ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಭಾರತ-ಬಾಂಗ್ಲಾದೇಶ ಮೈತ್ರಿ ಪೈಪ್ಲೈನ್ ಅನ್ನು ಜಂಟಿಯಾಗಿ ಉದ್ಘಾಟಿಸಿದರು
ಐ ಬಿ ಎಫ್ ಪಿ ಭಾರತ ಮತ್ತು ಅದರ ನೆರೆಹೊರೆಯ ರಾಷ್ಟ್ರಗಳ ನಡುವಿನ ಎರಡನೇ ಗಡಿಯಾಚೆಗಿನ ಇಂಧನ ಪೈಪ್ಲೈನ್ ಆಗಿದೆ
ಬಾಂಗ್ಲಾದೇಶದೊಂದಿಗೆ ವರ್ಧಿತ ಸಂಪರ್ಕವು ಜನರ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಬಾಂಗ್ಲಾದೇಶದ ಪ್ರಧಾನಿ ಶ್ರೀಮತಿ ಶೇಖ್ ಹಸೀನಾ ಅವರು ಇಂದು ಭಾರತ-ಬಾಂಗ್ಲಾದೇಶ ಮೈತ್ರಿ ಪೈಪ್ಲೈನ್ (ಐ ಬಿ ಎಫ್ ಪಿ) ಅನ್ನು ವರ್ಚುವಲ್ ವಿಧಾನದಲ್ಲಿ ಜಂಟಿಯಾಗಿ ಉದ್ಘಾಟಿಸಿದರು. ಈ ಪೈಪ್ಲೈನ್ನ ನಿರ್ಮಾಣಕ್ಕೆ ಸೆಪ್ಟೆಂಬರ್ 2018 ರಲ್ಲಿ ಇಬ್ಬರೂ ಪ್ರಧಾನ ಮಂತ್ರಿಗಳು ಅಡಿಪಾಯ ಹಾಕಿದ್ದರು. ನುಮಾಲಿಗಢ್ ರಿಫೈನರಿ ಲಿಮಿಟೆಡ್ 2015 ರಿಂದ ಬಾಂಗ್ಲಾದೇಶಕ್ಕೆ ಪೆಟ್ರೋಲಿಯಂ ಉತ್ಪನ್ನಗಳನ್ನು ಪೂರೈಸುತ್ತಿದೆ. ಇದು ಭಾರತ ಮತ್ತು ಅದರ ನೆರೆಹೊರೆಯ ರಾಷ್ಟ್ರಗಳ ನಡುವಿನ ಎರಡನೇ ಗಡಿಯಾಚೆಗಿನ ಇಂಧನ ಪೈಪ್ಲೈನ್ ಆಗಿದೆ.

ವಿದ್ಯುತ್ ಮತ್ತು ಇಂಧನ ವಲಯದಲ್ಲಿನ ಸಹಕಾರವು ಭಾರತ-ಬಾಂಗ್ಲಾದೇಶ ಸಂಬಂಧಗಳ ವಿಶಿಷ್ಟ ಲಕ್ಷಣಗಳಲ್ಲಿ ಒಂದಾಗಿದೆ. ಐ ಬಿ ಎಫ್ ಪಿ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಮೊದಲ ಗಡಿಯಾಚೆಗಿನ ಇಂಧನ ಪೈಪ್ಲೈನ್ ಆಗಿದ್ದು, ವರ್ಷಕ್ಕೆ 1 ಮಿಲಿಯನ್ ಮೆಟ್ರಿಕ್ ಟನ್ (MMTPA) ಹೈ-ಸ್ಪೀಡ್ ಡೀಸೆಲ್ (ಹೆಚ್ ಎಸ್ ಡಿ) ಅನ್ನು ಬಾಂಗ್ಲಾದೇಶಕ್ಕೆ ಸಾಗಿಸುವ ಸಾಮರ್ಥ್ಯ ಹೊಂದಿದೆ. ಬಾಂಗ್ಲಾದೇಶದೊಂದಿಗಿನ ವರ್ಧಿತ ಸಂಪರ್ಕವು ಎರಡು ಕಡೆಗಳ ಜನರ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ.
ಬಾಂಗ್ಲಾದೇಶವು ಭಾರತದ ಪ್ರಮುಖ ಅಭಿವೃದ್ಧಿ ಪಾಲುದಾರ ಮತ್ತು ಈ ಪ್ರದೇಶದಲ್ಲಿ ಅದರ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದೆ. ಮೈತ್ರಿ ಪೈಪ್ಲೈನ್ನ ಕಾರ್ಯಾಚರಣೆಯು ಉಭಯ ದೇಶಗಳ ನಡುವಿನ ಇಂಧನ ಸಹಕಾರವನ್ನು ಹೆಚ್ಚಿಸುತ್ತದೆ ಮತ್ತು ಬಾಂಗ್ಲಾದೇಶದಲ್ಲಿ ವಿಶೇಷವಾಗಿ ಕೃಷಿ ವಲಯದಲ್ಲಿ ಮತ್ತಷ್ಟು ಬೆಳವಣಿಗೆಯನ್ನು ಸಾಧಿಸುತ್ತದೆ.

