ಶೇರ್
 
Comments

 ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಯಾಗ್ ರಾಜ್ ನಲ್ಲಿಂದು ಸ್ವಚ್ಛ ಕುಂಭ, ಸ್ವಚ್ಛ ಆಭಾರ್ ಉದ್ದೇಶಿಸಿ ಮಾತನಾಡಿದರು.
       ಅವರು ಪ್ರಯಾಗ್ ರಾಜ್ ನ ಪವಿತ್ರ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ ನಂತರ ಮತ್ತು ಸ್ವಚ್ಛ ಕುಂಭ ಮೇಳಕ್ಕೆ ತಮ್ಮ ಪ್ರಯತ್ನದ ಮೂಲಕ ಎಲ್ಲ ರೀತಿಯಲ್ಲೂ ಸಹಕರಿಸಿದ ಆಯ್ದ ಕೆಲವು ಸ್ವಚ್ಛತಾ ಕಾರ್ಯಕರ್ತರಿಗೆ ‘ಚರಣ ವಂದನಾ’ – ಪಾದ ತೊಳೆದು ನಮಿಸಿದ ನಂತರ ವೇದಿಕೆಗೆ ಆಗಮಿಸಿದರು.
       ಪ್ರಯಾಗ್ ರಾಜ್ ನಲ್ಲಿ ಕುಂಭಕ್ಕಾಗಿ ಭಕ್ತರಿಗೆ ಉತ್ತಮ ವ್ಯವಸ್ಥೆಗಳನ್ನು ಕಲ್ಪಿಸಿದ ಎಲ್ಲರನ್ನು ಪ್ರಧಾನಮಂತ್ರಿ ಅವರು ‘ಕರ್ಮಯೋಗಿಗಳು’ ಎಂದು ಬಣ್ಣಿಸಿದರು. ಈ ನಿಟ್ಟಿನಲ್ಲಿ ದೋಣಿ ನಡೆಸುವವರು, ಎನ್ ಡಿ ಆರ್ ಎಫ್ ಸಿಬ್ಬಂದಿ ಮತ್ತು ಸ್ಥಳೀಯ ಜನರು ಹಾಗೂ ಎಲ್ಲ ಸ್ವಚ್ಛತಾ ಕಾರ್ಯಕರ್ತರ ಸೇವೆಯನ್ನು ಅವರು ಉಲ್ಲೇಖಿಸಿದರು. ಕಳೆದ ಕೆಲವು ವಾರಗಳಿಂದ ಸುಮಾರು 21 ಕೋಟಿ ಜನರು ಕುಂಭಮೇಳಕ್ಕೆ ಭೇಟಿ ನೀಡಿದ್ದಾರೆ ಎಂದು ಉಲ್ಲೇಖಿಸಿದ ಅವರು, ಈ ವರ್ಷದ ಕುಂಭಮೇಳದ ಯಶಸ್ಸಿಗೆ ಇವರೆಲ್ಲಾ ಅತ್ಯಂತ ಕಾರಣೀಭೂತರು, ಯಶಸ್ಸಿನ ಎಲ್ಲ ಪಾಲು ಅವರಿಗೆ ಸಲ್ಲಬೇಕೆಂದರು. ತಾವು ಕೆಲವು ಸ್ವಚ್ಛತಾ ಕಾರ್ಯಕರ್ತರಿಗೆ ಮಾಡಿದ ಚರಣ ವಂದನಾ – ಪಾದ ತೊಳೆದು ನಮಸ್ಕರಿಸಿದ್ದು, ಸದಾ ತನ್ನ ನೆನಪಿನಲ್ಲಿ ಉಳಿಯುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.

 

       ಇಂದು ಸ್ವಚ್ಛ ಸೇವಾ ಸಮ್ಮಾನ ಕೋಶ ಪ್ರಕಟಿಸಲಾಗಿದೆ, ಇದು ಅಗತ್ಯವಿರುವ ಸಂದರ್ಭಗಳಲ್ಲಿ ಸ್ವಚ್ಛತಾ ಕಾರ್ಯಕರ್ತರು ಮತ್ತು ಅವರ ಕುಟುಂಬದವರಿಗೆ ನೆರವಾಗಲಿದೆ ಎಂದು ಪ್ರಧಾನಮಂತ್ರಿ ಹೇಳಿದರು.
 
