PM Modi congratulates Commonwealth Games medal winners

ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಗೆದ್ದವರಿಗೆ ಪ್ರಧಾನ ಮಂತ್ರಿ ಅಭಿನಂದನೆ ಹೇಳಿದ್ದಾರೆ.

ವೈಟ್ ಲಿಫ್ಟರ್ ಗಳನ್ನು ಅಭಿನಂದಿಸಿರುವ ಪ್ರಧಾನ ಮಂತ್ರಿಯವರು “ ಚಿನ್ನ ಗೆದ್ದುದಕ್ಕಾಗಿ ರಾಗಲ ವೆಂಕಟ್ ರಾಹುಲ್ ಬಗ್ಗೆ ಹೆಮ್ಮೆ ಇದೆ. ನಮ್ಮ ವೈಟ್ ಲಿಫ್ಟರುಗಳ ವಿಶೇಷ ಯಶಸ್ಸು ಯುವಕರಿಗೆ ವೈಟ್ ಲಿಫ್ಟಿಂಗ್ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಪ್ರೇರಣೆ ಒದಗಿಸುತ್ತದೆ ಎಂಬ ಬಗ್ಗೆ ನನಗೆ ಖಾತ್ರಿ ಇದೆ “ ಎಂದು ಹೇಳಿದ್ದಾರೆ.

ಮಹಿಳೆಯರ 69 ಕಿಲೋ ಗ್ರಾಂ ಭಾರ ಎತ್ತುವ ಸ್ಪರ್ಧಾ ವಿಭಾಗದಲ್ಲಿ ಪೂನಂ ಯಾದವ್ ಚಿನ್ನ ಗೆದ್ದಿರುವುದಕ್ಕೆ ಭಾರತ ಅವರನ್ನು ಅಭಿನಂದಿಸುತ್ತದೆ . ವೈಟ್ ಲಿಫ್ಟಿಂಗ್ ಕ್ಷೇತ್ರದಲ್ಲಿ ಅವರ ಅರ್ಪಣಾ ಭಾವದ ದುಡಿಮೆ ಶ್ಯ್ಲಾಘನಾರ್ಹ ಎಂದಿದ್ದಾರೆ.

ಶೂಟರುಗಳನ್ನು ಅಭಿನಂದಿಸಿರುವ ಪ್ರಧಾನ ಮಂತ್ರಿಗಳು “ನಮ್ಮ ಶೂಟರುಗಳು 2018 ರ ಕಾಮನ್ ವೆಲ್ತ್ ಕ್ರೀಡಾಕೂಟಲ್ಲಿ ತಮ್ಮ ವೈಶಿಷ್ಟ್ಯ ತೋರಿದ್ದಾರೆ . ಮನು ಭಕ್ಕರ್ 10 ಮೀ. ಏರ್ ಪಿಸ್ತೂಲ್ ಸ್ಪರ್ಧಾ ವಿಭಾಗದಲ್ಲಿ ಚಿನ್ನ ಗೆದ್ದು ತಮ್ಮ ಪಾರಮ್ಯ ಉಳಿಸಿಕೊಂಡಿದ್ದಾರೆ, ಆಕೆಗೆ ಅಭಿನಂದನೆಗಳು ಎಂದಿದ್ದಾರೆ.

ಮಹಿಳೆಯರ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಹೀನಾ ಸಿಧು ಬೆಳ್ಳಿ ಗೆದ್ದಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಕೆಯನ್ನು ಅಭಿನಂದಿಸಿರುವುದರ ಜತೆಗೆ ಭವಿಷ್ಯದ ಸಾಧನೆಗಳಿಗೆ ಶುಭ ಹಾರೈಸಿದ್ದಾರೆ.

ಭರವಸೆಯ ಶೂಟರ್ ರವಿಕುಮಾರ್ ಪುರುಷರ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಕಂಚು ಗೆದ್ದಿದ್ದಾರೆ. ಅವರ ಸಾಧನೆಯ ಬಗ್ಗೆ ಪ್ರತೀಯೊಬ್ಬ ಭಾರತೀಯರೂ ಹೆಮ್ಮೆಪಡುತ್ತಾರೆ ಎಂದಿರುವ ಪ್ರಧಾನ ಮಂತ್ರಿಗಳು ಈ ಯುವ ಶೂಟರ್ ಕ್ರೀಡಾ ಕ್ಷೇತ್ರಕ್ಕೆ ಶ್ರೀಮಂತ ಕೊಡುಗೆ ನೀಡಿದ್ದಾರೆ ಎಂದು ಶ್ಲ್ಯಾಘಿಸಿದ್ದಾರೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

Media Coverage

"Overwhelmed By The Warmth": PM Modi Receives Grand Welcome In Uzbekistan
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 29 ಆಗಸ್ಟ್ 2026
August 29, 2026

New India, New Speed, New Stage: Missiles, Medals, Multilateralism under PM Modi