ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಫಿನ್ಲೆಂಡ್ ಗಣರಾಜ್ಯದ ಅಧ್ಯಕ್ಷರಾದ ಘನತೆವೆತ್ತ ಅಲೆಕ್ಸಾಂಡರ್ ಸ್ಟಬ್ ಅವರಿಂದ ದೂರವಾಣಿ ಕರೆ ಸ್ವೀಕರಿಸಿದರು.
ಉಕ್ರೇನ್ ನಲ್ಲಿನ ಸಂಘರ್ಷದ ಪರಿಹಾರದ ಬಗ್ಗೆ ವಾಷಿಂಗ್ಟನ್ ನಲ್ಲಿ ಯುರೋಪ್, ಅಮೆರಿಕ ಮತ್ತು ಉಕ್ರೇನ್ ನಾಯಕರ ನಡುವೆ ಇತ್ತೀಚೆಗೆ ನಡೆದ ಸಭೆಗಳ ಬಗ್ಗೆ ಅಧ್ಯಕ್ಷ ಸ್ಟಬ್ ತಮ್ಮ ಮೌಲ್ಯಮಾಪನವನ್ನು ಹಂಚಿಕೊಂಡರು.
ಸಂಘರ್ಷದ ಶಾಂತಿಯುತ ಪರಿಹಾರ ಮತ್ತು ಶಾಂತಿ ಮತ್ತು ಸ್ಥಿರತೆಯನ್ನು ಶೀಘ್ರವಾಗಿ ಪುನಃಸ್ಥಾಪಿಸಲು ಭಾರತದ ನಿರಂತರ ಬೆಂಬಲವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪುನರುಚ್ಚರಿಸಿದರು.
ಭಾರತ-ಫಿನ್ಲೆಂಡ್ ದ್ವಿಪಕ್ಷೀಯ ಸಂಬಂಧದ ಪ್ರಗತಿಯನ್ನು ಉಭಯ ನಾಯಕರು ಪರಿಶೀಲಿಸಿದರು ಮತ್ತು ಕ್ವಾಂಟಮ್ ತಂತ್ರಜ್ಞಾನಗಳು, 6 ಜಿ, ಕೃತಕ ಬುದ್ಧಿಮತ್ತೆ, ಸೈಬರ್ ಭದ್ರತೆ ಮತ್ತು ಸುಸ್ಥಿರತೆ ಸೇರಿದಂತೆ ಉದಯೋನ್ಮುಖ ಕ್ಷೇತ್ರಗಳಲ್ಲಿ ಪಾಲುದಾರಿಕೆಯನ್ನು ಹೆಚ್ಚಿಸುವ ಬದ್ಧತೆಯನ್ನು ಪುನರುಚ್ಚರಿಸಿದರು.
ಪರಸ್ಪರ ಲಾಭದಾಯಕ ಭಾರತ-ಇಯು ಮುಕ್ತ ವ್ಯಾಪಾರ ಒಪ್ಪಂದದ ಶೀಘ್ರ ಮುಕ್ತಾಯಕ್ಕೆ ಫಿನ್ಲೆಂಡ್ ನ ಬೆಂಬಲವನ್ನು ಅಧ್ಯಕ್ಷ ಸ್ಟಬ್ ಪುನರುಚ್ಚರಿಸಿದರು. 2026 ರಲ್ಲಿ ಭಾರತ ಆತಿಥ್ಯ ವಹಿಸಲಿರುವ ಎಐ ಇಂಪ್ಯಾಕ್ಟ್ ಶೃಂಗಸಭೆಯ ಯಶಸ್ಸಿಗೆ ಅವರು ಬೆಂಬಲವನ್ನು ಪುನರುಚ್ಚರಿಸಿದರು.
ಪ್ರಧಾನಮಂತ್ರಿ ಅವರು ಅಧ್ಯಕ್ಷ ಸ್ಟಬ್ ಅವರಿಗೆ ಆದಷ್ಟು ಬೇಗ ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಿದರು. ಹಾಗೆಯೇ ಉಭಯ ನಾಯಕರು ಸಂಪರ್ಕದಲ್ಲಿರಲು ಒಪ್ಪಿಕೊಂಡರು.
Had a good conversation with President Alexander Stubb. Finland is a valued partner in the EU. Discussed ways to strengthen cooperation in key sectors such as trade, technology and sustainability. Exchanged perspectives on the ongoing efforts for peaceful resolution of the…
— Narendra Modi (@narendramodi) August 27, 2025


