ಶೇರ್
 
Comments
ಕಳೆದ ಹತ್ತು ವರ್ಷಗಳಲ್ಲಿ ಭಾರತದಲ್ಲಿ ಸುಮಾರು 3 ಮಿಲಿಯನ್ ಹೆಕ್ಟೇರ್ ಅರಣ್ಯ ವ್ಯಾಪ್ತಿ ಹೆಚ್ಚಳ, ದೇಶದ ಒಟ್ಟಾರೆ ಭೂಪ್ರದೇಶಕ್ಕೆ ನಾಲ್ಕನೇ ಒಂದರಷ್ಟು ಅರಣ್ಯ ವೃದ್ಧಿ: ಪ್ರಧಾನಮಂತ್ರಿ
ಭೂಸವಕಳಿ ತಟಸ್ಥತೆಯ ರಾಷ್ಟ್ರೀಯ ಬದ್ಧತೆ ಸಾಧಿಸುವ ನಿಟ್ಟಿನಲ್ಲಿ ಭಾರತ: ಪ್ರಧಾನಮಂತ್ರಿ
2030ರ ವೇಳೆಗೆ 26 ಮಿಲಿಯನ್ ಹೆಕ್ಟೇರ್ ಸವಕಳಿಯಾಗಿರುವ ಭೂಮಿ ಪುನರ್ ಸ್ಥಾಪನೆ ಗುರಿ, ಇದರಿಂದ 2.5ರಿಂದ 3 ಬಿಲಿಯನ್ ಟನ್ ಇಂಗಾಲದ ಆಮ್ಲಕ್ಕೆ ಸಮನಾದ ಹೆಚ್ಚುವರಿ ಇಂಗಾಲ ಕಡಿತಗೊಳಿಸುವ ಭಾರತದ ಸಾಧನೆಗೆ ಸಹಕಾರಿ
ಭೂಸವಕಳಿ ಕುರಿತ ವಿಷಯಗಳಲ್ಲಿ ವೈಜ್ಞಾನಿಕ ಮನೋಭಾವ ಉತ್ತೇಜನಕ್ಕೆ ಭಾರತದಲ್ಲಿ ಶ್ರೇಷ್ಠತಾ ಕೇಂದ್ರ ಸ್ಥಾಪನೆ
ನಮ್ಮ ಮುಂದಿನ ಪೀಳಿಗೆಗೆ ಆರೋಗ್ಯಕರ ಭೂಮಿ ನೀಡುವುದು ನಮ್ಮ ಪವಿತ್ರ ಕರ್ತವ್ಯ: ಪ್ರಧಾನಮಂತ್ರಿ

ಗೌರವಾನ್ವಿತ ಮಹಾಸಭೆಯ ಅಧ್ಯಕ್ಷರೇ,

ಗೌರವಾನ್ವಿತರೇ,

ಮಹಿಳೆಯರೇ ಮತ್ತು ಮಹನಿಯರೇ,

ನಮಸ್ತೆ

ಈ ಉನ್ನತ ಮಟ್ಟದ ಸಂವಾದವನ್ನು ಆಯೋಜಿಸಿದ್ದಕ್ಕಾಗಿ ನಾನು ಮಹಾಸಭೆಯ ಅಧ್ಯಕ್ಷರಿಗೆ ಧನ್ಯವಾದಗಳನ್ನು ಹೇಳುತ್ತೇನೆ.

