ಶೇರ್
 
Comments

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಇಂಡಿಯನ್ ಆಯಿಲ್‌ನ ಬೊಂಗೈಗಾಂವ್ ರಿಫೈನರಿಯಲ್ಲಿ ʻಐಎನ್‌ಡಿಮ್ಯಾಕ್ಸ್‌ʼ ಘಟಕವನ್ನು, ದಿಬ್ರೂಗಢದ ಮಧುಬಾನ್‌ನಲ್ಲಿ ಆಯಿಲ್ ಇಂಡಿಯಾ ಲಿಮಿಟೆಡ್‌ನ ಎರಡನೇ ಟ್ಯಾಂಕ್ ಫಾರ್ಮ್ ಅನ್ನು ಮತ್ತು ಅಸ್ಸಾಂನ ತಿನ್ಸುಕಿಯಾದ ಮಕುಮ್‌ನಲ್ಲಿರುವ ಹೆಬೆಡಾ ಗ್ರಾಮದಲ್ಲಿ ಗ್ಯಾಸ್ ಕಂಪ್ರೆಸರ್ ಕೇಂದ್ರವನ್ನು ದೇಶಕ್ಕೆ ಸಮರ್ಪಿಸಿದರು. ಧೇಮಾಜಿ ಎಂಜಿನಿಯರಿಂಗ್ ಕಾಲೇಜು ಉದ್ಘಾಟಿಸಿದ ಅವರು, ಅಸ್ಸಾಂನ ಸುಆಲ್ಕುಚಿ ಎಂಜಿನಿಯರಿಂಗ್ ಕಾಲೇಜಿನ ಶಂಕುಸ್ಥಾಪನೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಅಸ್ಸಾಂ ರಾಜ್ಯಪಾಲ ಪ್ರೊ.ಜಗದೀಶ್ ಮುಖಿ, ಅಸ್ಸಾಂ ಮುಖ್ಯಮಂತ್ರಿ ಶ್ರೀ ಸರ್ಬಾನಂದ ಸೋನೊವಾಲ್, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್, ಆಹಾರ ಸಂಸ್ಕರಣಾ ಕೈಗಾರಿಕಾ ಖಾತೆ ಸಹಾಯಕ ಸಚಿವ ಶ್ರೀ ರಾಮೇಶ್ವರ್ ತೇಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಈಶಾನ್ಯ ಭಾರತವು ದೇಶದ ಹೊಸ ಬೆಳವಣಿಗೆಯ ಎಂಜಿನ್ ಆಗಿದ್ದು, ಅಸ್ಸಾಂ ಜನರಿಗಾಗಿ ಹೆಚ್ಚು ಕೆಲಸ ಮಾಡಲು ತಾವು ಸ್ಫೂರ್ತಿ ಹೊಂದಿರುವುದಾಗಿ ಹೇಳಿದರು. ಎಂಟು ದಶಕಗಳ ಹಿಂದೆ ʼಜೊಯ್ಮೋತಿʼ ಎಂಬ ಚಲನಚಿತ್ರದೊಂದಿಗೆ ಬ್ರಹ್ಮಪುತ್ರ ನದಿಯ ಉತ್ತರ ದಂಡೆ ಅಸ್ಸಾಮಿ ಸಿನಿಮಾಕ್ಕೆ ಜನ್ಮ ನೀಡಿದ ಬಗೆಯನ್ನು ಅವರು ಸ್ಮರಿಸಿದರು. ಈ ಪ್ರದೇಶವು ಅಸ್ಸಾಂ ಸಂಸ್ಕೃತಿಯ ಹೆಮ್ಮೆಯನ್ನು ಹೆಚ್ಚಿಸುವ ಅನೇಕ ಗಣ್ಯ ವ್ಯಕ್ತಿಗಳ ತವರು ಎಂದು ಅವರು ಹೇಳಿದರು. ಅಸ್ಸಾಂನ ಸಮತೋಲಿತ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಒಟ್ಟಾಗಿ ಕೆಲಸ ಮಾಡುತ್ತಿವೆ. ರಾಜ್ಯದ ಮೂಲಸೌಕರ್ಯ ಅಭಿವೃದ್ಧಿಯು ಈ ಕಾರ್ಯಗಳ ಮೂಲಾಧಾರ ಎಂದು ಅವರು ಹೇಳಿದರು.

ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ, ಬ್ರಹ್ಮಪುತ್ರ ನದಿಯ ಉತ್ತರ ದಂಡೆಯಲ್ಲಿ ಅಗಾಧ ಸಾಮರ್ಥ್ಯವಿದ್ದರೂ, ಈ ಹಿಂದಿನ ಸರಕಾರಗಳು ಈ ಪ್ರದೇಶದ ಬಗ್ಗೆ ಮಲತಾಯಿ ಧೋರಣೆಯನ್ನು ತೋರಿವೆ. ಈ ಪ್ರದೇಶದಲ್ಲಿ ಸಂಪರ್ಕ, ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳು, ಕೈಗಾರಿಕೆಗಳಿಗೆ ಆದ್ಯತೆ ನೀಡಿಲ್ಲ ಎಂದು ಟೀಕಿಸಿದರು. 'ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್ʼ ಮತ್ತು ʻಸಬ್‌ಕಾ ವಿಶ್ವಾಸ್‌ʼ ಮಂತ್ರದ ಮೇಲೆ ಕೇಂದ್ರ ಸರಕಾರ ಕೆಲಸ ಮಾಡುತ್ತಿದ್ದು, ಈ ತಾರತಮ್ಯವನ್ನು ನಿವಾರಿಸಲಾಗಿದೆ ಎಂದು ಅವರು ವಿವರಿಸಿದರು. ಅಸ್ಸಾಂನಲ್ಲಿ ಸರಕಾರ ಆರಂಭಿಸಿದ ಮೂಲಸೌಕರ್ಯ ಯೋಜನೆಗಳ ಪಟ್ಟಿಯನ್ನೂ ಅವರು ಮುಂದಿಟ್ಟರು.

ಇಂದು ಈ ಪ್ರದೇಶದಲ್ಲಿ 3000 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಇಂಧನ ಮತ್ತು ಶಿಕ್ಷಣ ಮೂಲಸೌಕರ್ಯ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಈ ಯೋಜನೆಗಳು ಶಕ್ತಿ ಮತ್ತು ಶಿಕ್ಷಣದ ಕೇಂದ್ರವಾಗಿ ಈ ಪ್ರದೇಶದ ಅಸ್ಮಿತೆಯನ್ನು ಬಲಪಡಿಸಲಿದ್ದು, ಇದು ಅಸ್ಸಾಂನ ಸಂಕೇತವಾಗಿ ಕಾರ್ಯನಿರ್ವಹಿಸಲಿದೆ ಎಂದು ಅವರು ಹೇಳಿದರು.

ಭಾರತ ನಿರಂತರವಾಗಿ ಸ್ವಾವಲಂಬಿಯಾಗಬೇಕಾದ, ತನ್ನ ಶಕ್ತಿ-ಸಾಮರ್ಥ್ಯಗಳನ್ನು ವೃದ್ಧಿಸಿಕೊಳ್ಳುತ್ತಲೇ ಸಾಗಬೇಕಾದ ಅಗತ್ಯವನ್ನು ಪ್ರಧಾನಿ ಒತ್ತಿ ಹೇಳಿದರು. ಭಾರತದಲ್ಲಿ, ವಿಶೇಷವಾಗಿ ಬೊಂಗೈಗಾಂವ್ ಸಂಸ್ಕರಣಾ ಘಟಕದಲ್ಲಿ ದೊಡ್ಡ ಮಟ್ಟದಲ್ಲಿ ಸಾಮರ್ಥ್ಯ ವೃದ್ಧಿ ಸಾಧಿಸಲಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಇಂದು ಆರಂಭಿಸಲಿರುವ ಅನಿಲ ಘಟಕವು ಎಲ್‌ಪಿಜಿ ಉತ್ಪಾದನೆಯ ಸಾಮರ್ಥ್ಯವನ್ನು ಹೆಚ್ಚಿಸಲಿದೆ ಮತ್ತು ಅಸ್ಸಾಂ ಹಾಗೂ ಈಶಾನ್ಯ ಭಾಗದ ಜನರ ಜೀವನವನ್ನು ಸುಲಭಗೊಳಿಸಲಿದೆ ಎಂದು ಅವರು ಹೇಳಿದರು. ಇದರಿಂದ ಈ ಭಾಗದ ಯುವಕರಿಗೆ ಉದ್ಯೋಗಾವಕಾಶಗಳೂ ಹೆಚ್ಚಲಿವೆ.

