PM congratulates Harivansh Narayan Singh on being elected as Deputy Chairperson of Rajya Sabha
Working closely with Chandra Shekhar Ji, Harivansh Ji knew in advance that Chandra Shekhar Ji would resign. However, he did not let his own paper have access to this news. This shows his commitment to ethics and public service: PM
Harivansh Ji is well read and has written a lot. He has served society for years: PM Modi

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶ್ರೀ ಹರಿವಂಶ ಅವರನ್ನು ರಾಜ್ಯ ಸಭಾ ಉಪಸಭಾಪತಿಯಾಗಿ ಆಯ್ಕೆಯಾದುದಕ್ಕಾಗಿ ಅಭಿನಂದಿಸಿದರು.

ಚುನಾವಣೆಯ ಬಳಿಕ ಮೇಲ್ಮನೆಯಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ಅವರು ಸದನದ ನಾಯಕ ಶ್ರೀ ಅರುಣ್ ಜೈಟ್ಲಿ ಅವರು ಆರೋಗ್ಯ ಸುಧಾರಣೆಗೊಂಡು ಸದನಕ್ಕೆ ಮರಳಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು

ನಾವು ಇಂದು ಭಾರತ ಬಿಟ್ಟು ತೊಲಗಿ (ಕ್ವಿಟ್ ಇಂಡಿಯಾ) ಚಳವಳಿಯ ವಾರ್ಷಿಕೋತ್ಸವ ಆಚರಣೆಯನ್ನು ಮಾಡುತ್ತಿದ್ದೇವೆ ಎಂಬುದರತ್ತ ಗಮನ ಸೆಳೆದ ಪ್ರಧಾನ ಮಂತ್ರಿಗಳು 1857 ರ ಸ್ವಾತಂತ್ರ್ಯ ಸಂಗ್ರಾಮದ ಕಾಲದಿಂದಲೂ ಸ್ವಾತಂತ್ರ್ಯ ಚಳವಳಿಯ ಜೊತೆ ಸೇರಿಕೊಂಡಿದ್ದ ಭೂಮಿಯಾದ ಬಲ್ಲಿಯಾದಿಂದ ಹರಿವಂಶ ಅವರು ಬಂದಿದ್ದಾರೆ ಎಂದು ಶ್ಲ್ಯಾಘಿಸಿದರು. ಶ್ರೀ ಹರಿವಂಶ ಅವರು ಲೋಕನಾಯಕ ಜಯ ಪ್ರಕಾಶ ನಾರಾಯಣ್ ಅವರಿಂದ ಪ್ರಭಾವಿತರಾದುದನ್ನೂ ಪ್ರಧಾನ ಮಂತ್ರಿಗಳು ಪ್ರಸ್ತಾಪಿಸಿದರು.

ಮಾಜಿ ಪ್ರಧಾನ ಮಂತ್ರಿ ಚಂದ್ರಶೇಖರ ಜೀ ಅವರ ಜೊತೆಗೂ ಹರಿವಂಶ ಜೀ ಅವರು ಕೆಲಸ ಮಾಡಿದ್ದನ್ನು ಪ್ರಧಾನ ಮಂತ್ರಿಗಳು ನೆನಪು ಮಾಡಿಕೊಂಡರು.

ಚಂದ್ರಶೇಖರ ಜೀ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದ ಹರಿವಂಶ ಜೀ ಅವರಿಗೆ ಚಂದ್ರಶೇಖರ ಜೀ ಅವರು ರಾಜೀನಾಮೆ ನೀಡುತ್ತಾರೆ ಎಂಬುದು ಮುಂಚಿತವಾಗಿ ತಿಳಿದಿತ್ತು. ಅವರು ಈ ವಿಷಯವನ್ನು ತಮ್ಮದೇ ಸುದ್ದಿ ಪತ್ರಿಕೆಗೂ ಬಿಟ್ಟುಕೊಡಲಿಲ್ಲ. ಇದು ಅವರು ನೈತಿಕತೆಗೆ ಮತ್ತು ಸಾರ್ವಜನಿಕ ಸೇವೆಗೆ ಹೊಂದಿರುವ ಬದ್ದತೆಯನ್ನು ತೋರಿಸುತ್ತದೆ ಎಂದು ಪ್ರಧಾನ ಮಂತ್ರಿ ಅವರು ಹೇಳಿದರು.

ಹರಿವಂಶ ಜೀ ಅವರು ಬಹಳಷ್ಟು ಓದಿದ್ದಾರೆ ಮತ್ತು ಬರೆದಿದ್ದಾರೆ ಎಂದು ಹೇಳಿದ ಪ್ರಧಾನ ಮಂತ್ರಿಗಳು ಅವರು ಸಮಾಜಕ್ಕೆ ನೀಡಿದ ಕೊಡುಗೆಯೂ ಮಹತ್ವದ್ದು ಎಂದೂ ಹೇಳಿದರು.

ರಾಜ್ಯ ಸಭೆಯ ಉಪ ಸಭಾದ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಭಾಗವಹಿಸಿದುದಕ್ಕಾಗಿ ಶ್ರೀ ಬಿ.ಕೆ. ಹರಿಪ್ರಸಾದ್ ಅವರನ್ನು ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದರು. ಚುನಾವಣೆಯನ್ನು ಸುಗಮವಾಗಿ ನಡೆಸಿಕೊಟ್ಟದ್ದಕ್ಕಾಗಿ ಅವರು ಸಭಾಧ್ಯಕ್ಷರು ಮತ್ತು ಇತರ ಎಲ್ಲಾ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.

Click here to read full text speech

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
IIT Delhi tops India in QS Rankings 2027; 52 Indian institutions feature

Media Coverage

IIT Delhi tops India in QS Rankings 2027; 52 Indian institutions feature
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 18 ಜೂನ್ 2026
June 18, 2026

PM Modi’s Leadership Delivers: Electronic Interlocking, Semiconductor Push & Tariff-Free UK Access