ಸಂಶೋಧನೆಯು ಮನುಷ್ಯನ ಆತ್ಮದಂತೆ ಅನಂತವಾದುದು ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ಸಂಶೋಧನೆಯ ವಿಭಿನ್ನ ಬಳಕೆ ಮತ್ತು ಅನುಶೋಧನೆಯನ್ನು ಸಾಂಸ್ಥಿಕಗೊಳಿಸುವ ಅವಳಿ ಉದ್ದೇಶಗಳತ್ತ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ರಾಷ್ಟ್ರೀಯ ಮಾಪನ ಸಮಾವೇಶ-2021 ರಲ್ಲಿ ಹೇಳಿದರು. ಈ ಸಂದರ್ಭದಲ್ಲಿ ಪ್ರಧಾನಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ರಾಷ್ಟ್ರೀಯ ಪರಮಾಣು ಟೈಮ್ ಸ್ಕೇಲ್ ಮತ್ತು ಭಾರತೀಯ ನಿರ್ದೇಶಕ ದ್ರವ್ಯ ಪ್ರಣಾಲಿಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು ಮತ್ತು ರಾಷ್ಟ್ರೀಯ ಪರಿಸರ ಗುಣಮಟ್ಟ ಪ್ರಯೋಗಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

ವಿವಿಧ ಜ್ಞಾನ ಕ್ಷೇತ್ರಗಳಲ್ಲಿ ಸಂಶೋಧನೆಯ ಪಾತ್ರದ ಬಗ್ಗೆ ಪ್ರಧಾನಿಯವರು ವಿವರವಾಗಿ ಚರ್ಚಿಸಿದರು. ಯಾವುದೇ ಪ್ರಗತಿಪರ ಸಮಾಜದಲ್ಲಿ ಸಂಶೋಧನೆಯು ಸಹಜ ಅಭ್ಯಾಸ ಮಾತ್ರವಲ್ಲ, ಸಹಜ ಪ್ರಕ್ರಿಯೆಯಾಗಿದೆ ಎಂದು ಅವರು ಹೇಳಿದರು. ಸಂಶೋಧನೆಯ ಪ್ರಭಾವ ವಾಣಿಜ್ಯ ಅಥವಾ ಸಾಮಾಜಿಕವಾಗಿರಬಹುದು. ನಮ್ಮ ಜ್ಞಾನ ಮತ್ತು ತಿಳುವಳಿಕೆಯನ್ನು ವಿಸ್ತರಿಸಲು ಸಂಶೋಧನೆಯು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. ಸಂಶೋಧನೆಯ ಭವಿಷ್ಯದ ನಿರ್ದೇಶನಗಳು ಮತ್ತು ಉಪಯೋಗಗಳನ್ನು ನಿರೀಕ್ಷಿಸುವುದು ಯಾವಾಗಲೂ ಸಾಧ್ಯವಿಲ್ಲ. ಆದರೆ ಸಂಶೋಧನೆಯು ಜ್ಞಾನದ ಹೊಸ ಅಧ್ಯಾಯಕ್ಕೆ ಕಾರಣವಾಗುತ್ತದೆ ಎಂಬುದು ಮಾತ್ರ ಖಚಿತವಾದ್ದು ಮತ್ತು ಅದು ಎಂದಿಗೂ ವ್ಯರ್ಥವಾಗುವುದಿಲ್ಲ ಎಂದರು. ಜೆನೆಟಿಕ್ಸ್ ಪಿತಾಮಹ, ಮೆಂಡೆಲ್ ಮತ್ತು ನಿಕೋಲಸ್ ಟೆಸ್ಲಾ ಅವರ ಉದಾಹರಣೆಗಳನ್ನು ನೀಡಿದ ಪ್ರಧಾನ ಮಂತ್ರಿಯವರು, ಅವರ ಕೆಲಸವನ್ನು ಹಬಳ ಕಾಲದ ನಂತರ ಗುರುತಿಸಲಾಯಿತು ಎಂದರು.

