಯವು ಎಸ್‌ ಎಂ ಆರ್ ಮತ್ತು ಎ ಎಂ ಆರ್‌ ತಂತ್ರಜ್ಞಾನಗಳ ಮೇಲೆ ಕೇಂದ್ರೀಕರಿಸಿ ಖಾಸಗಿ ಸಹಭಾಗಿತ್ವಕ್ಕೆ ಮುಕ್ತವಾಗಿದೆ ಎಂದು ಹೇಳಿದರು; ಕಸ್ಟಮ್ಸ್ ಸುಂಕದ ದರ ರಚನೆಯನ್ನು ತರ್ಕಬದ್ಧಗೊಳಿಸಲಾಗಿದೆ ಮತ್ತು ಜೀವನವನ್ನು ಸುಲಭಗೊಳಿಸಲು, ಸರಳ ಆದಾಯ ತೆರಿಗೆ ಸಂಹಿತೆಯನ್ನು ಪರಿಚಯಿಸಲಾಗುತ್ತಿದೆ ಎಂದು ಹೇಳಿದರು. ಸುಧಾರಣೆಗಳನ್ನು ಮುಂದುವರಿಸುವ ಸರ್ಕಾರದ ಬದ್ಧತೆಯನ್ನು ಉಲ್ಲೇಖಿಸಿದ ಅವರು, ನಂಬಿಕೆ ಆಧಾರಿತ ಆರ್ಥಿಕ ಆಡಳಿತವನ್ನು ಸ್ಥಾಪಿಸಲು ನಿಯಂತ್ರಕ ಸುಧಾರಣೆಗಳಿಗಾಗಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ ಎಂದು ಹೇಳಿದರು. ಈ ಉತ್ಸಾಹದಲ್ಲಿ, ಕಳೆದ ಕೆಲವು ವರ್ಷಗಳಲ್ಲಿ 40,000 ಕ್ಕೂ ಹೆಚ್ಚು ಅನುಸರಣೆಗಳನ್ನು ತರ್ಕಬದ್ಧಗೊಳಿಸಲಾಗಿದೆ ಎಂದು ಅವರು ಹೇಳಿದರು.

 

ರಕ್ಷಣೆ, ಇಂಧನ, ಹೆದ್ದಾರಿಗಳು, ನಾಗರಿಕ ವಿಮಾನಯಾನ, ಬಾಹ್ಯಾಕಾಶ, ಆರೋಗ್ಯ ರಕ್ಷಣೆ, ಫಿನ್‌ಟೆಕ್ ಮತ್ತು ಸುಸ್ಥಿರ ಅಭಿವೃದ್ಧಿ ಕ್ಷೇತ್ರಗಳಲ್ಲಿ ಭಾರತದ ಬೆಳವಣಿಗೆಯ ಕಥೆಯು ನೀಡುವ ಅಪಾರ ಅವಕಾಶಗಳನ್ನು ಪರಿಗಣಿಸಲು ಫ್ರೆಂಚ್ ಕಂಪನಿಗಳನ್ನು ಪ್ರಧಾನಿ ಆಹ್ವಾನಿಸಿದರು. ಭಾರತದ ಕೌಶಲ್ಯಗಳು, ಪ್ರತಿಭೆ ಮತ್ತು ನಾವೀನ್ಯತೆ ಮತ್ತು ಇತ್ತೀಚೆಗೆ ಪ್ರಾರಂಭಿಸಲಾದ ಎಐ, ಸೆಮಿಕಂಡಕ್ಟರ್, ಕ್ವಾಂಟಮ್, ನಿರ್ಣಾಯಕ ಖನಿಜಗಳು ಮತ್ತು ಹೈಡ್ರೋಜನ್ ಮಿಷನ್‌ ಗಳಲ್ಲಿ ಜಾಗತಿಕ ಮೆಚ್ಚುಗೆ ಮತ್ತು ಆಸಕ್ತಿಯನ್ನು ಗಮನಿಸಿದ ಅವರು ಪರಸ್ಪರ ಬೆಳವಣಿಗೆ ಮತ್ತು ಸಮೃದ್ಧಿಗಾಗಿ ಭಾರತದೊಂದಿಗೆ ಪಾಲುದಾರರಾಗಲು ಫ್ರೆಂಚ್ ಉದ್ಯಮಗಳಿಗೆ ಕರೆ ನೀಡಿದರು. ಅವರು ಈ ಕ್ಷೇತ್ರಗಳಲ್ಲಿ ಸಕ್ರಿಯ ತೊಡಗಿಸಿಕೊಳ್ಳುವಿಕೆಯ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು ಮತ್ತು ನಾವೀನ್ಯತೆ, ಹೂಡಿಕೆ ಮತ್ತು ತಂತ್ರಜ್ಞಾನ-ಚಾಲಿತ ಪಾಲುದಾರಿಕೆಗಳನ್ನು ಉತ್ತೇಜಿಸಲು ಎರಡೂ ದೇಶಗಳ ಬದ್ಧತೆಯನ್ನು ಪುನರುಚ್ಚರಿಸಿದರು. ಪ್ರಧಾನಿಯವರ ಸಂಪೂರ್ಣ ಮಾತುಗಳನ್ನು ಇಲ್ಲಿ (here) ನೋಡಬಹುದು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Operation Sagar Bandhu: India provides assistance to restore road connectivity in cyclone-hit Sri Lanka

Media Coverage

Operation Sagar Bandhu: India provides assistance to restore road connectivity in cyclone-hit Sri Lanka
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 5 ಡಿಸೆಂಬರ್ 2025
December 05, 2025

Unbreakable Bonds, Unstoppable Growth: PM Modi's Diplomacy Delivers Jobs, Rails, and Russian Billions