ಅಂತಾರಾಷ್ಟ್ರೀಯ ಶುಶ್ರೂಷಕಿಯರ ದಿನದಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎಲ್ಲ ಶುಶ್ರೂಷಕ ಸಿಬ್ಬಂದಿಗೂ ತಮ್ಮ ಕೃತಜ್ಞತೆ ಸಲ್ಲಿಸಿದ್ದಾರೆ.
ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು: "ಅಂತಾರಾಷ್ಟ್ರೀಯ ಶುಶ್ರೂಷಕಿಯರ ದಿನವು, ಕೋವಿಡ್ -19ರ ಸಂಕಷ್ಟದಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಾ, ಕಠಿಣ ಪರಿಶ್ರಮದಿಂದ ಸೇವೆ ಸಲ್ಲಿಸುತ್ತಿರುವ ಶುಶ್ರೂಷಕ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸುವ ದಿನವಾಗಿದೆ. ಆರೋಗ್ಯಪೂರ್ಣ ಭಾರತದ ಬಗೆಗಿನ ಅವರ ಕರ್ತವ್ಯ, ಅಂತಃಕರಣ ಮತ್ತು ಬದ್ಧತೆಯು ಅನುಕರಣೀಯ" ಎಂದು ತಿಳಿಸಿದ್ದಾರೆ.
International Nurses Day is a day to express gratitude to the hardworking nursing staff, who is at the forefront of fighting COVID-19. Their sense of duty, compassion and commitment towards a healthy India is exemplary.
— Narendra Modi (@narendramodi) May 12, 2021