ಅನೇಕ ಬಾರಿ, ಸಂಶೋಧನೆಯು ತಕ್ಷಣದ ಗುರಿಯನ್ನು ಪೂರೈಸದೇ ಇರಬಹುದು ಆದರೆ ಅದೇ ಸಂಶೋಧನೆಯು ಇತರ ಕೆಲವು ಕ್ಷೇತ್ರಗಳಿಗೆ ಹೊಸ ಹಾದಿ ತೋರಬಹುದು ಎಂದ ಪ್ರಧಾನಿಯವರು, ಜಗದೀಶ್ ಚಂದ್ರ ಬೋಸ್ ಅವರ ಉದಾಹರಣೆ ನೀಡಿದರು. ಅವರ ಮೈಕ್ರೊವೇವ್ ಸಿದ್ಧಾಂತವು ಅಂದು ವಾಣಿಜ್ಯಿಕವಾಗಿ ಮುನ್ನಡೆ ಕಾಣಲಿಲ್ಲ. ಆದರೆ ಇಂದು, ಇಡೀ ರೇಡಿಯೊ ಸಂವಹನ ವ್ಯವಸ್ಥೆಯು ಅದರ ಮೇಲೆಯೇ ಆಧಾರಿತವಾಗಿದೆ. ವಿಶ್ವ ಯುದ್ಧಗಳ ಸಮಯದಲ್ಲಿ ನಡೆಸಿದ ಹಲವು ಸಂಶೋಧನೆಗಳು ನಂತರ ವಿವಿಧ ಕ್ಷೇತ್ರಗಳಲ್ಲಿ ಕ್ರಾಂತಿಯನ್ನುಂಟು ಮಾಡಿವೆ. ಉದಾಹರಣೆಗೆ, ಯುದ್ಧಕ್ಕಾಗಿ ಡ್ರೋನ್‌ಗಳನ್ನು ರೂಪಿಸಲಾಯಿತು, ಇಂದು ಅವುಗಳಿಂದ ಫೋಟೋಶೂಟ್‌ಗಳನ್ನು ಮಾಡುತ್ತಿದ್ದಾರೆ ಮತ್ತು ವಸ್ತುಗಳನ್ನು ಗ್ರಾಹಕರಿಗೆ ತಲುಪಿಸಲು ಬಳಸಲಾಗುತ್ತಿದೆ. ಅದಕ್ಕಾಗಿಯೇ ನಮ್ಮ ವಿಜ್ಞಾನಿಗಳು, ವಿಶೇಷವಾಗಿ ಯುವ ವಿಜ್ಞಾನಿಗಳು ಸಂಶೋಧನೆಯ ಸಮಗ್ರ ಫಲೀಕರಣದ ಸಾಧ್ಯತೆಗಳನ್ನು ಅನ್ವೇಷಿಸಬೇಕು. ತಮ್ಮ ಕ್ಷೇತ್ರದ ಹೊರಗೂ ಸಂಶೋಧನೆಯ ಬಳಕೆಯ ಸಾಧ್ಯತೆ ಯಾವಾಗಲೂ ಅವರ ಮುಂದೆ ಇರಬೇಕು ಎಂದರು.

ಸಾರಿಗೆ, ಸಂಪರ್ಕ, ಕೈಗಾರಿಕೆ ಅಥವಾ ದೈನಂದಿನ ಜೀವನ ಯಾವುದೇ ಇರಲಿ, ಇಂದು ಎಲ್ಲವನ್ನೂ ನಡೆಸುತ್ತಿವ ವಿದ್ಯುಚ್ಛಕ್ತಿಯ ಉದಾಹರಣೆಯನ್ನು ನೀಡುವ ಮೂಲಕ, ಯಾವುದೇ ಸಣ್ಣ ಸಂಶೋಧನೆಯು ಪ್ರಪಂಚವನ್ನು ಹೇಗೆ ಬದಲಾಯಿಸಬಹುದು ಎಂಬುದನ್ನು ಪ್ರಧಾನಿ ವಿವರಿಸಿದರು. ಅಂತೆಯೇ, ಸೆಮಿ ಕಂಡಕ್ಟರ್‌ನಂತಹ ಆವಿಷ್ಕಾರವು ನಮ್ಮ ಜೀವನವನ್ನು ಡಿಜಿಟಲ್ ಕ್ರಾಂತಿಯಿಂದ ಸಮೃದ್ಧಗೊಳಿಸಿದೆ. ಅಂತಹ ಅನೇಕ ಸಾಧ್ಯತೆಗಳು ನಮ್ಮ ಯುವ ಸಂಶೋಧಕರ ಮುಂದೆ ಇವೆ, ಅವರು ತಮ್ಮ ಸಂಶೋಧನೆ ಮತ್ತು ಆವಿಷ್ಕಾರಗಳ ಮೂಲಕ ಸಂಪೂರ್ಣವಾಗಿ ವಿಭಿನ್ನವಾದ ಭವಿಷ್ಯವನ್ನು ರೂಪಿಸುತ್ತಾರೆ ಎಂದು ಪ್ರಧಾನಿ ಹೇಳಿದರು.

ಭವಿಷ್ಯಕ್ಕೆ ಸಿದ್ಧವಾದ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಪ್ರಯತ್ನಗಳನ್ನು ಪ್ರಧಾನಿಯವರು ಪಟ್ಟಿ ಮಾಡಿದರು. ಜಾಗತಿಕ ಅನುಶೋಧನಾ ಶ್ರೇಯಾಂಕದಲ್ಲಿ ಭಾರತ ಅಗ್ರ 50 ಸ್ಥಾನಗಳಲ್ಲಿದೆ. ಸಂಶೋಧನಾ ವಿಜ್ಞಾನ ಮತ್ತು ಎಂಜಿನಿಯರಿಂಗ್ ಪ್ರಕಟಣೆಗಳಲ್ಲಿ ಭಾರತ 3 ನೇ ಸ್ಥಾನದಲ್ಲಿದೆ, ಇದು ಮೂಲ ಸಂಶೋಧನೆಗೆ ಒತ್ತು ನೀಡುತ್ತದೆ. ಕೈಗಾರಿಕೆ ಮತ್ತು ಸಂಸ್ಥೆಗಳ ನಡುವಿನ ಸಹಯೋಗವನ್ನು ಬಲಪಡಿಸಲಾಗುತ್ತಿದೆ. ವಿಶ್ವದ ಎಲ್ಲಾ ದೊಡ್ಡ ಕಂಪನಿಗಳು ತಮ್ಮ ಸಂಶೋಧನಾ ಸೌಲಭ್ಯಗಳನ್ನು ಭಾರತದಲ್ಲಿ ಸ್ಥಾಪಿಸುತ್ತಿವೆ. ಇತ್ತೀಚಿನ ವರ್ಷಗಳಲ್ಲಿ, ಅಂತಹ ಸೌಲಭ್ಯಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗಿದೆ ಎಂದರು.

