PM Modi dedicates National Police Memorial to the nation, salutes the courage and sacrifice of police personnel
PM Modi announces award in the name of Netaji Subas Chandra Bose, to honour the police and paramilitary personnel, involved in disaster response operations
Central sculpture of the National Police Memorial represents capability, courage and service orientation of the police forces, says PM
National Police Memorial would inspire the citizens and educate them about the bravery of police and paramilitary personnel: PM
Under Modernization of Police Forces (MPF) scheme, we are equipping the police forces with latest technologies, modern communication systems and weapons: PM

ಪೊಲೀಸ್ ಸ್ಮರಣಾ ದಿನದ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರೀಯ ಪೊಲೀಸ್ ಸ್ಮಾರಕವನ್ನು ಲೋಕಾರ್ಪಣೆ ಮಾಡಿದರು.

ಪ್ರಧಾನಮಂತ್ರಿ ಅವರು ಸುಭಾಶ್ ಚಂದ್ರ ಬೋಸ್ ಅವರ ಹೆಸರಲ್ಲಿ ಪ್ರಶಸ್ತಿಯನ್ನು ಘೋಷಿಸಿದರು. ವಿಪತ್ತು ಸ್ಪಂದನಾ (ಪರಿಹಾರ) ಕಾರ್ಯಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಪೊಲೀಸ್ ಮತ್ತು ಅರೆಸೈನ್ಯ ಸಿಬ್ಬಂದಿಗಳನ್ನು ಗೌರವಿಸಲೋಸುಗ, ವಿಪತ್ತುಗಳ ಸಂದರ್ಭದಲ್ಲಿ ಜನರ ಜೀವ ರಕ್ಷಿಸಲು ಶೌರ್ಯ ಮತ್ತು ಧೈರ್ಯ ಪ್ರದರ್ಶಿಸುವುದನ್ನು ಗುರುತಿಸಿ ಪ್ರತಿ ವರ್ಷವೂ ಪ್ರಶಸ್ತಿಯನ್ನು ಘೋಷಿಸಲಾಗುವುದು.

ರಾಷ್ಟ್ರೀಯ ಪೊಲೀಸ್ ಸ್ಮಾರಕದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹುತಾತ್ಮರಿಗೆ ಹೊದಿಕೆ ಅರ್ಪಿಸಿದರು ಮತ್ತು ಗೌರವ ನಮನ ಸಲ್ಲಿಸಿದರು. ಹಾಟ್ ಸ್ಪ್ರಿಂಗ್ (ಲಡಖಿನ ಅತ್ಯುನ್ನತ ಪ್ರದೇಶ ) ಘಟನೆಯಲ್ಲಿ ಬದುಕಿ ಉಳಿದ ಸದಸ್ಯರನ್ನು ಅವರು ಸನ್ಮಾನಿಸಿದರು. ರಾಷ್ಟ್ರೀಯ ಪೊಲೀಸ್ ಸ್ಮಾರಕದಲ್ಲಿ ಅವರು ವಸ್ತು ಸಂಗ್ರಹಾಲಯವನ್ನು ಉದ್ಘಾಟಿಸಿದರು ಮತ್ತು ಸಂದರ್ಶಕರ ಪುಸ್ತಕದಲ್ಲಿ ಸಹಿಹಾಕಿದರು.

ಪ್ರಧಾನಮಂತ್ರಿ ಅವರು ರಾಷ್ಟ್ರ ಸೇವೆಯಲ್ಲಿ ತಮ್ಮ ಜೀವದಾನ ಮಾಡಿದ ಪೊಲೀಸರುಗಳ ಸಮರ್ಪಣೆ ಹಾಗೂ ಧೈರ್ಯಗಳಿಗೆ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ , ಲಡಖಿನ ಹಾಟ್ ಸ್ಪ್ರಿಂಗಿನಲ್ಲಿ ಕ್ರೌರ್ಯದ ಹೋರಾಟ ಮಾಡಿ ಶೌರ್ಯದ ಪೊಲೀಸ್ ಸಿಬ್ಬಂದಿಗಳ ಸಮರ್ಪಣೆಯನ್ನು ಪ್ರಧಾನಮಂತ್ರಿ ಅವರು ನೆನಪಿಸಿಕೊಂಡರು ಮತ್ತು ಅವರ ಕುಟುಂಬ ಹಾಗೂ ಪ್ರೀತಿಪಾತ್ರರಿಗೆ ಗೌರವ ಸಲ್ಲಿಸಿದರು.

