ಪ್ರಧಾನಮಂತ್ರಿ  ಶ್ರೀ ನರೇಂದ್ರ ಮೋದಿಯವರು  ಇಂದು ನಾಗ್ ಪುರ್ ಮೆಟ್ರೊವನ್ನು ನವ ದೆಹಲಿಯಿಂದ  ವೀಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.  13.5 ಕಿಮೀ ಉದ್ದದ, ನಾಗ್ ಪುರ್ ಮೆಟ್ರೊದ ಖಪ್ರಿ-ಸಿತಾಬುಲ್ಡಿ  ವಿಭಾಗದ ಡಿಜಿಟಲ್ ಫಲಕವನ್ನು   ಅನಾವರಣಗೊಳಿಸುವ ಮೂಲಕ ಮೆಟ್ರೋವನ್ನು  ಉದ್ಘಾಟಿಸಲಾಯಿತು.

 

ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆಯನ್ನು ಉದ್ದೇಶಿಸಿ  ಮಾತನಾಡಿದ ಪ್ರಧಾನ ಮಂತ್ರಿಯವರು ಮಹಾರಾಷ್ಟ್ರದ ಎರಡನೇ ಮೆಟ್ರೋ ಸೇವೆಗಾಗಿ ನಾಗ್ ಪುರದ ಜನರನ್ನು ಅಭಿನಂದಿಸಿದರು.  ನಾಗ್ ಪುರದ ಮೆಟ್ರೋಗೆ 2014 ರಲ್ಲಿ ಅವರು ಅಡಿಪಾಯ ಹಾಕಿದ್ದ ಕಾರಣ  ಇದು ವಿಶೇಷ ಕ್ಷಣವಾಗಿದೆ ಎಂದು ಅವರು ಹೇಳಿದರು.   ನಾಗ್ ಪುರದ ಜನರಿಗೆ ಮೆಟ್ರೊ ಮಿತವ್ಯಯ  ಮತ್ತು ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯನ್ನು ಒದಗಿಸುತ್ತದೆ ಎಂದು ಪ್ರಧಾನ ಮಂತ್ರಿಯವರು ಹೇಳಿದರು.

 

ನಾಗ್ ಪುರದ  ಬೆಳವಣಿಗೆಗೆ ಅದರ ಭವಿಷ್ಯದ ಅಗತ್ಯಗಳನ್ನು ಮನದಲ್ಲಿಟ್ಟುಕೊಂಡು  ಕೇಂದ್ರ ಸರಕಾರ ಮತ್ತು ರಾಜ್ಯ ಸರ್ಕಾರವು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ, ಎಂದು ಪ್ರಧಾನ ಮಂತ್ರಿಯವರು ಹೇಳಿದರು. ನಾಗ್ ಪುರ್ ಮೆಟ್ರೊ ಯುವಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ನಗರದ ಮತ್ತಷ್ಟು ಬೆಳವಣಿಗೆಗೆ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

 

ದೇಶಾದ್ಯಂತ ಆಧುನಿಕ ಸಾರಿಗೆ ವ್ಯವಸ್ಥೆಯನ್ನು ನಿರ್ಮಿಸಲು ಕೇಂದ್ರ ಸರಕಾರದ ಉಪಕ್ರಮಗಳನ್ನು ಎತ್ತಿ ತೋರಿಸಿದ ಪ್ರಧಾನಮಂತ್ರಿಯವರು, ಕಳೆದ ನಾಲ್ಕುವರೆ ವರ್ಷಗಳಲ್ಲಿ ಮೆಟ್ರೋದ 400 ಕಿಮೀ ಕಾರ್ಯನಿರ್ವಹಿಸುತ್ತಿರುವ ಜಾಲಗಳನ್ನು  ನಿರ್ಮಿಸಲಾಗಿದೆ ಎಂದು ಹೇಳಿದರು.  ದೇಶಾದ್ಯಂತ 800 ಕಿ.ಮೀ. ಮೆಟ್ರೊ  ಜಾಲಗಳ ಕೆಲಸ ಮುಂದುವರಿಯುತ್ತಿದೆ ಎಂದು ಅವರು ಹೇಳಿದರು.

 

ಇತ್ತೀಚೆಗೆ ಬಿಡುಗಡೆಯಾದ ಸಾಮಾನ್ಯ ಚಲನಶೀಲತೆ (ಕಾಮನ್ ಮೊಬಿಲಿಟಿ ಕಾರ್ಡ್) ಕಾರ್ಡ್,  ಒನ್ ನೇಷನ್-ಒನ್ ಕಾರ್ಡ್ಸ್ ಪ್ರಯೋಜನಗಳ ಬಗ್ಗೆ  ಪ್ರಧಾನಮಂತ್ರಿ    ಪ್ರಸ್ತಾಪಿಸಿದರು.  ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಕಾರ್ಡ್, ಡೆಬಿಟ್ ಕಾರ್ಡ್ ಅನ್ನು ಮೊಬಿಲಿಟಿ ಕಾರ್ಡ್ ನೊಂದಿಗೆ ವಿಲೀನಗೊಳಿಸುತ್ತದೆ ಮತ್ತು ಅಂತಹ ಕಾರ್ಡನ್ನು ನಿರ್ಮಿಸಲು ಇತರ ದೇಶಗಳ ಮೇಲೆ ಭಾರತದ ಅವಲಂಬನೆಯನ್ನು ತೆಗೆದುಹಾಕಿದೆ ಎಂದು ಅವರು ಹೇಳಿದರು.  ವಿಶ್ವದ ಕೆಲವೇ ದೇಶಗಳಲ್ಲಿ ಸಾರಿಗೆಗಾಗಿ ಕಾಮನ್ ಮೊಬಿಲಿಟಿ ಕಾರ್ಡ್ ನಂತಹವು  ಇವೆ  ಎಂದು   ಪ್ರಧಾನಮಂತ್ರಿಯವರು ಹೇಳಿದರು.

 

ಪರಿಹಾರಗಳನ್ನು ಹುಡುಕುವ ನಿಟ್ಟಿನಲ್ಲಿ  ಕೇಂದ್ರ ಸರ್ಕಾರವು ಸಮಗ್ರ ವಿಧಾನವನ್ನು ಹೊಂದಿದೆ ಎಂದು ಪ್ರಧಾನಮಂತ್ರಿ ಹೇಳಿದರು.  ರಾಷ್ಟ್ರದ ಎಲ್ಲಾ ನಾಗರಿಕರು  ಅನುಕೂಲಕರವಾದ ಜೀವನ  ನಡೆಸಲು ಮಾಡುವ  ಪ್ರಯತ್ನಗಳಲ್ಲಿ ಇರುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು.

Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
GST cuts ignite car sales boom! Automakers plan to ramp up output by 40%; aim to boost supply, cut wait times

Media Coverage

GST cuts ignite car sales boom! Automakers plan to ramp up output by 40%; aim to boost supply, cut wait times
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 14 ನವೆಂಬರ್ 2025
November 14, 2025

From Eradicating TB to Leading Green Hydrogen, UPI to Tribal Pride – This is PM Modi’s Unstoppable India