ಶೇರ್
 
Comments
PM Modi campaigns in Haridwar, Uttarakhand
Dev Bhoomi Uttarakhand does not deserve a tainted and corrupt government: PM Modi
Atal ji created Uttarakhand with great hope and promise but successive governments did not fulfil his dreams: PM
Uttarakhand needs two engines, the state government under BJP and the Central government to take the state to new heights: PM
BJP is dedicated to open up new avenues for youth and ensure welfare of farmers: Shri Modi

ಉತ್ತರಾಖಂಡದ ಹರಿದ್ವಾರದಲ್ಲಿ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು . ದೊಡ್ಡ ಸಂಖ್ಯೆಯಲ್ಲಿ ರಾಲಿಯಲ್ಲಿ ಹಾಜರಾದ ಜನರಿಗೆ ಶ್ರೀ ಮೋದಿ ಕೃತಜ್ಞತೆ ವ್ಯಕ್ತಪಡಿಸಿದರು. 

ಉತ್ತರಾಖಂಡ ದೇವ್ ಭೂಮಿ ಮತ್ತು ಇಲ್ಲಿ ದೋಷಪೂರಿತ ಮತ್ತು ಭ್ರಷ್ಟ ಸರ್ಕಾರದ ಅಗತ್ಯವಿಲ್ಲ ಎಂದು ಶ್ರೀ ಮೋದಿ ಹೇಳಿದರು . " ಉತ್ತರಾಖಂಡದಲ್ಲಿ ಸರ್ಕಾರದ ಭ್ರಷ್ಟಾಚಾರ ಬಹಳ ಪ್ರಸಿದ್ಧ ವಾಗಿದೆ ", ಎಂದೂ ವಿರೋಧ ಪಕ್ಷವನ್ನು ಟೀಕಿಸಿದರು.

ಉತ್ತರಾಖಂಡದ ಜನರ ಪ್ರಶ್ನೆ ಕೇವಲ ಮತದಾನ ಅಥವಾ ಅಭ್ಯರ್ಥಿಯ ಬಗ್ಗೆ ಅಲ್ಲ , ಹೆಮ್ಮೆಯ ರಾಜ್ಯವನ್ನು ರಚಿಸುವ ಬಗ್ಗೆ ಎಂದು ಪ್ರಧಾನ ಮಂತ್ರಿ ಮೋದಿಯವರು ಹೇಳಿದರು . " ಮಗು ಹದಿನಾರು ಅಥವಾ ಹದಿನೇಳನೇ ವಯಸ್ಸಿಗೆ ಬಂದಾಗ , ಅವನು ಅಥವಾ ಅವಳು ತನ್ನ ಜೀವನದ ಅತ್ಯಂತ ನಿರ್ಣಾಯಕ ಹಂತಕ್ಕೆ ಪ್ರವೇಶಿಸುತ್ತಾರೆ . ಮುಂಬರುವ ವರ್ಷಗಳು ಕೂಡ ಮಹತ್ವವಾದುದು . ಅದೇ ರೀತಿಯಲ್ಲಿ, 2000 ರಲ್ಲಿ ಹುಟ್ಟಿದ ಉತ್ತರಾಖಂಡ್, ಬಹಳ ನಿರ್ಣಾಯಕ ಹಂತ ಪ್ರವೇಶಿಸುತ್ತಿದೆ ಮತ್ತು ಬರುವ ಐದು ವರ್ಷಗಳಲ್ಲಿ ರಾಜ್ಯಕ್ಕೆ ಮಹತ್ವವಾದುದು . "

ಉತ್ತರಾಖಂಡ್ ರಚನೆಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕೊಡುಗೆಯನ್ನು ಮೋದಿ ನೆನಪಿಸಿಕೊಂಡರು . " ಅಟಲ್ ಜಿ ಮಹಾನ್ ವಿಶ್ವಾಸ ಮತ್ತು ಭರವಸೆಯೊಂದಿಗೆ ಉತ್ತರಾಖಂಡ್ ಅನ್ನು ರಚಿಸಿದರು . ರಾಜ್ಯವನ್ನು ನೋಡಿಕೊಳ್ಳುವುದು ಕೇಂದ್ರದ ಕರ್ತವ್ಯವಾಗಿದೆ . ಆದರೆ ಹಿಂದಿನ ಸರ್ಕಾರಗಳು ಇದನ್ನು ಮಾಡಲಿಲ್ಲ.ಅವರು ಅಟಲ್ ಜಿ ಅವರ ಕನಸುಗಳನ್ನು ಪೂರೈಸಲು ಏನೂ ಮಾಡಿಲ್ಲ ." ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು .

ಕೇಂದ್ರ ಉತ್ತರಾಖಂಡದ ಏಳಿಗೆಯನ್ನು ಬಯಸಿದೆ ಆದ್ದರಿಂದ ಚಾರ್ ಧಾಮ ಅನ್ನು ಉತ್ತಮ ರಸ್ತೆಗಳಿಂದ ಸಂಪರ್ಕಿಸಲು . 12, 000 ಕೋಟಿ ಹಣವನ್ನು ಮಂಜೂರು ಮಾಡಿದೆ . " ಉತ್ತರಾ ಖಂಡಕ್ಕೆ ಎರಡು ಎಂಜಿನ್ ಗಳ ಅಗತ್ಯವಿದೆ - ಬಿಜೆಪಿ ಆಡಳಿತದಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ " ಎಂದು ಪ್ರಧಾನಿ ಹೇಳಿದರು.

