ಮನದಾಳದ ಮಾತು

Published By : Admin | December 25, 2016 | 19:40 IST
#MannKiBaat: Prime Minister Modi extends Christmas greetings to the nation
PM Narendra Modi pays tribute to Pt. Madan Mohan Malviya on his Jayanti #MannKiBaat
PM Narendra Modi extends birthday greetings to Bharat Ratna Atal Bihari Vajpayee on his birthday during #MannKiBaat
Country cannot forget Atal ji’s contributions. Under his leadership India conducted nuclear tests: PM Modi during #MannKiBaat
#MannKiBaat: Shri Narendra Modi highlights ‘Lucky Grahak’ & ‘Digi Dhan’ Yojana to promote cashless transactions
Awareness towards online payments and using technology for economic transactions is increasing: PM during #MannKiBaat
Glad to note that there has been 200 to 300 per cent spurt in cashless transactions: PM Modi #MannKiBaat
We should be at the forefront of using digital means to make payments and transactions: PM during #MannKiBaat
PM Modi cautions those spreading lies & misleading honest people on demonetisation during #MannKiBaat
Support of people is like blessings of the Almighty: PM Modi during #MannKiBaat
Government is taking regular feedback from people and it is alright to make changes according to it: PM during #MannKiBaat
We have formulated a very strict law on ‘Benaami’ property: PM during #MannKiBaat
India is the fastest growing large economy today: PM Modi during #MannKiBaat
#MannKiBaat: Because of the constant efforts of our countrymen, India is growing on various economic parameters, says PM
An important bill for ‘Divyang’ people was passed. We are committed to uplifting our ‘Divyang’ citizens: PM #MannKiBaat
Our sportspersons have made the country proud: PM Modi during #MannKiBaat
PM Narendra Modi extends New Year greetings to people across the country during #MannKiBaat

ನನ್ನ ಪ್ರೀತಿಯ ದೇಶವಾಸಿಗಳೇ, ನಮಸ್ಕಾರ. ನಿಮ್ಮೆಲ್ಲರಿಗೂ ಕ್ರಿಸ್‌ಮಸ್ ಹಬ್ಬದ ಶುಭಾಷಯಗಳು. ಇಂದಿನ ದಿನ ಸೇವೆ, ತ್ಯಾಗ ಮತ್ತು ಕರುಣೆಗೆ ಮಹತ್ವ ನೀಡುವಂಥಹ ಸುದಿನವಾಗಿದೆ. ಯೇಸು ಕ್ರಿಸ್ತರು ಹೇಳಿದ್ದರು ಬಡವರಿಗೆ ನಮ್ಮ ಉಪಕಾರ ಬೇಕಿಲ್ಲ ಸ್ವೀಕಾರ ಬೇಕಿದೆ ಎಂದು. ಜೀಸಸ್, ಬಡವರ ಸೇವೆಯನ್ನು ಮಾತ್ರ ಮಾಡಿಲ್ಲ, ಬಡವರಿಂದ ಮಾಡಲಾದ ಸೇವೆಯನ್ನೂ ಪ್ರಶಂಶಿಸಿದ್ದಾರೆ ಎಂದು ಸಂತ ಲ್ಯೂಕ್ ಅವರ ಸುವಾರ್ತೆಯಲ್ಲಿ ಬರೆಯಲಾಗಿದೆ ಮತ್ತು ನಿಜವಾದ ಸಬಲೀಕರಣ ಅಂದ್ರೆ ಇದೇ ಅಲ್ವೇ.

ಇದಕ್ಕೆ ಸಂಬಂಧಿಸಿದ ಒಂದು ಕಥೆಯೂ ತುಂಬಾ ಪ್ರಚಲಿತದಲ್ಲಿದೆ. ಅದರಲ್ಲಿ ಜೀಸಸ್ ಒಂದು ದೇವಾಲಯದ ಖಜಾನೆ ಬಳಿ ನಿಂತಿದ್ದರು. ಎಷ್ಟೋ ಜನ ಶ್ರೀಮಂತರು ಬಂದರು, ಸಾಕಷ್ಟು ದಾನ ನೀಡಿದರು. ನಂತರ ಒಬ್ಬ ಬಡ ವಿಧವೆ ಬಂದಳು ಮತ್ತು ಅವಳು ೨ ತಾಮ್ರದ ನಾಣ್ಯಗಳನ್ನು ಹಾಕಿದಳು. ಒಂದು ರೀತಿ ನೋಡಿದರೆ ೨ ತಾಮ್ರದ ನಾಣ್ಯಗಳು ಪರಿಗಣನೆಗೆ ಬರುವುದಿಲ್ಲ.

ಅಲ್ಲಿ ನೆರೆದ ಭಕ್ತರ ಮನದಲ್ಲಿ ಕೌತುಕತೆ ಹೆಚ್ಚುವುದು ಸಹಜವಾಗೇ ಇತ್ತು. ಆಗ ಜೀಸಸ್ - ಆ ವಿಧವೆ ಮಹಿಳೆ, ಎಲ್ಲರಿಗಿಂತ ಹೆಚ್ಚಿನ ದಾನ ನೀಡಿದ್ದಾಳೆ ಯಾಕೆಂದ್ರೆ ಎಲ್ಲರೂ ಬಹಳಷ್ಟು ದಾನ ಮಾಡಿದರು; ಆದರೆ ಆ ಬಡ ಮಹಿಳೆ ತನ್ನದೆಲ್ಲವನ್ನೂ ದಾನ ಮಾಡಿದಳು ಎಂದು ಹೇಳಿದರು.

ಇಂದು ಡಿಸೆಂಬರ್ ೨೫, ಮಹಾತ್ಮಾ ಮದನ್ ಮೋಹನ್ ಮಾಲವಿಯಾ ಅವರ ಜಯಂತಿ ಕೂಡಾ ಹೌದು. ಭಾರತೀಯ ಜನರ ಮನದಲ್ಲಿ ಸಂಕಲ್ಪ ಮತ್ತು ಆತ್ಮ ವಿಶ್ವಾಸವನ್ನು ಜಾಗೃತಗೊಳಿಸಿದ ಮಾಲವಿಯಾ ಅವರು ಆಧುನಿಕ ಶಿಕ್ಷಣಕ್ಕೂ ಹೊಸ ದಿಕ್ಕನ್ನು ತೋರಿದವರಾಗಿದ್ದಾರೆ. ಅವರ ಜಯಂತಿಯಂದು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತೇನೆ.

ಈಗ ೨ ದಿನಗಳ ಹಿಂದೆಯಷ್ಟೇ ಮಾಲವಿಯಾ ಅವರ ತಪೋಭೂಮಿಯಾದ ಬನಾರಸ್‌ನಲ್ಲಿ ಹಲವಾರು ಪ್ರಗತಿಪರ ಕಾರ್ಯಗಳಿಗೆ ಚಾಲನೆ ನೀಡುವ ಸದವಕಾಶ ದೊರೆತಿತ್ತು. ನಾನು ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಮಹಾತ್ಮಾ ಮದನ್ ಮೋಹನ್ ಮಾಲವಿಯಾ Cancer centre ಗೆ ಶಿಲಾನ್ಯಾಸ ಕೂಡಾ ಮಾಡಿದೆ. ಈ ಭಾಗದಲ್ಲಿ ನಿರ್ಮಾಣವಾಗುತ್ತಿರುವ ಈ ಕ್ಯಾನ್ಸರ್ ಸೆಂಟರ್ ಕೇವಲ ಉತ್ತರ ಪ್ರದೇಶದ ಪೂರ್ವ ಭಾಗದವರಿಗೆ ಮಾತ್ರವಲ್ಲ, ಜಾರ್ಖಂಡ್ ಮತ್ತು ಬಿಹಾರದವರೆಗಿನ, ಎಲ್ಲ ಜನರಿಗೆ ಬಹು ದೊಡ್ಡ ವರದಾನವಾಗಲಿದೆ. ಇಂದು, ಭಾರತ ರತ್ನ, ಪೂರ್ವ ಪ್ರಧಾನ ಮಂತ್ರಿ ಸನ್ಮಾನ್ಯ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವೂ ಹೌದು. ಈ ದೇಶ ಅಟಲ್ಜಿ ಅವರ ಕೊಡುಗೆಯನ್ನೂ ಎಂದಿಗೂ ಮರೆಯಲಾರದು. ಅವರ ನೇತೃತ್ವದಲ್ಲಿ ನಾವು ಪರಮಾಣು ಶಕ್ತಿಯ ವಿಷಯದಲ್ಲೂ ದೇಶವನ್ನು ಹೆಮ್ಮೆಯ ಉತ್ತುಂಗಕ್ಕೇರಿಸಿದೆವು.

ಪಕ್ಷದ ನೇತಾರನಾಗಿ ಆಗಲಿ, ಸಂಸದನಾಗಿ ಆಗಲಿ, ಮಂತ್ರಿಗಳಾಗಿಯೇ ಆಗಲಿ, ಇಲ್ಲವೇ ಪ್ರಧಾನಮಂತ್ರಿಯಾಗಿಯೇ ಆಗಲಿ - ಎಲ್ಲ ಹಂತದಲ್ಲೂ ಅಟಲ್‌ಜಿಯವರು ಆದರ್ಶಪ್ರಾಯರಾಗಿದ್ದಾರೆ. ಅಟಲ್‌ಜಿಯವರ ಜನ್ಮದಿನದಂದು ನಾನು ಅವರಿಗೆ ವಂದಿಸುತ್ತೇನೆ. ಅವರ ಉತ್ತಮ ಆರೋಗ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ. ಒಬ್ಬ ಕಾರ್ಯಕರ್ತನಾಗಿ ಅಟಲ್‌ಜಿಯವರೊಂದಿಗೆ ಕೆಲಸ ಮಾಡುವ ಸೌಭಾಗ್ಯ ನನಗೆ ದೊರೆತಿತ್ತು.

ಎಷ್ಟೋ ನೆನಪುಗಳು ಕಣ್ಣ ಮುಂದೆ ತೇಲಿ ಬರುತ್ತವೆ. ಇಂದು ಬೆಳಿಗ್ಗೆಯೇ ನಾನು ಟ್ವೀಟ್ ಮಾಡಿದಾಗ ಒಂದು ಹಳೆಯ ವಿಡಿಯೋ ಕೂಡಾ ಶೇರ್ ಮಾಡಿದ್ದೇನೆ. ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಅಟಲ್‌ಜಿ ಅವರ ಸ್ನೇಹದ ಸುರಿಮಳೆಯ ಸೌಭಾಗ್ಯ ಹೇಗೆ ಲಭಿಸುತ್ತಿತ್ತು ಎಂಬುದು ಆ ವಿಡಿಯೋ ನೋಡಿದರೆನೇ ಗೊತ್ತಾಗತ್ತೆ.

