ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ತಮ್ಮ ಅಧಿಕೃತ ನಿವಾಸದಲ್ಲಿ ವಿವಿಧ ದೇಶಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ವಿವಿಧ ನಿಯೋಗಗಳ ಸದಸ್ಯರನ್ನು ಭೇಟಿ ಮಾಡಿದರು. ಈ ಪ್ರತಿನಿಧಿಗಳು ಶಾಂತಿಗಾಗಿ ಭಾರತದ ಬದ್ಧತೆಯನ್ನು ಮತ್ತು ಭಯೋತ್ಪಾದನೆಯ ಪಿಡುಗನ್ನು ನಿರ್ಮೂಲನೆ ಮಾಡುವ ಅಗತ್ಯವನ್ನು ವಿವರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಜಾಗತಿಕ ವೇದಿಕೆಗಳಲ್ಲಿ ಭಾರತದ ಧ್ವನಿಯನ್ನು ಮುನ್ನಡೆಸುವಲ್ಲಿ ನಿಯೋಗಗಳ ಸಮರ್ಪಣೆಯನ್ನು ಶ್ರೀ ನರೇಂದ್ರ ಮೋದಿ ಶ್ಲಾಘಿಸಿದರು.
















ಈ ಸಂಬಂಧ ಎಕ್ಸ್ ಖಾತೆಯಲ್ಲಿ ಪೋಸ್ಟ್‌ನಲ್ಲಿ, ಅವರು ಹೀಗೆ ಬರೆದಿದ್ದಾರೆ:
‘‘ವಿವಿಧ ದೇಶಗಳಲ್ಲಿಭಾರತವನ್ನು ಪ್ರತಿನಿಧಿಸಿದ ವಿವಿಧ ನಿಯೋಗಗಳ ಸದಸ್ಯರನ್ನು ಭೇಟಿಯಾದೆ ಮತ್ತು ನಿಯೋಗಗಳು ಶಾಂತಿಗೆ ಭಾರತದ ಬದ್ಧತೆ ಮತ್ತು ಭಯೋತ್ಪಾದನೆಯ ಪಿಡುಗನ್ನು ನಿರ್ಮೂಲನೆ ಮಾಡುವ ಅಗತ್ಯವನ್ನು ವಿವರಿಸಿವೆ. ಅವರು ಭಾರತದ ಧ್ವನಿಯನ್ನು ಮಂಡಿಸಿದ ರೀತಿ ಬಗ್ಗೆ ನಮಗೆಲ್ಲರಿಗೂ ಹೆಮ್ಮೆ ಇದೆ,’’ ಎಂದಿದ್ದಾರೆ.
Met members of the various delegations who represented India in different countries and elaborated on India's commitment to peace and the need to eradicate the menace of terrorism. We are all proud of the manner in which they put forward India's voice. pic.twitter.com/MZqQYgsAEp
— Narendra Modi (@narendramodi) June 10, 2025


