ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆ ಸಮಿತಿಯ 20ನೇ ಸಭೆಯು ಭಾರತದಲ್ಲಿ ಆರಂಭಗೊಂಡಿದ್ದು ಪ್ರಧಾನಮಂತ್ರಿ ಅಪಾರ ಸಂತೋಷ ವ್ಯಕ್ತಪಡಿಸಿದ್ದಾರೆ. ಈ ವೇದಿಕೆಯು ಜೀವನ ವಿಧಾನದ ಸಂಪ್ರದಾಯಗಳನ್ನು ಸಂರಕ್ಷಿಸುವ ಮತ್ತು ಜನಪ್ರಿಯಗೊಳಿಸುವ ಹಂಚಿತ ದೃಷ್ಟಿಕೋನದ ಪ್ರಪಂಚದಾದ್ಯಂತ 150ಕ್ಕೂ ಹೆಚ್ಚು ರಾಷ್ಟ್ರಗಳ ಪ್ರತಿನಿಧಿಗಳನ್ನು ಒಟ್ಟುಗೂಡಿಸಿದೆ ಎಂದು ಅವರು ಹೇಳಿದ್ದಾರೆ.
ಈ ಮಹತ್ವದ ಸಭೆಯನ್ನು, ವಿಶೇಷವಾಗಿ ಐತಿಹಾಸಿಕ ಕೆಂಪು ಕೋಟೆಯಲ್ಲಿ ಆಯೋಜಿಸಲು ಭಾರತ ಹರ್ಷಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ. ಈ ಸಂದರ್ಭವು, ಸಮಾಜಗಳು ಮತ್ತು ಪೀಳಿಗೆಗಳನ್ನು ಸಂಪರ್ಕಿಸಲು ಸಂಸ್ಕೃತಿಯ ಶಕ್ತಿಯನ್ನು ಸಮರ್ಥವಾಗಿ ಬಳಸಿಕೊಳ್ಳುವ ಭಾರತದ ಬದ್ಧತೆಯ ಪ್ರತಿಬಿಂಬವಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಬರೆದಿದ್ದಾರೆ:
"ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆ ಸಮಿತಿಯ 20ನೇ ಸಭೆಯು ಭಾರತದಲ್ಲಿ ಆರಂಭವಾಗಿರುವುದು ಅಪಾರ ಸಂತೋಷದ ವಿಷಯ. ಜೀವನ ಸಂಪ್ರದಾಯಗಳನ್ನು ರಕ್ಷಿಸುವ ಮತ್ತು ಜನಪ್ರಿಯಗೊಳಿಸುವ ಹಂಚಿತ ದೃಷ್ಟಿಕೋನವನ್ನು ಹೊಂದಿರುವ 150 ಕ್ಕೂ ಹೆಚ್ಚು ರಾಷ್ಟ್ರಗಳ ಪ್ರತಿನಿಧಿಗಳನ್ನು ಈ ವೇದಿಕೆಯು ಒಟ್ಟುಗೂಡಿಸಿದೆ. ಭಾರತವು ಈ ಸಭೆಯನ್ನು ಆಯೋಜಿಸಲು ಹರ್ಷಿಸುತ್ತದೆ. ಅದರಲ್ಲಿಯೂ ಕೆಂಪು ಕೋಟೆಯಲ್ಲಿ ಆಯೋಜನೆಯಾಗಿರುವುದು ಸಂತೋಷದಾಯಕ. ಇದು ಸಮಾಜಗಳು ಮತ್ತು ಪೀಳಿಗೆಗಳನ್ನು ಸಂಪರ್ಕಿಸಲು ಸಂಸ್ಕೃತಿಯ ಶಕ್ತಿಯನ್ನು ಸಮರ್ಥವಾಗಿ ಬಳಸಿಕೊಳ್ಳುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
@UNESCO”
It is a matter of immense joy that the 20th Session of UNESCO’s Committee on Intangible Cultural Heritage has commenced in India. This forum has brought together delegates from over 150 nations with a vision to protect and popularise our shared living traditions. India is glad to…
— Narendra Modi (@narendramodi) December 8, 2025