ಇಂದು ಕ್ರಿಸ್‌ಮಸ್ ದಿನದಂದು, ದೇಶವಾಸಿಗಳಿಗೆ ಉಡುಗೊರೆ ರೂಪದಲ್ಲಿ ೨ ಯೋಜನೆಗಳ ಲಾಭ ದೊರೆಯಲಿದೆ

ಒಂದು ರೀತಿಯಲ್ಲಿ ೨ ನವೀನತರ ಯೋಜನೆಗಳು ಆರಂಭವಾಗಲಿದೆ. ಇಡೀ ದೇಶದಲ್ಲಿ ಹಳ್ಳಿ ಇರಲಿ, ಪಟ್ಟಣವಿರಲಿ, ಓದಿದವರಾಗಲಿ, ಅಶಿಕ್ಷಿತರೇ ಆಗಲಿ - ಕ್ಯಾಷ್ ಲೆಸ್- ನಗದು ರಹಿತ ಅಂದರೆ ಏನು, ನಗದು ರಹಿತ ವ್ಯಾಪಾರ ಹೇಗೆ ನಡೆಯುತ್ತದೆ. ಹಣವಿಲ್ಲದೇ ಹೇಗೆ ಖರೀದಿ ಮಾಡಲಾಗುತ್ತದೆ ಎಂಬ ಕುರಿತು ಜನರಲ್ಲಿ ಕುತೂಹಲ ಮೂಡಿದೆ. ಪ್ರತಿಯೊಬ್ಬರೂ ಪರಸ್ಪರರಿದ ತಿಳಿದುಕೊಳ್ಳಲು ಕಲಿಯಲು ಬಯಸುತ್ತಿದ್ದಾರೆ. ಈ ವಿಚಾರಕ್ಕೆ ಪುಷ್ಟಿ ನೀಡಲು, ಮೊಬೈಲ್ ಬ್ಯಾಂಕಿಂಗ್‌ಗೆ ಬಲ ನೀಡಲು, ಇ-ಪೇಮೆಂಟ್ ಅಭ್ಯಾಸವಾಗಲೀ ಎಂದು ಭಾರತ ಸರ್ಕಾರ, ಗ್ರಾಹಕರಿಗೆ ಮತ್ತು ಸಣ್ಣ ವ್ಯಾಪಾರಿಗಳಿಗೆಂದೇ ಪ್ರೊತ್ಸಾಹ ನೀಡುವ ಯೋಜನೆ ಇಂದಿನಿಂದ ಆರಂಭವಾಗಲಿದೆ. ಗ್ರಾಹಕರಿಗೆ ಪ್ರೊತ್ಸಾಹ ನೀಡಲೆಂದು ಮಾಡಿರುವ ಯೋಜನೆ ‘lucky ಗ್ರಾಹಕ ಯೋಜನೆ. ವ್ಯಾಪಾರಿಗಳಿಗೆ ಪ್ರೊತ್ಸಾಹ ನೀಡುವ ಯೋಜನೆ Digi ಧನ್ ವ್ಯಾಪಾರ ಯೋಜನೆಯಾಗಿದೆ.

ಇಂದು ಡಿಸೆಂಬರ್ ೨೫, ಕ್ರಿಸ್‌ಮಸ್ ಉಡುಗೊರೆ ರೂಪದಲ್ಲಿ ೧೫ ಸಾವಿರ ಜನರಿಗೆ ಡ್ರಾ ಸಿಸ್ಟೆಮ್‌ನಲ್ಲಿ ಬಹುಮಾನ ದೊರೆಯಲಿದೆ ಮತ್ತು ೧೫ ಸಾವಿರ ಜನರ ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ಒಂದೊಂದು ಸಾವಿರ ರೂಪಾಯಿ ಜಮೆ ಆಗಲಿದೆ. ಇದು ಇಂದಿಗೆ ಮಾತ್ರ ಸೀಮಿತವಲ್ಲ, ಈ ಯೋಜನೆ ಇಂದು ಆರಂಭಿಸಿ ೧೦೦ ದಿನಗಳವರೆಗೆ ಮುಂದುವರಿಯಲಿದೆ. ಪ್ರತಿದಿನ ೧೫ ಸಾವಿರ ಜನರಿಗೆ ತಲಾ ಸಾವಿರ ರೂಪಾಯಿ ದೊರೆಯಲಿದೆ. ನೂರು ದಿನಗಳಲ್ಲಿ ಲಕ್ಷಾಂತರ ಕುಟುಂಬಗಳಿಗೆ ಕೋಟ್ಯಾಂತರ ರೂಪಾಯಿಯ ಉಡುಗೊರೆ ದೊರೆಯಲಿದೆ. ಆದರೆ ಈ ಉಡುಗೊರೆ ಪಡೆಯಲು ನೀವು mobile banking, e-banking, RuPay Card, UPI, USSD ಹೀಗೆ ಹಣ ಸಂದಾಯದ ಎಷ್ಟು ಮೂಲಗಳಿವೆಯೋ ಅವಗಳನ್ನು ಬಳಸಬೇಕಾಗತ್ತದೆ, ಅದನ್ನಾಧರಿಸಿಯೇ ಡ್ರಾ ಮಾಡಲಾಗುವುದು. ಇದರ ಜೊತೆಗೆ ವಾರಕ್ಕೆ ಒಂದು ಬಾರಿ ಇಂಥ ಗ್ರಾಹಕರಿಗೆ ದೊಡ್ಡ ಡ್ರಾ ಇರುತ್ತದೆ, ಇದರಲ್ಲಿ ಬಹುಮಾನ ಕೂಡಾ ಲಕ್ಷಗಟ್ಟಲೆ ಇರುತ್ತದೆ. ೩ ತಿಂಗಳ ನಂತರ ಏಪ್ರಿಲ್ ೧೪ ರಂದು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ಜಯಂತಿ ಇದೆ. ಅಂದು ಒಂದು ಬಂಪರ್ ಡ್ರಾ ಇರುತ್ತದೆ. ಅದರಲ್ಲಿ ಕೋಟಿಗಟ್ಟಲೆ ಬಹುಮಾನವೂ ಇರುತ್ತದೆ. Digi ಧನ್ ವ್ಯಾಪಾರ ಯೋಜನೆ ಮುಖ್ಯವಾಗಿ ವ್ಯಾಪಾರಿಗಳಿಗೆ ನಿರ್ಮಿಸಲಾಗಿದೆ. ವ್ಯಾಪಾರಸ್ಥರು ಸ್ವತಃ ಈ ಯೋಜನೆಯಲ್ಲಿ ಪಾಲ್ಗೊಳ್ಳಲಿ ಮತ್ತು ತಮ್ಮ ವ್ಯಾಪಾರವನ್ನು Cashless ಮಾಡಲು ಗ್ರಾಹಕರನ್ನು ಪಾಲ್ಗೊಳ್ಳುವಂತೆ ಮಾಡಲಿ. ಇಂಥ ವ್ಯಾಪಾರಸ್ಥರಿಗೂ ಪ್ರತ್ಯೇಕವಾಗಿ ಬಹುಮಾನ ನೀಡಲಾಗುವುದು. ಈ ಬಹುಮಾನ ಸಾವಿರಾರು ಸಂಖ್ಯೆಯಲ್ಲಿದೆ. ವ್ಯಾಪಾರಸ್ಥರಿಗೆ ವ್ಯಾಪಾರದ ಜೊತೆಗೆ ಬಹುಮಾನವೂ ದೊರೆಯಲಿದೆ. ಸಮಾಜದ ಎಲ್ಲ ವರ್ಗದವರೂ ಅದರಲ್ಲಿ ವಿಶೇಷವಾಗಿ ಬಡವರು ಮತ್ತು ಕೆಳ ಮಧ್ಯಮ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ರೂಪಿಸಲಾಗಿದೆ. ಹಾಗಾಗಿ, ಯಾರು ೫೦ ರೂಪಾಯಿಗಿಂತ ಮೇಲ್ಪಟ್ಟು ಮತ್ತು ೩ ಸಾವಿರ ರೂಪಾಯಿಗಿಂತ ಕಡಿಮೆ ಖರೀದಿ ಮಾಡುತ್ತಾರೋ ಅವರಿಗೇ ಇದರ ಲಾಭ ದೊರೆಯುತ್ತದೆ. ೩ ಸಾವಿರಕ್ಕಿಂತ ಹೆಚ್ಚಿನ ಖರೀದಿ ಮಾಡುವವರಿಗೆ ಈ ಬಹುಮಾನ ದೊರೆಯುವುದಿಲ್ಲ. ಕಡು ಬಡವರೂ ಕೂಡ USSD ಬಳಸಿ feature ಫೋನ್ ಇಲ್ಲವೇ ಸಾಧಾರಣ ಫೋನ್ ಬಳಸಿ ಅವಶ್ಯಕ ವಸ್ತುಗಳನ್ನು ಖರೀದಿಸಬಹುದು. ಮಾರಾಟ ಮಾಡಬಹುದು. ಮತ್ತು ಹಣ ಸಂದಾಯ ಕೂಡಾ ಮಾಡಬಹುದು. ಇವರೆಲ್ಲರೂ ಈ ಬಹುಮಾನದ ಯೋಜನೆಯ ಫಲಾನುಭವಿಗಳಾಗಬಹುದು. ಗ್ರಾಮೀಣ ಭಾಗದಲ್ಲೂ ಜನರು AEPS ಮೂಲಕ ಖರೀದಿ ಮತ್ತು ಮಾರಾಟ ಮಾಡಬಹುದು ಮತ್ತು ಬಹುಮಾನ ಗೆಲ್ಲಬಹುದಾಗಿದೆ. ಇಂದು ಭಾರತದಲ್ಲಿ ೩೦ ಕೋಟಿ RUPay Card ಗಳಿವೆ. ಅದರಲ್ಲಿ ೨೦ ಸಾವಿರದಷ್ಟು ಜನ್‌ಧನ್ ಖಾತೆ ಹೊಂದಿದ ಬಡವರ ಬಳಿ ಇವೆ ಎಂದರೆ ಬಹಳಷ್ಟು ಜನರಿಗೆ ಆಶ್ಚರ್ಯವಾಗಬಹುದು, ಈ ೩೦ ಕೋಟಿ ಜನರು ತಕ್ಷಣದಿಂದಲೇ ಈ ಯೋಜನೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ದೇಶದ ಜನತೆ ಈ ವ್ಯವಸ್ಥೆಯಲ್ಲಿ ಆಸಕ್ತಿವಹಿಸುತ್ತಾರೆ ಎಂಬ ವಿಶ್ವಾಸ ನನಗಿದೆ. ನಿಮ್ಮ ಅಕ್ಕಪಕ್ಕದಲ್ಲಿರುವ ಯುವಕರಿಗೆ ಖಂಡಿತ ಇದು ಗೊತ್ತಿರುತ್ತದೆ. ನೀವು ಅವರನ್ನು ಕೇಳಿ ತಿಳಿದುಕೊಳ್ಳಬಹುದು. ನಿಮ್ಮ ಮನೆಯಲ್ಲೂ ೧೦ ನೇ ಇಲ್ಲ ೧೨ನೇ ತರಗತಿಯ ಮಕ್ಕಳಿರಬಹುದು, ಅವರೂ ಇದನ್ನು ನಿಮಗೆ ಕಲಿಸಬಹುದಾಗಿದೆ. ಇದು ತುಂಬಾ ಸರಳವಾಗಿದೆ. ನೀವುಮೊಬೈಲ್ ಫೋನ್‌ನಲ್ಲಿ WhatsApp ಬಳಸಿದಷ್ಟೇ ಸರಳವಾಗಿದೆ