       ಸ್ವಚ್ಛ ಭಾರತ ಅಭಿಯಾನ ಅತ್ಯಂತ ವೇಗವಾಗಿ ಪ್ರಗತಿ ಸಾಧಿಸುತ್ತಿದೆ ಎಂದು ಹೇಳಿದ ಪ್ರಧಾನಮಂತ್ರಿ ಅವರು ಈ ವರ್ಷದ ಅಕ್ಟೋಬರ್ 2ರಂದು ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ವರ್ಷಾಚರಣೆ ಸಂದರ್ಭದ ವೇಳೆಗೆ ದೇಶ ಬಯಲು ಬಹಿರ್ದೆಸೆ ಮುಕ್ತವಾಗುವ ನಿಟ್ಟಿನಲ್ಲಿ ಸಾಗಿದೆ ಎಂದು ಹೇಳಿದರು.
ಗಂಗಾ ನದಿಯ ಸ್ವಚ್ಛತೆ ವಿಷಯ ಈ ವರ್ಷದ ಚರ್ಚೆಯ ವಿಷಯವಾಗಿತ್ತು ಎಂದು ಪ್ರಧಾನಮಂತ್ರಿ ಹೇಳಿದರು. ಇಂದು ನಾನು ಸ್ವತಃ ಸ್ವಚ್ಛತೆಯನ್ನು ಸಾಕ್ಷೀಕರಿಸಿದ್ದೇನೆ ಎಂದು ಹೇಳಿದ ಅವರು, ಕೇಂದ್ರ ಸರ್ಕಾರ ಮತ್ತು ನಮಾಮಿ ಗಂಗಾ ಯೋಜನೆಯ ಪ್ರಯತ್ನಗಳಿಂದಾಗಿ ಇಂತಹ ಫಲಿತಾಂಶ ಸಾಧ್ಯವಾಗಿದೆ ಎಂದರು. ನದಿಗೆ ಹರಿದು ಬರುತ್ತಿದ್ದ ಕೊಳಚೆ ನೀರನ್ನು ತಡೆದು ನಿಲ್ಲಿಸಲಾಗಿದೆ ಮತ್ತು ಕೊಳಚೆ ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದರು. ಕೆಲವು ದಿನಗಳ ಹಿಂದೆ ಸ್ವೀಕರಿಸಿದ ಸಿಯೋಲ್ ಶಾಂತಿ ಪುರಸ್ಕಾರದ 1.30 ಕೋಟಿ ಮೊತ್ತವನ್ನು ನಮಾಮಿ ಗಂಗಾ ಯೋಜನೆಗೆ ದಾನ ನೀಡಿರುವುದಾಗಿ ಪ್ರಧಾನಮಂತ್ರಿ ಹೇಳಿದರು. ಪ್ರಧಾನಿಯಾಗಿ ತಾವು ಸ್ವೀಕರಿಸಿದ ಎಲ್ಲ ಉಡುಗೊರೆಗಳು ಮತ್ತು ಸ್ಮರಣಿಕೆಗಳನ್ನು ಹರಾಜು ಹಾಕಲಾಗುತ್ತಿದ್ದು, ಅದರಿಂದ ಬರುವ ಎಲ್ಲ ಹಣವನ್ನು ನಮಾಮಿ ಗಂಗಾ ಯೋಜನೆಗೆ ನೀಡಲಾಗುವುದು ಎಂದು ಅವರು ಹೇಳಿದರು.
ಕುಂಭಮೇಳದಲ್ಲಿ ಭಾಗಿಯಾದ ಎಲ್ಲ ದೋಣಿ ನಡೆಸುವವರು – ನಾವಿಕರ ಬಗ್ಗೆ ಪ್ರಧಾನಮಂತ್ರಿ ಅವರು ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದರು. ಸ್ವಾತಂತ್ರ್ಯಾ ನಂತರ ಇದೇ ಮೊದಲ ಬಾರಿ ಕುಂಭಕ್ಕೆ ಭೇಟಿ ನೀಡುತ್ತಿರುವ ಭಕ್ತರಿಗೆ ಅಕ್ಷಯ ವಟ್ ಗೆ ಭೇಟಿ ನೀಡುವ ಅವಕಾಶ ದೊರೆತಿದೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು.
 
