ವಾರಣಾಸಿಯಲ್ಲಿ ಪ್ರಧಾನ ಮಂತ್ರಿ

Published By : Admin | December 29, 2018 | 17:00 IST

ಅವರು ವಾರಣಾಸಿಯಲ್ಲಿ ಅಂತಾರಾಷ್ಟ್ರೀಯ ಅಕ್ಕಿ ಸಂಶೋಧನಾ ಸಂಸ್ಥೆಯ ಕ್ಯಾಂಪಸ್ಸನ್ನು ಲೋಕಾರ್ಪಣೆಗೈದರು . ಅವರು ಸಂಸ್ಥೆಯ ವಿವಿಧ ಪ್ರಯೋಗಾಲಯಗಳಿಗೆ ಭೇಟಿ ನೀಡಿದರು.

ದೀನ ದಯಾಳ ಹಸ್ತಕಲಾ ಸಂಕುಲದಲ್ಲಿ ಪ್ರಧಾನ ಮಂತ್ರಿ ಅವರು “ ಒಂದು ಜಿಲ್ಲೆ, ಒಂದು ಉತ್ಪನ್ನ” (ಒ.ಡಿ.ಒ.ಪಿ.) ವಸ್ತು ಪ್ರದರ್ಶನಕ್ಕೆ ಭೇಟಿ ನೀಡಿದರು.

ಅವರು ಸಮಗ್ರ ಪೆನ್ಷನ್ ಆಡಳಿತ ಯೋಜನೆಯನ್ನು ಕಾರ್ಯಾರಂಭಗೊಳಿಸಿದರು.ವಾರಣಾಸಿಯಲ್ಲಿ ವಿವಿಧ ಶಿಲಾನ್ಯಾಸ ಮತ್ತು ವಿವಿಧ ಯೋಜನೆಗಳ ಕಾರ್ಯಾರಂಭದ ನಾಮ ಫಲಕಗಳನ್ನು ಅನಾವರಣಗೊಳಿಸಿದರು.

ಇಂದು ಕಾರ್ಯಾರಂಭಗೊಳಿಸಿದ ವಿವಿಧ ಯೋಜನೆಗಳನ್ನು ಪ್ರಸ್ತಾಪಿಸಿದ ಅವರು ಇವೆಲ್ಲವೂ ಏಕ ಉದ್ದೇಶವನ್ನು ಹೊಂದಿವೆ: ಜೀವಿಸಲು ಉತ್ತಮ ಅವಕಾಶವನ್ನು ಒದಗಿಸುವುದು ಮತ್ತು ವ್ಯಾಪಾರೋದ್ಯಮಕ್ಕೆ ಅನುಕೂಲಕರ ವಾತಾವರಣವನ್ನು ನಿರ್ಮಿಸುವುದು ಇದರ ಹಿಂದಿನ ಉದ್ದೇಶ ಎಂದರು. ಉತ್ತರ ಪ್ರದೇಶ ಸರಕಾರದ “ ಒಂದು ಜಿಲ್ಲೆ, ಒಂದು ಉತ್ಪನ್ನ “ ಯೋಜನೆ “ಮೇಕ್ ಇನ್ ಇಂಡಿಯಾ”ದ ವಿಸ್ತರಣೆ ಎಂದವರು ಬಣ್ಣಿಸಿದರು.

ಉತ್ತರ ಪ್ರದೇಶ ರಾಜ್ಯದಲ್ಲಿ ಸಣ್ಣ ಮತ್ತು ಮಧ್ಯಮ ವಲಯದ ಉದ್ಯಮಗಳು ಪರಂಪರೆಯ ಅಂಗಗಳು ಎಂದು ಹೇಳಿದ ಪ್ರಧಾನ ಮಂತ್ರಿಗಳು , ಈ ನಿಟ್ಟಿನಲ್ಲಿ ಬದೋಹಿಯ ರತ್ನಗಂಬಳಿ , ಮೀರತ್ ನ ಕ್ರೀಡಾ ಸಾಮಗ್ರಿಗಳ ಕೈಗಾರಿಕೆ, ವಾರಣಾಸಿಯ ರೇಷ್ಮೆ ಕೈಗಾರಿಕೆಗಳು ಮತ್ತು ಇತರ ಹಲವನ್ನು ಉಲ್ಲೇಖಿಸಿದರು.