ರಾಷ್ಟ್ರೀಯ ಪೊಲೀಸ್ ಸ್ಮಾರಕವನ್ನು ಲೋಕಾರ್ಪಣೆ ಮಾಡಿದ ಬಗ್ಗೆ ಸಂತಸ ವ್ಯಕ್ತಪಡಿಸಿದ ಪ್ರಧಾನಮಂತ್ರಿ ಅವರು, ಸ್ಮಾರಕದ ಕೇಂದ್ರೀಯ ಶಿಲ್ಪಗಳು ಪೊಲೀಸ್ ಪಡೆಗಳ ಸಾಮರ್ಥ್ಯ, ಧೈರ್ಯ ಮತ್ತು ಸೇವೆಗಳನ್ನು ಪ್ರತಿಬಿಂಭಿಸುತ್ತವೆ. ರಾಷ್ಟ್ರೀಯ ಪೊಲೀಸ್ ಸ್ಮಾರಕದಲ್ಲಿರುವ ಪ್ರತಿಯೊಂದೂ ವಸ್ತುಗಳೂ ನಾಗರಿಕರಿಗೆ ಪೊಲೀಸರ ಮತ್ತು ಅರೆ ಸೈನ್ಯ ಸಿಬ್ಬಂದಿಗಳ ಬಗ್ಗೆ ಅರಿವು ಮೂಡಿಸಲಿದೆ ಹಾಗೂ ಪ್ರೇರಣೆಯಾಗಲಿದೆ. ದೇಶವು ಪ್ರಸ್ತುತ ಶಾಂತಿ, ಸುರಕ್ಷತೆ ಮತ್ತು ಸಮೃದ್ಧಿಯನ್ನು ಹೊಂದಿದ್ದರೆ , ಅದು ಕೇವಲ ಪೊಲೀಸ್, ಅರೆಸೈನ್ಯ ಮತ್ತು ಶಶಸ್ತ್ರ ಪಡೆಗಳ ನಿರಂತರ ಪ್ರಯತ್ನಗಳು ಹಾಗೂ ತ್ಯಾಗಗಳಿಂದ ಮಾತ್ರ ಸಾಧ್ಯವಾಗಿದೆ ಪ್ರಧಾನಮಂತ್ರಿ ಅವರು ಹೇಳಿದರು.

ರಾಷ್ಟ್ರೀಯ ವಿಪತ್ತು ಸ್ಪಂದನಾ(ಪರಿಹಾರ) ಪಡೆಗಳ ಮತ್ತು ರಾಜ್ಯ ವಿಪತ್ತು ಸ್ಪಂದನಾ ಪಡೆಗಳ ಸಮರ್ಪಣೆ ಮತ್ತು ಕೊಡುಗೆಗಳನ್ನು ಪ್ರಧಾನಮಂತ್ರಿ ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿದರು.

ರಾಷ್ಟ್ರೀಯ ಪೊಲೀಸ್ ಸ್ಮಾರಕ ಕುರಿತು ಮಾತನಾಡಿದ ಪ್ರಧಾನಮಂತ್ರಿ ಅವರು, ಸ್ಮಾರಕವು ಎನ್.ಡಿ.ಎ. ಸರಕಾರದ ಆದ್ಯತೆಯಾಗಿತ್ತು ಮತ್ತು ಸಕಾಲಿಕವಾಗಿ ಪೂರ್ತಿಗೊಳಿಸಲಾಗಿದೆ. ರಾಷ್ಟ್ರ ನಿರ್ಮಾಣದಲ್ಲಿ ಪ್ರಾಮುಖ್ಯ ಪಾತ್ರ ನಿರ್ವಹಿಸಿದ ಜನರಿಗೆ ಅತ್ಯುನ್ನತ ಗೌರವ ನೀಡುವ ಸರಕಾರದ ಸಂಕಲ್ಪ ಯೋಜನೆಯಂತೆ ಈ ಸ್ಮಾರಕ ನಿರ್ಮಿಸಲಾಗಿದೆ.