ನನ್ನ ಪ್ರೀತಿಯ ದೇಶವಾಸಿಗಳೇ, ದೇಶದಲ್ಲಿ Technology ಹೇಗೆ ಬಳಸಬೇಕು e-payment ಹೇಗೆ ಮಾಡಬೇಕು, online payment ಹೇಗೆ ಮಾಡಬೇಕು ಎಂಬ ಕುರಿತು ಜಾಗೃತಿ ಬಹಳ ವೇಗವಾಗಿ ಹಬ್ಬುತ್ತಿದೆ. ಕಳೆದ ಕೆಲವೇ ದಿನಗಳಲ್ಲಿ ನಗದು ರಹಿತ ವ್ಯಾಪಾರ, ಸುಮಾರು ಶೇಕಡಾ ೨೦೦ ರಿಂದ ೩೦೦ ರಷ್ಟು ವೃದ್ಧಿಯಾಗಿದೆ. ಇದನ್ನು ಪ್ರೋತ್ಸಾಹಿಸಲು ಭಾರತ ಸರ್ಕಾರ ಬಹುದೊಡ್ಡ ನಿರ್ಣಯ ತೆಗೆದುಕೊಂಡಿದೆ. ಇದು ಎಂಥ ದೊಡ್ಡ ನಿರ್ಣಯ ಎಂಬುದರ ಕುರಿತು ವ್ಯಾಪಾರಸ್ಥರು ಊಹಿಸಬಹುದು. ಯಾವ ವ್ಯಪಾರಿ digital ವ್ಯವಹಾರ ಮಾಡುತ್ತಾರೆಯೋ, ತಮ್ಮ ವ್ಯವಹಾರದಲ್ಲಿ ನಗದಿನ ಬದಲಾಗಿ oಟಿಟiಟಿe ಠಿಚಿಥಿmeಟಿಣ ಪದ್ಧತಿ ಅಳವಡಿಸಿಕೊಳ್ಳುತ್ತಾರೆಯೋ ಅಂಥ ವ್ಯಾಪಾರಿಗಳಿಗೆ Income Tax ಮುಕ್ತಗೊಳಿಸಲಾಗಿದೆ.

ನಾನು ದೇಶದ ಎಲ್ಲ ರಾಜ್ಯಗಳನ್ನೂ ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನೂ ಅಭಿನಂದಿಸುತ್ತೇನೆ. ಎಲ್ಲರೂ ತಮ್ಮ ತಮ್ಮ ರೀತಿಯಲ್ಲಿ ಈ ಅಭಿಯಾನವನ್ನು ಮುಂದುವರಿಸಿದ್ದಾರೆ. ಆಂಧ್ರದ ಮುಖ್ಯಮಂತ್ರಿ ಶ್ರಿಯುತ ಚಂದ್ರಬಾಬು ನಾಯ್ಡು ಅವರ ಅಧ್ಯಕ್ಷತೆಯಲ್ಲಿ ಒಂದು ಸಮೀತಿ ನಿರ್ಮಿಸಲಾಗಿದೆ. ಅದು ಈ ಕುರಿತಾದ ಅನೇಕ ಯೋಜನೆಗಳ ಬಗ್ಗೆ ಆಲೋಚಿಸುತ್ತಿದೆ. ಅಲ್ಲದೆ ಸರ್ಕಾರಗಳೂ ತಮ್ಮ ವತಿಯಿಂದ ಅನೇಕ ಯೋಜನೆಗಳನ್ನು ಜಾರಿಗೆ ತಂದಿರುವುದನ್ನು ನಾನು ಗಮನಿಸಿದ್ದೇನೆ. ಅಸ್ಸಾಂ ಸರ್ಕಾರ ಆಸ್ತಿ ಮತ್ತು ವ್ಯಾಪಾರದ License ಶುಲ್ಕವನ್ನು digital ಪಾವತಿ ಮಾಡಿದರೆ ಅವರಿಗೆ ಶೇ ೧೦ ರಷ್ಟು ರಿಯಾಯತಿ ನೀಡುವ ನಿರ್ಣಯ ಕೈಗೊಂಡಿದೆ ಎಂದು ನನಗೆ ಯಾರೋ ಹೇಳಿದರು. ಗ್ರಾಮೀಣ ಬ್ಯಾಂಕ್‌ನ ಶಾಖೆಗಳಲ್ಲಿ ಶೇ ೭೫ ರಷ್ಟು ಗ್ರಾಹಕರಿಂದ ಜನವರಿಯಿಂದ ಮಾರ್ಚ ಒಳಗೆ ಕನಿಷ್ಠ ೨ ಬಾರಿ digital ವ್ಯವಹಾರ ಮಾಡಿಸಿದರೆ ಬ್ಯಾಂಕಿನವರಿಗೆ ಸರ್ಕಾರದಿಂದ ೫೦ ಸಾವಿರ ರೂಪಾಯಿ ಬಹುಮಾನ ದೊರೆಯಲಿದೆ. ೩೧ ಮಾರ್ಚ ೨೦೧೭ ರೊಳಗೆ ಒಂದೊಮ್ಮೆ ೧೦೦% digital transaction ನಲ್ಲಿ ತೊಡಗಿಕೊಳ್ಳುವ ಗ್ರಾಮಗಳಿಗೆ ಸರ್ಕಾರದಿಂದ Uttam Panchayat for Digi-Transction ಯೋಜನೆಯಡಿ ೫ ಲಕ್ಷ ರೂಪಾಯಿ ಬಹುಮಾನ ನೀಡಲು ಘೋಷಣೆ ಮಾಡಲಾಗಿದೆ. ಯಾವ ರೈತರು ಬೀಜ ಮತ್ತು ಗೊಬ್ಬರ ಖರೀದಿಗೆ ಸಂಪೂರ್ಣ digital ಪಾವತಿ ಮಾಡುವರೋ ಅಂಥ ಮೊದಲ ೧೦ ರೈತರಿಗೆ Digital Krishak Shiromani ಸನ್ಮಾನದ ಜೊತೆಗೆ ಅಸ್ಸಾಂ ಸರ್ಕಾರದವರು ೫ ಸಾವಿರ ರೂಪಾಯಿ ಬಹುಮಾನ ನೀಡುತ್ತಿದ್ದಾರೆ. ನಾನು ಅಸ್ಸಾಂ ಸರ್ಕಾರವನ್ನು ಮತ್ತು ಇದೇ ರೀತಿಯ ಉಪಕ್ರಮಗಳನ್ನು ತೆಗೆದುಕೊಂಡ ಎಲ್ಲ ಸರ್ಕಾರಗಳನ್ನೂ ಅಭಿನಂದಿಸುತ್ತೇನೆ. ಸಾಕಷ್ಟು ಸಂಘ ಸಂಸ್ಥೆಗಳು ಕೂಡ ಗ್ರಾಮೀಣ ಬಡ ರೈತರಲ್ಲಿ digital ವ್ಯವಹಾರಕ್ಕೆ ಪ್ರೋತ್ಸಾಹ ನೀಡಲು ಸಾಕಷ್ಟು ಸಫಲ ಪ್ರಯತ್ನ ಮಾಡಿವೆ. ಗೊಬ್ಬರಗಳನ್ನು ತಯಾರಿಸುವ GNFC Gujarat Nramada Valley Fertilizer ಮತ್ತು Chemical limited ನವರು ರೈತರಿಗೆ ಅನುಕೂಲವಾಗಲೆಂದು ಗೊಬ್ಬರ ಮಾರಾಟದ ಸ್ಥಳಗಳಲ್ಲಿ ಒಂದು ಸಾವಿರ Pos Machine ಗಳನ್ನು ಅಳವಡಿಸಿದ್ದಾರೆ ಮತ್ತು ಕೆಲವೇ ದಿನಗಳಲ್ಲಿ ೩೫ ಸಾವಿರ ರೈತರಿಗೆ ೫ ಲಕ್ಷ ಗೊಬ್ಬರದ ಚೀಲಗಳನ್ನು Digital ಪಾವತಿ ಮೂಲಕ ಮಾರಾಟ ಮಾಡಿದ್ದಾರೆ ಮತ್ತು ಇದೆಲ್ಲ ಕೇವಲ ೨ ವಾರದಲ್ಲಿ ಸಾಧಿಸಿದ್ದಾರೆ. ಮೋಜಿನ ಸಂಗತಿ ಎಂದರೆ GNFC ಯವರ ಗೊಬ್ಬರ ಮಾರಾಟದಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ ೨೭ ರಷ್ಟು ವೃದ್ಧಿಯಾಗಿದೆ.

