ಶೇರ್
 
Comments
ಸಾಧುಗಳು ನಮಗೆ ಮೌಲ್ಯಯುತವಾದ ಬೋಧನೆಗಳನ್ನು ನೀಡಿದ್ದಾರೆ, ಅವರು ನಮಗೆ ದುಷ್ಟ ಶಕ್ತಿಗಳ ವಿರುದ್ದ ಮತ್ತು ದಬ್ಬಾಳಿಕೆ ವಿರುದ್ದ ಹೋರಾಡುವ ಶಕ್ತಿಯನ್ನೂ ನೀಡಿದ್ದಾರೆ : ಪ್ರಧಾನಿ
ನಮ್ಮ ಸಂತರು ಮತ್ತು ಸಾಧುಗಳು ನಮ್ಮ ಭೂತಕಾಲದ ಉತ್ತಮವಾದುದನ್ನು ಅಳವಡಿಸಿಕೊಳ್ಳಲು ಹೇಳಿದ್ದಾರೆ, ಅದೇ ವೇಳೆಗೆ ಭವಿಷ್ಯದೆಡೆಗೆ ನೋಡುತ್ತಾ , ಕಾಲದ ಜೊತೆಗೆ ಬದಲಾವಣೆ ಮಾಡಿಕೊಳ್ಳುವುದರ ಬಗ್ಗೆಯೂ ಬೋಧಿಸಿದ್ದಾರೆ : ಪ್ರಧಾನಿ
ಲಿಂಗತ್ವ ಆಧರಿಸಿದ ಪಕ್ಷಪಾತರಹಿತವಾದ ಸಮಾಜವನ್ನು ನಿರ್ಮಿಸೋಣ : ಪ್ರಧಾನಿ

ಅಹ್ಮದಾಬಾದಿನ ಜಸ್ ಪುರದಲ್ಲಿ ಇಂದು ವಿಶ್ವ ಉಮಿಯಾಧಾಮ ಸಂಕೀರ್ಣಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶಿಲಾನ್ಯಾಸ ನೆರವೇರಿಸಿದರು.

 

ಈ ಸಂದರ್ಭದಲ್ಲಿ ಅಲ್ಲಿ ನೆರೆದಿದ್ದ ಉತ್ಸಾಹಿ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಅವರು , ನಮ್ಮ ಸಮಾಜವನ್ನು ಬಲಿಷ್ಟಗೊಳಿಸುವಲ್ಲಿ ಸಂತರು ಮತ್ತು ಸಾಧುಗಳ ಪಾತ್ರವನ್ನು ಯಾರೂ ಮರೆಯಲಾರರು ಎಂದರು. ಅವರು ನಮಗೆ ಮೌಲ್ಯಯುತವಾದ ಬೋಧನೆಗಳನ್ನು ನೀಡಿದ್ದಾರೆ, ಅವರು ನಮಗೆ ದುಷ್ಟ ಶಕ್ತಿಗಳ ವಿರುದ್ದ ಮತ್ತು ದಬ್ಬಾಳಿಕೆ   ವಿರುದ್ದ ಹೋರಾಡುವ ಶಕ್ತಿಯನ್ನೂ ನೀಡಿದ್ದಾರೆ ಎಂದೂ ಪ್ರಧಾನಮಂತ್ರಿ ಅವರು ಹೇಳಿದರು.

 

ನಮ್ಮ ಸಂತರು ಮತ್ತು ಸಾಧುಗಳು ನಮ್ಮ ಭೂತಕಾಲದ ಉತ್ತಮವಾದುದನ್ನು ಅಳವಡಿಸಿಕೊಳ್ಳಲು ಹೇಳಿದ್ದಾರೆ, ಅದೇ ವೇಳೆಗೆ ಭವಿಷ್ಯದೆಡೆಗೆ ನೋಡುತ್ತಾ , ಕಾಲದ ಜೊತೆಗೆ ಬದಲಾವಣೆ ಮಾಡಿಕೊಳ್ಳುವುದರ ಬಗ್ಗೆಯೂ ಬೋಧಿಸಿದ್ದಾರೆ ಎಂದರು.

 

ಜನರಿಗೆ ಅನುಕೂಲವಾಗುವ ಉಪಕ್ರಮಗಳ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿ ಅವರು ಸಣ್ಣ ಪ್ರಮಾಣದಲ್ಲಿ ಏನಾದರೊಂದು ಮಾಡುವುದು ಕೇಂದ್ರ ಸರಕಾರಕ್ಕೆ ಸಮ್ಮತವಾದುದಲ್ಲ ಎಂದರು. ಕೇಂದ್ರ ಸರಕಾರದ ಕೆಲಸಗಳು ಸದಾ ಕಾಲ ದೊಡ್ಡ ಪ್ರಮಾಣದಲ್ಲಿರುತ್ತವೆ, ಮತ್ತು ಅವು ಸಮಾಜದ ಎಲ್ಲಾ ವರ್ಗಗಳಿಗೂ ಪ್ರಯೋಜನಕಾರಿಯಾಗಿರುತ್ತವೆ ಎಂದರು.

 

ಸಮುದಾಯ ಮಟ್ಟದಲ್ಲಿ ಯುವಕರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುವುದಕ್ಕೆ ಒತ್ತು ನೀಡುವುದು ಬಹಳ ಪ್ರಮುಖವಾದುದು ಎಂದೂ ಪ್ರಧಾನಮಂತ್ರಿ ಹೇಳಿದರು.

 

ಮಾ ಉಮಿಯಾರನ್ನು ನಂಬುವ ಯಾರೂ ಕೂಡಾ ಭ್ರೂಣಹತ್ಯೆ ಯನ್ನು ಬೆಂಬಲಿಸುವುದಿಲ್ಲ ಎಂದು ಪ್ರಧಾನಮಂತ್ರಿ ಅವರು ದೃಢವಾಗಿ ಹೇಳಿದರು.

 

ಲಿಂಗತ್ವ ಆಧರಿಸಿದ ಪಕ್ಷಪಾತರಹಿತವಾದ ಸಮಾಜವನ್ನು ನಿರ್ಮಾಣ ಮಾಡಲು ಸಹಾಯ ಮಾಡುವಂತೆ ಪ್ರಧಾನಮಂತ್ರಿ ಅವರು ಜನತೆಗೆ ಮನವಿ ಮಾಡಿಕೊಂದರು.'ಪರೀಕ್ಷಾ ಪೇ ಚರ್ಚಾ 2022' ರಲ್ಲಿ  ಭಾಗವಹಿಸಲು ಪ್ರಧಾನಮಂತ್ರಿ ಆಹ್ವಾನ
Explore More
ಉತ್ತರ ಪ್ರದೇಶದ ವಾರಾಣಸಿಯಲ್ಲಿ ಕಾಶಿ ವಿಶ್ವನಾಥ ಧಾಮ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಉತ್ತರ ಪ್ರದೇಶದ ವಾರಾಣಸಿಯಲ್ಲಿ ಕಾಶಿ ವಿಶ್ವನಾಥ ಧಾಮ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ
Padma Awards Under Modi Govt: Honouring Different Leaders From Across The Spectrum

Media Coverage

Padma Awards Under Modi Govt: Honouring Different Leaders From Across The Spectrum
...

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 28 ಜನವರಿ 2022
January 28, 2022
ಶೇರ್
 
Comments

Indians feel encouraged and motivated as PM Modi addresses NCC and millions of citizens.

The Indian economy is growing stronger and greener under the governance of PM Modi.