ಭಾರತ-ಕೆನಡಾ ಪಾಲುದಾರಿಕೆಯ ಪ್ರಗತಿಯನ್ನು ಪರಿಶೀಲಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಜೋಹಾನ್ಸ್‌ಬರ್ಗ್‌ ನಲ್ಲಿ ನಡೆದ ಜಿ20 ನಾಯಕರ ಶೃಂಗಸಭೆಯ ನೇಪಥ್ಯದಲ್ಲಿ ಕೆನಡಾದ ಪ್ರಧಾನಮಂತ್ರಿ ಘನತೆವೆತ್ತ ಶ್ರೀ ಮಾರ್ಕ್‌ ಕಾರ್ನೆ ಅವರನ್ನು ಭೇಟಿ ಮಾಡಿದರು.

ನಿರ್ಣಾಯಕ ತಂತ್ರಜ್ಞಾನಗಳು, ಪರಮಾಣು ಶಕ್ತಿ, ಪೂರೈಕೆ ಸರಪಳಿಗಳ ವೈವಿಧ್ಯೕಕರಣ ಮತ್ತು ಕೃತಕ ಬುದ್ಧಿಮತ್ತೆ ಕ್ಷೇತ್ರಗಳಲ್ಲಿ ತ್ರಿಪಕ್ಷೀಯ ಸಹಕಾರಕ್ಕೆ ಉತ್ತೇಜನ ನೀಡುವ ಆಸ್ಪ್ರೇಲಿಯಾ-ಕೆನಡಾ-ಭಾರತ ತಂತ್ರಜ್ಞಾನ ಮತ್ತು ನಾವೀನ್ಯತೆ (ಎ.ಸಿ.ಐ.ಟಿ.ಐ) ಪಾಲುದಾರಿಕೆಯನ್ನು ಅಳವಡಿಸಿಕೊಳ್ಳುವುದನ್ನು ನಾಯಕರು ಸ್ವಾಗತಿಸಿದರು. ಜಿ7 ಶೃಂಗಸಭೆಯ ಸಂದರ್ಭದಲ್ಲಿ ಕನಾನಾಸ್ಕಿಸ್‌ ನಲ್ಲಿ 2025ರ ಜೂನ್‌ ನಲ್ಲಿ ನಡೆದ ಸಭೆ ಮತ್ತು 2025ರ ಅಕ್ಟೋಬರ್‌ ನಲ್ಲಿ ವಿದೇಶಾಂಗ ಸಚಿವರಿಂದ ದ್ವಿಪಕ್ಷೀಯ ತೊಡಗಿಸಿಕೊಳ್ಳುವಿಕೆಗಾಗಿ ಹೊಸ ಮಾರ್ಗಸೂಚಿಯನ್ನು ಪ್ರಾರಂಭಿಸಿದ ನಂತರ ಸಂಬಂಧಗಳಲ್ಲಿ ನವೀಕೃತ ವೇಗವನ್ನು ಅವರು ಶ್ಲಾಘಿಸಿದರು. ವ್ಯಾಪಾರ ಮತ್ತು ಹೂಡಿಕೆ, ರಕ್ಷಣೆ, ಶಿಕ್ಷಣ, ಬಾಹ್ಯಾಕಾಶ, ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಇಂಧನ ಕ್ಷೇತ್ರಗಳಲ್ಲಿನ ಸಹಕಾರದ ಬಗ್ಗೆ ಇಬ್ಬರೂ ಪ್ರಧಾನಮಂತ್ರಿ ಚರ್ಚಿಸಿದರು. 2026ರ ಫೆಬ್ರವರಿಯಲ್ಲಿ ಭಾರತ ಆಯೋಜಿಸಲಿರುವ ಕೃತಕ ಬುದ್ಧಿಮತ್ತೆ ಶೃಂಗಸಭೆಗೆ ಪ್ರಧಾನಮಂತ್ರಿ ಕಾರ್ನೆ ಬೆಂಬಲ ವ್ಯಕ್ತಪಡಿಸಿದರು.

 

2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು 50 ಶತಕೋಟಿ ಡಾಲರ್‌ಗೆ ದ್ವಿಗುಣಗೊಳಿಸುವ ಗುರಿಯನ್ನು ಹೊಂದಿರುವ ಉನ್ನತ ಮಹತ್ವಾಕಾಂಕ್ಷೆಯ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದ (ಸಿ.ಇ.ಪಿ.ಎ) ಕುರಿತು ಮಾತುಕತೆ ಪ್ರಾರಂಭಿಸಲು ನಾಯಕರು ಒಪ್ಪಿಕೊಂಡರು. ಎರಡೂ ಕಡೆಯವರು ತಮ್ಮ ದೀರ್ಘಕಾಲೀನ ನಾಗರಿಕ ಪರಮಾಣು ಸಹಕಾರವನ್ನು ಪುನರುಚ್ಚರಿಸಿದರು ಮತ್ತು ದೀರ್ಘಕಾಲೀನ ಯುರೇನಿಯಂ ಪೂರೈಕೆ ವ್ಯವಸ್ಥೆಗಳ ಮೂಲಕ ಸಹಯೋಗವನ್ನು ವಿಸ್ತರಿಸುವ ಬಗ್ಗೆ ನಡೆಯುತ್ತಿರುವ ಚರ್ಚೆಗಳನ್ನು ಗಮನಿಸಿದರು.

ನಿಯಮಿತ ಉನ್ನತ ಮಟ್ಟದ ವಿನಿಮಯದ ಮಹತ್ವವನ್ನು ನಾಯಕರು ಒತ್ತಿ ಹೇಳಿದರು. ಪ್ರಧಾನಮಂತ್ರಿ ಕಾರ್ನೆ ಅವರಿಗೆ ಭಾರತಕ್ಕೆ ಭೇಟಿ ನೀಡುವಂತೆ ಪ್ರಧಾನಮಂತ್ರಿ ಅವರು ಆಹ್ವಾನ ನೀಡಿದರು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India's electronics exports cross $47 billion in 2025 on iPhone push

Media Coverage

India's electronics exports cross $47 billion in 2025 on iPhone push
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 19 ಜನವರಿ 2026
January 19, 2026

From One-Horned Rhinos to Global Economic Power: PM Modi's Vision Transforms India