ಯೋಜನೆಗೆ ನಿರಂತರ ಮಾರ್ಗದರ್ಶನ ನೀಡಿದ ಪ್ರಧಾನಮಂತ್ರಿ ಶ್ರೀಮತಿ ಶೇಖ್ ಹಸೀನಾ ಅವರಿಗೆ ಪ್ರಧಾನಮಂತ್ರಿಯವರು ಧನ್ಯವಾದಗಳನ್ನು ಅರ್ಪಿಸಿದರು ಮತ್ತು ಉಭಯ ದೇಶಗಳ ಜನರ ಅನುಕೂಲಕ್ಕಾಗಿ ಅವರೊಂದಿಗೆ ಕೆಲಸ ಮಾಡುವುದನ್ನು ಮುಂದುವರೆಸುವ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದರು.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Khichdi To Moringa Paratha: 7 Traditional Foods PM Modi Loves

Media Coverage

Khichdi To Moringa Paratha: 7 Traditional Foods PM Modi Loves
NM on the go

Nm on the go

Always be the first to hear from the PM. Get the App Now!
...
ಆಗಸ್ಟ್ 27ರಂದು 'ಖೇಲೋ ಇಂಡಿಯಾ' ಸಂವಾದದಲ್ಲಿ ಯುವಜನರನ್ನುದ್ದೇಶಿಸಿ ಮಾತನಾಡಲಿರುವ ಪ್ರಧಾನಮಂತ್ರಿ
August 26, 2026
'ಖೇಲೋ ಇಂಡಿಯಾ' ಸಂವಾದವು ಕ್ರೀಡೆ, ಯುವ ನಾಯಕತ್ವ, ನಾಗರಿಕ ಜವಾಬ್ದಾರಿ, ಸ್ವಯಂಸೇವೆ, ಫಿಟ್‌ನೆಸ್‌ ಮತ್ತು ರಾಷ್ಟ್ರ ನಿರ್ಮಾಣವನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸಲಿದೆ
'ಖೇಲೋ ಇಂಡಿಯಾ' ಸಂವಾದದ ಅಡಿಯಲ್ಲಿ ನಡೆಯುವ 'ಯುವ ಸಂವಾದ'ವು ಐದು ಪ್ರಮುಖ ವಿಷಯಗಳ ಮೇಲೆ ಕೇಂದ್ರೀಕರಿಸಲಿದೆ: ಕ್ರೀಡೆ, ಒಲಿಂಪಿಕ್ ಆಕಾಂಕ್ಷೆಗಳು, ಯುವ ನಾಯಕತ್ವ, 'ವಿಕಸಿತ ಭಾರತ' ಮತ್ತು 'ನಶಾ ಮುಕ್ತ ಯುವ' ಅಭಿಯಾನ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಗಸ್ಟ್ 27ರಂದು ಬೆಳಿಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ 'ಖೇಲೋ ಇಂಡಿಯಾ' ಸಂವಾದವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮವು ಯುವಕರಿಗೆ ಭಾರತದ ಕ್ರೀಡಾ ಪ್ರಯಾಣದಲ್ಲಿ ತೊಡಗಿಸಿಕೊಳ್ಳಲು, ಅವರ ಆಕಾಂಕ್ಷೆಗಳನ್ನು ಹಂಚಿಕೊಳ್ಳಲು ಮತ್ತು ಬಲವಾದ ಯುವಕರ ನೇತೃತ್ವದ 'ವಿಕಸಿತ ಭಾರತ'ಕ್ಕಾಗಿ ತಮ್ಮ ವಿಚಾರಗಳನ್ನು ನೀಡಲು ಸಹಾಯ ಮಾಡುವುದು ಕಾರ್ಯಕ್ರಮದ ಉದ್ದೇಶವಾಗಿದೆ.

