ನವೀಕರಿಸಬಹುದಾದ ಶಕ್ತಿಯ ಪ್ರದೇಶಗಳಲ್ಲಿ ನಮ್ಮ ಸಹಕಾರವನ್ನು ಬಲಪಡಿಸಲು ನಾವು ಒಪ್ಪಿಗೆ ನೀಡಿದ್ದೇವೆ, ಸೌದಿ ಅರೇಬಿಯವನ್ನು ಇಂಟರ್ನ್ಯಾಷನಲ್ ಸೌರ ಅಲೈಯನ್ಸ್ನಲ್ಲಿ ಸ್ವಾಗತಿಸುತ್ತೇವೆ: ಪ್ರಧಾನಿ ಮೋದಿ
ಕಳೆದ ವಾರ ಪುಲ್ವಾಮಾದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯು ಮಾನವೀಯ ವಿರೋಧಿ: ಪ್ರಧಾನಿ ಮೋದಿ
ಭಯೋತ್ಪಾದನೆಯ ಮೂಲಸೌಕರ್ಯವನ್ನು ಮತ್ತು ಬೆಂಬಲಿತ ಭಯೋತ್ಪಾದಕ ಸಂಘಟನೆಗಳನ್ನು ನಾಶಪಡಿಸುವುದು ಬಹಳ ಮುಖ್ಯ: ಪ್ರಧಾನಿ

ಘನತೆವೆತ್ತ ಮೊಹಮ್ಮದ್ ಬಿನ್ ಸಲ್ಮಾನ್ ಬಿನ್ ಅಬ್ದುಲ್-ಅಜೀಜ್ ಅಲ ಸೌದ್, ಸದೆಕಿ, ಮಹ್ರಬ ಬಿಕುಮ್ ಫಿಲ್ ಹಿಂದ್,

