Vijaya Dashami is the festival of victory of truth over falsehood; and of defeating the oppressor: PM Modi
Terrorism is the enemy of humanity: PM Modi
The forces of humanity across the world must now unite against terrorism: PM Modi
PM Modi urges people to defeat the Ravana existing in the form of corruption, illiteracy and poverty

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಲಖನೌನಲ್ಲಿಂದು ಐಶ್ ಭಾಗ್ ರಾಮಲೀಲಾ ಮೈದಾನದಲ್ಲಿ ನಡೆದ ದಶಹರಾ ಮಹೋತ್ಸವದಲ್ಲಿ ಸಭಿಕರನ್ನುದ್ದೇಶಿಸಿ ಭಾಷಣ ಮಾಡಿದರು.

ವಿಜಯದಶಮಿಯ ಸಂದರ್ಭದಲ್ಲಿ ಜನತೆಗೆ ಶುಭ ಕೋರಿದ ಪ್ರಧಾನಮಂತ್ರಿಯವರು,ತಾವು ಈ ಪುರಾತನ ಸಂಪ್ರದಾಯ ರಾಮಲೀಲಾದಲ್ಲಿ ಪಾಲ್ಗೊಳ್ಳುತ್ತಿರುವ ಅದೃಷ್ಟಶಾಲಿ ಎಂದು ಹೇಳಿದರು. ಪೀಡಕನನ್ನು ಸೋಲಿಸಿ ಮತ್ತು ಅಸತ್ಯದ ವಿರುದ್ಧ ಸತ್ಯಕ್ಕೆ ದೊರೆತ ವಿಜಯವೇ ರಾಮಲೀಲಾ ಉತ್ಸವ ಎಂದು ಬಣ್ಣಿಸಿದರು. ನಾವು ಪ್ರತಿ ವರ್ಷ ರಾವಣನನ್ನು ದಹಿಸುತ್ತೇವೆ, ನಾವು ನಮ್ಮ ದೇಶದಲ್ಲಿರುವ, ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿರುವ ಹಾಗೂ ನಮ್ಮಲ್ಲಿರುವ ಕೆಟ್ಟದ್ದನ್ನು ತೊಡೆದುಹಾಕುವ ಸಂಕಲ್ಪ ಮಾಡಬೇಕು ಎಂದರು. ಪ್ರತಿ ದಶಹರಾದಲ್ಲಿ ನಾವು ನಮ್ಮಲ್ಲಿ ಅಂತರ್ಗತವಾಗಿರುವ ಹತ್ತು ನ್ಯೂನತೆಗಳನ್ನು ಕೊನೆಗಾಣಿಸಬೇಕು ಎಂದು ಹೇಳಿದರು. ಈ ಕೆಡಕುಗಳನ್ನು ತೊಡೆದುಹಾಕುವ ಮತ್ತು ಅದಕ್ಕೆ ಪ್ರಯತ್ನಿಸುವ ಹಾಗೂ ನಮ್ಮ ದೇಶವನ್ನು ಶ್ರೇಷ್ಠಗೊಳಿಸುವ ಶಕ್ತಿ ನಮ್ಮೆಲ್ಲರಲ್ಲೂ ಇದೆ ಎಂದು ಪ್ರತಿಪಾದಿಸಿದರು.

 

ಭಯೋತ್ಪಾದನೆಯು ಮಾನವತೆಯ ಶತ್ರು ಎಂದು ಬಣ್ಣಿಸಿದ ಪ್ರಧಾನಮಂತ್ರಿಯವರು, ಶ್ರೀರಾಮಚಂದ್ರ ಮಾನವತೆಯ ಶ್ರೇಷ್ಠ ಮತ್ತು ತ್ಯಾಗ ಮತ್ತು ಸಮರ್ಪಣೆಯ ಸಾಕಾರಮೂರ್ತಿಯಾಗಿ ಗೌರವಿಸಲ್ಪಡುತ್ತಾನೆ ಎಂದರು. ರಾಮಾಯಣದಲ್ಲಿ ಜಟಾಯು ಎಂಬ ಒಂದು ಪಾತ್ರವಿದೆ. ಭಯೋತ್ಪಾದನೆಯ ವಿರುದ್ಧ ಹೋರಾಟ ನಡೆಸಿದ ಮೊದಲಿಗ ಜಟಾಯು ಎಂದರು. ಜಟಾಯು ನಮಗೆ ನಿರ್ಭೀತಿಯ ಸಂದೇಶವನ್ನು ನೀಡಿದ್ದಾನೆ ಎಂದ ಪ್ರಧಾನಿ, ಭಯೋತ್ಪಾದನೆ ಎದುರಿಸುವ ವಿಚಾರದಲ್ಲಿ ಎಲ್ಲ 125 ಕೋಟಿ ಭಾರತೀಯರೂ ಜಟಾಯು ಆಗಬೇಕು ಎಂದರು. ಪ್ರತಿಯೊಬ್ಬರೂ ಜಾಗೃತರಾಗಿದ್ದರೆ, ಭಯೋತ್ಪಾದನೆಯ ಪಿಡುಗು ಸೋಲುತ್ತದೆ ಎಂದರು.

ಜಗತ್ತಿನಾದ್ಯಂತ ಇರುವ ಮಾನವೀಯ ಶಕ್ತಿಗಳು ಭಯೋತ್ಪಾದನೆಯ ವಿರುದ್ಧ ಒಗ್ಗೂಡಬೇಕು ಎಂದು ಪ್ರಧಾನಿ ಹೇಳಿದರು. ಭಯೋತ್ಪಾದಕರಿಗೆ ಜಾಗ ಒದಗಿಸುತ್ತಿರುವವರನ್ನು ಕೂಡ ಈಗ ಹಾಗೇ ಬಿಡುವುದಿಲ್ಲ ಎಂದರು.

ಇಂದು ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನವನ್ನು ಕೂಡ ಆಚರಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ಬಲವಾಗಿ ಮಾತನಾಡಿದ ಅವರು, ಇಂಥ ಕೆಟ್ಟ ಪದ್ಧತಿಗಳಿಗೆ ಕೊನೆ ಹಾಡಲು ನಾವೆಲ್ಲರೂ ಶಕ್ತಿಮೀರಿ ಶ್ರಮಿಸಬೇಕು ಎಂದರು.

Click here to read full text speech

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
PM-VBRY: The Employment Scheme Delivering on India’s Social Security Promise

Media Coverage

PM-VBRY: The Employment Scheme Delivering on India’s Social Security Promise
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 13 ಜೂನ್ 2026
June 13, 2026

Viksit Bharat Accelerating: Tech, Defense, Infra & Exports Power India's Global Leap Under the Leadership of PM Modi