ಅಡುಗೆ ಮನೆಯಲ್ಲಿ ಕಟ್ಟಿಗೆಯ ಹೊಗೆಯಿಂದ ಬಡ ಸಹೋದರಿಯರು ಮತ್ತು ಹೆಣ್ಣುಮಕ್ಕಳು ಅನುಭವಿಸುತ್ತಿದ್ದ ಸಂಕಟಕ್ಕೆ ಉಜ್ವಲ ಯೋಜನೆ ಮೂಲಕ ಸರಕಾರ ಮುಕ್ತಿ ಕಲ್ಪಿಸಿದೆ. ಇಂದು ಅಸ್ಸಾಂನಲ್ಲಿ ಎಲ್‌ಪಿಜಿ ಸಂಪರ್ಕವು ಶೇ.100ಕ್ಕೆ ತಲುಪಿದೆ. ಈ ಬಾರಿ ಕೇಂದ್ರ ಬಜೆಟ್‌ನಲ್ಲಿ 1 ಕೋಟಿ ಬಡ ಸಹೋದರಿಯರಿಗೆ ಉಚಿತ ಉಜ್ವಲ ಎಲ್‌ಪಿಜಿ ಸಂಪರ್ಕ ಕಲ್ಪಿಸುವ ಪ್ರಸ್ತಾಪ ಮುಂದಿಡಲಾಗಿದೆ ಎಂದು ಅವರು ವಿವರಿಸಿದರು.

ಗ್ಯಾಸ್ ಸಂಪರ್ಕ ಮತ್ತು ವಿದ್ಯುತ್ ಸಂಪರ್ಕ ಇಲ್ಲದಿರುವುದು ಹಾಗೂ ರಸಗೊಬ್ಬರದ ಕೊರತೆಯಿಂದ ಬಡವರು ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ. ಸ್ವಾತಂತ್ರ್ಯ ಬಂದು ಏಳು ದಶಕಗಳೇ ಕಳೆದರೂ ವಿದ್ಯುತ್ ಸಂಪರ್ಕದಿಂದ ವಂಚಿತವಾಗಿದ್ದ 18 ಸಾವಿರ ಗ್ರಾಮಗಳ ಪೈಕಿ ಬಹುತೇಕ ಅಸ್ಸಾಂ ಮತ್ತು ಈಶಾನ್ಯಗಳಿಗೇ ಸೇರಿದಂಥವು. ನಮ್ಮ ಸರಕಾರ ಈ ಗ್ರಾಮಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿ ಬೆಳಕು ಮೂಡಿಸಿದೆ ಎಂದು ಅವರು ಹೇಳಿದರು.

 

ಈ ಪ್ರದೇಶದಲ್ಲಿ ಹಲವು ರಸಗೊಬ್ಬರ ಕಾರ್ಖಾನೆಗಳು ಅನಿಲದ ಕೊರತೆಯಿಂದಾಗಿ ಮುಚ್ಚಿವೆ ಅಥವಾ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಇದರಿಂದ ಬಡವರು ಮತ್ತು ಮಧ್ಯಮ ವರ್ಗದ ಜನರ ಮೇಲೆ ಗಂಭೀರ ಪ್ರತಿಕೂಲ ಪರಿಣಾಮ ಉಂಟಾಗಿದೆ ಎಂದು ಅವರು ಹೇಳಿದರು.

ʻಪ್ರಧಾನಮಂತ್ರಿ ಉರ್ಜಾ ಗಂಗಾʼ ಯೋಜನೆ ಅಡಿಯಲ್ಲಿ, ಪೂರ್ವ ಭಾರತವನ್ನು ವಿಶ್ವದ ಅತಿದೊಡ್ಡ ಅನಿಲ ಕೊಳವೆ ಜಾಲದೊಂದಿಗೆ ಸಂಪರ್ಕಿಸಲಾಗುತ್ತಿದೆ ಎಂದು ಮೋದಿ ಅವರು ಹೇಳಿದರು.