ವಾರಣಾಸಿ ಮತ್ತು ಪೂರ್ವಾಂಚಲವನ್ನು ಕರಕುಶಲ ವಸ್ತುಗಳು ಮತ್ತು ಕಲೆಯ ತಾಣವೆಂದು ವಿವರಿಸಿದ ಅವರು ವಾರಣಾಸಿ ಮತ್ತು ಹತ್ತಿರದ ವಲಯದ 10 ಉತ್ಪನ್ನಗಳು ಜಿಯಾಗ್ರಾಫಿಕಲ್ ಇಂಡಿಕೇಶನ್ ಟ್ಯಾಗ್ (ಜಿ.ಐ.ಎ.) ಪಡೆದುಕೊಂಡಿವೆ ಎಂದರು. ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆ ಉತ್ತಮ ಯಂತ್ರೋಪಕರಣಗಳು, ತರಬೇತಿ ಮತ್ತು ಮಾರುಕಟ್ಟೆ ಬೆಂಬಲದ ಖಾತ್ರಿಪಡಿಸುವಿಕೆ ಮೂಲಕ ಈ ಕಲೆಯ ಅಭಿವ್ಯಕ್ತಿಗಳನ್ನು ಲಾಭದಾಯಕ ವ್ಯಾಪಾರವಾಗಿಸಲಿದೆ ಎಂದು ಹೇಳಿದ ಪ್ರಧಾನ ಮಂತ್ರಿಗಳು ಈ ಕಾರ್ಯಕ್ರಮದಲ್ಲಿ 2000 ಕೋ.ರೂ.ಗಳಷ್ಟು ಸಾಲ ವಿತರಿಸಲಾಗುವುದೆಂದು ತಮಗೆ ತಿಳಿಸಲಾಗಿದೆ ಎಂದರು.

ಈ ಯೋಜನೆಯಲ್ಲಿ ಉತ್ಪನ್ನಗಳ ತಯಾರಕರ ಸಮಸ್ಯೆಗಳಿಗೆ ಪೂರ್ಣ ಪ್ರಮಾಣದ ಪರಿಹಾರ ಒದಗಿಸಲು ಆದ್ಯತೆ ನೀಡಲಾಗಿದೆ ಎಂದು ಹೇಳಿದ ಅವರು ದೀನ ದಯಾಳ ಹಸ್ತಕಲಾ ಸಂಕುಲ ಈಗ ತನ್ನ ಪರಮೋಚ್ಚ ಉದ್ದೇಶವನ್ನು ಈಡೇರಿಸುತ್ತಿದೆ ಎಂದರು.

ಕೇಂದ್ರ ಸರಕಾರವು ಸಾಮಾನ್ಯ ಜನರ ಜೀವನವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಿದೆ ಮತ್ತು ವ್ಯಾಪಾರೋದ್ಯಮಕ್ಕೆ ಉತ್ತಮ ಅವಕಾಶಗಳನ್ನು ಉತ್ತೇಜಿಸುತ್ತಿದೆ ಎಂದೂ ಪ್ರಧಾನ ಮಂತ್ರಿ ಹೇಳಿದರು.

ಎಸ್.ಎ.ಎಂ.ಪಿ.ಎ.ಎನ್.ಎನ್. ಎಂಬ ಪೆನ್ಷನ್ ಪ್ರಾಧಿಕಾರ ಮತ್ತು ಆಡಳಿತ ವ್ಯವಸ್ಥೆಯನ್ನು ಇಂದು ಕಾರ್ಯಾರಂಭಗೊಳಿಸಲಾಗಿದೆ, ಇದು ಟೆಲಿಕಾಂ ಇಲಾಖೆಯ ನಿವೃತ್ತಿ ವೇತನದಾರರಿಗೆ ಅನುಕೂಲತೆಗಳನ್ನು ಕಲ್ಪಿಸಲಿದೆ ಮತ್ತು ಸಕಾಲದಲ್ಲಿ ನಿವೃತ್ತಿ ವೇತನ ವಿತರಣೆಗೆ ಸಹಾಯ ಮಾಡಲಿದೆ ಎಂದೂ ಪ್ರಧಾನ ಮಂತ್ರಿ ಅವರು ಹೇಳಿದರು.