ಸೋದರ ಸೋದರಿಯರೇ, ನಮ್ಮ ಅರ್ಥ ವ್ಯವಸ್ಥೆಯಲ್ಲಿ, ನಮ್ಮ ಜೀವನ ವ್ಯವಸ್ಥೆಯಲ್ಲಿ ಅಸಂಘಟಿತ ವಲಯ ಬಹುದೊಡ್ಡದು. ಹೆಚ್ಚಿನ ಪ್ರಮಾಣದಲ್ಲಿ ಇಂಥವರ ಕೂಲಿ ಹಣವನ್ನು ಇಲ್ಲವೇ ಸಂಬಳವನ್ನು ಹಣದ ರೂಪದಲ್ಲಿ ನೀಡಲಾಗುತ್ತದೆ. ಇದರಿಂದಾಗಿ ಕಾರ್ಮಿಕರ ಶೋಷಣೆಯೂ ಆಗುತ್ತದೆ ಎಂಬುದು ನಮಗೆ ಗೊತ್ತು. ನೂರು ರೂಪಾಯಿ ಸಿಗಬೇಕಿದ್ದಲ್ಲಿ ಕೇವಲ ೮೦ ರೂಪಾಯಿ ದೊರೆಯುತ್ತದೆ. ೮೦ ರೂಪಾಯಿ ದೊರೆಯಬೇಕಿದ್ದಲ್ಲಿ ೫೦ ರೂಪಾಯಿ ದೊರೆಯುತ್ತದೆ. ಅಲ್ಲದೆ ಇವರು Insurance ನಂಥ ಆರೋಗ್ಯ ಕ್ಷೇತ್ರದ ಹಲವಾರು ಸೌಲಭ್ಯಗಳಿಂದಲೂ ವಂಚಿತರಾಗುತ್ತಾರೆ. ಆದರೆ ಈಗ ನಗದು ರಹಿತ ಪಾವತಿ ಆಗ್ತಾ ಇದೆ. ಹಣ ನೇರವಾಗಿ ಬ್ಯಾಂಕಿಗೆ ಜಮಾ ಆಗ್ತಾ ಇದೆ. ಒಂದು ರೀತಿ ಅಸಂಘಟಿತ ವಲಯ ಸಂಘಟಿತಗೊಳ್ಳುತ್ತಿದೆ. ಶೋಷಣೆ ಕೊನೆಗೊಳ್ಳುತ್ತಿದೆ. ಪಡೆಯುವ ಹಣದಲ್ಲಿ ಕಡಿತಗೊಳ್ಳುವುದೂ ಕೊನೆಗೊಳ್ಳುತ್ತಿದೆ. ಕಾರ್ಮಿಕರಿಗೆ ಬಡವರಿಗೆ ತಮ್ಮ ಪೂರ್ಣ ಹಣ ಸಿಗುವುದು ಸಾಧ್ಯವಾಗುತ್ತಿದೆ. ಜೊತೆಗೆ ತಮ್ಮ ಹಕ್ಕಿನ ಇತರ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿದೆ. ನಮ್ಮ ದೇಶ, ಅತೀ ಹೆಚ್ಚು ಯುವಕರಿರುವಂಥ ದೇಶ. Technology ಎಂಬುದು ನಮಗೆ ಸಹಜ ಸಾಧ್ಯ. ಭಾರತದಂತಹ ದೇಶ ಈ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರಬೇಕು. ನಮ್ಮ ಯುವಕರು ಸ್ಟಾರ್‍ಟ್ ಅಪ್‌ನಿಂದಾಗಿ ಬಹಳ ಪ್ರಗತಿ ಸಾಧಿಸಿದ್ದಾರೆ. ಈ digital movement ಒಂದು ಸುವರ್ಣಾವಕಾಶವಾಗಿದೆ. ನಮ್ಮ ಯುವಕರು ಹೊಸ ಹೊಸ idea ಗಳು technology ಗಳಿಂದ, ಹೊಸ ಪದ್ಧತಿಗಳಿಂದ ಈ ಕ್ಷೇತ್ರಕ್ಕೆ ಎಷ್ಟು ಬಲ ನೀಡಲು ಸಾಧ್ಯವೋ ಅಷ್ಟು ನೀಡಬೇಕು. ಆದರೆ ದೇಶವನ್ನು ಕಪ್ಪು ಹಣ ಮತ್ತು ಭೃಷ್ಟಾಚಾರದಿಂದ ಮುಕ್ತಗೊಳಿಸುವ ಈ ಅಭಿಯಾನದಲ್ಲಿ ಸಂಪೂರ್ಣ ಶಕ್ತಿಯೊಂದಿಗೆ ಒಗ್ಗೂಡಬೇಕಾಗಿದೆ.

ನನ್ನ ಪ್ರೀತಿಯ ದೇಶ ಬಾಂಧವರೇ, ನಾನು ಪ್ರತಿ ಬಾರಿಯೂ ಮನದಾಳದ ಮಾತಿಗೆ ಮೊದಲು ನಿಮ್ಮ ಸಲಹೆ ಸೂಚನೆಗಳನ್ನು ನೀಡಿ, ನಿಮ್ಮ ವಿಚಾರಗಳನ್ನು ಹಂಚಿಕೊಳ್ಳಿ ಎಂದು ಆಗ್ರಹಿಸುತ್ತೇನೆ. ಈ ಬಾರಿ MyGov ಮತ್ತು NarendraModiApp ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಲಹೆಗಳು ಬಂದವು, ಅವುಗಳಲ್ಲಿ ಶೇ ೮೦ ರಿಂದ ೯೦ ರಷ್ಟು ಕಪ್ಪು ಹಣ, ಭ್ರಷ್ಟಾಚಾರ ನಿರ್ಮೂಲನೆ ಹೋರಾಟದ ಕುರಿತಾಗಿವೆ ಮತ್ತು ನೋಟು ಅಮಾನ್ಯಗೊಳಿಸಿದ ಕುರಿತು ಜನರು ಚರ್ಚೆ ಮಾಡಿದ್ದಾರೆ. ಈ ಎಲ್ಲ ಪತ್ರಗಳನ್ನು ಅವಲೋಕಿಸಿದಾಗ ಮೇಲ್ನೋಟಕ್ಕೆ ಅವನ್ನು ೩ ವಿಭಾಗಗಳಾಗಿ ವಿಂಗಡಿಸುತ್ತಿದ್ದೇನೆ. ಕೆಲ ಜನರು, ಸಾಮಾನ್ಯ ಜನತೆಗೆ ಹೇಗೆ ಕಷ್ಟವಾಗುತ್ತಿದೆ, ಯಾವ ರೀತಿಯ ಅನಾನುಕೂಲಗಳಾಗುತ್ತಿವೆ ಎಂಬುದರ ಬಗ್ಗೆ ಸವಿಸ್ತಾರವಾಗಿ ಬರೆದಿದ್ದಾರೆ. ದೇಶದ ಏಳ್ಗೆಗಾಗಿ ಇಷ್ಟೊಳ್ಳೆ ಪವಿತ್ರ ಕೆಲಸ ಮಾಡಿದರೂ ಎಲ್ಲಲ್ಲಿ ಎಂತೆಂಥ ಗಲಾಟೆಗಳು ನಡೆಯುತ್ತಿವೆ, ಹೇಗೆ ಅನ್ಯಾಯದ ಹೊಸ ರೂಪಗಳ ಅವಿಷ್ಕಾರವಾಗುತ್ತಿದೆ ಎಂಬುದರ ಕುರಿತು ಪತ್ರ ಬರೆದ ಇನ್ನೊಂದು ಗುಂಪು ಉಲ್ಲೇಖಿಸಿದೆ. ಈಗಾಗಲೇ ತೆಗೆದುಕೊಂಡ ಕ್ರಮಗಳನ್ನು ಪ್ರೋತ್ಸಾಹಿಸುವುದರ ಜೊತೆಗೆ ಈ ಹೋರಾಟವನ್ನು ಮುಂದುವರಿಸಬೇಕು, ಕಪ್ಪು ಹಣ, ಭ್ರಷ್ಟಾಚಾರ ಸಂಪೂರ್ಣ ನಿರ್ಮೂಲನೆ ಆಗಬೇಕು, ಅದಕ್ಕಾಗಿ ಇನ್ನಷ್ಟು ಕಠೋರ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದಲ್ಲಿ ಹಿಂಜರಿಯಬಾರದು ಎಂದು ಹುರಿದುಂಬಿಸಿ ಬರೆದ ಜನರೂ ಇದ್ದಾರೆ.

ಇಷ್ಟೊಂದು ಪತ್ರಗಳನ್ನು ಬರೆದು ನನಗೆ ಸಹಾಯ ಮಾಡಿದ್ದಕ್ಕೆ ನಾನು ದೇಶದ ಜನತೆಗೆ ಋಣಿಯಾಗಿದ್ದೇನೆ. ಶ್ರೀಯುತ ಗುರುಮಣಿ ಕೇವಲ್ ಅವರು Mygov ಗೆ ಪತ್ರ ಬರೆದು, ಕಪ್ಪು ಹಣದ ತಡೆಗೆ ಕೈಗೊಂಡ ಕ್ರಮ ಪ್ರಶಂಸನಾರ್ಹವಾಗಿದೆ, ಆದರೆ ಸಾಮಾನ್ಯ ನಾಗರಿಕನಿಗೆ ತೊಂದರೆಗಳಾಗುತ್ತಿವೆ. ಆದರೆ ನಾವೆಲ್ಲರೂ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದೇವೆ. ಅಲ್ಲದೆ ಈ ಹೋರಾಟದಲ್ಲಿ ನಮ್ಮ ಪಾಲುದಾರಿಕೆ ಬಗ್ಗೆ ನಮಗೆ ಸಂತೋಷವಿದೆ. ನಾವು ಕಪ್ಪು ಹಣ ಮತ್ತು ಭ್ರಷ್ಟಾಚಾರದ ವಿರುದ್ಧ ಸೈನಿಕರಂತೆ ಹೋರಾಡುತ್ತಿದ್ದೇವೆ ಎಂದಿದ್ದಾರೆ.

