ಹ್ಯಾಂಗ್‌ಝೌನಲ್ಲಿ ನಡೆದ 2022 ರ ಏಷ್ಯನ್ ಕ್ರೀಡಾಕೂಟದಲ್ಲಿ 10 ಮೀಟರ್ ಏರ್ ಪಿಸ್ತೂಲ್ ಮಹಿಳಾ ತಂಡದ ಸ್ಪರ್ಧೆಯಲ್ಲಿ ರಜತ ಪದಕ ಗೆದ್ದ ದಿವ್ಯಾ ಥಡಿಗೋಲ್, ಇಶಾ ಸಿಂಗ್ ಮತ್ತು ಪಲಕ್ ಅವರನ್ನೊಳಗೊಂಡ ಮಹಿಳಾ ತಂಡವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಅಭಿನಂದಿಸಿದ್ದಾರೆ.
ಪ್ರಧಾನಮಂತ್ರಿಯವರು X ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
“ಏಷ್ಯನ್ ಕ್ರೀಡಾಕೂಟದ ಶೂಟಿಂಗ್‌ನಲ್ಲಿ ಮತ್ತೊಂದು ಪದಕ! 10 ಮೀಟರ್ ಏರ್ ಪಿಸ್ತೂಲ್ ಮಹಿಳಾ ತಂಡ ಸ್ಪರ್ಧೆಯಲ್ಲಿ ರಜತ ಪದಕ ಗೆದ್ದ ದಿವ್ಯಾ ಥಡಿಗೋಳ್, ಇಶಾ ಸಿಂಗ್ ಮತ್ತು ಪಲಕ್ ಅವರಿಗೆ ಅಭಿನಂದನೆಗಳು. ಅವರ ಭವಿಷ್ಯದ ಪ್ರಯತ್ನಗಳಿಗೆ ಶುಭ ಹಾರೈಕೆಗಳು. ಅವರ ಈ ಯಶಸ್ಸು ಮುಂಬರುವ ಹಲವಾರು ಕ್ರೀಡಾಪಟುಗಳನ್ನು ಪ್ರೇರೇಪಿಸಲಿದೆ.”
Another medal in Shooting at the Asian Games!
— Narendra Modi (@narendramodi) September 29, 2023
Congratulations to Divya Thadigol, Esha Singh and Palak on winning a Silver Medal in the 10m Air Pistol Women's team event. Best wishes to them for their future endeavours. Their success will motivate several upcoming sportspersons. pic.twitter.com/clQrQMgbpE