ಆಧುನಿಕತೆ, ನಂಬಿಕೆ ಮತ್ತು ಧಾರ್ಮಿಕತೆಯ ಸಮ್ಮಿಶ್ರವಾಗಿರುವ ಕುಂಭಮೇಳಕ್ಕೆ ಭೇಟಿ ನೀಡಿ ತಮ್ಮ ಆಸೆಯನ್ನು ಪೂರೈಸಿಕೊಂಡ ಪ್ರತಿಯೊಬ್ಬರಿಗೂ ಪ್ರಧಾನಮಂತ್ರಿ ಅವರು ಧನ್ಯವಾದ ಹೇಳಿದರು. ಮೇಳದ ಯಶಸ್ಸಿಗಾಗಿ ಶ್ರಮಿಸುತ್ತಿರುವ ಹಾಗೂ ಮಹತ್ವದ ಪಾತ್ರವಹಿಸಿರುವ ಉತ್ತರಪ್ರದೇಶದ ಪೊಲೀಸರನ್ನು ಪ್ರಧಾನಮಂತ್ರಿ ಅವರು ಅಭಿನಂದಿಸಿದರು.
 
ಈ ವರ್ಷದ ಕುಂಭಮೇಳಕ್ಕೆ ವ್ಯವಸ್ಥೆಗಳನ್ನು ಕಲ್ಪಿಸುವಾಗ ಹಲವು ಮಹತ್ವದ ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲಾಗಿತ್ತು, ಆ ಮೂಲಸೌಕರ್ಯದ ಸೇವೆ ಕುಂಭಮೇಳದ ನಂತರವೂ ಪ್ರಯಾಗ್ ರಾಜ್ ನ ಜನತೆಗೆ ಸಿಗಲಿದೆ ಎಂದು ಪ್ರಧಾನಮಂತ್ರಿ ಹೇಳಿದರು.

 

 

 

 

 

20 ವರ್ಷಗಳ ಸೇವಾ ಮತ್ತು ಸಮರ್ಪಣದ 20 ಚಿತ್ರಗಳು
Mann KI Baat Quiz
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
Business optimism in India at near 8-year high: Report

Media Coverage

Business optimism in India at near 8-year high: Report
...

Nm on the go

Always be the first to hear from the PM. Get the App Now!
...
ಸಂಸತ್ತಿನ ಚಳಿಗಾಲದ ಅಧಿವೇಶನ 2021ಕ್ಕೂ ಮುನ್ನ ಪ್ರಧಾನಮಂತ್ರಿ ಮಾಧ್ಯಮಗಳಿಗೆ ನೀಡಿದ ಹೇಳಿಕೆಯ ಆಂಗ್ಲ ಪಠ್ಯ
November 29, 2021
ಶೇರ್
 
Comments

ನಮಸ್ಕಾರ ಮಿತ್ರರೇ,

ಸಂಸತ್ತಿನ ಈ ಅಧಿವೇಶನ ಅತ್ಯಂತ ಮುಖ್ಯವಾದದು. ದೇಶ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಆಚರಿಸುತ್ತಿದೆ. ಭಾರತದಾದ್ಯಂತ ಸಾಮಾನ್ಯ ಜನರು ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ ಮತ್ತು ಸ್ವಾತಂತ್ರ್ಯ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಸಾರ್ವಜನಿಕ ಮತ್ತು ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು ನನಸು ಮಾಡಲು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಈ ಕಥೆಗಳು ಭಾರತದ ಉಜ್ವಲ ಭವಿಷ್ಯದ ಸಂಕೇತಗಳಾಗಿವೆ.