ನಮ್ಮ ವಿಜ್ಞಾನಿಗಳು, ಎಂಜಿನಿಯರ್‌ಗಳು ಮತ್ತು ತಂತ್ರಜ್ಞರ ಪ್ರತಿಭಾ ಸಮೃದ್ಧತೆಯು ʻಅತ್ಮನಿರ್ಭರ್ ಭಾರತ್'ಗೆ ಉತ್ತೇಜನ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದೇಶದ ಯುವ ಜನಾಂಗವು ನವೋದ್ಯಮಗಳ ಮೂಲಕ ಸಮಸ್ಯೆಗಳನ್ನು ಪರಿಹರಿಸುವಂತಹ ವಾತಾವರಣವನ್ನು ಸೃಷ್ಟಿಸಲು ಕಳೆದ ಕೆಲವು ವರ್ಷಗಳಿಂದ ನಾವು ಕೆಲಸ ಮಾಡುತ್ತಿದ್ದೇವೆ. ಇಂದು ಇಡೀ ವಿಶ್ವವೇ ಭಾರತದ ಎಂಜಿನಿಯರ್‌ಗಳನ್ನು ಗುರುತಿಸುತ್ತಿದೆ. ಅಸ್ಸಾಂನ ಯುವ ಜನರಿಗೆ ಅದ್ಭುತ ಸಾಮರ್ಥ್ಯ ವಿದೆ. ಈ ಸಾಮರ್ಥ್ಯವನ್ನು ಹೆಚ್ಚಿಸಲು ರಾಜ್ಯ ಸರಕಾರ ಶ್ರಮಿಸುತ್ತಿದೆ. ಅಸ್ಸಾಂ ಸರಕಾರದ ಪ್ರಯತ್ನದಿಂದಾಗಿ ಇಂದು ರಾಜ್ಯದಲ್ಲಿ 20ಕ್ಕೂ ಹೆಚ್ಚು ಎಂಜಿನಿಯರಿಂಗ್ ಕಾಲೇಜುಗಳಿವೆ. ಇಂದು ಧೇಮಾಜಿ ಎಂಜಿನಿಯರಿಂಗ್ ಕಾಲೇಜು ಉದ್ಘಾಟನೆ ಮತ್ತು ಸುಅಲ್ಕುಚಿ ಎಂಜಿನಿಯರಿಂಗ್ ಕಾಲೇಜಿನ ಶಂಕುಸ್ಥಾಪನೆಯಿಂದ ಈ ಸ್ಥಿತಿ ಮತ್ತಷ್ಟು ಬಲಗೊಂಡಿದೆ. ಇನ್ನೂ ಮೂರು ಎಂಜಿನಿಯರಿಂಗ್ ಕಾಲೇಜುಗಳ ಕಾಮಗಾರಿ ನಡೆಯುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಅಸ್ಸಾಂ ಸರಕಾರವು ಹೊಸ ಶಿಕ್ಷಣ ನೀತಿಯನ್ನು ಆದಷ್ಟು ಬೇಗ ಜಾರಿಗೆ ತರಲು ಪ್ರಯತ್ನಿಸುತ್ತಿದೆ. ಇದರಲ್ಲಿ ಶಿಕ್ಷಣ ಮಾಧ್ಯಮವು ಸ್ಥಳೀಯ ಭಾಷೆಯಾಗಿರುವುದರಿಂದ ಅಸ್ಸಾಂನ ಜನರಿಗೆ, ವಿಶೇಷವಾಗಿ ಚಹಾ ತೋಟದ ಕೆಲಸಗಾರರು, ಪರಿಶಿಷ್ಟ ಪಂಗಡಗಳ ಮಕ್ಕಳಿಗೆ ಅನುಕೂಲವಾಗಲಿದೆ ಎಂದರು.