ಭೂಮಿ ಎಲ್ಲರ ಜೀವನ ಮತ್ತು ಜೀವನೋಪಾಯ ಬೆಂಬಲಿಸುವ ಮೂಲ ಆಧಾರಸ್ತಂಭವಾಗಿದೆ ಮತ್ತು ನಾವೆಲ್ಲರೂ ಅರ್ಥಮಾಡಿಕೊಂಡಿರುವಂತೆ ಜೀವ ಜಾಲ ಒಂದಕ್ಕೊಂದು ಸಂಬಂಧ ಹೊಂದಿರುವ ವ್ಯವಸ್ಥೆಯಾಗಿದೆ. ದುಃಖಕರವೆಂದರೆ, ಭೂಸವಕಳಿ ಇಂದು ವಿಶ್ವದ ಮೂರನೇ ಎರಡರಷ್ಟು ಪ್ರದೇಶವನ್ನು ಬಾಧಿಸುತ್ತಿದೆ.  ಯಾರೂ  ಅದನ್ನು ಪರೀಕ್ಷಸದೆ ಬಿಟ್ಟರೆ, ನಮ್ಮ ಸಮಾಜಗಳು, ಆರ್ಥಿಕತೆ, ಆಹಾರಭದ್ರತೆ, ಆರೋಗ್ಯ, ಸುರಕ್ಷತೆ ಮತ್ತು ಗುಣಮಟ್ಟದ ಜೀವನದ ಮೂಲ ತಳಹದಿಯನ್ನೇ  ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ನಾವು ಭೂಮಿಯ ಮೇಲಿನ ಮತ್ತು ಅದರ ಸಂಪನ್ಮೂಲಗಳ ಮೇಲಿನ ಒತ್ತಡವನ್ನು ತಗ್ಗಿಸಬೇಕಾಗಿದೆ. ಸ್ಪಷ್ಟವಾಗಿ ಹೇಳಬೇಕೆಂದರೆ ನಮ್ಮ ಮುಂದೆ ಸಾಕಷ್ಟು ಕಾರ್ಯಗಳು ಇವೆ. ಆದರೆ ನಾವು ಅವೆಲ್ಲವನ್ನೂ ಮಾಡಬೇಕಿದೆ. ನಾವೆಲ್ಲರೂ ಒಗ್ಗೂಡಿ ಆ ಕೆಲಸ ಮಾಡಬೇಕಿದೆ.

ಗೌರವಾನ್ವಿತ ಅಧ್ಯಕ್ಷರೇ,

ನಾವು ಭಾರತದಲ್ಲಿ ಸದಾ ಭೂಮಿಗೆ ಮಹತ್ವ ನೀಡುತ್ತಿದ್ದೇವೆ ಮತ್ತು ಅದನ್ನು ಪವಿತ್ರ ಭೂಮಿ, ನಮ್ಮ ಮಾತೆ ಎಂದು ಪರಿಗಣಿಸಿದ್ದೇವೆ. ಭಾರತ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭೂಸವಕಳಿ ವಿಷಯವನ್ನು ಪ್ರಸ್ತಾಪಿಸುವಲ್ಲಿ ಮುಂಚೂಣಿಯಲ್ಲಿದೆ. 2019ರ ದೆಹಲಿ ಘೋಷಣೆಯಲ್ಲಿ ಭೂಮಿಗೆ ಸಂಬಂಧಿಸಿದಂತೆ ಉತ್ತಮ ಲಭ್ಯತೆ ಮತ್ತು ಉಸ್ತುವಾರಿ ವಹಿಸಬೇಕೆಂದು ಹಾಗೂ ಲಿಂಗ ಸಂವೇದಿ ಪರಿವರ್ತನಾ ಯೋಜನೆಗಳಿಗೆ ಒತ್ತು ನೀಡಬೇಕೆಂದು ಕರೆ ನೀಡಲಾಯಿತು. ಭಾರತದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಸುಮಾರು ಮೂರು ಮಿಲಿಯನ್ ಹೆಕ್ಟೇರ್ ಅರಣ್ಯ ವ್ಯಾಪ್ತಿ ಸೇರ್ಪಡೆಯಾಗಿದೆ. ಇದರಿಂದಾಗಿ ದೇಶದ ಒಟ್ಟಾರೆ ಭೂಪ್ರದೇಶದ ನಾಲ್ಕನೇ ಒಂದರಷ್ಟು ಅರಣ್ಯ ವ್ಯಾಪ್ತಿಗೆ ಹೆಚ್ಚಳವಾದಂತಾಗಿದೆ.

