Women have shown how a positive change has begun in rural India. They are bringing about a qualitative change: PM
Guided by the mantra of Beti Bachao, Beti Padhao, the Government is trying to bring about a positive change: PM
Boys and girls, both should get equal access to education: PM Narendra Modi
Swachhata has to become our Svabhaav. The poor gains the most when we achieve cleanliness and eliminate dirt: PM

ಗಾಂಧಿನಗರದಲ್ಲಿ ನಡೆದ ಮಹಿಳಾ ಸರಂಪಂಚರ ಸಮಾವೇಶ- ಸ್ವಚ್ಛ ಶಕ್ತಿ 2017 ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರಿಂದು ಭಾಷಣ ಮಾಡಿದರು.


ಸ್ವಚ್ಛ ಭಾರತ ಆಂದೋಲನಕ್ಕೆ ಅದ್ಭುತ ಕೊಡುಗೆ ನೀಡಿದ ಸರಪಂಚರನ್ನು ಗೌರವಿಸುವ ಸಂದರ್ಭದ ಕಾರ್ಯಕ್ರಮ ಇದಾಗಿದೆ ಎಂದು ಅವರು ಹೇಳಿದರು. 2019ರಲ್ಲಿ ನಾವು ಮಹಾತ್ಮಾ ಗಾಂಧಿ ಅವರ 150 ಜನ್ಮ ದಿನೋತ್ಸವವನ್ನು ಆಚರಿಸಲಿದ್ದೇವೆ. ಗಾಂಧಿಜೀ ಅವರು, ರಾಜಕೀಯ ಸ್ವಾತಂತ್ರ್ಯಕ್ಕಿಂತ ಸ್ವಚ್ಛತೆ ಹೆಚ್ಚು ಮಹತ್ವವಾದದ್ದು ಎಂದು ಪ್ರತಿಪಾದಿಸಿದ್ದರು ಎಂಬುದನ್ನು ಸ್ಮರಿಸಿದರು .

ಸ್ವಚ್ಛತೆಯತ್ತ ಸೃಷ್ಟಿಯಾಗಿರುವ ಈ ಚಲನೆಯನ್ನು ಹಾಗೆಯೇ ಮುಂದುವರಿಸುವಂತೆ ಅವರು ಸಭಿಕರಿಗೆ ಮನವಿ ಮಾಡಿದರು. ಸ್ವಚ್ಛತೆ ಅತವಾ ನೈರ್ಮಲ್ಯ ನಮ್ಮ ಅಭ್ಯಾಸವಾಗಬೇಕು ಎಂದು ಪ್ರಧಾನಿ ಪ್ರತಿಪಾದಿಸಿದರು. ಕೊಳೆಯನ್ನು ನಿರ್ಮೂಲನೆ ಮಾಡಿ, ಸ್ವಚ್ಛತೆಯನ್ನು ಸಾಧಿಸಿದರೆ ಅದರಿಂದ ಬಡಜನರಿಗೆ ಹೆಚ್ಚಿನ ಲಾಭವಾಗುತ್ತದೆ ಎಂದು ಹೇಳಿದರು.
ಇಂದು ಗೌರವಕ್ಕೆ ಪಾತ್ರರಾಗಿರುವ ಮಹಿಳೆಯರು ಹಲವು ಸಾಂಪ್ರದಾಯಿಕ ಕಲ್ಪನೆಗಳನ್ನು ದಾಟಿದ್ದಾರೆ ಮತ್ತು ಗ್ರಾಮೀಣ ಭಾರತದಲ್ಲಿ ಹೇಗೆ ಧನಾತ್ಮಕ ಬದಲಾವಣೆ ಆಗುತ್ತಿದೆ ಎಂಬುದನ್ನು ತೋರಿಸಿದ್ದಾರೆ ಎಂದು ಪ್ರಧಾನಿ ಹೇಳಿದರು .

ತಾವು ಮಹಿಳಾ ಸರಪಂಚರನ್ನು ಭೇಟಿ ಮಾಡಿದಾಗ, ತಮಗೆ ಅವರಲ್ಲಿನ ಧನಾತ್ಮಕ ಬದಲಾವಣೆಯ ಸಂಕಲ್ಪ ಕಾಣುತ್ತದೆ ಎಂದ ನರೇಂದ್ರ ಮೋದಿ ಅವರು, ಗುಣಾತ್ಮಕ ಬದಲಾವಣೆ ತರಬೇಕೆಂದು ತಾವು ಬಯಸುವುದಾಗಿ ಹೇಳಿದರು.
ಬೇಟಿ ಬಚಾವೋ, ಬೇಟಿ ಪಡಾವೋ ಉಪಕ್ರಮದ ಬಗ್ಗೆ ಮಾತನಾಡಿದ ಅವರು, ಮಹಿಳಾ ಸರಪಂಚರಿರುವ ಗ್ರಾಮಗಳು ಹೆಣ್ಣು ಭ್ರೂಣ ಹತ್ಯೆ ತಡೆಯ ಈ ಅಭಿಯಾನದಲ್ಲಿ ಮಹತ್ವದ ಪಾತ್ರ ವಹಿಸಬಹುದು ಎಂದರು .

ತಾರತಮ್ಯದ ಮನೋಸ್ಥಿತಿಯನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದ ಪ್ರಧಾನಮಂತ್ರಿಯವರು, ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರಿಗೆ ಇಬ್ಬರಿಗೂ ಶಿಕ್ಷಣದಲ್ಲಿ ಸಮಾನ ಪ್ರವೇಶ ಇರಬೇಕು ಎಂದು ಹೇಳಿದರು.
ತಂತ್ರಜ್ಞಾನದ ಧ್ಯೇಯದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಅದು ನಮ್ಮ ಗ್ರಾಮೀಣ ಪ್ರದೇಶದಲ್ಲಿ ಅದ್ಭುತ ಬದಲಾವಣೆ ತರಬಲ್ಲುದಾಗಿದೆ ಎಂದರು. 

ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದ ಪ್ರಧಾನಮಂತ್ರಿಯವರು, ಅವರು ಇಡೀ ದೇಶಕ್ಕೇ ಸ್ಫೂರ್ತಿಯಾಗಿದ್ದಾರೆ ಎಂದು ಹೇಳಿದರು.

 

Click here to read full text speech

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
The $67-Billion Vote Of Confidence: Why World’s Big Tech Is Betting Its Future On India

Media Coverage

The $67-Billion Vote Of Confidence: Why World’s Big Tech Is Betting Its Future On India
NM on the go

Nm on the go

Always be the first to hear from the PM. Get the App Now!
...
Haryana Chief Minister meets Prime Minister
December 11, 2025

The Chief Minister of Haryana, Shri Nayab Singh Saini met the Prime Minister, Shri Narendra Modi in New Delhi today.

The PMO India handle posted on X:

“Chief Minister of Haryana, Shri @NayabSainiBJP met Prime Minister
@narendramodi.

@cmohry”