ಗುರುಮಣಿ ಕೇವಲ್ ಅವರೇನು ಬರೆದಿದ್ದಾರೆಯೋ ದೇಶದ ಮೂಲೆ ಮೂಲೆಯಿಂದ ಇದೇ ಭಾವನೆ ಹೊರ ಹೊಮ್ಮುತ್ತಿದೆ. ನಾವೆಲ್ಲ ಇದನ್ನು ಅನುಭವಿಸುತ್ತಿದ್ದೇವೆ. ಆದರೆ ಜನತೆ ಕಷ್ಟ ಅನುಭವಿಸುತ್ತಿದ್ದರೆ, ತೊಂದರೆ ಪಡುತ್ತಿದ್ದರೆ ಅದನ್ನು ಕಂಡು ಯಾರಿಗೆ ತಾನೇ ಸಂಕಟವಾಗುವುದಿಲ್ಲ. ನಿಮಗೆ ಎಷ್ಟು ಸಂಕಟವಾಗುತ್ತದೆಯೋ ಅಷ್ಟೇ ನನಗೂ ಆಗುತ್ತದೆ. ಆದರೆ ಒಂದು ಉತ್ತಮ ಧ್ಯೇಯಕ್ಕಾಗಿ, ಉಚ್ಚ ಮಟ್ಟದ ಉದ್ದೇಶವನ್ನು ಸಾಧಿಸಲು ನಿಷ್ಠೆಯಿಂದ ಕೆಲಸ ಮಾಡಿದರೆ ಈ ಕಷ್ಟ, ದುಖಃ ಮತ್ತು ತೊಂದರೆಗಳ ಮಧ್ಯೆಯೂ ದೇಶದ ಜನತೆ ಧೈರ್ಯದಿಂದ ಎದೆಯೊಡ್ಡಿ ನಿಂತಿರುತ್ತಾರೆ. ಈ ಜನರೇ ನಿಜವಾಗಿಯೂ Agents of Change ಅಂದರೆ ಬದಲಾವಣೆಯ ಹರಿಕಾರರಾಗಿದ್ದಾರೆ. ನಾನು ಜನತೆಗೆ ಇನ್ನೊಂದು ಕಾರಣಕ್ಕಾಗಿಯೂ ಅಭಿನಂದಿಸುತ್ತೇನೆ. ಅವರು ಕೇವಲ ಕಷ್ಟಗಳನ್ನು ಅನುಭವಿಸುವುದಷ್ಟೇ ಅಲ್ಲದೇ ಜನತೆಯನ್ನು ತಪ್ಪು ದಾರಿಗೆ ಎಳೆಯುತ್ತಿದ್ದ ಆ ಆಯ್ದ ಜನರಿಗೆ ಸರಿಯಾದ ಉತ್ತರವನ್ನೂ ನೀಡಿದ್ದಾರೆ. ಎಷ್ಟೊಂದು ಗಾಳಿ ಸುದ್ದಿಗಳನ್ನು ಹಬ್ಬಿಸಲಾಗಿತ್ತು. ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧದ ಹೋರಾಟಕ್ಕೆ ಮೂಲಭೂತವಾದದ ಲೇಪವನ್ನು ಹಚ್ಚುವ ಪ್ರಯತ್ನಗಳೂ ನಡೆದವು. ಯಾರೋ ನೋಟಿನ ಮೇಲೆ ಬರೆದ Spelling ತಪ್ಪಾಗಿದೆ ಎಂದು ಗುಲ್ಲು ಹಬ್ಬಿಸಿದರೆ, ಇನ್ನಾರೋ ಉಪ್ಪಿನ ಬೆಲೆ ಹೆಚ್ಚಾಗಿದೆ ಎಂದು, ಮತ್ತಾರೋ ೨೦೦೦ ಮುಖ ಬೆಲೆಯ ನೋಟುಗಳೂ ರದ್ದಾಗಲಿವೆ ಎಂದು ೫೦೦ ಮತ್ತು ೧೦೦ ಮುಖ ಬೆಲೆಯ ನೋಟುಗಳು ರದ್ದಾಗಲಿವೆ ಎಂದು ಪುಕಾರು ಹುಟ್ಟಿಸಿದ್ದರು. ಆದರೆ ನಾನು ಗಮನಿಸಿದ್ದೇನೆ ವಿಭಿನ್ನ ಪ್ರತೀತಿ, ಪುಕಾರುಗಳ ಹೊರತಾಗಿಯೂ ದೇಶದ ಜನತೆಯ ಮನಸ್ಸನ್ನು ಯಾರೂ ಕದಡಲು ಸಾಧ್ಯವಾಗಲಿಲ್ಲ. ಇಷ್ಟೇ ಅಲ್ಲ, ಎಷ್ಟೋ ಜನ ಮೈದಾನಕ್ಕೆ ಇಳಿದು ತಮ್ಮ Creativity ಮೂಲಕ, ತಮ್ಮ ಬುದ್ಧಿ ಶಕ್ತಿಯ ಮೂಲಕ, ಪುಕಾರು ಹುಟ್ಟಿಸುವವರ ಮುಖವಾಡವನ್ನೂ ಕಳಚಿ ಸತ್ಯವನ್ನು ಹಿಡಿದೆತ್ತಿದರು. ಜನರ ಈ ಸಾಮರ್ಥ್ಯಕ್ಕೆ ನೂರಾರು ನಮನಗಳನ್ನು ಸಲ್ಲಿಸುತ್ತೇನೆ.

ನನ್ನ ಪ್ರೀತಿಯ ದೇಶವಾಸಿಗಳೇ, ೧೨೫ ಕೋಟಿ ಜನತೆ ನಮ್ಮೊಂದಿಗೆ ಇದ್ದಾಗ ಯಾವುದೂ ಅಸಂಭವವಲ್ಲ ಎಂಬುದು ನನ್ನ ಅನುಭವಕ್ಕೆ ಬರುತ್ತಿದೆ. ನಾನು ಪ್ರತಿಕ್ಷಣವೂ ಅದನ್ನು ಅನುಭವಿಸುತ್ತಿದ್ದೇನೆ. ಜನತಾ ಜನಾರ್ಧನರೇ ಈಶ್ವರನ ಸ್ವರೂಪವಾದ್ದರಿಂದ ಅವರ ಆಶೀರ್ವಾದ ಆ ಪರಮಾತ್ಮನ ಆಶೀರ್ವಾದವಾಗಿ ಪರಿಣಮಿಸುತ್ತದೆ. ದೇಶದ ಜನರಿಗೆ ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧದ ಮಹಾಯಜ್ಞದಲ್ಲಿ ಸಂಪೂರ್ಣ ಉತ್ಸಾಹದಿಂದ ಭಾಗವಹಿಸಿದ್ದಕ್ಕಾಗಿ ಧನ್ಯವಾದ ತಿಳಿಸುತ್ತೇನೆ. ಅವರಿಗೆ ನಮಸ್ಕರಿಸುತ್ತೇನೆ. ಸದನದಲ್ಲಿ ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ರಾಜಕೀಯ ಪಕ್ಷಗಳ ಮತ್ತು Political Funding ನ ಸಂಬಂಧದಲ್ಲೂ ವಿಸ್ತೃತ ಚರ್ಚೆ ನಡೆಯಲಿ ಎಂದು ನಾನು ಬಯಸುತ್ತಿದ್ದೆ. ಒಂದೊಮ್ಮೆ ಸದನದ ಕಲಾಪ ನಡೆದಿದ್ದರೆ ಉತ್ತಮ ಚರ್ಚೆ ನಡೆಯುತ್ತಿತ್ತು. ಯಾರಾದರೂ ರಾಜಕೀಯ ಪಕ್ಷಗಳಿಗೆ ಎಲ್ಲವೂ ಮುಕ್ತವಾಗಿದೆ ಎಂದು ಸುದ್ದಿ ಹಬ್ಬಿಸುತ್ತಿದ್ದರೆ ಅದೆಲ್ಲ ಸುಳ್ಳು. ಎಲ್ಲರಿಗೂ ಕಾನೂನು ಒಂದೇ. ವ್ಯಕ್ತಿಯಾಗಲೀ, ಸಂಘಟನೆಯಾಗಲೀ ಇಲ್ಲವೇ ರಾಜಕೀಯ ಪಕ್ಷವಾಗಲೀ ಎಲ್ಲರೂ ಕಾನೂನು ಪಾಲನೆ ಮಾಡಲೇಬೇಕು. ಯಾರು ಮುಕ್ತವಾಗಿ ಭ್ರಷ್ಟಾಚಾರ ಮತ್ತು ಕಪ್ಪುಹಣದ ಸಮರ್ಥನೆಯನ್ನು ಮಾಡಲಾರರೋ ಅವರು ಸರ್ಕಾರದ ಲೋಪ ದೋಷಗಳನ್ನು ಹುಡುಕುವುದರಲ್ಲೇ ನಿರತರಾಗಿರುತ್ತಾರೆ. ಪದೇ ಪದೇ ಯಾಕೆ ನಿಮಯ ಬದಲಾವಣೆ ಮಾಡಲಾಗುತ್ತದೆ ಎಂಬ ಮಾತೂ ಬರುತ್ತದೆ. ಈ ಸರ್ಕಾರ ಇರುವುದು ಜನತಾ ಜನಾರ್ಧನರಿಗಾಗಿ. ಜನತೆಯಿಂದ ನಿರಂತರವಾಗಿ feedback ತೆಗೆದುಕೊಳ್ಳುವ ಕೆಲಸವನ್ನು ಸರ್ಕಾರ ಮಾಡುತ್ತದೆ. ಜನತಾ ಜನಾರ್ಧನರಿಗೆ ಎಲ್ಲಿ ಕಷ್ಟಗಳಾಗುತ್ತಿದೆ, ಯಾವ ನಿಯಮದಿಂದಾಗಿ ತೊಂದರೆ ಆಗುತ್ತಿದೆ, ಅದಕ್ಕೆ ಯಾವ ಮಾರ್ಗೋಪಾಯವಿದೆ ಎಂದು ಸರ್ಕಾರ ಸಂವೇದನಶೀಲವಾಗಿರುವುದರಿಂದ, ಜನತಾ ಜನಾರ್ಧನರ ಸುಖ ಸೌಲಭ್ಯಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಏನೆಲ್ಲ ನಿಯಮಗಳನ್ನು ಬದಲಿಸಬೇಕಾಗುತ್ತದೆಯೋ ಅದನ್ನು ಬದಲಿಸುತ್ತದೆ. ಇನ್ನೊಂದೆಡೆ ನಾನು ಕಳೆದ ತಿಂಗಳು ೮ ನೇ ತಾರೀಖಿನಂದು, ಮೊದಲನೇ ದಿನವೇ ಹೇಳಿದ್ದೆ, ಈ ಹೋರಾಟ ಅಸಾಮಾನ್ಯವಾದುದು ಎಂದು. ೭೦ ವರ್ಷಗಳಿಂದ ಮೋಸ ಮತ್ತು ಭ್ರಷ್ಟಾಚಾರದ ವ್ಯವಹಾರಗಳಲ್ಲಿ ಯಾವೆಲ್ಲ ಶಕ್ತಿಗಳು ಕೈಗೂಡಿಸಿವೆ? ಅವರ ಶಕ್ತಿ ಎಷ್ಟು? ಇಂಥವರೊಂದಿಗೆ ನಾನು ಪೋಟಿಗೆ ಇಳಿದಾಗ ಅವರು ಕೂಡ ಸರ್ಕಾರವನ್ನು ಸೋಲಿಸಲು ನಿತ್ಯವೂ ಹೊಸ ಮಾರ್ಗಗಳನ್ನು ಅನುಸರಿಸುತ್ತಾರೆ. ಅವರು ಹೊಸ ದಾರಿಗಳನ್ನು ಹುಡುಕಿದಾಗ ನಾವು ತಿರುಗೇಟು ನೀಡಲು ಹೊಸ ಮಾರ್ಗ ಕಂಡುಕೊಳ್ಳಲೇಬೇಕಲ್ಲವೇ. ನೀನು ಸೇರಾದ್ರೆ ನಾನು ಸವ್ವಾ ಸೇರು. ಯಾಕೆಂದ್ರೆ ನಾವು ಭ್ರಷ್ಟಾಚಾರಿಗಳನ್ನು, ಕಪ್ಪು ಹಣವನ್ನು ಮತ್ತು ಅಕ್ರಮಗಳನ್ನು ನಾಶಪಡಿಸಲು ನಿರ್ಧರಿಸಿದ್ದೇವೆ, ಇನ್ನೊಂದೆಡೆ ಎಷ್ಟೋ ಜನರು ಬರೆದ ಪತ್ರಗಳಲ್ಲಿ ಯಾವ ರೀತಿಯ ಗಲಾಟೆಗಳು ಆಗುತ್ತಿವೆ, ಎಂಥ ಹೊಸ ಮಾರ್ಗಗಳನ್ನು ಹುಡುಕಲಾಗುತ್ತಿದೆ ಎಂಬ ಚರ್ಚೆ ಆಗಿದೆ.