ತಂತ್ರಜ್ಞಾನದ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿ ಅವರು ಪೊಲೀಸ್ ಪಡೆಗಳು ತಮ್ಮ ದೈನಂದಿನ ಕರ್ತವ್ಯ ನಿರ್ವಹಿಸುವಾಗ ತಂತ್ರಜ್ಞಾನ ಮತ್ತು ನಾವೀನ್ಯತೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ತಂತ್ರಜ್ಞಾನಗಳನ್ನು ಅಧುನಿಕ ಸಂವಹನ ವ್ಯವಸ್ಥೆ ಹಾಗೂ ಅಧುನಿಕ ಶಸ್ತ್ರಗಳನ್ನು ಬಳಸುವ ಮೂಲಕ ಪೊಲೀಸ್ ಪಡೆಗಳನ್ನು ಅಧುನೀಕರಣಗೊಳಿಸುವ ಉದ್ಧೇಶದ ಪೊಲೀಸ್ ಪಡೆಗಳ ಅಧುನೀಕರಣ ಯೋಜನೆ(ಪಿ.ಎಮ್. ಎಫ್)ಯನ್ನು ಪ್ರಧಾನಮಂತ್ರಿ ಅವರು ಉಲ್ಲೇಖಿಸಿದರು.

ಪೊಲೀಸ್ ಮತ್ತು ಸಮಾಜ ನಡುವಣ ಬಾಂಧವ್ಯವನ್ನು ಇನ್ನೂ ಬಲಿಷ್ಠಗೊಳಿಸುವಲ್ಲಿ ಪೊಲೀಸ್ ಪಡೆಗಳ ಬಹುದೊಡ್ಡ ಪಾತ್ರವಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ನಿಟ್ಟಿನಲ್ಲಿ ಪೊಲೀಸ್ ಠಾಣೆಗಳನ್ನು ಅಧಿಕ ಜನಸ್ನೇಹಿ(ಜನಮೈತ್ರಿ)ಯನ್ನಾಗಿಸಬೇಕು ಎಂದು ಪ್ರಧಾನಮಂತ್ರಿ ಅವರು ಪೊಲೀಸ್ ಪಡೆಗಳಿಗೆ ತಿಳಿಸಿದರು.

ರಾಷ್ಟ್ರೀಯ ಪೊಲೀಸ್ ಸ್ಮಾರಕದಲ್ಲಿ, ಕೇಂದ್ರೀಯ ಶಿಲ್ಪ ಹಾಗೂ “ಶೌರ್ಯದ ಗೋಡೆ”ಗಳಲ್ಲಿ ಕರ್ತವ್ಯದಲ್ಲಿದ್ದಾಗ ಬಲಿದಾನಗೊಂಡ ಪೊಲೀಸ್ ಸಿಬ್ಬಂದಿಗಳ ಹೆಸರುಗಳನ್ನು ಕೆತ್ತನೆಯಿರುತ್ತದೆ ಹಾಗೂ ಈ ಸಮಗ್ರ ಕಲಾ ವಸ್ತುಸಂಗ್ರಹಾಲಯವು ಹುತಾತ್ಮರಾದ ಪೊಲೀಸ್ ಸಿಬ್ಬಂದಿಗಳಿಗೆ ಸಮರ್ಪಿತವಾಗಿರುತ್ತದೆ

 

Click here to read full text speech

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India’s electric PV retail sales jump 44% in February; Tata Motors leads: FADA

Media Coverage

India’s electric PV retail sales jump 44% in February; Tata Motors leads: FADA
NM on the go

Nm on the go

Always be the first to hear from the PM. Get the App Now!
...
Prime Minister extends greetings on Jan Aushadhi Diwas 2026
March 07, 2026
PM highlights transformative impact of Pradhan Mantri Bhartiya Janaushadhi Pariyojana

On the occasion of Jan Aushadhi Diwas 2026, the Prime Minister, Shri Narendra Modi extended his greetings to all those who have been positively impacted by the Pradhan Mantri Bhartiya Janaushadhi Pariyojana. Shri Modi said that this initiative reflects our commitment to ensuring that every citizen has access to quality medicines at affordable prices. Through Jan Aushadhi Kendras, countless families are saving on healthcare expenses and receiving proper treatment, Shri Modi added.

The Prime Minister also shared a glimpse of the transformative impact of the Pradhan Mantri Bhartiya Janaushadhi Pariyojana.

The Prime Minister wrote on X;

“On #JanAushadhiDiwas2026, my best wishes to all those who have been positively impacted by the Pradhan Mantri Bhartiya Janaushadhi Pariyojana. This initiative reflects our commitment to ensuring that every citizen has access to quality medicines at affordable prices. Through Jan Aushadhi Kendras, countless families are saving on healthcare expenses and receiving proper treatment.” 

“A glimpse of the transformative impact of Pradhan Mantri Bhartiya Janaushadhi Pariyojana.

#JanAushadhiDiwas2026”