ಚಹಾ, ಕೈಮಗ್ಗ ಮತ್ತು ಪ್ರವಾಸೋದ್ಯಮಕ್ಕೆ ಅಸ್ಸಾಂ ವಿಶ್ವದಲ್ಲೇ ಹೆಸರುವಾಸಿಯಾಗಿದೆ ಎಂದು ಪ್ರಧಾನಿ ಹೇಳಿದರು. ಸ್ವಾವಲಂಬನೆಯು ಅಸ್ಸಾಮಿನ ಜನರ ಶಕ್ತಿ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಚಹಾ ಉತ್ಪಾದನೆಯು ಸ್ವಾವಲಂಬಿ ಅಸ್ಸಾ೦ನ ಕನಸನ್ನು ಇನ್ನಷ್ಟು ಬಲಪಡಿಸುತ್ತದೆ. ಇಂತಹ ಸನ್ನಿವೇಶದಲ್ಲಿ ಇಲ್ಲಿನ ಯುವಕರು ಶಾಲಾ ಕಾಲೇಜುಗಳಲ್ಲಿಯೇ ಕೌಶಲಗಳನ್ನು ಕಲಿತರೆ, ಅದರಿಂದ ಹೆಚ್ಚಿನ ಪ್ರಯೋಜನವಾಗಲಿದೆ ಎಂದರು. ಈ ವರ್ಷದ ಬಜೆಟ್‌ನಲ್ಲಿ ಬುಡಕಟ್ಟು ಪ್ರದೇಶಗಳಲ್ಲಿ ನೂರಾರು ಹೊಸ ಏಕಲವ್ಯ ಮಾದರಿ ಶಾಲೆಗಳನ್ನು ತೆರೆಯುವ ಪ್ರಸ್ತಾಪ ಮಾಡಲಾಗಿದ್ದು, ಇದರಿಂದ ಅಸ್ಸಾಂಗೂ ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.

ಅಸ್ಸಾಂ ರೈತರ ಸಾಮರ್ಥ್ಯ ಮತ್ತು ಅವರ ಆದಾಯವನ್ನು ಹೆಚ್ಚಿಸಲು ರಾಜ್ಯ ಹಾಗೂ ಕೇಂದ್ರ ಸರಕಾರಗಳು ಒಟ್ಟಾಗಿ ಕೆಲಸ ಮಾಡುತ್ತಿವೆ. ಮೀನುಗಾರಿಕೆ ವಲಯದ ರೈತರಿಗೆ 20,000 ಕೋಟಿ ರೂ.ಗಳ ಮಹತ್ವದ ಯೋಜನೆಯೊಂದನ್ನು ಜಾರಿಗೆ ತರಲಾಗಿದ್ದು, ಇದರಿಂದ ಅಸ್ಸಾಂ ರಾಜ್ಯದ ಜನರಿಗೆ ಅನುಕೂಲವಾಗಲಿದೆ ಎಂದು ಪ್ರಧಾನಿ ಹೇಳಿದರು. ಅಸ್ಸಾಂನಲ್ಲಿರುವ ರೈತರ ಉತ್ಪನ್ನಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ತಲುಪುವಂತೆ ಮಾಡಲು ಸರಕಾರ ಪ್ರಯತ್ನಿಸುತ್ತಿದೆ. ಉತ್ತರ ದಂಡೆಯ ಚಹಾ ತೋಟಗಳು ಕೂಡ ಅಸ್ಸಾಂನ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಅವರು ಹೇಳಿದರು.

ಸಣ್ಣ ಚಹಾ ಬೆಳೆಗಾರರಿಗೆ ಭೂಮಿಯನ್ನು ಗುತ್ತಿಗೆ ನೀಡಲು ಅಸ್ಸಾಂ ಸರಕಾರ ಆರಂಭಿಸಿರುವ ಅಭಿಯಾನದ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಅಸ್ಸಾಂ ಜನತೆಯು ಅಭಿವೃದ್ಧಿ ಮತ್ತು ಪ್ರಗತಿಯ ಡಬಲ್‌ ಎಂಜಿನ್‌ ಅನ್ನು ಬಲಪಡಿಸುವ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Modi Govt's #7YearsOfSeva
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
PM Narendra Modi, President Joe Biden hold first bilateral meeting, say 'new chapter in Indo-US ties has begun'

Media Coverage

PM Narendra Modi, President Joe Biden hold first bilateral meeting, say 'new chapter in Indo-US ties has begun'
...

Nm on the go

Always be the first to hear from the PM. Get the App Now!
...
PM pays tributes to Pandit Deendayal Upadhyaya on his birth anniversary
September 25, 2021
ಶೇರ್
 
Comments

The Prime Minister, Shri Narendra Modi has paid tributes to Pandit Deendayal Upadhyaya Ji on his birth anniversary.

In a tweet, the Prime Minister said;

"एकात्म मानव दर्शन के प्रणेता पंडित दीनदयाल उपाध्याय जी को उनकी जयंती पर शत-शत नमन। उन्होंने राष्ट्र निर्माण में अपना जीवन समर्पित कर दिया। उनके विचार देशवासियों को सदैव प्रेरित करते रहेंगे।"