ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶ್ರೀ ಸುಖದೇವ್ ಸಿಂಗ್ ಧಿಂಡ್ಸಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. "ಅವರು ಸಾರ್ವಜನಿಕ ಸೇವೆಗೆ ಅಚಲ ಬದ್ಧತೆಯನ್ನು ಹೊಂದಿದ್ದ ಜಾಣ್ಮೆಯ ಮಹಾನ್ ರಾಜಕಾರಣಿಯಾಗಿದ್ದರು. ಅವರು ಪಂಜಾಬ್, ಅಲ್ಲಿನ ಜನರು ಮತ್ತು ಸಂಸ್ಕೃತಿಯೊಂದಿಗೆ ತಳಮಟ್ಟದ ಸಂಪರ್ಕವನ್ನು ಸದಾ ಹೊಂದಿದ್ದರು" ಎಂದು ಶ್ರೀ ಮೋದಿ ಅವರು ಸ್ಮರಿಸಿದ್ದಾರೆ.
 
ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ: 

"ಶ್ರೀ ಸುಖದೇವ್ ಸಿಂಗ್ ಧಿಂಡ್ಸಾ ಅವರ ನಿಧನವು ನಮ್ಮ ರಾಷ್ಟ್ರಕ್ಕೆ ದೊಡ್ಡ ನಷ್ಟವಾಗಿದೆ. ಅವರು ಮಹಾನ್ ಬುದ್ಧಿವಂತಿಕೆಯ ಮತ್ತು ಸಾರ್ವಜನಿಕ ಸೇವೆಗೆ ಅಚಲ ಬದ್ಧತೆಯನ್ನು ಹೊಂದಿದ್ದ ಉನ್ನತ ರಾಜಕಾರಣಿಯಾಗಿದ್ದರು. ಅವರು ಪಂಜಾಬ್, ಅಲ್ಲಿನ ಜನರು ಮತ್ತು ಸಂಸ್ಕೃತಿಯೊಂದಿಗೆ ತಳಮಟ್ಟದ ಸಂಪರ್ಕವನ್ನು ಹೊಂದಿದ್ದರು. ಗ್ರಾಮೀಣಾಭಿವೃದ್ಧಿ, ಸಾಮಾಜಿಕ ನ್ಯಾಯ ಮತ್ತು ಸರ್ವತೋಮುಖ ಬೆಳವಣಿಗೆಯಂತಹ ವಿಷಯಗಳನ್ನು ಅವರು ಪ್ರತಿಪಾದಿಸಿದ್ದರು. ನಮ್ಮ ಸಾಮಾಜಿಕ ಸಂರಚನೆಯನ್ನು ಇನ್ನಷ್ಟು ಗಟ್ಟಿಗೊಳಿಸಲು ಅವರು ಸದಾ ಶ್ರಮಿಸಿದರು. ಹಲವು ವರ್ಷಗಳಿಂದ ಅವರೊಂದಿಗೆ ವಿವಿಧ ವಿಷಯಗಳ ಕುರಿತು ನಿಕಟವಾಗಿ ಸಂವಹನ ನಡೆಸುವ, ಅವರನ್ನು ಅರಿಯುವ ಸೌಭಾಗ್ಯ ನನಗೆ ದೊರೆತಿತ್ತು. ಈ ದುಃಖದ ಸಮಯದಲ್ಲಿ ಅವರ ಕುಟುಂಬದವರು ಮತ್ತು ಬೆಂಬಲಿಗರಿಗೆ ನನ್ನ ಸಂತಾಪಗಳು."

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Second consignment of 37.5 tonnes HADR aid reaches flood-hit Nepal; India sends 47.5 tonnes of relief material in total

Media Coverage

Second consignment of 37.5 tonnes HADR aid reaches flood-hit Nepal; India sends 47.5 tonnes of relief material in total
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 28 ಆಗಸ್ಟ್ 2026
August 28, 2026

India’s Growth Story, Grounded: Inclusion, Exports, and Infrastructure Under One Vision of PM Modi