ಸ್ನೇಹಿತರೇ,

ಭಾರತಕ್ಕೆ ಮೊದಲ ಭೇಟಿ ನೀಡುತ್ತಿರುವ ಘನತೆವೆತ್ತ ರಾಜಕುಮಾರ ಮತ್ತು ಅವರ ನಿಯೋಗವನ್ನು ಸ್ವಾಗತಿಸಲು ನನಗೆ ಸಂತೋಷವಾಗುತ್ತಿದೆ. ಭಾರತ ಮತ್ತು ಸೌದಿ ಅರೇಬಿಯಾದ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಬಂಧಗಳು ಶತಮಾನಗಳಷ್ಟು ಹಳೆಯವು ಮತ್ತು ಯಾವಾಗಲೂ ಸೌಹಾರ್ದ ಹಾಗೂ ಸ್ನೇಹದಿಂದ ಇವೆ. ನಮ್ಮ ಜನರ ನಡುವಿನ ನಿಕಟವಾದ ಹಾಗೂ ತೀವ್ರವಾದ ಸಂಪರ್ಕ ನಮ್ಮ ದೇಶಗಳ ಜೀವಂತ ಸೇತುವೆಯಾಗಿದೆ. ಘನತೆವೆತ್ತ ದೊರೆ, ಘನತೆವೆತ್ತ ರಾಜಕುಮಾರರೇ, ನಿಮ್ಮ ವೈಯಕ್ತಿಕ ಆಸಕ್ತಿ ಹಾಗೂ ಮಾರ್ಗದರ್ಶನವು ನಮ್ಮ ದ್ವಿಪಕ್ಷೀಯ ಸಂಬಂಧಗಳಿಗೆ ಮತ್ತಷ್ಟು ನಿಕಟತೆ ಮತ್ತಷ್ಟು ಬಲವನ್ನು ತಂದುಕೊಟ್ಟಿದೆ. ಇಂದು 21ನೇ ಶತಮಾನದಲ್ಲಿ ಸೌದಿ ಅರೇಬಿಯಾವು ಭಾರತದ ಬಹು ಮೌಲ್ಯಯುತ ಕಾರ್ಯತಂತ್ರ ಪಾಲುದಾರರಲ್ಲಿ ಒಂದಾಗಿದೆ. ಇದೊಂದು ನಮ್ಮದೇ ವಿಸ್ತರಿಸಿದ ನೆರೆಹೊರೆ, ಆಪ್ತಮಿತ್ರ ಮತ್ತು ಭಾರತದ ಇಂಧನ ಭದ್ರತೆಗೆ ಪ್ರಮುಖ ಮೂಲ. 2016ರಲ್ಲಿ ನನ್ನ ಸೌದಿ ಅರೇಬಿಯಾ ಭೇಟಿಯ ವೇಳೆ, ನಮ್ಮ ಸಂಬಂಧಗಳಿಗೆ ವಿಶೇಷವಾಗಿ, ಇಂಧನ ಮತ್ತು ಭದ್ರತೆಯಲ್ಲಿ ಹಲವು ಆಯಾಮಗಳನ್ನು ನೀಡಿದೆವು. ಎರಡು ತಿಂಗಳ ಹಿಂದೆ ಅರ್ಜೆಂಟೈನಾದಲ್ಲಿ ತಮ್ಮೊಂದಿಗಿನ ಸಭೆಯ ನಂತರ, ಭದ್ರತೆ, ವ್ಯಾಪಾರ ಮತ್ತು ಹೂಡಿಕೆ ಕ್ಷೇತ್ರಗಳಲ್ಲಿ ನಮ್ಮ ಕಾರ್ಯತಂತ್ರದ ಪಾಲುದಾರಿಕೆಯು ಹೊಸದೊಂದು ಆಯಾಮವನ್ನೇ ಪಡೆದುಕೊಂಡಿದೆ. ತಮ್ಮ ಸಲಹೆಯಂತೆ, ದ್ವೈವಾರ್ಷಿಕ ಶೃಂಗ ಮತ್ತು ಕಾರ್ಯತಂತ್ರ ಪಾಲುದಾರಿಕೆ ಮಂಡಳಿಯನ್ನು ಸ್ಥಾಪಿಸಲು ನಾವು ಒಪ್ಪಿದ್ದೇವೆ ಎಂಬುದನ್ನು ತಿಳಿಸಲು ನನಗೆ ಸಂತೋಷವಾಗುತ್ತಿದೆ. ಇವುಗಳು ಶಕ್ತಿ, ವೇಗ ಮತ್ತು ಬೆಳವಣಿಗೆಯ ಮೂಲಕ ನಮ್ಮ ಸಂಬಂಧಗಳಿಗೆ ಪ್ರಯೋಜನವಾಗಲಿವೆ.

ಸ್ನೇಹಿತರೇ,

ಇಂದು ನಾವು ದ್ವಿಪಕ್ಷೀಯ ಸಂಬಂಧಗಳ ಎಲ್ಲಾ ವಿಷಯಗಳ ಬಗ್ಗೆ ವ್ಯಾಪಕ ಮತ್ತು ಅರ್ಥಪೂರ್ಣ ಚರ್ಚೆಗಳನ್ನು ಮಾಡಿದ್ದೇವೆ. ನಮ್ಮ ಆರ್ಥಿಕ ಸಹಕಾರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನಾವು ನಿರ್ಧರಿಸಿದ್ದೇವೆ. ಸೌದಿ ಅರೇಬಿಯದಿಂದ ನಮ್ಮ ಆರ್ಥಿಕತೆಗೆ ಸಾಂಸ್ಥಿಕ ಹೂಡಿಕೆಯನ್ನು ಸುಲಭಗೊಳಿಸಲು ಚೌಕಟ್ಟೊಂದನ್ನು ಸ್ಥಾಪಿಸಲು ನಾವು ಒಪ್ಪಿದ್ದೇವೆ. ಭಾರತದ ಮೂಲಸೌಕರ್ಯದಲ್ಲಿ ಸೌದಿ ಅರೇಬಿಯಾದ ಹೂಡಿಕೆಯನ್ನು ನಾನು ಸ್ವಾಗತಿಸುತ್ತೇನೆ.