ಭಾರತೀಯ ಯುವಕರ ಸಂಶೋಧನೆ ಮತ್ತು ಅನುಶೋಧನೆಯ ಸಾಧ್ಯತೆಗಳು ಅಂತ್ಯವೇ ಇಲ್ಲ ಎಂದು ಪ್ರಧಾನಿ ಹೇಳಿದರು. ಆದ್ದರಿಂದ, ಅನುಶೋಧನೆಯ ಸಾಂಸ್ಥಿಕೀಕರಣವು ಅನುಶೋಧನೆಯಷ್ಟೇ ಪ್ರಮುಖವಾದುದು. ಬೌದ್ಧಿಕ ಆಸ್ತಿಯನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದನ್ನು ನಮ್ಮ ಯುವಕರು ಅರ್ಥಮಾಡಿಕೊಳ್ಳಬೇಕಾಗುತ್ತದೆ. ನಮ್ಮ ಪೇಟೆಂಟ್‌ಗಳು ಹೆಚ್ಚು ಇರುವುದರಿಂದ ಅವುಗಳ ಉಪಯುಕ್ತತೆ ಹೆಚ್ಚು ಎಂದು ನಾವು ನೆನಪಿಟ್ಟುಕೊಳ್ಳಬೇಕಾಗುತ್ತದೆ. ನಮ್ಮ ಸಂಶೋಧನೆಯು ಬಲವಾದ ಮತ್ತು ಅತ್ಯಾಧುನಿಕ ಕ್ಷೇತ್ರಗಳಲ್ಲಿ ನಮ್ಮ ಗುರುತು ಬಲಪಡಿಸುತ್ತದೆ. ಇದು ಬಲಿಷ್ಠ ಬ್ರಾಂಡ್ ಇಂಡಿಯಾಕ್ಕೆ ಕಾರಣವಾಗಲಿದೆ ಎಂದು ಪ್ರಧಾನಿ ಹೇಳಿದರು.

ವಿಜ್ಞಾನಿಗಳನ್ನು ಕರ್ಮಯೋಗಿಗಳು ಎಂದು ಬಣ್ಣಿಸಿಸ ಪ್ರಧಾನಿಯವರು, ಪ್ರಯೋಗಾಲಯದಲ್ಲಿ ಅವರು ಋಷಿಗಳಂತೆ ನಡೆಸುವ ಪ್ರಯತ್ನಗಳನ್ನು ಶ್ಲಾಘಿಸಿದರು. ವಿಜ್ಞಾನಿಗಳು 130 ಕೋಟಿ ಭಾರತೀಯರ ಆಶಯ ಮತ್ತು ಆಕಾಂಕ್ಷೆಯಾಗಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Our focus for next five years is to triple exports from India and our plants in Indonesia, Vietnam

Media Coverage

Our focus for next five years is to triple exports from India and our plants in Indonesia, Vietnam": Minda Corporation's Aakash Minda
NM on the go

Nm on the go

Always be the first to hear from the PM. Get the App Now!
...
Prime Minister shares Sanskrit Subhashitam on Parakram Diwas, recalls Netaji Subhas Chandra Bose’s ideals of courage and valour
January 23, 2026

The Prime Minister, Shri Narendra Modi said that the life of Netaji Subhas Chandra Bose teaches us the true meaning of bravery and valour. He noted that Parakram Diwas reminds the nation of Netaji’s indomitable courage, sacrifice and unwavering commitment to the motherland.

The Prime Minister shared a Sanskrit Subhashitam reflecting the highest ideals of heroism-

“एतदेव परं शौर्यं यत् परप्राणरक्षणम्। नहि प्राणहरः शूरः शूरः प्राणप्रदोऽर्थिनाम्॥

The Subhashitam conveys that the greatest valour lies in protecting the lives of others; one who takes lives is not a hero, but the one who gives life and protects the needy is the true brave.

The Prime Minister wrote on X;

“नेताजी सुभाष चंद्र बोस का जीवन हमें बताता है कि वीरता और शौर्य के मायने क्या होते हैं। पराक्रम दिवस हमें इसी का स्मरण कराता है।

एतदेव परं शौर्यं यत् परप्राणरक्षणम्।

नहि प्राणहरः शूरः शूरः प्राणप्रदोऽर्थिनाम्॥”