ಉತ್ತರಾಖಂಡ್ ಅಭಿವೃದ್ಧಿ ಬಿಜೆಪಿಗೆ ಆದ್ಯತೆ. ಬಿಜೆಪಿ ಯುವಕರಿಗೆ ಹೊಸ ಮಾರ್ಗಗಳನ್ನು ತೆರಯಲು ಮತ್ತು ರೈತರ ಕಲ್ಯಾಣ ಖಚಿತಪಡಿಸಿಕೊಳ್ಳಲು ಮೀಸಲಾಗಿದೆ .ಇತ್ತೀಚೆಗೆ ಭೂಕಂಪ ಇದ್ದಾಗಲೂ ಹೇಗೆ ಕೇಂದ್ರ ಸೂಕ್ತ ಕ್ರಮ ಕೈಗೊಂಡಿದೆ ಎಂದು ಹೇಳಿದರು . " ಕೆಲವು ದಿನಗಳ ಹಿಂದೆ ಭೂಕಂಪ ಬಂದಾಗ, ಪಿಎಂಒ ನಿಕಟವಾಗಿ ಪರಿಸ್ಥಿತಿ ಬೆಗ್ಗೆ ಮೇಲ್ವಿಚಾರಣೆ ಮಾಡಿತು . ತಕ್ಷಣ ರಾಜ್ಯಕ್ಕೆ ತಂಡವನ್ನು ಕಳುಹಿಸಲಾಯಿತು . ಕೇದಾರನಾಥ ಮತ್ತು ಉತ್ತರಾಖಂಡ್ ಇತರ ಭಾಗಗಳಲ್ಲಿ ದುರಂತ ಇದ್ದಾಗಲೂ, ಕಾಂಗ್ರೆಸ್ ನಾಯಕ ಸಾಗರೋತ್ತರ ಇದ್ದನು ," ಎಂದು ಹೇಳಿದರು .

ಉತ್ತರಾಖಂಡ ಸಾಹಸಿಗಳ ಭೂಮಿ . " ಕಾಂಗ್ರೆಸ್ ಸಶಸ್ತ್ರ ಪಡೆಗಳ ಶೌರ್ಯವನ್ನು ಗೌರವಿಸುವುದಿಲ್ಲ . ಅವರು ಅಧಿಕಾರದಲ್ಲಿದ್ದಾಗ ನಲವತ್ತು ವರ್ಷಗಳ ಕಾಲ ಓಆರ್ ಓಪಿ ವಿಷಯವನ್ನು ಪರಿಹರಿಸಲು ಏನೂ ಮಾಡಲಿಲ್ಲ . ನಾವು ಅಧಿಕಾರಕ್ಕೆ ಬಂಡ ನಂತರ ಮಾಜಿ ಸೈನಿಕರ ತೊಂದರೆಗಳನ್ನು ಅರಿತೆವು ಮತ್ತು ಓಆರ್ ಓಪಿ ಯನ್ನು ಜಾರಿಗ್ರ್ ಮಾಡಿದೆವು " ಎಂದು ಶ್ರೀ ಮೋದಿ ಹೇಳಿದರು . ”

" ಗಡಿ ನಿಯಂತ್ರಣ ರೇಖೆಯಲ್ಲಿ ನಮ್ಮ ಶಸ್ತ್ರ ಪಡೆ ಸರ್ಜಿಕಲ್ ಸ್ಟ್ರೈಕ್ ಅನ್ನು ನಡೆಸಿತು . ಅವರು ತಮ್ಮ ಶಕ್ತಿಯನ್ನು ಪ್ರದರ್ಶಿಸಿದರು . ಆದರೆ ಕೆಲವು ಸ್ವೀಕರಿಸುತ್ತಿಲ್ಲ . ಅವರು ಸಾಕ್ಷಿಯನ್ನು ಕೇಳುತ್ತಿದ್ದಾರೆ ! ಇದು ನಮ್ಮ ಶಸ್ತ್ರ ಪಡೆಗೆ ಗೌರವವೇ ?” ಎಂದು ಶ್ರೀ ಮೋದಿ ಪ್ರಶ್ನಿಸಿದರು.

ಹಲವಾರು ಕಾರ್ಯಕರ್ತರು ಮತ್ತು ನಾಯಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು . 

Click here to read the full text speech

ನಿಮ್ಮ ಸಲಹೆ ಸೂಚನೆಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೊಂದಿಗೆ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಹಂಚಿಕೊಳ್ಳಿ.
20 ವರ್ಷಗಳ ಸೇವಾ ಮತ್ತು ಸಮರ್ಪಣದ 20 ಚಿತ್ರಗಳು
Explore More
ಜಮ್ಮು ಮತ್ತು ಕಾಶ್ಮೀರದ ನೌಶೇರಾದಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಸೈನಿಕರ ಜೊತೆ ದೀಪಾವಳಿ ಆಚರಣೆ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಅವರ ಸಂವಾದ

ಜನಪ್ರಿಯ ಭಾಷಣಗಳು

ಜಮ್ಮು ಮತ್ತು ಕಾಶ್ಮೀರದ ನೌಶೇರಾದಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಸೈನಿಕರ ಜೊತೆ ದೀಪಾವಳಿ ಆಚರಣೆ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಅವರ ಸಂವಾದ
How does PM Modi take decisions? JP Nadda reveals at Agenda Aaj Tak

Media Coverage

How does PM Modi take decisions? JP Nadda reveals at Agenda Aaj Tak
...

Nm on the go

Always be the first to hear from the PM. Get the App Now!
...
Social Media Corner 5th December 2021
December 05, 2021
ಶೇರ್
 
Comments

India congratulates on achieving yet another milestone as Himachal Pradesh becomes the first fully vaccinated state.

Citizens express trust as Govt. actively brings reforms to improve the infrastructure and economy.