ಘನತೆವೆತ್ತ ಯುವರಾಜರೇ, ನಿಮ್ಮ ನಾಯಕತ್ವದಲ್ಲಿ ಜಾರಿಯಾಗುತ್ತಿರುವ ‘ವಿಷನ್ 2030’ ಮತ್ತು ಆರ್ಥಿಕ ಸುಧಾರಣೆಗಳು ‘ಮೇಕ್ ಇನ್ ಇಂಡಿಯಾ’, ‘ಸ್ಟಾರ್ಟ್ ಅಪ್ ಇಂಡಿಯಾ’ಗಳಂತಹ ಭಾರತದ ಪ್ರಮುಖ ಕಾರ್ಯಕ್ರಮಗಳಿಗೆ ಪೂರಕವಾಗಿವೆ. ನಮ್ಮ ಇಂಧನ ಸಂಬಂಧಗಳನ್ನು ಕಾರ್ಯತಂತ್ರದ ಪಾಲುದಾರಿಕೆಗೆ ತಿರುಗಿಸುವ ಸಮಯ ಈಗ ಬಂದಿದೆ. ವಿಶ್ವದ ಅತಿದೊಡ್ಡ ಸಂಸ್ಕರಣಾಗಾರ ಮತ್ತು ಕಾರ್ಯತಂತ್ರದ ಪೆಟ್ರೋಲಿಯಂ ಸಂಗ್ರಹದಲ್ಲಿ ಸೌದಿ ಅರೇಬಿಯಾದ ತೊಡಗುವಿಕೆಯಿಂದಾಗಿ ನಮ್ಮನ್ನು ಮಾಮೂಲಿ ಖರೀದಿದಾರ- ಮಾರಾಟಗಾರ ಸಂಬಂಧಗಳಾಚೆಗೆ ಕೊಂಡೊಯ್ದಿದೆ. ನವೀಕರಿಸಬಹುದಾದ ಇಂಧನ ವಲಯದಲ್ಲಿ ಸಹಕಾರ ವರ್ಧನೆಗೆ ನಾವು ಸಮ್ಮತಿಸಿದ್ದೇವೆ. ಅಂತಾರಾಷ್ಟ್ರೀಯ ಸೌರ ಒಕ್ಕೂಟಕ್ಕೆ ಸೌದಿ ಅರೇಬಿಯಾವನ್ನು ನಾವು ಸ್ವಾಗತಿಸುತ್ತೇವೆ. ಶಾಂತಿಯುತ ಉದ್ದೇಶಗಳಿಗೆ ಅಣು ಶಕ್ತಿಯ ಬಳಕೆ, ವಿಶೇಷವಾಗಿ ನೀರಿನ ನಿರ್ಲವೀಕರಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ನಮ್ಮ ಸಹಕಾರದಲ್ಲಿ ಇನ್ನೊಂದು ಆಯಾಮವಾಗಿದೆ. ವಿಶೇಷವಾಗಿ ನಮ್ಮ ಕಾರ್ಯತಂತ್ರದ ವಾತಾವರಣದಲ್ಲಿ, ಪರಸ್ಪರ ರಕ್ಷಣಾ ಸಹಕಾರವನ್ನು ಬಲಪಡಿಸಲು ಮತ್ತು ವಿಸ್ತರಿಸಲು ನಾವು ಯಶಸ್ವಿಯಾಗಿ ಚರ್ಚಿಸಿದ್ದೇವೆ. ಸೌದಿ ಅರೇಬಿಯಾದ ಪ್ರತಿಷ್ಠಿತ ಜನಾದ್ರಿಯಾ ಉತ್ಸವದಲ್ಲಿ ಕಳೆದ ವರ್ಷ ಭಾರತ ‘ಮುಖ್ಯ ಅತಿಥಿಯಾಗಿತ್ತು. ಇಂದು ನಾವು ಸಾಂಸ್ಕೃತಿಕ ಸಂಬಂಧಗಳನ್ನು ಬಲಪಡಿಸುವ ಗುರಿಯನ್ನು ಹಾಕಿಕೊಂಡಿದ್ದೇವೆ. ವ್ಯಾಪಾರ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸಲು ಇ-ವೀಸಾ ಸೌಲಭ್ಯವನ್ನು ಸೌದಿ ಅರೇಬಿಯಾ ನಾಗರೀಕರಿಗೆ ವಿಸ್ತರಿಸಲಾಗಿದೆ. ಭಾರತೀಯರಿಗೆ ಹಜ್ ಕೋಟಾವನ್ನು ಹೆಚ್ಚಿಸಿದ್ದಕ್ಕಾಗಿ ಘನತೆವೆತ್ತ ದೊರೆ ಮತ್ತು ಘನತೆವೆತ್ತ ರಾಜಕುಮಾರರಿಗೆ ನಾವು ಕೃತಜ್ಞರಾಗಿದ್ದೇವೆ. ಸೌದಿ ಅರೇಬಿಯಾದಲ್ಲಿರುವ 2.7 ಮಿಲಿಯನ್ ಶಾಂತಿಪ್ರಿಯ ಹಾಗೂ ಪ್ರಯೋಜನಕಾರಿ ಭಾರತೀಯರು ನಮ್ಮ ನಡುವಿನ ಪ್ರಮುಖ ಕೊಂಡಿ. ಸೌದಿ ಅರೇಬಿಯಾದ ಅಭಿವೃದ್ಧಿಯಲ್ಲಿ ಅವರ ಧನಾತ್ಮಕ ಕೊಡುಗೆಯನ್ನು ಘನತೆವೆತ್ತ ರಾಜಕುಮಾರ ಪ್ರಶಂಸಿಸಿದ್ದಾರೆ. ಅವರ ಒಳಿತಿಗಾಗಿ ನೀವು ಯಾವಾಗಲೂ ಕಾಳಜಿ ವಹಿಸಿದ್ದೀರಿ. ಇದಕ್ಕಾಗಿ ಅವರ ಕೃತಜ್ಞತೆ ಮತ್ತು ಹಾರೈಕೆಗಳು ಎಂದಿಗೂ ನಿಮಗಿರುತ್ತವೆ.