2026ರ ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ 'ಮೇರಾ ಯುವ ಭಾರತ್' (ಮೈ ಭಾರತ್‌) ಆಯೋಜಿಸಿರುವ ಈ ಕಾರ್ಯಕ್ರಮವು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಪ್ರತಿಯೊಂದು ಜಿಲ್ಲೆಯ ಎರಡು ಕಾಲೇಜುಗಳಲ್ಲಿ ಯುವಕರ ಭಾಗವಹಿಸುವಿಕೆಯೊಂದಿಗೆ ದೇಶಾದ್ಯಂತ ನಡೆಯಲಿದೆ. ಯುವಕರ ಆಕಾಂಕ್ಷೆಗಳನ್ನು ರಾಷ್ಟ್ರೀಯ ಅಭಿವೃದ್ಧಿ ಕಾರ್ಯಸೂಚಿಯ ಕೇಂದ್ರಭಾಗದಲ್ಲಿ ಇರಿಸಿಕೊಂಡು ಸದೃಢ, ಶಿಸ್ತುಬದ್ಧ ಮತ್ತು ಕ್ರೀಡಾ ರಾಷ್ಟ್ರವನ್ನು ನಿರ್ಮಿಸುವ ಪ್ರಧಾನಮಂತ್ರಿಯವರ ದೃಷ್ಟಿಕೋನಕ್ಕೆ ಅನುಗುಣವಾಗಿ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ.

ರಾಷ್ಟ್ರವ್ಯಾಪಿ ನಡೆಯುವ 'ಖೇಲೋ ಇಂಡಿಯಾ ಸಂವಾದ'ವು ಕ್ರೀಡೆ, ಯುವ ನಾಯಕತ್ವ, ನಾಗರಿಕ ಜವಾಬ್ದಾರಿ, ಸ್ವಯಂ ಸೇವೆ, ಫಿಟ್ನೆಸ್ ಮತ್ತು ರಾಷ್ಟ್ರ ನಿರ್ಮಾಣವನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸಲಿದೆ. ಭಾರತದ ಯುವ ಮತ್ತು ಕ್ರೀಡಾ ಪರಿಸರ ವ್ಯವಸ್ಥೆಯ ಕುರಿತಾದ ನಿರಂತರ ಸಂವಾದದಲ್ಲಿ ಯುವಕರ ಆಲೋಚನೆಗಳು ಮತ್ತು ದೃಷ್ಟಿಕೋನಗಳಿಗೆ ಸ್ಥಾನವನ್ನು ಖಚಿತಪಡಿಸಿಕೊಳ್ಳುವ ಜೊತೆಗೆ, ದೇಶದ ಕ್ರೀಡಾ ಮಹತ್ವಾಕಾಂಕ್ಷೆಗಳೊಂದಿಗೆ ಯುವಕರು ತೊಡಗಿಸಿಕೊಳ್ಳಲು ಇದು ನೇರ ಮಾರ್ಗವನ್ನು ಒದಗಿಸುತ್ತದೆ.