ನನ್ನ ಪ್ರಿಯ ದೇಶಬಾಂಧವರನ್ನು ಒಂದು ವಿಷಯದ ಕುರಿತು ಹಾರ್ದಿವಾಗಿ ಅಭಿನಂದಿಸಬಯಸುತ್ತೇನೆ. ದಿನವೂ ಜನರು ಸಿಕ್ಕಿ ಹಾಕಿಕೊಳ್ಳುತ್ತಿದ್ದಾರೆ, ಹಣವನ್ನು ವಶಪಡಿಸಿಕೊಳ್ಳಲಾಗುತ್ತಿದೆ, ದಾಳಿಗಳು ನಡೆದಿವೆ. ಒಳ್ಳೊಳ್ಳೆ ಜನರೇ ಸಿಕ್ಕಿ ಬೀಳುತ್ತಿದ್ದಾರೆ, ಇದೆಲ್ಲವನ್ನೂ ನೀವು ಟಿವಿ ವಾಹಿನಿಗಳ ಸುದ್ದಿಯಲ್ಲಿ ನೋಡ್ತಾ ಇರಬಹುದು. ಇದು ಹೇಗೆ ಸಾಧ್ಯವಾಯ್ತು, ನಾನು ಒಳಗುಟ್ಟು ಹೇಳಿಬಿಡಲೇ, ಗುಟ್ಟು ಏನಪ್ಪಾ ಅಂದ್ರೆ ಎಲ್ಲ ಮಾಹಿತಿ ನನಗೆ ಜನರಿಂದಲೇ ದೊರೆಯುತ್ತಿದೆ. ಸರ್ಕಾರೀ ವ್ಯವಸ್ಥೆಯಿಂದ ಏನೆಲ್ಲ ಮಾಹಿತಿ ಲಭ್ಯವಾಗುತ್ತದೆಯೋ ಅದಕ್ಕಿಂತ ಎಷ್ಟೋ ಪಟ್ಟು ಹೆಚ್ಚು ಸಾಮಾನ್ಯ ನಾಗರಿಕರಿಂದ ಮಾಹಿತಿ ದೊರೆಯುತ್ತಿದೆ. ಜನಸಾಮಾನ್ಯರ ಜಾಗರೂಕತೆಯಿಂದಲೇ ನಮಗೆ ಹೆಚ್ಚಿನ ಸಫಲತೆ ದೊರೆಯುತ್ತಿದೆ. ಯಾರೇ ಆಗಲಿ ಕಲ್ಪನೆ ಮಾಡಬಹುದು - ನನ್ನ ದೇಶದ ಜಾಗೃತ ನಾಗರಿಕರು ಇಂಥ ವಿಷಯಗಳನ್ನು ಬಯಲಿಗೆಳೆಯಲು ಎಂಥ ರಿಸ್ಕ್ ತೆಗೆದುಕೊಳ್ಳುತ್ತಿದ್ದಾರೆ ಎಂದು. ಬರುವ ಮಾಹಿತಿಯಿಂದ ನಮಗೆ ಸಾಕಷ್ಟು ಸಫಲತೆಯೂ ಸಿಗುತ್ತಿದೆ. ಸರ್ಕಾರ ಇದಕ್ಕಾಗಿ ಇಂಥ ಮಾಹಿತಿಗಳನ್ನು ಪಡೆಯಲೆಂದೇ ಒಂದು e-mail address ಸೃಷ್ಟಿಸಿದೆ, ಅದರಲ್ಲೂ ಮಾಹಿತಿಯನ್ನು ಕಳುಹಿಸಬಹುದು. MyGov ಗೆ ಕೂಡ ಕಳುಹಿಸಬಹುದು. ಸರ್ಕಾರ ಇಂಥ ಎಲ್ಲ ಕೆಟ್ಟ ವ್ಯವಸ್ಥೆ ವಿರುದ್ಧ ಹೋರಾಡಲು ಬದ್ಧವಾಗಿದೆ. ನಿಮ್ಮ ಸಹಕಾರ ಇದ್ದಾಗ ಹೋರಾಡುವುದು ಇನ್ನೂ ಸುಲಭ ಎಂದು ನನಗೆ ವಿಶ್ವಾಸವಿದೆ.

೩ ನೇ ವಿಭಾಗದ ಪತ್ರ ಬರೆಯುವ ಜನರ ಗುಂಪು ತುಂಬಾ ದೊಡ್ಡ ಸಂಖ್ಯೆಯಲ್ಲಿದೆ. ಮೋದಿಯವರೇ ದಣಿಯಬೇಡಿ, ನಿಲ್ಲಬೇಡಿ, ಎಷ್ಟು ಕಠಿಣ ಕ್ರಮ ತೆಗೆದುಕೊಳ್ಳಬಹುದೋ ತೆಗೆದುಕೊಳ್ಳಿ, ಆದರೆ ಇದೀಗ ಒಮ್ಮೆ ಈ ಮಾರ್ಗದಲ್ಲಿ ಮುನ್ನಡೆದಿದ್ದೇವೆ ಎಂದರೆ ಗುರಿ ತಲುಪಲೇಬೇಕಿದೆ ಎಂದು ಅವರು ಬರೆಯುತ್ತಾರೆ. ಇಂಥ ಪತ್ರ ಬರೆದ ಎಲ್ಲರಿಗೆ ವಿಶೇಷ ಧನ್ಯವಾದಗಳು. ಯಾಕೆಂದ್ರೆ ಅವರ ಪತ್ರದಲ್ಲಿ ವಿಶ್ವಾಸವೂ ಇದೆ, ಆಶೀರ್ವಾದವೂ ಇದೆ. ಇದು ಪೂರ್ಣ ವಿರಾಮವಲ್ಲ, ಇದು ಕೇವಲ ಆರಂಭ ಅಷ್ಟೇ ಎಂದು ನಿಮಗೆ ವಿಶ್ವಾಸ ನೀಡಬಯಸುತ್ತೇನೆ. ಈ ಯುದ್ಧವನ್ನು ಗೆಲ್ಲಲೇಬೇಕಿದೆ ದಣಿಯುವ ಅಥವಾ ನಿಲ್ಲುವ ಪ್ರಶ್ನೆಯೇ ಇಲ್ಲ, ಇನ್ನು ೧೨೫ ಕೋಟಿ ಜನರ ಆಶೀರ್ವಾದವಿರುವ ವಿಷಯದಲ್ಲಿ ಹಿಂದೆ ಸರಿಯುವ ಮಾತೇ ಇಲ್ಲ.

ನಿಮಗೆ ಗೊತ್ತಿರಬೇಕು, ನಮ್ಮ ದೇಶದಲ್ಲಿ ಬೇನಾಮಿ ಸ್ವತ್ತಿನ ಒಂದು ಕಾನೂನಿದೆ. ೧೯೮೮ ರಲ್ಲಿ ಈ ಕಾನೂನು ಜಾರಿಗೆ ಬಂದಿತ್ತು. ಆದರೆ ಎಂದೂ ಅದರ ನಿಯಮಗಳು ಜಾರಿಗೆ ಬರಲೇ ಇಲ್ಲ. ಅದನ್ನು Notify ಮಾಡಲೇ ಇಲ್ಲ, ಅದು ತಣ್ಣಗೇ ಉಳಿದುಬಿಟ್ಟಿತ್ತು. ನಾವು ಅದನ್ನು ಹೊರ ತೆಗೆದಿದ್ದೇವೆ ಮತ್ತು ಬೇನಾಮಿ ಸ್ವತ್ತಿನ ವಿರುದ್ಧ ಬಹಳ ತೀಕ್ಷ್ಣವಾದ ಕಾನೂನು ಜಾರಿಗೆ ತಂದಿದ್ದೇವೆ. ಮುಂಬರುವ ದಿನಗಳಲ್ಲಿ ಈ ಕಾನೂನು ತನ್ನ ಕೆಲಸ ಮಾಡಲಿದೆ. ದೇಶದ ಹಿತಕ್ಕಾಗಿ, ಜನರ ಹಿತಕ್ಕಾಗಿ, ಏನೇನು ಮಾಡಬೇಕಿದೆಯೋ ಅದು ನಮ್ಮ ಆದ್ಯತೆಯಾಗಿದೆ.

ನನ್ನ ಪ್ರೀತಿಯ ದೇಶಬಾಂಧವರೇ, ಕಳೆದ ಬಾರಿ ಮನದಾಳದ ಮಾತಿನಲ್ಲಿ ನಾನು ಹೇಳಿದ್ದೆ, ಈ ಕಠಿಣ ಪರಿಸ್ಥಿತಿಗಳ ನಡುವೆಯೂ ನಮ್ಮ ರೈತಬಾಂಧವರು ಬಿತ್ತನೆಯ ಪ್ರಮಾಣದಲ್ಲಿ ಕಳೆದ ವರ್ಷದ ದಾಖಲೆ ಮುರಿದಿದ್ದಾರೆ ಕೃಷಿ ಕ್ಷೇತ್ರದ ದೃಷ್ಟಿಯಿಂದ ಇದೊಂದು ಶುಭ ಸಂಕೇತವಾಗಿದೆ. ಈ ದೇಶದ ಕಾರ್ಮಿಕನಾಗಲೀ, ರೈತನಾಗಲೀ, ಯುವಕರಾಗಲಿ ಇವರೆಲ್ಲರ ಶ್ರಮ ಹೊಸ ರಂಗು ಮೂಡಿಸಿದೆ. ಕಳೆದ ದಿನಗಳಲ್ಲಿ ವಿಶ್ವದ ಆರ್ಥಿಕ ವೇದಿಕೆಯಲ್ಲಿ ಭಾರತ ಹಲವಾರು ಕ್ಷೇತ್ರಗಳಲ್ಲಿ ತನ್ನ ಹೆಸರನ್ನು ಬಹಳ ಗೌರವದಿಂದ ದಾಖಲಿಸಿಕೊಂಡಿದೆ. ನಮ್ಮ ದೇಶದ ಜನರ ಸತತ ಪ್ರಯತ್ನದ ಫಲವಾಗಿ ಬೇರೆ ಬೇರೆ ಸೂಚ್ಯಂಕಗಳ ಮೂಲಕ ಭಾರತ ವಿಶ್ವ ರಾಂಕಿಂಗ್ ನಲ್ಲಿ ಮೇಲ್ದರ್ಜೆಗೇರುತ್ತಿರುವುದು ಕಂಡು ಬರುತ್ತಿದೆ. World Bank ನ Business Report ನಲ್ಲಿ ಭಾರತದ ರಾಂಕಿಂಗ್ ಹೆಚ್ಚಿದೆ. ನಾವು ಭಾರತದ ವ್ಯಾಪಾರಿ ವಿಧಾನಗಳನ್ನು ವಿಶ್ವದ ಅತ್ಯುತ್ತಮ ವಿಧಾನಗಳಿಗೆ ಸರಿ ದೂಗುವಂತೆ ಬಹಳ ಪ್ರಯತ್ನ ಮಾಡುತ್ತಿದ್ದೇವೆ. ಅದರಲ್ಲಿ ಸಫಲತೆಯೂ ದೊರೆಯುತ್ತಿದೆ. UNCTAD ಮೂಲಕ ಪ್ರಕಟಿಸಲಾದ world investment report ಅನುಸಾರ ೨೦೧೬-೧೮ ರ ಸಾಲಿನ ಅತ್ಯುನ್ನತ ಆತಿಥೇಯ ಆರ್ಥಿಕತೆಗಳ ಪಟ್ಟಿಯಲ್ಲಿ ಭಾರತದ ಸ್ಥಾನ ೩ ಕ್ಕೇರಿದೆ. World Economic Forum ನ global competitiveness Report ನಲ್ಲಿ ಭಾರತ ೩೨ ನೇ ಸ್ಥಾನಕ್ಕೇರಿದೆ. Global innovationindex 2016 ರಲ್ಲಿ ನಾವು ೧೬ ಸ್ಥಾನಗಳ ಏರಿಕೆ ಸಾಧಿಸಿದ್ದೇವೆ. ಮತ್ತು World Bank ನ Logistics Performance Index ೨೦೧೬ ರಲ್ಲಿ ೧೯ ರಾಂಕ್ ಗಳ ಏರಿಕೆ ಆಗಿದೆ. ಇನ್ನೂ ಇಂತಹ ಹಲವಾರು report ಗಳ ಅಂಕಿ ಅಂಶಗಳು ಭಾರತ ಪ್ರಗತಿಯತ್ತ ಸಾಗಿದೆ ಎಂಬುದನ್ನೇ ಸೂಚಿಸುತ್ತಿವೆ.