ಸ್ನೇಹಿತರೇ,

ಕಳೆದ ವಾರ ಪುಲ್ವಾಮಾದಲ್ಲಿ ನಡೆದ ಕ್ರೂರ ಭಯೋತ್ಪಾದಕ ದಾಳಿಯು ವಿಶ್ವದಲ್ಲಿ ವಿನಾಶ ಉಂಟುಮಾಡುವ, ಮಾನವ ಕುಲಕ್ಕೆ ಬೆದರಿಕೆಯ ಮತ್ತೊಂದು ಕ್ರೌರ್ಯ ಘಟನೆಯಾಗಿದೆ. ಇಂತಹ ಬೆದರಿಕೆಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಯಾವುದೇ ರೀತಿಯ ಭಯೋತ್ಪಾದನೆಯನ್ನು ಬೆಂಬಲಿಸುವ ರಾಷ್ಟ್ರಗಳ ಮೇಲೆ ಎಲ್ಲ ರೀತಿಯ ಒತ್ತಡಗಳನ್ನು ಹೆಚ್ಚಿಸುವ ಅವಶ್ಯಕತೆ ಇದೆ ಎಂದು ನಾವು ಒಪ್ಪಿದ್ದೇವೆ. ಭಯೋತ್ಪಾದಕತೆಯ ಮೂಲಸೌಕರ್ಯವನ್ನು ನಾಶಪಡಿಸುವುದು, ಅದಕ್ಕೆ ಬೆಂಬಲವನ್ನು ನಿಲ್ಲಿಸುವುದು ಮತ್ತು ಭಯೋತ್ಪಾದಕರು ಹಾಗೂ ಅವರನ್ನು ಬೆಂಬಲಿಸುವವರಿಗೆ ಶಿಕ್ಷೆಯಾಗುವುದು ಬಹಳ ಮುಖ್ಯವಾಗಿದೆ. ಅದೇ ಸಮಯದಲ್ಲಿ, ಭಯೋತ್ಪಾದನೆ ವಿರುದ್ಧ ಸಹಕಾರ ಮತ್ತು ಬಲವಾದ ಕಾರ್ಯತಂತ್ರದ ಅವಶ್ಯಕತೆಯಿದೆ. ಆಗ ಹಿಂಸಾತ್ಮಕ ಶಕ್ತಿಗಳು ಮತ್ತು ಭಯೋತ್ಪಾದನೆಯು ನಮ್ಮ ಯುವಕರನ್ನು ಹಾದಿ ತಪ್ಪಿಸಲು ಸಾಧ್ಯವಾಗುವುದಿಲ್ಲ. ಸೌದಿ ಅರೇಬಿಯಾ ಮತ್ತು ಭಾರತ ಇದರ ಬಗ್ಗೆ ತಮ್ಮ ದೃಷ್ಟಿಕೋನಗಳನ್ನು ಹಂಚಿಕೊಂಡಿರುವುದು ನನಗೆ ಸಂತೋಷವಾಗಿದೆ.