ಇತ್ತೀಚೆಗಷ್ಟೇ ಇಡೀ ದೇಶ ಸಂವಿಧಾನದಿನದಂದು ಹೊಸ ನಿರ್ಣಯದೊಂದಿಗೆ ಸಂವಿಧಾನದ ಆಶಯಗಳನ್ನು ಈಡೇರಿಸುವ ಸಂಕಲ್ಪ ಮಾಡಿದೆ. ಆ ನಿಟ್ಟಿನಲ್ಲಿ, ನಾವೆಲ್ಲರೂ ಮತ್ತು ದೇಶದ ಪ್ರತಿಯೊಬ್ಬ ನಾಗರಿಕರು ಈ ಅಧಿವೇಶನವನ್ನು ಬಯಸುತ್ತಿದ್ದಾರೆ ಮತ್ತು  ಸಂಸತ್ತಿನ ಮುಂದಿನ ಅಧಿವೇಶನಗಳಲ್ಲಿಯೂ ಸಹ ಸಂಸತ್ತಿನಲ್ಲಿ ದೇಶದ ಹಿತಾಸಕ್ತಿಯ ಬಗ್ಗೆ ಚರ್ಚೆಗಳು ನಡೆಯಬೇಕೆಂದು ಮತ್ತು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಮನೋಭಾವಕ್ಕೆ ಅನುಗುಣವಾಗಿ ದೇಶದ ಅಭಿವೃದ್ಧಿಗೆ ಹೊಸ ಮಾರ್ಗೋಪಾಯಗಳನ್ನು ಕಂಡುಹಿಡಿಯಬೇಕೆಂದು ಬಯಸುತ್ತಾರೆ.

ಈ ಅಧಿವೇಶನವು ವಿಚಾರಗಳಿಂದ ಸಮೃದ್ಧವಾಗಿರಬೇಕು ಮತ್ತು ಸಕಾರಾತ್ಮಕ ಚರ್ಚೆಗಳು ದೂರಗಾಮಿ ಪರಿಣಾಮಗಳನ್ನು ಬೀರಬೇಕು. ಸಂಸತ್ತಿನ ಕಲಾಪವನ್ನು ಯಾರು ಬಲವಂತವಾಗಿ ಅಡ್ಡಿಪಡಿಸಿದರು ಎನ್ನುವುದಕ್ಕಿಂತ ಸಂಸತ್ತು ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಅದರ ಮಹತ್ವದ ಕೊಡುಗೆಗಳನ್ನು ನಿರ್ಣಯಿಸಬೇಕೆಂದು ನಾನು ಭಾವಿಸುತ್ತೇನೆ. ಇದು ಮಾನದಂಡವಾಗಿರಬಾರದು. ಸಂಸತ್ತು ಎಷ್ಟು ಗಂಟೆ ಕೆಲಸ ಮಾಡಿದೆ ಮತ್ತು ಎಷ್ಟು ಸಕಾರಾತ್ಮಕ ಕೆಲಸ ಮಾಡಿದೆ ಎಂಬುದು ಮಾನದಂಡವಾಗಿರಬೇಕು. ಸರ್ಕಾರ ಎಲ್ಲ ವಿಷಯಗಳ ಬಗ್ಗೆ ಮುಕ್ತ ಮನಸ್ಸಿನಿಂದ ಚರ್ಚೆಗೆ ಸಿದ್ಧವಿದೆ. ಸರ್ಕಾರ ಪ್ರತಿಯೊಂದು ಪ್ರಶ್ನೆಗೂ ಉತ್ತರಿಸಲೂ ಸಹ ಸಿದ್ಧವಿದೆ. ನಾವು ಸಂಸತ್ತಿನಲ್ಲಿ ಪ್ರಶ್ನೆಗಳಿರಬೇಕು ಮತ್ತು ಶಾಂತಿಯೂ ನೆಲಸುವಂತೆ ಮಾಡಬೇಕೆಂದು ಬಯಸುತ್ತೇವೆ.