ಭೂಸವಕಳಿ ತಟಸ್ಥತೆಯ ನಮ್ಮ ರಾಷ್ಟ್ರೀಯ ಗುರಿ ಸಾಧನೆಯ ನಿಟ್ಟಿನಲ್ಲಿ ನಾವು ಸಾಗುತ್ತಿದ್ದೇವೆ. ನಾವು 2030ರ ವೇಳೆಗೆ 26 ಮಿಲಿಯನ್ ಹೆಕ್ಟೇರ್ ಸವಕಳಿಯಾಗಿರುವ ಭೂಮಿಯನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದೇವೆ. ಇದು 2.5ರಿಂದ 3 ಬಿಲಿಯನ್ ಟನ್ ಇಂಗಾಲದ ಆಮ್ಲಕ್ಕೆ ಸಮನಾದ ಹೆಚ್ಚುವರಿ ಇಂಗಾಲ ಕಡಿತಗೊಳಿಸುವ ಭಾರತದ ಬದ್ಧತೆಗೆ ಸಹಕಾರಿಯಾಗಲಿದೆ.

ಭೂ ಪುನಶ್ಚೇತನದಿಂದಾಗಿ ಉತ್ತಮ ಮಣ್ಣಿನ ಆರೋಗ್ಯ,  ಇಳುವರಿ ಹೆಚ್ಚಳ, ಆಹಾರ ಭದ್ರತೆ ಮತ್ತು ಸುಧಾರಿತ ಜೀವನೋಪಾಯಗಳ ಒಂದು ಉತ್ತಮ ಚಕ್ರವನ್ನು ಪ್ರಾರಂಭಿಸಬಹುದು ಎಂದು ನಾವು ನಂಬಿದ್ದೇವೆ. ಭಾರತದ ಹಲವು ಪ್ರದೇಶಗಳಲ್ಲಿ ನಾವು ಕೆಲವು ವಿನೂತನ ವಿಧಾನಗಳನ್ನು ಕೈಗೆತ್ತಿಕೊಂಡಿದ್ದೇವೆ. ನಿಮಗೆ ಒಂದು ಉದಾಹರಣೆ ನೀಡುವುದಾದರೆ ಗುಜರಾತ್ ರಾಜ್ಯದ ಕಚ್ ನ  ರಣ್ ನ  ಬನ್ನಿ ಪ್ರದೇಶದಲ್ಲಿ ಭೂಸವಕಳಿ ಹೆಚ್ಚಾಗಿದೆ. ಅಲ್ಲಿ ಅತಿ ಕಡಿಮೆ ಮಳೆ ಬರುತ್ತದೆ. ಆ ಪ್ರದೇಶದಲ್ಲಿ ಹುಲ್ಲುಗಾವಲುಗಳನ್ನು ಅಭಿವೃದ್ಧಿಪಡಿಸುವ ಮೂಲಕ ಭೂಸವಕಳಿಯಾಗುವುದನ್ನು ತಡೆಯಲಾಗುತ್ತಿದೆ. ಇದರಿಂದಾಗಿ ಭೂಸವಕಳಿ ತಟಸ್ಥತೆ ಸಾಧಿಸಲು ಸಹಾಯಕವಾಗುತ್ತಿದೆ. ಅಲ್ಲದೆ ಇದು ಗ್ರಾಮೀಣ ಚಟುವಟಿಕೆಗಳನ್ನು ಮತ್ತು ಜೀವನೋಪಾಯಗಳನ್ನು ಬೆಂಬಲಿಸಿ ಪಶುಸಂಗೋಪನೆಯನ್ನು ಉತ್ತೇಜಿಸುತ್ತದೆ. ಅದೇ ಪ್ರೇರಣೆಯೊಂದಿಗೆ ನಾವು ದೇಶೀಯ ತಂತ್ರಗಳನ್ನು ಉತ್ತೇಜಿಸುವ ಮೂಲಕ ಭೂಸವಕಳಿಗೆ ಪರಿಣಾಮಕಾರಿ ಕಾರ್ಯತಂತ್ರಗಳನ್ನು ರೂಪಿಸುವ ಅಗತ್ಯವಿದೆ.