ಸ್ನೇಹಿತರೇ,

ಪಶ್ಚಿಮ ಏಷ್ಯಾ ಹಾಗೂ ಕೊಲ್ಲಿಯಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡುವ ಬಗ್ಗೆ ಎರಡೂ ರಾಷ್ಟ್ರಗಳು ಆಸಕ್ತಿಗಳನ್ನು ಹಂಚಿಕೊಂಡಿವೆ. ಈ ಕ್ಷೇತ್ರದಲ್ಲಿ ನಮ್ಮ ಕೆಲಸದಲ್ಲಿ ಸಹಕರಿಸುವುದು ಮತ್ತು ನಮ್ಮ ಭಾಗವಹಿಸುವಿಕೆಯನ್ನು ತ್ವರಿತಗೊಳಿಸಲು ಸಮ್ಮತಿಸಲಾಗಿದೆ. ಭಯೋತ್ಪಾದನೆ ನಿಗ್ರಹ, ಕಡಲ ಭದ್ರತೆ ಮತ್ತು ಸೈಬರ್ ಸುರಕ್ಷತೆಗಳಂತಹ ಕ್ಷೇತ್ರಗಳಲ್ಲಿ ಸದೃಢವಾದ ದ್ವಿಪಕ್ಷೀಯ ಸಹಕಾರ ಎರಡೂ ರಾಷ್ಟ್ರಗಳಿಗೆ ಅನುಕೂಲವಾಗಲಿದೆ ಎಂದೂ ಸಹ ನಾವು ಒಪ್ಪಿದ್ದೇವೆ.

ಘನತೆವೆತ್ತ ರಾಜಕಮಾರ, ನಿಮ್ಮ ಭೇಟಿಯು ನಮ್ಮ ಸಂಬಂಧಗಳಲ್ಲಿ ತ್ವರಿತ ಬೆಳವಣಿಗೆಗೆ ಹೊಸ ಆಯಾಮ ನೀಡಿದೆ. ನಮ್ಮ ಆಹ್ವಾನವನ್ನು ಒಪ್ಪಿದ್ದಕ್ಕಾಗಿ ನಾನು ಮತ್ತೊಮ್ಮೆ ಘನತೆವೆತ್ತ ರಾಜಕುಮಾರರಿಗೆ ವಂದನೆ ಸಲ್ಲಿಸುತ್ತೇನೆ. ಅವರು ಮತ್ತು ನಿಯೋಗದಲ್ಲಿರುವ ಎಲ್ಲ ಸದಸ್ಯರು ಭಾರತದಲ್ಲಿ ಆಹ್ಲಾದಕರ ವಾಸ್ತವ್ಯವನ್ನು ಹೊಂದಬೇಕೆಂದು ನಾನು ಬಯಸುತ್ತೇನೆ.

ತುಂಬು ಧನ್ಯವಾದಗಳು.

 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
'Wed in India’ Initiative Fuels The Rise Of NRI And Expat Destination Weddings In India

Media Coverage

'Wed in India’ Initiative Fuels The Rise Of NRI And Expat Destination Weddings In India
NM on the go

Nm on the go

Always be the first to hear from the PM. Get the App Now!
...
PM condoles the passing of Shri PG Baruah Ji
December 15, 2025

Prime Minister Shri Narendra Modi today condoled the passing of Shri PG Baruah Ji, Editor and Managing Director of The Assam Tribune Group.

In a post on X, Shri Modi stated:

“Saddened by the passing away of Shri PG Baruah Ji, Editor and Managing Director of The Assam Tribune Group. He will be remembered for his contribution to the media world. He was also passionate about furthering Assam’s progress and popularising the state’s culture. My thoughts are with his family and admirers. Om Shanti.”