ಸರ್ಕಾರದ ನೀತಿಗಳ ವಿರುದ್ಧದ ಧ್ವನಿಗಳು ಪ್ರಬಲವಾಗಿರಬೇಕು, ಆದರೆ ಸಂಸತ್ತಿನ ಮತ್ತು ಪೀಠದ ಘನತೆಯನ್ನು ಎತ್ತಿಹಿಡಿಯಬೇಕು. ನಾವು ಯುವಪೀಳಿಗೆಗೆ ಸ್ಪೂರ್ತಿ ನೀಡುವ ರೀತಿ ನಡವಳಿಕೆಯನ್ನು ಕಾಪಾಡಿಕೊಳ್ಳಬೇಕು. ಕಳೆದ ಅಧಿವೇಶನದಿಂದೀಚೆಗೆ ದೇಶ 100 ಕೋಟಿಗೂ ಅಧಿಕ ಕೋವಿಡ್ ಲಸಿಕೆಗಳನ್ನು ನೀಡಿದೆ ಮತ್ತು ನಾವು ಇದೀಗ 150 ಕೋಟಿ ಅಂಕಿಯತ್ತ ಅತ್ಯಂತ ವೇಗವಾಗಿ ಸಾಗುತ್ತಿದ್ದೇವೆ. ನಾವು ಹೊಸ ರೂಪಾಂತರಿ ಬಗ್ಗೆ ಜಾಗೃತರಾಗಿರಬೇಕು. ನಾವು ಸಂಸತ್ತಿನ ಎಲ್ಲ ಸದಸ್ಯರನ್ನು ಮತ್ತು ನಿಮ್ಮನ್ನು ಎಚ್ಚರದಿಂದ ಇರುವಂತೆ ಕೋರುತ್ತೇನೆ, ಏಕೆಂದರೆ ಇಂತಹ ಬಿಕ್ಕಟ್ಟಿನ ಸಮಯದಲ್ಲಿ ಪ್ರತಿಯೊಬ್ಬರ ಆರೋಗ್ಯವೂ ನಮ್ಮ ಆದ್ಯತೆಯಾಗಬೇಕು.

ಉಚಿತ ಆಹಾರ ಧಾನ್ಯಗಳನ್ನು ವಿತರಿಸುವ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ಮುಂದುವರಿದಿದೆ, ಹಾಗಾಗಿ ಈ ಕೊರೊನಾ ಅವಧಿಯಲ್ಲಿ ದೇಶದ 80ಕೋಟಿಗೂ ಅಧಿಕ ಮಂದಿ ಯಾವುದೇ ತೊಂದರೆ ಅನುಭವಿಸುವುದಿಲ್ಲ. ಇದೀಗ ಆ ಯೋಜನೆಯನ್ನು 2022ರ ಮಾರ್ಚ್ ವರೆಗೆ ವಿಸ್ತರಣೆ ಮಾಡಲಾಗಿದೆ. ಸುಮಾರು 2.60 ಲಕ್ಷ ಕೋಟಿ ರೂ.ಗಳ ವೆಚ್ಚದ ಈ ಯೋಜನೆಯು 80ಕೋಟಿಗೂ ಅಧಿಕ ದೇಶವಾಸಿಗಳ ಕಾಳಜಿಯ ಬಗ್ಗೆ ಗಮನಹರಿಸುತ್ತದೆ ಮತ್ತು ಇದರಿಂದ ಬಡವರ ಒಲೆ ಉರಿಯುತ್ತಲೇ ಇರುತ್ತದೆ. ಈ ಅಧಿವೇಶನದಲ್ಲಿ ನಾವು ದೇಶದ ಹಿತದೃಷ್ಟಿಯಿಂದ ಒಟ್ಟಾಗಿ ತ್ವರಿತ ನಿರ್ಧಾರಗಳನ್ನು ಕೈಗೊಳ್ಳುತ್ತೇವೆ ಮತ್ತು ಸಾಮಾನ್ಯ ಜನರ ಆಶಯಗಳು ಮತ್ತು ನಿರೀಕ್ಷೆಗಳನ್ನು ಈಡೇರಿಸುತ್ತೇವೆ ಎಂಬ ಭರವಸೆ ನನಗಿದೆ. ಇದು ನಮ್ಮ ನಿರೀಕ್ಷೆಯೂ ಆಗಿದೆ. ತುಂಬಾ ಧನ್ಯವಾದಗಳು