ರಾಷ್ಟ್ರೀಯ ಕಾರ್ಯಕ್ರಮದ ನಂತರ ಯುವ ಭಾಗಿದಾರರು, 'ಮೈ ಭಾರತ್' ಸ್ವಯಂಸೇವಕರು, ಸ್ಥಳೀಯ ಕ್ರೀಡಾಪಟುಗಳು ಮತ್ತು ಜನಪ್ರತಿನಿಧಿಗಳನ್ನು ಒಳಗೊಂಡ ಸ್ಥಳೀಯ ಸಂವಾದಗಳು ನಡೆಯಲಿವೆ. ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವ ಯುವಕರು ಮತ್ತು ಪ್ರಮುಖ ಭಾರತೀಯ ಅಥ್ಲೀಟ್‌ಗಳು ಹಾಗೂ ಪದಕ ವಿಜೇತರ ನಡುವಿನ ನೇರ ಸಂವಾದವು ಈ ಉಪಕ್ರಮದ ಪ್ರಮುಖ ಲಕ್ಷಣವಾಗಿದೆ. 'ಯುವ ಸಂವಾದ'ವು ಈ ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದು, ಇದರಲ್ಲಿ ಯುವ ಭಾಗಿದಾರರನ್ನು ತಮ್ಮ ಸ್ವಂತ ಆಲೋಚನೆಗಳು, ದೃಷ್ಟಿಕೋನಗಳು ಮತ್ತು ಆಕಾಂಕ್ಷೆಗಳನ್ನು ವ್ಯಕ್ತಪಡಿಸಲು ಆಹ್ವಾನಿಸಲಾಗುತ್ತದೆ. ಈ ಸಂವಾದವನ್ನು ಐದು ವಿಷಯಗಳ ಸುತ್ತ ರಚಿಸಲಾಗಿದೆ:

  • ಉತ್ತಮ ಸೌಲಭ್ಯಗಳು, ತರಬೇತಿ, ಕ್ರೀಡಾ ವಿಜ್ಞಾನ ಮತ್ತು ಎಲ್ಲರನ್ನೂ ಒಳಗೊಂ ಭಾಗವಹಿಸುವಿಕೆಯ ಮೂಲಕ ಭಾರತದ ಕ್ರೀಡಾ ಪರಿಸರ ವ್ಯವಸ್ಥೆಯನ್ನು ಸುಧಾರಿಸುವುದು;
  • ವೈಜ್ಞಾನಿಕ ಪ್ರತಿಭಾ ಶೋಧನೆ, ಪಾರದರ್ಶಕ ಆಯ್ಕೆ ಮತ್ತು ದೀರ್ಘಕಾಲೀನ ಕ್ರೀಡಾಪಟು ಅಭಿವೃದ್ಧಿಯ ಮೂಲಕ 2036ರ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಗೆ ಪ್ರತಿಭೆಗಳನ್ನು ಪೋಷಿಸುವುದು;
  • ಆಡಳಿತ ವೇದಿಕೆಗಳು ಮತ್ತು 'ಮೈ ಭಾರತ್' ನೇತೃತ್ವದ ಸ್ವಯಂಸೇವಕ ಸೇವೆಯ ಮೂಲಕ ಯುವ ನಾಯಕರನ್ನು ಸೃಷ್ಟಿಸುವುದು;
  • ನಾಗರಿಕ ಪ್ರಜ್ಞೆ, ಭವಿಷ್ಯಕ್ಕೆ ಸಿದ್ಧವಾದ ಕೌಶಲ್ಯಗಳು ಮತ್ತು ರಚನಾತ್ಮಕ ಸ್ವಯಂಸೇವಕ ಸೇವೆಯನ್ನು ಬೆಳೆಸುವ ಮೂಲಕ ವಿಕಸಿತ ಭಾರತಕ್ಕಾಗಿ ಯುವಕರನ್ನು ಸಬಲೀಕರಣಗೊಳಿಸುವುದು;
  • ಮಾದಕ ವ್ಯಸನದ ವಿರುದ್ಧ ಹೋರಾಡಲು ಕ್ರೀಡೆ ಮತ್ತು ಸಮಾನಮನಸ್ಕ ಜಾಲಗಳನ್ನು ಬಳಸಿಕೊಳ್ಳುವ 'ನಶಾ ಮುಕ್ತ ಯುವ ಆಂದೋಲ'ನವನ್ನು ಉತ್ತೇಜಿಸುವುದು. ಇದು 2026ರ ಆಗಸ್ಟ್ 2ರಂದು ಪ್ರಾರಂಭಿಸಲಾದ ಪ್ರಧಾನಮಂತ್ರಿಯವರ 100 ವಾರಗಳ ರಾಷ್ಟ್ರವ್ಯಾಪಿ ಅಭಿಯಾನದ ಅಡಿಯಲ್ಲಿ ಸಾಪ್ತಾಹಿಕ 'ಜನ ಭಾಗೀದಾರಿ' ಚಟುವಟಿಕೆಗಳಿಂದ ಬೆಂಬಲಿತವಾಗಿದೆ.