ನನ್ನ ಪ್ರೀತಿಯ ದೇಶ ಬಾಂಧವರೇ, ಈ ಬಾರಿ ಸಂಸತ್ತಿನ ಕಲಾಪ ದೇಶದ ಜನತೆಯ ಮುನಿಸಿಗೆ ಕಾರಣವಾಗಿದೆ. ಸಂಸತ್ತಿನ ಆಗು ಹೋಗುಗಗಳ ಬಗೆಗೆ ನಾಲ್ಕೂ ದಿಕ್ಕುಗಳಿಂದ ರೋಷ ವ್ಯಕ್ತವಾಗಿದೆ. ರಾಷ್ಟ್ರಪತಿ ಮತ್ತು ಉಪ ರಾಷ್ಟ್ರಪತಿಯವರೂ ಕೂಡ ತಮ್ಮ ಮುನಿಸನ್ನು ಬಹಿರಂಗವಾಗೇ ವ್ಯಕ್ತಪಡಿಸಿದ್ದಾರೆ. ಆದರೇ, ಇಂಥ ಪರಿಸ್ಥಿತಿಯಲ್ಲೂ ಕೆಲವೊಮ್ಮೆ ಒಳ್ಳೇದು ಘಟಿಸಿದಾಗ ಮನಸ್ಸಿಗೆ ಒಂದು ಬಗೆಯ ಸಂತೋಷ ಲಭಿಸುತ್ತದೆ. ಸಂಸತ್ತಿನ ಸದ್ದು ಗದ್ದಲದ ಮಧ್ಯೆಯೇ ಆದ ಒಂದು ಉತ್ತಮ ಕೆಲಸದತ್ತ ದೇಶದ ಗಮನ ಹರಿದಿಲ್ಲ. ಸೋದರ ಸೋದರಿಯರೇ, ಇಂದು ನನಗೆ ಈ ವಿಷಯ ತಿಳಿಸಲು ತುಂಬಾ ಗರ್ವವೆನಿಸುತ್ತದೆ ಮತ್ತು ಹರ್ಷದಾಯಯಕವೆನಿಸುತ್ತಿದೆ. ದಿವ್ಯಾಂಗರ ಕುರಿತಾದ ನಿಶ್ಚಿತ ಗುರಿಯೊಂದಿಗೆ ನಮ್ಮ ಸರ್ಕಾರ ಮುಂದುವರಿದಿತ್ತು. ಅದಕ್ಕೆ ಸಂಬಂಧಿಸಿದ ಒಂದು ಮಸೂದೆ ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟಿತು. ಇದಕ್ಕಾಗಿ ನಾನು ರಾಜ್ಯ ಸಭೆ ಮತ್ತು ಲೋಕ ಸಭೆಯ ಎಲ್ಲ ಸದಸ್ಯರಿಗೆ ಧನ್ಯವಾದ ಅರ್ಪಿಸುತ್ತೇನೆ. ದೇಶದ ಕೋಟ್ಯಂತರ ದಿವ್ಯಾಂಗರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ. ದಿವ್ಯಾಂಗರ ಕುರಿತು ನಮ್ಮ ಸರ್ಕಾರ ಬದ್ಧವಾಗಿದೆ. ನಾನು ಸ್ವತಃ ಈ ವಿಷಯದ ಅಭಿಯಾನಕ್ಕೆ ವೇಗ ನೀಡಲು ಪ್ರಯತ್ನ ಮಾಡಿದ್ದೇನೆ. ದಿವ್ಯಾಂಗರಿಗೆ ಅವರ ಹಕ್ಕು ಮತ್ತು ಸನ್ಮಾನ ಸಿಗಲಿ ಎಂಬುದು ನನ್ನ ಉದ್ದೇಶವಾಗಿತ್ತು. ಪ್ಯಾರಾ ಒಲಿಂಪಿಕ್ಸ ನಲ್ಲಿ ನಾಲ್ಕು ಪದಕಗಳನ್ನು ಗೆಲ್ಲುವ ಮೂಲಕ ದಿವ್ಯಾಂಗ ಸೋದರ ಸೋದರಿಯರು ನಮ್ಮ ಪ್ರಯತ್ನ ಮತ್ತು ಭರವಸೆಗಳಿಗೆ ಇಂಬು ನೀಡಿದರು. ಅವರು ತಮ್ಮ ವಿಜಯದಿಂದ ದೇಶದ ಗೌರವವವನ್ನು ಹೆಚ್ಚಿಸುವುದಲ್ಲದೆ ತಮ್ಮ ಸಾಮರ್ಥ್ಯದಿಂದ ಜನರನ್ನು ಬೆರಗುಗೊಳಿಸಿದರು. ನಮ್ಮ ದಿವ್ಯಾಂಗ ಸೋದರ ಸೋದರಿಯರು ದೇಶದ ಇತರ ನಾಗರಿಕರಂತೆ ಅಮೂಲ್ಯ ಆಸ್ತಿ ಆಗಿದ್ದಾರೆ, ಅದ್ಭುತ ಶಕ್ತಿಯಾಗಿದ್ದಾರೆ. ಈ ಕಾನೂನು ಜಾರಿಗೆ ಬರುವ ಮೂಲಕ ದಿವ್ಯಾಂಗರಿಗೆ ಉದ್ಯೋಗಾವಕಾಶಗಳು ಹೆಚ್ಚಿವೆ ಎಂಬುದರ ಕುರಿತು ಇಂದು ನಾನು ತುಂಬಾ ಸಂತೋಷದಿಂದಿದ್ದೇನೆ. ಸರ್ಕಾರಿ ಉದ್ಯೋಗಗಳಲ್ಲಿ ಇವರಿಗೆ ಮೀಸಲಾತಿಯನ್ನು ಶೇ ೪ ರಷ್ಟು ಹೆಚ್ಚಿಸಲಾಗಿದೆ. ಈ ಕಾನೂನಿನಲ್ಲಿ ದಿವ್ಯಾಂಗರ ಶಿಕ್ಷಣ, ಸೌಲಭ್ಯ ಮತ್ತು ದೂರುಗಳಿಗಾಗಿ ಒಂದು ವಿಶೇಷ ಅವಕಾಶ ಕಲ್ಪಿಸಲಾಗಿದೆ. ಕೇಂದ್ರ ಸರ್ಕಾರ ಕಳೆದ ೨ ವರ್ಷಗಳಲ್ಲಿ ದಿವ್ಯಾಂಗರಿಗಾಗಿ ೪೩೫೦ ಕ್ಯಾಂಪ್ ಆಯೋಜಿಸಿದೆ ಎನ್ನುವುದರಿಂದ ದಿವ್ಯಾಂಗರ ಬಗ್ಗೆ ಸರ್ಕಾರ ಎಷ್ಟು ಸಂವೇದನಶೀಲವಾಗಿದೆ ಎಂಬುದನ್ನು ನೀವು ಅಂದಾಜಿಸಬಹುದಾಗಿದೆ. ೩೫೨ಕೋಟಿ ರೂಪಾಯಿಯ ಮೊತ್ತದ ವೆಚ್ಚದಲ್ಲಿ ೫ ಲಕ್ಷ ೮೦ ಸಾವಿರ ದಿವ್ಯಾಂಗ ಸೋದರ ಸೋದರಿಯರಿಗೆ ಪರಿಕರಗಳನ್ನು ಹಂಚಲಾಗಿದೆ. ಸರ್ಕಾರ ವಿಶ್ವಸಂಸ್ಥೆಯ ಭಾವನೆಗಳಿಗನುಸಾರ ಹೊಸ ಕಾನೂನನ್ನು ರಚಿಸಿದೆ. ಈ ಹಿಂದೆ ದಿವ್ಯಾಂಗರ ಶ್ರೇಣಿ ೭ ಬಗೆ ಯದ್ದಾಗಿತ್ತು, ಆದರೆ ಈಗ ಕಾನೂನು ನಿರ್ಮಿಸಿ ೨೧ ಬಗೆಗಳಲ್ಲಿ ವಿಂಗಡಿಸಲಾಗಿದೆ. ಇದರಲ್ಲಿ ೧೪ ಹೊಸ ಶ್ರೇಣಿಗಳನ್ನು ಸೇರಿಸಲಾಗಿದೆ. ದಿವ್ಯಾಂಗರ ಇಂಥ ಎಷ್ಟೋ ಶ್ರೇಣಿಗಳನ್ನು ಸೇರಿಸುವ ಮೂಲಕ ಹಲವರಿಗೆ ಮೊದಲ ಬಾರಿಗೆ ನ್ಯಾಯ ದೊರೆತಿದೆ ಮತ್ತು ಅವಕಾಶ ದೊರೆತಂತಾಗಿದೆ. ಉದಾಹರಣೆಗೆ Thalassemia, Parkinson’s, ಕುಬ್ಜರು ಮುಂತಾದವರನ್ನು ಈ ಶ್ರೇಣಿಯಲ್ಲಿ ಸೇರಿಸಲಾಗಿದೆ. ನನ್ನ ಯುವ ಸ್ನೇಹಿತರೇ, ಕಳೆದ ಕೆಲವು ವಾರಗಳಲ್ಲಿ ಕ್ರೀಡಾ ಜಗತ್ತಿನಲ್ಲಿ ನಮ್ಮೆಲ್ಲರಿಗೂ ಗೌರವ ಹೆಚ್ಚಿಸುವಂಥ ಸುದ್ದಿಗಳು ಕೇಳಿ ಬಂದವು. ಭಾರತೀಯರಾಗಿರುವ ನಮ್ಮೆಲ್ಲರಿಗೂ ಹೆಮ್ಮೆಯೆನಿಸುವುದು ಸ್ವಾಭಾವಿಕವೇ. ಭಾರತೀಯ ಕ್ರಿಕೆಟ್ ತಂಡಕ್ಕೆ ಇಂಗ್ಲೆಂಡ್ ವಿರುದ್ಧ ೪-೦ ಅಂಕಗಳಿಂದ ಸಿರೀಸ್‌ನಲ್ಲಿ ಜಯ ಲಭಿಸಿದೆ. ಇದರಲ್ಲಿ ಕೆಲವು ಯುವ ಕ್ರೀಡಾಳುಗಳ ಪ್ರದರ್ಶನ ಪ್ರಶಂಸನೀಯವಾಗಿದೆ. ನಮ್ಮ ಯುವಕ ಕರುಣ್ ನಾಯರ್ ತ್ರಿಶತಕ ಬಾರಿಸಿದ್ದಾನೆ. ಕೆ ಎಲ್ ರಾಹುಲ್ ೧೯೯ ರನ್‌ಗಳನ್ನು ಪೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಟೆಸ್ಟ್ ಕ್ಯಾಪ್ಟನ್ ವಿರಾಟ್ ಕೋಹ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನದ ಜೊತೆಗೆ ಅತ್ಯುತ್ತಮ ನಾಯಕತ್ವವನ್ನೂ ಪ್ರದರ್ಶಿಸಿದರು. ಭಾರತೀಯ ಕ್ರಿಕೆಟ್ ತಂಡದ off-spinner ಆರ್ ಅಶ್ವಿನ್ ಅವರನ್ನು ಐ ಸಿ ಸಿ ೨೦೧೬ ರ ‘Cricketer Of the year ’ ಮತ್ತು ‘Test Cricketer ಎಂದು ಘೋಷಿಸಿದೆ. ಇವರೆಲ್ಲರಿಗೂ ನನ್ನ ಅಭಿನಂದನೆಗಳು ಮತ್ತು ಶುಭಾಶಯಗಳು. ಹಾಕಿ ಕ್ಷೇತ್ರದಲ್ಲೂ ೧೫ ವರ್ಷಗಳ ನಂತರ ಬಹಳ ಉತ್ತಮ ಅದ್ಭುತ ಸುದ್ದಿ ಬಂದಿದೆ. Junior Hockey Team World Cup ಮೇಲೆ ತನ್ನ ಹಿಡಿತ ಸಾಧಿಸಿದೆ. ೧೫ ವರ್ಷಗಳ ನಂತರ Junior Hockey Team ಗೆ World Cup ಗೆಲ್ಲುವ ಅವಕಾಶ ಲಭಿಸಿದೆ. ಈ ವಿಜಯಕ್ಕೆ ಯುವ ಕ್ರೀಡಾಳುಗಳಿಗೆ ಅಭಿನಂದನೆ. ಈ ವಿಜಯ ಭಾರತೀಯ ಹಾಕಿ ತಂಡದ ಭವಿಷ್ಯಕ್ಕೆ ಶುಭ ಸಂಕೇತವಾಗಿದೆ. ಕಳೆದ ತಿಂಗಳು ನಮ್ಮ ಮಹಿಳಾ ಕ್ರೀಡಾಳುಗಳು ಕೂಡಾ ಅದ್ಭುತ ಪ್ರದರ್ಶನ ನೀಡಿದರು. ಭಾರತದ ಮಹಿಳಾ ಹಾಕಿ ತಂಡ Asian Champions Trophy ಗೆದ್ದಿದೆ ಅಲ್ಲದೆ ಇತ್ತೀಚೆಗೆ ಕೆಲ ದಿನಗಳ ಹಿಂದೆಯಷ್ಟೇ Under 18 Asia Cup ನಲ್ಲಿ ಭಾರತದ ಮಹಿಳಾ ಹಾಕಿ ತಂಡ ಕಂಚಿನ ಪದಕ ಗಿಟ್ಟಿಸಿಕೊಂಡಿದೆ. ನಾನು ಕ್ರಿಕೆಟ್ ಮತ್ತು ಹಾಕಿ ತಂಡದ ಎಲ್ಲ ಕ್ರೀಡಾಳುಗಳಿಗೆ ತುಂಬು ಹೃದಯದಿಂದ ಅಭಿನಂದಿಸುತ್ತೇನೆ.