ಜೀವಿಸುವ ಅವಕಾಶಗಳನ್ನು ಉತ್ತಮಪಡಿಸಲು ಮತ್ತು ನಾಗರಿಕ ಕೇಂದ್ರಿತ ಸೇವೆಗಳು ಸುಲಭದಲ್ಲಿ ಲಭ್ಯವಾಗುವಂತೆ ಮಾಡಲು ಕೇಂದ್ರ ಸರಕಾರವು ತಂತ್ರಜ್ಞಾನವನ್ನು ಬಳಸುತ್ತಿದೆ ಎಂದು ನುಡಿದ ಪ್ರಧಾನ ಮಂತ್ರಿಗಳು ಅಂಚೆ ಕಚೇರಿಗಳ ಮೂಲಕ ಬ್ಯಾಂಕಿಂಗ್ ಸೇವೆಯನ್ನು ವಿಸ್ತರಿಸಲು ಇಂಡಿಯಾ ಅಂಚೆ ಪಾವತಿ ಬ್ಯಾಂಕುಗಳನ್ನು ಬಳಸಲಾಗುತ್ತಿದೆ ಎಂದರು. 

ಗ್ರಾಮೀಣ ಪ್ರದೇಶಗಳಲ್ಲಿ 3 ಲಕ್ಷಕ್ಕೂ ಅಧಿಕ ಸಾಮಾನ್ಯ ಸೇವಾ ಕೇಂದ್ರಗಳು ವಿವಿಧ ಸೇವೆಗಳನ್ನು ಡಿಜಿಟಲ್ ವ್ಯವಸ್ಥೆ ಮೂಲಕ ಜನತೆಗೆ ಒದಗಿಸುತ್ತಿವೆ ಎಂಬುದನ್ನು ಪ್ರಸ್ತಾಪಿಸಿದ ಅವರು ದೇಶದಲ್ಲಿ ಅಂತರ್ಜಾಲ ಸಂಪರ್ಕಗಳಲ್ಲಿ ಭಾರೀ ಏರಿಕೆಯಾಗಿರುವುದರ ಬಗ್ಗೆಯೂ ಮಾತನಾಡಿದರು.

 

ದೇಶದಲ್ಲಿ ಒಂದು ಲಕ್ಷಕ್ಕೂ ಅಧಿಕ ಪಂಚಾಯತುಗಳು ಈಗ ಬ್ರಾಡ್ ಬ್ಯಾಂಡಿನೊಂದಿಗೆ ಸಂಪರ್ಕಿಸಲ್ಪಟ್ಟಿವೆ ಎಂದವರು ಹೇಳಿದರು. ಡಿಜಿಟಲ್ ಇಂಡಿಯಾ ಜನರಿಗೆ ಅನುಕೂಲತೆಗಳನ್ನು ಒದಗಿಸುತ್ತಿರುವುದು ಮಾತ್ರವಲ್ಲದೆ ಸರಕಾರೀ ಕೆಲಸದಲ್ಲಿ ಪಾರದರ್ಶಕತೆಯನ್ನು ತರುತ್ತಿದೆ ಮತ್ತು ಭ್ರಷ್ಟಾಚಾರವನ್ನು ತಡೆಯುತ್ತಿದೆ ಎಂದರು. ಈ ಹಿನ್ನೆಲೆಯಲ್ಲಿ ಅವರು ಸರಕಾರದ ಇ-ಮಾರ್ಕೆಟ್ ಅಥವಾ ಜಿ.ಇ.ಎಂ.ನ್ನು ಉಲ್ಲೇಖಿಸಿದರು. ಎಂ.ಎಸ್.ಎಂ.ಇ.ಗಳಿಗೆ ಜಿ.ಇ.ಎಂ. ಅತ್ಯುಪಯುಕ್ತ ಎಂದವರು ಹೇಳಿದರು.

ಎಂ.ಎಸ್.ಎಂ.ಇ.ಗಳನ್ನು ಸಶಕ್ತೀಕರಣಗೊಳಿಸುವುದಕ್ಕೆ ಕೇಂದ್ರ ಸರಕಾರ ಕಟಿಬದ್ಧವಾಗಿದೆ ಎಂದೂ ಪ್ರಧಾನ ಮಂತ್ರಿ ಅವರು ನುಡಿದರು. ಎಂ.ಎಸ್.ಎಂ.ಇ.ಗಳಿಗೆ ಸುಲಭದಲ್ಲಿ ಸಾಲ ಲಭ್ಯವಾಗುವ ಮೂಲಕ , ವ್ಯಾಪಾರೋದ್ಯಮಕ್ಕೆ ಅನುಕೂಲಕರ ವಾತಾವರಣವನ್ನು ಖಾತ್ರಿಪಡಿಸಲಾಗಿದೆ ಎಂದರು.