ಗೌರವಾನ್ವಿತ ಅಧ್ಯಕ್ಷರೇ,

ಅಭಿವೃದ್ಧಿ ಹೊಂದುತ್ತಿರುವ ಜಗತ್ತಿಗೆ ಭೂಸವಕಳಿ ವಿಶೇಷ ಸವಾಲನ್ನು ಒಡ್ಡಿದೆ. ದಕ್ಷಿಣ-ದಕ್ಷಿಣ ಸಹಕಾರದ ಸ್ಫೂರ್ತಿಯೊಂದಿಗೆ ಭಾರತ ಭೂಸವಕಳಿ ತಡೆ ಕಾರ್ಯತಂತ್ರಗಳನ್ನು ಅಭಿವೃದ್ಧಿಗೊಳಿಸಲು ಅಭಿವೃದ್ಧಿ ಹೊಂದುತ್ತಿರುವ ತನ್ನ ಸಹ ರಾಷ್ಟ್ರಗಳಿಗೆ ನೆರವು ನೀಡುತ್ತಿದೆ. ಭೂಸವಕಳಿ ವಿಷಯಗಳಿಗೆ ಸಂಬಂಧಿಸಿದಂತೆ ವೈಜ್ಞಾನಿಕ ಮನೋಭಾವವನ್ನು ಉತ್ತೇಜಿಸಲು ಭಾರತದಲ್ಲಿ ಶ್ರೇಷ್ಠತಾ ಕೇಂದ್ರವನ್ನು ಸ್ಥಾಪಿಸಿದೆ. 

ಗೌರವಾನ್ವಿತ ಅಧ್ಯಕ್ಷರೇ,

ಮಾನವ ಚಟುವಟಿಕೆಗಳಿಂದಾಗಿ ಭೂಮಿಗೆ ಆಗಿರುವ ಹಾನಿಯನ್ನು ಬುಡಮೇಲು ಮಾಡುವುದು ಅಥವಾ ಹಿಮ್ಮೆಟ್ಟಿಸುವುದು ಮನುಕುಲದ ಸಾಮೂಹಿಕ ಹೊಣೆಗಾರಿಕೆಯಾಗಿದೆ. ನಮ್ಮ ಭವಿಷ್ಯದ ಪೀಳಿಗೆಗೆ ಆರೋಗ್ಯಕರ ಭೂಮಿಯನ್ನು ನೀಡುವುದು ನಮ್ಮ ಪವಿತ್ರ ಕರ್ತವ್ಯವಾಗಿದೆ. ಅವರ ಸಲುವಾಗಿ ಮತ್ತು ನಮಗಾಗಿ ಉನ್ನತ ಮಟ್ಟದ ಈ ಸಂವಾದದಲ್ಲಿ ಫಲಪ್ರದ ಚರ್ಚೆಗಳು ನಡೆಯಲಿ ಎಂದು ನಾನು ಆಶಿಸುತ್ತೇನೆ.

ಧನ್ಯವಾದಗಳು

ತುಂಬಾ ಧನ್ಯವಾದಗಳು

20 ವರ್ಷಗಳ ಸೇವಾ ಮತ್ತು ಸಮರ್ಪಣದ 20 ಚಿತ್ರಗಳು
Mann KI Baat Quiz
Explore More
ಜಮ್ಮು ಮತ್ತು ಕಾಶ್ಮೀರದ ನೌಶೇರಾದಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಸೈನಿಕರ ಜೊತೆ ದೀಪಾವಳಿ ಆಚರಣೆ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಅವರ ಸಂವಾದ

ಜನಪ್ರಿಯ ಭಾಷಣಗಳು

ಜಮ್ಮು ಮತ್ತು ಕಾಶ್ಮೀರದ ನೌಶೇರಾದಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಸೈನಿಕರ ಜೊತೆ ದೀಪಾವಳಿ ಆಚರಣೆ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಅವರ ಸಂವಾದ
India Inc raised $1.34 billion from foreign markets in October: RBI

Media Coverage

India Inc raised $1.34 billion from foreign markets in October: RBI
...

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 3 ಡಿಸೆಂಬರ್ 2021
December 03, 2021
ಶೇರ್
 
Comments

PM Modi’s words and work on financial inclusion and fintech initiatives find resonance across the country

India shows continued support and firm belief in Modi Govt’s decisions and efforts.