ನನ್ನ ಪ್ರೀತಿಯ ದೇಶ ಬಾಂಧವರೆ, ೨೦೧೭ ನೇ ವರ್ಷ ಹೊಸ ಉತ್ಸಾಹ ಹೊಸ ಹುರುಪಿನಿಂದ ತುಂಬಿರಲಿ. ನಿಮ್ಮ ಎಲ್ಲ ಸಂಕಲ್ಪಗಳು ಸಿದ್ಧಿಸಲಿ. ವಿಕಾಸದ ಹೊಸ ಉತ್ತುಂಗವನ್ನು ತಲುಪೋಣ. ಸುಖ ಶಾಂತಿಯುತ ಜೀವನ ನಡೆಸುವ ಅವಕಾಶ ಕಡುಬಡವರಿಗೂ ಲಭಿಸಲಿ. ೨೦೧೭ರ ನೂತನ ಸಂವತ್ಸರದ ಅನಂತ ಅನಂತ ಶುಭಾಷಯಗಳು. ಅನಂತ ಧನ್ಯವಾದಗಳು

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Tier-2 cities drive growth in India's tech hiring as GCC expansion spreads beyond metros

Media Coverage

Tier-2 cities drive growth in India's tech hiring as GCC expansion spreads beyond metros
NM on the go

Nm on the go

Always be the first to hear from the PM. Get the App Now!
...
List of Outcomes: Prime Minister of Japan’s visit to India for the 16th India-Japan Annual Summit
July 02, 2026
Sl. No.OutcomeDescription
1. India-Japan Joint Declaration on Economic Security Promotes project-based collaboration for enhancing joint resilience in key sectors including semiconductors, critical minerals, information and communication technology including AI, clean energy and pharmaceuticals. India-Japan Fact Sheet 2.0 captures growing India-Japan G2G and B2B engagement in this crucial area.
2. India-Japan Joint Statement on Cooperation in the Field of Artificial Intelligence Elevates the India-Japan relationship to a strategic research and development partnership in the AI domain. Building on the India-Japan AI Initiative, the Joint Statement provides a roadmap for greater cooperation across the entire AI technology stack in pursuit of the shared vision of safe, secure, trusted, inclusive, and human-centric AI.
3 Joint Statement on Energy Resilience (between MoPNG and METI, Japan) Strengthens cooperation in strategic stockpiling and reserve mechanisms for crude oil and petroleum products. Promotes collaboration in joint investments across the maritime energy transport value chain.
4. Celebrating the 75th Anniversary of India-Japan Diplomatic Relations Outlines a series of commemorative events to celebrate 2027, the 75th anniversary of establishment of diplomatic relations, as the India-Japan Year of Shared Horizons
5. Memorandum of Cooperation for India-Japan Cooperative Biogas for Growth (CBG) Initiative Promotes cooperation towards the goal of establishing 1,000 biogas and organic fertilizer plants all across India, leveraging the extensive network of dairy cooperatives.
6. Memorandum of Cooperation in the Field of Batteries Promotes cooperation in battery-related projects and expands business opportunities with an aim of building a trusted, resilient and sustainable battery supply chain.
7. Memorandum of Cooperation in the Field of Pharmaceuticals and Medical Devices Sector Strengthens pharma supply chains, including in Active Pharmaceutical Ingredients (APIs) and Key Starting Materials (KSMs), through promotion of bilateral investment and business linkages, technical collaboration and industry-academia collaboration.
8. Memorandum of Cooperation in the Field of Geology and Mineral Exploration Strengthens cooperation in upstream critical minerals exploration through exchange of technical expertise.
9. Memorandum of Cooperation between IndiaAI Mission and Ministry of Economy, Trade and Industry (METI), Japan Promotes institutional cooperation between IndiaAI Mission and Japan’s GENIAC initiative – through B2B matchmaking, webinars on AI policies and challenges and support for joint projects through access to computing resources
10. Memorandum of Cooperation on Next Generation Mobility Partnership (NGMP) Establishes a framework for operationalizing the Next Generation Mobility Partnership (NGMP) which was announced at the 15th Annual Summit in August 2025. The NGMP would accelerate private sector-led cooperation and investment in mobility sectors including rail, automotive and road infrastructure, aviation, shipbuilding and ports, logistics, and urban development, positioning India as a hub for “Make in India for the World” exports to third countries.
11. Memorandum of Understanding between India’s Centre for Cellular and Molecular Platforms (C-CAMP) and RIKEN, Japan Establishes a framework for academic, translational research and start-up oriented innovation in deep-tech and life sciences, covering healthcare, agriculture and environment.
12. Memorandum of Understanding between National Center for Biological Sciences-Tata Institute of Fundamental Research and RIKEN, Japan Creates a framework for cooperation in basic biological and neuroscience research between the two leading research institutions
13. Memorandum of Understanding between IIT Bombay, BharatGen Technology Foundation and National Institute of Informatics, Japan Furthers collaboration on large language models (LLMs), with a focus on developing LLMs for enhanced scientific reasoning, through joint research exchanges
14. Memorandum of Understanding between SarvamAI and Preferred Network on LLM Development Creates a framework for cooperation across the full AI technology stack, including foundation models.
15. Memorandum of Understanding Between National Internet Exchange of India (NIXI) and Japan Network Information Center (JPNIC) Promotes cooperation in National Internet Registry operations, IPv6 adoption, internet security improvements, capacity building, student/professional exchanges and exchange of views on internet governance at regional and global forums.
16. Exchange of Letters Between International Financial Services Centres Authority (IFSCA) and Financial Services Agency, Japan (JFSA) Establishes a framework for cooperation in development, regulation and supervision of financial services as well as information exchange on financial-market trends and best practices, particularly in FinTech and RegTech.