ಪೂರ್ವ ಭಾರತದಲ್ಲಿ ಎಲ್.ಎನ್.ಜಿ. ಮೂಲಕ ಆಧುನಿಕ ಸೌಕರ್ಯಗಳನ್ನು ಕಲ್ಪಿಸಿ , ಕೈಗಾರಿಕೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ದೊಡ್ಡ ಪ್ರಮಾಣದ ಪ್ರಯತ್ನಗಳು ನಡೆಯುತ್ತಿವೆ. ಇದರ ಒಂದು ಲಾಭ ಎಂದರೆ ಅಡುಗೆ ಅನಿಲ. ಅದೀಗ ವಾರಣಾಸಿಯ ಸಾವಿರಾರು ಮನೆಗಳಿಗೆ ದೊರೆಯಲಾರಂಭಿಸಿದೆ ಎಂದು ಪ್ರಧಾನ ಮಂತ್ರಿ ಅವರು ನುಡಿದರು.

ವಾರಣಾಸಿಯ ಅಕ್ಕಿ ಸಂಶೋಧನಾ ಸಂಸ್ಥೆಯ ಕ್ಯಾಂಪಸ್ ಕುರಿತಂತೆ ಪ್ರಸ್ತಾಪಿಸಿದ ಪ್ರಧಾನ ಮಂತ್ರಿಗಳು ಈ ಕೇಂದ್ರ ತಂತ್ರಜ್ಞಾನ ಬಳಸಿ ಕೃಷಿಯನ್ನು ಹೆಚ್ಚು ಲಾಭದಾಯಕ ಮಾಡುವ ನಮ್ಮ ಪ್ರಯತ್ನದ ಫಲ ಎಂದರು.

ಕಾಶಿಯ ಪರಿವರ್ತನೆ ಈಗ ಕಣ್ಣಿಗೆ ಕಾಣಿಸುತ್ತಿದೆ , ಇಂದು ಆರಂಭಗೊಳಿಸಲಾದ ಅಭಿವೃದ್ಧಿ ಯೋಜನೆಗಳು ಈ ನಿಟ್ಟಿನಲ್ಲಿ ಇನ್ನಷ್ಟು ನೆರವು ನೀಡಲಿವೆ ಎಂದರು. ಗಂಗಾ ನದಿಯನ್ನು ಸ್ವಚ್ಚಗೊಳಿಸಲು ಕೇಂದ್ರ ಸರಕಾರ ಬದ್ಧವಾಗಿರುವುದನ್ನು ಪ್ರಧಾನ ಮಂತ್ರಿ ಪುನರುಚ್ಚರಿಸಿದರು. ಸಾರ್ವಜನಿಕರ ಸಹಕಾರದಿಂದ ಈ ಕ್ರಮ ತನ್ನ ಗುರಿಯತ್ತ ಸಾಗುತ್ತಿದೆ ಎಂದವರು ಹೇಳಿದರು.

ತಿಂಗಳಾಂತ್ಯದಲ್ಲಿ ವಾರಣಾಸಿಯಲ್ಲಿ ಜರುಗಲಿರುವ ಪ್ರವಾಸಿ ಭಾರತೀಯ ದಿವಸ್ ಯಶಸ್ಸು ಗಳಿಸುತ್ತದೆ ಎಂಬ ಬಗ್ಗೆ ಪ್ರಧಾನ ಮಂತ್ರಿ ಅವರು ವಿಶ್ವಾಸ ವ್ಯಕ್ತಪಡಿಸಿದರು.

 

Click here to read PM's speech

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Operation Sagar Bandhu: India provides assistance to restore road connectivity in cyclone-hit Sri Lanka

Media Coverage

Operation Sagar Bandhu: India provides assistance to restore road connectivity in cyclone-hit Sri Lanka
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 5 ಡಿಸೆಂಬರ್ 2025
December 05, 2025

Unbreakable Bonds, Unstoppable Growth: PM Modi's Diplomacy Delivers Jobs, Rails, and Russian Billions